ಕ್ರೈಂ ಸುದ್ದಿ:
ಕರ್ತವ್ಯ ವೇಳೆ ಕುಸಿದು ಬಿದ್ದ ಶಿವಮೊಗ್ಗದ ಸ್ಟಾಫ್ ನರ್ಸ್ ಸಾವು : ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ
ಶಿವಮೊಗ್ಗ : ಮೆದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಸ್ಟಾಫ್ ನರ್ಸ್ ಟಿ.ಕೆ. ಗಾನವಿ (22) ಅವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಗಾನವಿ ಅವರು ಕರ್ತವ್ಯದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಗ್ಯಾಸ್ಟೊ್ರೕ ಎಂಟರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆಗೆ ಕರೆತರಲಾಯಿತು. ಈ ವೇಳೆ ವೈದ್ಯರು ಮಿದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದರು. ಇದರಿಂದ ಪೋಷಕರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಾಯಿ ಮತ್ತು ಅಕ್ಕ ಅಂಗಾಂಗ ದಾನಕ್ಕೆ ಸಹಿ ಮಾಡುವ ಮೂಲಕ ಹಲವರಿಗೆ…
ಊಟ ಮಾಡುತಿದ್ದ ಮಗನಿಗೆ ಚೂರಿ ಇರಿದ ತಂದೆ : ಹೊಸನಗರದಲ್ಲೊಂದು ವಿಚಿತ್ರ ಘಟನೆ
ಹೊಸನಗರ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಹೆಸರಾಂತ ಖಾಸಗಿ ಹೋಟೆಲ್‌ನಲ್ಲಿ ಇಂದು ಮಧ್ಯಾಹ್ನ ಊಟ ಮಾಡುತಿದ್ದ ಮಗನಿಗೆ ಸ್ವತಃ ತಂದೆಯೇ ಏಕಾಏಕಿ ಬಂದು ಚೂರಿ ಇರಿದಿರುವ ಘಟನೆ ನಡೆದಿದೆ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗಾದಲ್ಲಿ ವಾಸ್ತವ್ಯ ಹೊಂದಿರುವ ಗೊರಗೋಡಿನ ಜಿ.ಆರ್ ತೀರ್ಥೇಶ್ ರವರು ಊಟ ಮಾಡುವ ವೇಳೆ ಏಕಾಏಕಿ ಹೋಟೆಲ್‌ಗೆ ಬಂದ ಅವರ ತಂದೆ ಸಂಕ್ಲಾಪುರ ರಾಜಪ್ಪ ಗೌಡ ಎಂಬುವವರು ಊಟ ಮಾಡುತ್ತಿದ್ದ ತೀರ್ಥೇಶ್ ಎಂಬುವವರಿಗೆ ಚಾಕುವಿನಿಂದ ಇರಿದಿದ್ದು ತೀರ್ಥೇಶ್ ರವರ ಬೆನ್ನು ಕೈ ಹಾಗೂ ಕಿಬ್ಬೊಟ್ಟೆಗೆ…
ಚಿನ್ಮನೆ ಬಳಿ ಭೀಕರ ಅಪಘಾತ : ಒಬ್ಬ ಸಾವು,ಇಬ್ಬರ ಸ್ಥಿತಿ ಗಂಭೀರ
ಚಿನ್ನಮನೆ ಗ್ರಾಮದ ಬಳಿ ಬೊಲೆರೊ ಪಿಕಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.ಅಪಘಾತವಾಗಿ ನಿಲ್ಲಿಸಿದ್ದ ಬೊಲೆರೊ ಪಿಕಪ್ ಗೆ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಆಯನೂರು ಕಡೆಯಿಂದ ಬರುತ್ತಿದ್ದ ಬೊಲೆರೊ ಪಿಕಪ್ ವಾಹನಕ್ಕೆ ಸೂಡೂರು ಕಡೆಯಿಂದ ಆಯನೂರು ಕಡೆ ಬರುತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಚಿಕ್ಕಮಚಲಿ ಗ್ರಾಮದ ನಿವಾಸಿ ಶ್ಯಾಮು (40) ಎಂಬುವವನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ನಂತರ ಹಿಂಬದಿಯಿಂದ ಬಂದು…
ಹನಿಟ್ರ್ಯಾಪ್ : ನಗ್ನ ವೀಡಿಯೋ ಮಾಡಿ ಹಣಕ್ಕಾಗಿ ಬೆದರಿಸುತ್ತಿದ್ದ ಶಿವಮೊಗ್ಗ ಮೂಲದ ಮಹಿಳೆ ಸೇರಿ ಇಬ್ಬರು ಬಂಧನ
ಹನಿ ಟ್ರಾಪ್ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಮೂವರನ್ನು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ. ಯುವಕನೊಬ್ಬನ ನಗ್ನ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಎಂದು ಯುವಕನಿಗೆ ಹೆದರಿಸಿದ್ದಾರೆ. ಶಿರಸಿ ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗದ ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. ಬಂಧಿತ ಆರೋಪಿಗಳು. ಆರೋಪಿ ಅಜಿತ್ ಜತೆ…
ವಿವಾಹಿತ ಮಹಿಳೆ ನಾಪತ್ತೆ : ಸುಳಿವು ಪತ್ತೆಗೆ ಮನವಿ
