ಕ್ರೈಂ ಸುದ್ದಿ:
ಸ್ವೀಟ್ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿ ಜೈಲಿಗೆ ತರುವ ಯತ್ನ – ಯುವಕನ ಬಂಧನ
ಸ್ವೀಟ್ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿ ಜೈಲಿಗೆ ತರುವ ಯತ್ನ – ಯುವಕನ ಬಂಧನ ಶಿವಮೊಗ್ಗ: ಖೈದಿಯೊಬ್ಬನಿಗೆ ಸಿಹಿ ನೀಡುವ ನೆಪದಲ್ಲಿ ಗಾಂಜಾ ತರುವ ಯತ್ನ ಮಾಡಿದ ಯುವಕನ ಕೃತ್ಯ ಬಹಿರಂಗಗೊಂಡಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದ ತಪಾಸಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸೋಮಿನಕೊಪ್ಪದ ನಿವಾಸಿ ಸೈಯದ್ ವಾಸೀಂ (25) ಬಂಧಿತನಾಗಿದ್ದಾನೆ. ಆತ ಸ್ಥಳೀಯ ಬೇಕರಿಯಿಂದ ತಂದಿದ್ದ ಸ್ವೀಟ್ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿಕೊಂಡು ಖೈದಿ ಮೆಹಬೂಬ್ ಖಾನ್‌ಗೆ ತಲುಪಿಸಲು ಬಂದಿದ್ದ ಎಂದು ತಿಳಿದುಬಂದಿದೆ. ಜೈಲು ಪ್ರವೇಶದ್ವಾರದಲ್ಲಿ ನಿಯೋಜಿತರಾಗಿದ್ದ…
ಅಂಗನವಾಡಿಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿ ಮೊಟ್ಟೆ ತಿಂದು , ಧಾನ್ಯಗಳನ್ನು ಹಾಳುಗೆಡವಿದ ದುಷ್ಕರ್ಮಿಗಳು
ಅಂಗನವಾಡಿಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿ ಮೊಟ್ಟೆ , ಧಾನ್ಯ ಹಾಳುಗೆಡವಿದ ದುಷ್ಕರ್ಮಿಗಳು ಶಿವಮೊಗ್ಗ: ತಾಲೂಕಿನ ಕುಂಸಿ ಗ್ರಾಮದ ಅಂಗನವಾಡಿ ಕೇಂದ್ರ ಮತ್ತು ಮಹಿಳಾ ಒಕ್ಕೂಟದ ಕೊಠಡಿಗೆ ನುಗ್ಗಿದ ದುಷ್ಕರ್ಮಿಗಳ ಕೃತ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮದ್ಯಪಾನದಲ್ಲೇ ತೇಲಿದ ದುಷ್ಕರ್ಮಿಗಳು ಮೊದಲು ಕೊಠಡಿಗಳ ಬೀಗಗಳನ್ನು ಮುರಿದು ಒಳನುಗ್ಗಿದ್ದಾರೆ. ನಂತರ ಟೇಬಲ್ ಸುತ್ತಲು ಕುರ್ಚಿಗಳನ್ನು ಅಣಿಗೊಳಿಸಿ ಕುಳಿತು ಮದ್ಯ ಸೇವಿಸಿದ್ದು, ಸ್ಥಳದಲ್ಲಿ ಮದ್ಯದ ಬಾಟಲಿಗಳ ಕವರ್‌ಗಳು ಹಾಗೂ ಟವೆಲ್‌ಗಳು ಚೆಲ್ಲಾಪಿಲ್ಲಿಯಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಸರ್ಕಾರದಿಂದ ಅಂಗನವಾಡಿಗೆ ನೀಡಲಾಗಿದ್ದ ಆಹಾರ ಧಾನ್ಯಗಳನ್ನು…
ಮಹಿಳೆಯ ಖಾಸಗಿ ಫೊಟೊ ಕಳುಹಿಸಿ 10 ಲಕ್ಷ ರೂ. ಗೆ ಬೇಡಿಕೆ ಇಟ್ಟ ಭೂಪ – ಪ್ರಕರಣ ದಾಖಲು
ಮಹಿಳೆಯ ಖಾಸಗಿ ಫೊಟೊ ಕಳುಹಿಸಿ 10 ಲಕ್ಷ ರೂ. ಗೆ ಬೇಡಿಕೆ ಇಟ್ಟ ಭೂಪ – ಪ್ರಕರಣ ದಾಖಲು ಶಿವಮೊಗ್ಗ: ಮಹಿಳೆಯೊಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಬರೋಬ್ಬರಿ ₹10 ಲಕ್ಷ ಹಣವನ್ನು ಬೇಡಿಕೊಂಡ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಮಹಿಳೆ ಶಿವಮೊಗ್ಗದ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿಯ ಪ್ರಕಾರ, ಅಕ್ಟೋಬರ್ 31ರಂದು ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ…
