ಕ್ರೈಂ ಸುದ್ದಿ:
ಬಸ್ ನಿಯಂತ್ರಣ ತಪ್ಪಿ ಪಾದಾಚಾರಿಗಳಿಗೆ ಡಿಕ್ಕಿ : ಗಾಯಾಳುಗಳು ಮೆಗ್ಗಾನ್ ಗೆ ದಾಖಲು
ಆಯನೂರು ಮೆಸ್ಕಾಂ ಕಚೇರಿ ಎದುರು ನಡೆದುಕೊಂಡು ಹೋಗುತಿದ್ದ ವಿದ್ಯಾರ್ಥಿಗಳಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರೂ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಖಾಸಗಿ ಬಸ್ ಆಯನೂರಿನ ಮೆಸ್ಕಾಂ ಕಚೇರಿ ಎದುರು ಚಾಲಕನ ನಿಯಂತ್ರಣ ಕೈತಪ್ಪಿ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಅಲ್ಲಾಭಕ್ಷಿ (17) ಆಯನೂರು ಸಮೀಪದ ಹೊಸೂರು ಗ್ರಾಮದವನೆಂದು ತಿಳಿದುಬಂದಿದೆ. ಸನು (16) ಎಂಬ ಯುವಕನು ಭದ್ರಾವತಿ ದಡಂಘಟ್ಟದ ಯುವಕನೆಂದು ಹಾಗೂ ಹಾರನಹಳ್ಳಿಯ ರಾಹುಲ್ (17) ಎಂಬುವರನ್ನು ಹೆಚ್ಚಿನ…
ಬೈಕ್ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ : ಸಾಗರದ ಚಾರ್ಟಡ್ ಅಕೌಂಟೆಂಟ್ ಸೇರಿದ್ದಂತೆ ಇಬ್ಬರ ದುರ್ಮರಣ
ಸಾಗರ : ಸಾಗರದ ಆರ್. ಎಂ.ಸಿಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸಾಗರದ ಚಾರ್ಟೆಡ್ ಅಕೌಂಟೆಂಟ್ ರಾಜೇಶ್ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ರಾಜೇಶ್ ರವರು ಬಂದಗದ್ದೆಯ ನಿವಾಸಿಯಾಗಿದ್ದಾರೆ. ಹಾಗೂ ಎದುರುಗಡೆ ಬೈಕಿನ ಹರೀಶ್ (25 ) ವರ್ಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೀಶ್ ಕಾರವಾರದಿಂದ ಕೂಲಿ ಕೆಲಸಕ್ಕೆ ಸಾಗರಕ್ಕೆ ಆಗಮಿಸಿದ್ದರು ಅಪಘಾತದಲ್ಲಿ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ಸಾಗರ ಟೌನ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಆನ್ ಲೈನ್ ವಂಚನೆ : 79,998 ರೂ ಕಳೆದುಕೊಂಡ ಕಾಲೇಜು ವಿದ್ಯಾರ್ಥಿ
ಸರಕಾರ ಹಾಗೂ ಬ್ಯಾಂಕ್ ಗಳು ಹಲವಾರು ಜಾಹಿರಾತಿನ ಮೂಲಕ ಆನ್ ಲೈನ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು ಹಲವರು ಈಗಲೂ ಆನ್ ಲೈನ್ ವಂಚಕರ ಬಲೆಗೆ ಬೀಳುತಿದ್ದಾರೆ. ಶಿವಮೊಗ್ಗದ ವಿದ್ಯಾರ್ಥಿಯೊಬ್ಬ ಆನ್ ಲೈನ್ ವಂಚನೆಗೆ ಒಳಗಾಗಿ ಪರಿತಪಿಸುತ್ತಿರುವ ಘಟನೆ ನಡೆದಿದೆ. ಪಾನ್ ಕಾರ್ಡ ಅಪ್ಡೇಟ್ ಮಾಡಿಕೊಳ್ಳುವಂತೆ ಬಂದ ಲಿಂಕ್ ಒತ್ತುವ ಮೂಲಕ ವಿದ್ಯಾರ್ಥಿಯೋರ್ವ 79998/- ರೂ. ಹಣ ಕಳೆದುಕಂಡ ಘಟನೆ ಈಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ನಡದಿದೆ. ಅಪರಿಚಿತ ಮೊಬೈಲ್ ನಂಬರ್ ಮೂಲಕ ಬಂದ ಲಿಂಕ್ ನಲ್ಲಿ…
ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ : ಸ್ಥಳದಲ್ಲೆ ಇಬ್ಬರು ಸಾವು
ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಂದು ಮುಂಜಾನೆ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಚೇನಹಳ್ಳಿ ಡೈರಿ ಸಮೀಪ ನಡೆದ ಭೀಕರ ಅಪಘಾತದಲ್ಲಿ ಬೆಳ್ಳಂಬೆಳಗ್ಗೆಯೇ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಭದ್ರಾವತಿಯಿಂದ ಶಿವಮೊಗ್ಗದ ಕಡೆಗೆ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ದಾಟಿ ಭದ್ರಾವತಿ ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ…
ಸಾಗರ: ನಿಗೂಢವಾಗಿ ಕಣ್ಮರೆಯಾಗಿದ್ದ “”ಪ್ರಕಾಶ್ ಟ್ರಾವೆಲ್ಸ್” ಮಾಲೀಕ ಶವವಾಗಿ ಪತ್ತೆ! ನಿಜಕ್ಕೂ ಇದು ಆತ್ಮಹತ್ಯೆಯೇ…? “ಪಟಗುಪ್ಪೆ” ಸುತ್ತಾ, ಈಗ ಅನುಮಾನದ ಹುತ್ತ…!
ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರ ಅಳಿಯ ಕಾಫೀ ಡೇ ಸಿದ್ಧಾರ್ಥ್ ಆತ್ಮಹತ್ಯೆಯ ಪ್ರಕರಣದಂತೆಯೇ ಸಾಗರದ ಪ್ರಕಾಶ್ ಟ್ರಾವೆಲ್ಸ್ ನ ಮಾಲೀಕರಾದ ಪ್ರಕಾಶ್ ರವರ ನಿಗೂಢ ನಾಪತ್ತೆ ಪ್ರಕರಣವೂ ಸಹ ನೋಡಲು ಒಂದೇ ರೀತಿಯಾಗಿ ಕಾಣುತ್ತಿದೆ! ಯಾಕಂದ್ರೇ, ಎಲ್ ಎನ್ ಟಿ ಇನ್ನಿತರೆ ತೀರಾ ಟಾರ್ಚರ್ ಕೊಡುವ ಸಂಸ್ಥೆಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ಮಾಡಿಕೊಂಡಿದ್ದ ಸಿದ್ಧಾರ್ಥ್ ರವರು ದಿಕ್ಕೇ ಕಾಣದಂತಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು, ಇದೇ ಪ್ರಕರಣದಂತೆಯೆ ಪ್ರಕಾಶ್ ರವರು ಸಹ ಸಾಲ ಸೋಲಕ್ಕೆ ಅಂಜಿ…
ಶವವಾಗಿ ಪತ್ತೆಯಾದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ : ಸತತ ಮೂರು ದಿನಗಳ ಕಾರ್ಯಾಚರಣೆ ನಂತರ ಪತ್ತೆ
ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲಿಕ ಪ್ರಕಾಶ್ ರವರ ಶವ ಕೊನೆಗೂ ಪಟಗುಪ್ಪ ಹೊಳೆಯಲ್ಲಿ ಪತ್ತೆಯಾಗಿದೆ. ಕಳೆದ ಶುಕ್ರವಾರ ಸಂಜೆ ನಾಪತ್ತೆಯಾಗಿದ್ದ ಪ್ರಕಾಶ್,ಶನಿವಾರ ಅವರ ಮೊಬೈಲ್ ಹಾಗೂ ಕಾರು ಪಟಗುಪ್ಪೆ ಸೇತುವೆ ಬಳಿ ಪತ್ತೆಯಾಗಿದ್ದವು.ಕೂಡಲೇ ಕ್ಷಿಪ್ರ ಕಾರ್ಯಾಚರಣೆಗಿಳಿದಿದ್ದ ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರಿಂದ ಶೋಧ ಕಾರ್ಯ ನಡೆದಿತ್ತು.ಆದರೆ ಮೂರು ದಿನ ಸತತವಾಗಿ ಶೋಧ ಕಾರ್ಯ ನಡೆಸಿದರು ಪತ್ತೆಯಾಗಿರಲಿಲ್ಲ. ಸೋಮವಾರ ಬೆಳ್ಳಗ್ಗೆ ಪ್ರಕಾಶ್ ಅವರ ಶವ ಪಟಗುಪ್ಪೆ ಹೊಳೆಯಲ್ಲಿಯೇ ಪತ್ತೆಯಾಗಿದೆ. ಅವರ ಹಿತೈಷಿಗಳು ಮತ್ತು ಕುಟುಂಬಸ್ಥರು ಈ ಪ್ರಕರಣದ ಹಿಂದೆ…
ಬೈಕ್ ಅಪಘಾತ : ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಪುರುದಾಳು ಗ್ರಾಮದ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿ ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತ ಪಟ್ಟಿದ್ದಾನೆ. ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದರ ಪರಿಣಾಮ ಬೈಕ್ ನಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸುಧನ್ವ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ತಾಲೂಕಿನ ಸುಧನ್ವ ಎಂಬ 21 ವರ್ಷದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯು ತನ್ನ ಸ್ನೇಹಿತರೊಂದಿಗೆ ಪುರುದಾಳು ಗ್ರಾಮದಿಂದ ಶಿವಮೊಗ್ಗಕ್ಕೆ ಬೈಕ್ ನಲ್ಲಿ ತೆರಳಿದ್ದಾರೆ. ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಸ್ನೇಹಿತ ಮನೋಜ್…