ಹಾಸ್ಟೆಲ್ ಟೆರೇಸ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆ
ಹಾಸ್ಟೆಲ್ ಟೆರೇಸ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆ ಶಿವಮೊಗ್ಗ: ಹಾಸ್ಟೆಲ್‌ನ ಟೆರೇಸ್ ಮೇಲೆ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ. ಭದ್ರಾವತಿ ತಾಲೂಕು ಗಂಗೂರಿನ ವನಿಷಾ (21) ಮೃತ ದುರ್ಧೈವಿಯಾಗಿದ್ದಾರೆ. ಹಾಸ್ಟೆಲ್‌ನ ಟೆರೇಸ್‌ನಲ್ಲಿರುವ ನೀರಿನ ಟ್ಯಾಂಕ್ ಪಕ್ಕದಲ್ಲಿ ವನಿಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಟೆರೇಸ್ ಮೇಲೆ ಹೋದ ವಿದ್ಯಾರ್ಥಿನಿಯರು ಇದನ್ನು ಗಮನಿಸಿ ಕೂಡಲೆ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ.ಘಟನೆಗೆ ನಿಖರವಾದ ಕಾರಣ…
ಬಾಗಿಲು ಮುರಿದು ಮನೆಗೆ ನುಗ್ಗಿದ ವಾಮಾಚಾರಿಗಳು – ಅಡಿಕೆ ಎಲೆ ಮತ್ತು 11 ರೂಪಾಯಿ ಇಟ್ಟು ಮಾಡಿದ್ದೇನು..!??
ಬಾಗಿಲು ಮುರಿದು ಮನೆಗೆ ನುಗ್ಗಿದ ವಾಮಾಚಾರಿಗಳು – ಅಡಿಕೆ ಎಲೆ ಮತ್ತು 11 ರೂಪಾಯಿ ಇಟ್ಟು ಮಾಡಿದ್ದೇನು..!?? ಶಿವಮೊಗ್ಗ: ನಗರದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ನಡೆದಿದ್ದು, ಮನೆಯ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ ವಾಮಾಚಾರದ ಕೃತ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ಅಕ್ಟೋಬರ್ 31, 2025 ರಂದು ಮಧ್ಯಾಹ್ನ 1ರಿಂದ 2ರ ನಡುವಿನ ಸಮಯದಲ್ಲಿ ನಡೆದಿದೆ. ದೂರುದಾರ ಮಹಿಳೆಯು ಮನೆಯಲ್ಲಿ ಇರದ ಸಮಯದಲ್ಲಿ, ಕೆಲವರು ಬಾಗಿಲು ಮುರಿದು…
ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್ — ಕಾರ್ಮಿಕನ ದುರ್ಮರಣ
ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್ — ಕಾರ್ಮಿಕನ ದುರ್ಮರಣ ತೀರ್ಥಹಳ್ಳಿ: ತಾಲೂಕಿನ ಬಸವಾನಿ ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಶನಿವಾರ ಸಂಜೆ ನಡೆದಿದೆ. ಮೃತನನ್ನು ಕೊಪ್ಪ ತಾಲ್ಲೂಕಿನ ದೋರಗಲ್ಲು ಗ್ರಾಮದ ಸತೀಶ್ (50) ಎಂದು ಗುರುತಿಸಲಾಗಿದೆ. ಸತೀಶ್ ಹಲವು ವರ್ಷಗಳಿಂದ ಈ ಭಾಗದಲ್ಲಿ ಗೊನೆಗಾರನಾಗಿ ಕೆಲಸ ಮಾಡುತ್ತಿದ್ದು, ಲಕ್ಷ್ಮೀಪುರದ ರೈತರಿಬ್ಬರ ಅಡಿಕೆ ತೋಟದಲ್ಲಿ ಗೊನೆ ಕೀಳುವ ವೇಳೆ ಆತನ ಕೈಯಲ್ಲಿ ಇದ್ದ ದೋಟಿ…
ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ
ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ ಭದ್ರಾವತಿ: ನಾಯಿ — ನಿಷ್ಠೆ, ಪ್ರೀತಿ ಮತ್ತು ಬದ್ಧತೆಯ ಪ್ರತೀಕ. ಮಾಲೀಕನಿಗಾಗಿ ಜೀವವನ್ನೇ ಪಣಕ್ಕಿಡುವ ಈ ಪ್ರಾಣಿ, ಕೆಲವೊಮ್ಮೆ ಅವನಿಂದ ದೂರವಾಗುವುದನ್ನೇ ಸಹಿಸಲಾರದು. ಭದ್ರಾವತಿಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಅದಕ್ಕೆ ಜೀವಂತ ಉದಾಹರಣೆ. ನಗರದ ಹುತ್ತಾಕಾಲನಿಯ ಜಿಂಕ್‌ಲೈನ್ ಪ್ರದೇಶದ ನಿವಾಸಿ ಲಾರೆನ್ಸ್ (61) ಪೈಂಟರ್ ಕೆಲಸ ಮಾಡುತ್ತಿದ್ದು, ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ನಿಧನರಾದರು. ಆಸ್ಪತ್ರೆಯಿಂದ ಅವರ ಮೃತದೇಹವನ್ನು ಮನೆಗೆ ತರಲಾಗುತ್ತಿದ್ದಂತೆಯೇ, ಮನೆಯ…
ಗಾಂಜಾ ವಶ – ನಾಲ್ವರ ಬಂಧನ
ಗಾಂಜಾ ವಶ – ನಾಲ್ವರ ಬಂಧನ ನ್ಯಾಮತಿ – ಹೊನ್ನಾಳಿ – ಶಿವಮೊಗ್ಗ ರಸ್ತೆ ಬದಿಯ ಕಲ್ಪಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ನ್ಯಾಮತಿ ಠಾಣೆಯ ಪೊಲೀಸರು ಬಂಧಿಸಿ ಅಂದಾಜು 13.20 ಮೌಲ್ಯದ 3.1 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗದ ಅರ್ಬಾಜ್ ಖಾನ್ (27), ಮಹಮ್ಮದ್ ಹುಸೈನ್ ರಝಾ (23), ಜಾಫರ್ ಸಾದಿಕ್ (22), ಮಹಮ್ಮದ್ ರೋಹೀತ್ (31) ಹಾಗೂ ನ್ಯಾಮತಿ ತಾಲ್ಲೂಕಿನ ಹೊಸಜೋಗ ಗ್ರಾಮದ ಶಂಕರನಾಯ್ಕ (29) ಬಂಧಿತರು….
ಕೌಟುಂಬಿಕ ಕಲಹ ಹಿನ್ನಲೆ ವಿಷ ಸೇವಿಸಿ ಗೃಹಿಣಿ ಸಾವು – ಪತಿ , ಮಾವನ ಬಂಧನ | ಅತ್ತೆ , ನಾದಿನಿ ಪರಾರಿ
ಕೌಟುಂಬಿಕ ಕಲಹ ಹಿನ್ನಲೆ ವಿಷ ಸೇವಿಸಿ ಗೃಹಿಣಿ ಸಾವು – ಪತಿ , ಮಾವನ ಬಂಧನ , ಅತ್ತೆ , ನಾದಿನಿ ಪರಾರಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವಿಷ ಸೇವಿಸಿದ್ದ ವಿವಾಹಿತ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೃತಳನ್ನು ತೀರ್ಥಹಳ್ಳಿಯ ಕೋಣಂದೂರು ಸಮೀಪದ ಶಂಕರಳ್ಳಿ ಈಶ್ವರಪ್ಪನವರ ಮಗಳು ಪೂಜಾ (30) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬಾತನೊಂದಿಗೆ ಪೂಜಾಳ ವಿವಾಹವಾಗಿತ್ತು….
ಲಾರಿ ಬೈಕ್ ನಡುವೆ ಅಪಘಾತ – ಓರ್ವ ಸಾವು, ಇನ್ನೋರ್ವ ಗಂಭೀರ
ಲಾರಿ ಬೈಕ್ ನಡುವೆ ಅಪಘಾತ – ಓರ್ವ ಸಾವು, ಇನ್ನೋರ್ವ ಗಂಭೀರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪ ಗ್ರಾಮದ ಬಳಿ ಸಂಭವಿಸಿದ ಭೀಕರ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಇದೇ ಘಟನೆಯಲ್ಲಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ವೇಗವಾಗಿ ಬಂದ ಲಾರಿ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದು, ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಪರಿಣಾಮ ಬೈಕ್‌ನಲ್ಲಿದ್ದ ಯುವಕರಲ್ಲಿ ಪುನೀತ್ (22) ಎಂಬ ದುರ್ದೈವಿ ಸ್ಥಳದಲ್ಲೇ…