ಅನಾರೋಗ್ಯ ಹಿನ್ನಲೆ : SSLC ವಿದ್ಯಾರ್ಥಿನಿ ಆತ್ಮಹತ್ಯೆ
ಹೊಸನಗರ ಪಟ್ಟಣದ ಮಾರಿಗುಡ್ಡದಲ್ಲಿ ಮನೆಯೊಂದರಲ್ಲಿ ವಾಸವಾಗಿರುವ ತಾಲೂಕಿನ ಅರೋಡಿ ಕೊಡಸೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ರವರ ಪುತ್ರಿ ಶಮಾ ಎಲ್ ಬಂಡಿ (15) ತನ್ನ ತಾಯಿಯನ್ನು ಮಾರ್ನಿಂಗ್ ಕ್ಲಾಸ್ ಡ್ಯೂಟಿಗೆ ಕಳುಹಿಸಿ ಮನೆಗೆ ಬಂದು ನೇಣಿಗೆ ಶರಣಾದ ದುರಂತ ಘಟನೆ ಇಂದು ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಶಮಾ ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದು ಕಳೆದ ಕೆಲ ಸಮಯದಿಂದ ಆಕೆ ಅನಾರೋಗ್ಯ ಪೀಡಿತಳಾಗಿದ್ದಳು ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿನಿಯ…
ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟ 5 ವರ್ಷದ ಪುಟ್ಟ ಮಗು :
ಕುಂಸಿ : ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ 5 ವರ್ಷದ ಪುಟ್ಟ ಮಗುವು ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ ತಾಲ್ಲೂಕಿನ ಮಾಸನಕಟ್ಟೆ ಗ್ರಾಮದಿಂದ ರಸ್ತೆ ಕಾಮಗಾರಿಗೆ ಇಮಾಮ್ ಸಾಬ್ ಕುಟುಂಬ ಕೆಲಸಕ್ಕೆಂದು ಆಯನೂರಿನ ಕುಂಸಿಯ ರೇಚಿಕೊಪ್ಪ ಗ್ರಾಮಕ್ಕೆ ಬಂದಿತ್ತು. ನಿನ್ನೆ ಮಧ್ಯಾಹ್ನ ಮಗುವನ್ನು ಜಮೀನಿನ ಪಕ್ಕದಲ್ಲಿ ಮಲಗಿಸಿ ಪೋಷಕರು ಅಲ್ಲೇ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದರು. ಮಗುವಿಗೆ ಬಿಸಿಲು ಆಗಬಾರದೆಂಬ ಉದ್ದೇಶದಿಂದ ಮಗುವಿನ ಮೇಲೆ ಟುವೆಲ್ ಹಾಸಲಾಗಿತ್ತು ಅದೇ…
ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಮೊಬೈಲ್ ನಲ್ಲಿ ಚಿತ್ರಿಕರಿಸಿ ಹರಿಬಿಟ್ಟಿದ್ದ ಆರೋಪಿಗಳ ಬಂಧನ
ಕಾಲೇಜು ಮುಗಿಸಿ ಮನೆಗೆ ಹೊರಟ್ಟಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರ ನಡೆಸಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದ ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯು ಜ.15 ರಂದು ಮಧ್ಯಾಹ್ನ ತನ್ನ ಗ್ರಾಮಕ್ಕೆ ಹೋಗಲು ಹೊಸನಗರ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬರುತ್ತಿದ್ದ ಸಮಯದಲ್ಲಿ ಪರಿಚಯವಾಗಿದ್ದ ಸಂತೋಷ ಮತ್ತು ಸುನಿಲ್ ಇಬ್ಬರು ಬಾಲಕಿಯನ್ನು…