2021 ರ ಏಪ್ರಿಲ್ 13 ರಂದು ಅನುಷಾ ಕೋಂ ಆನಂದ, 26 ವರ್ಷ, ಗೃಹಿಣಿ ಈಕೆ ನಗರದ ಹೊಸಮನೆ 06 ನೇ ಕ್ರಾಸ್‍ನಲ್ಲಿರುವ ತನ್ನ ನಿವಾಸದಿಂದ ಕಾಣೆಯಾಗಿರುತ್ತಾರೆ. ಅಂದು ರಾತ್ರಿ 8 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಹೋದವಳು ಹಿಂತಿರುಗಿ ಬಂದಿರುವುದಿಲ್ಲ. ಅಕ್ಕ ಪಕ್ಕ, ನೆಂಟರ ಮನೆ ಹೀಗೆ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರುದಿಲ್ಲ. ಕಾಣೆಯಾದ ಮಹಿಳೆ ಅನುಷಾ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದ…
ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ :
ರಿಪ್ಪನ್ ಪೇಟೆ : ತಾಯಿ ತನ್ನ ಮಗುವಿನ ಜತೆ ಬಿದರಹಳ್ಳಿಯ ತನ್ನ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೊಸನಗರ ತಾಲೂಕಿನ ಬಿದರಹಳ್ಳಿಯ ನಿವಾಸಿ ವಿದ್ಯಾ(32) ಮಗಳು ತನ್ವಿ(4) ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗುರುವಾರ ಬೆಳಗಿನ ಜಾವ ವಿದ್ಯಾ ಮಗುವಿನೊಂದಿಗೆ ಬಾವಿಗೆ ಹಾರಿದ್ದಾರೆ.ಇಂದು ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ. ಹೊಸನಗರದ ಅಗ್ನಿಶಾಮಕ ಸಿಬ್ಬಂದಿ ಭೀಷ್ಮಚಾರಿ 50 ಅಡಿ ಆಳದ ಬಾವಿಗೆ ಇಳಿದು ಎರಡು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ರಿಪ್ಪನ್…
ಕಾರಿಗೆ ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಚಾನೆಲ್ ಗೆ ಇಳಿದ ಕಾರು : ಒಬ್ಬರ ಸಾವು
ಕಾರಿಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ತುಂಗಾ ಚಾನೆಲ್ ಗೆ ಕಾರು ಬಿದ್ದು ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವ 2 ಗಂಟೆಯ ಸಮಯದಲ್ಲಿ ಸಂಭವಿಸಿದೆ. ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಸುಷ್ಮ.ಇ(28) ಮೃತ ದುರ್ಧೈವಿ. ಸುಷ್ಮ ಮತ್ತು ಪತಿ ಚೇತನ್ ಕುಮಾರ್ ತುಮಕೂರಿನಲ್ಲಿರುವ ಅತ್ತೆಗೆ (ಚೇತನ್ ತಾಯಿಗೆ) ಎದೆ ನೋವು ಕಾಣಿಸಿಕೊಂಡಿದ್ದರಿಂದ ತುಮಕೂರಿಗೆ ಕಾರಿನಲ್ಲಿ…
ಮದ್ಯವ್ಯಸನಿ ಪತಿಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ:
ಕೌಟುಂಬಿಕ ಸಮಸ್ಯೆಗಳಿಂದ ಹಾಗೂ ಮದ್ಯವ್ಯಸನಿ ಪತಿಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಪಿನ ಕಟ್ಟೆ ರಸ್ತೆಯಲ್ಲಿರುವ ಸಿದ್ದೇಶ್ವರ ನಗರದ ನಿವಾಸಿ ಸವಿತಾ(35) ಎಂಬುವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಸಿಯ ನಿವಾಸಿಯಾಗಿದ್ದ ಸವಿತಾ ಕಳೆದ 14 ವರ್ಷದ ಹಿಂದೆ ಗಾರೆ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಎಂಬಾತನನ್ನು ಮದುವೆಯಾಗಿದ್ದರು. ಇಬ್ಬರು ಮಕ್ಕಳಿದ್ದರು. ಮದುವೆಯಾದಾಗಿನಿಂದ ರಾಘವೇಂದ್ರ ವಿಪರೀತ ಮದ್ಯ ವ್ಯಸನಿಯಾಗಿದ್ದು ಈ ವ್ಯಸನದಿಂದ ಬದಲಾಗದ ಹಿನ್ನಲೆಯಲ್ಲಿ ಪವಿತ್ರ ಬೇಸತ್ತಿದ್ದರು. ಇಂದು ಮನೆಯಲ್ಲಿ ಪವಿತ್ರಾ ನೇಣು…
ರಿಪ್ಪನ್ ಪೇಟೆ : ಕಾರಿನ ಟೈರ್ ಸ್ಪೋಟಗೊಂಡು ಸರಣಿ ಅಪಘಾತ : ಇಬ್ಬರಿಗೆ ಗಂಭೀರ ಗಾಯ : ಮೆಗ್ಗಾನ್ ಗೆ ದಾಖಲು
ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶೆಫರ್ಡ್ ಚರ್ಚ್ ಬಳಿ ಚಲಿಸುತ್ತಿದ್ದ ಮಾರುತಿ ಬ್ರೀಜಾ ಕಾರಿನ ಮುಂಭಾಗದ ಎರಡು ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತಿದ್ದ ಎರಡು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ರಿಪ್ಪನ್ ಪೇಟೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಮಾರುತಿ ಬ್ರೀಜಾ ಕಾರಿನ ಮುಂದಿನ ಎರಡು ಟೈರ್ ಸ್ಪೋಟಗೊಂಡ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಬರುವೆ ಗ್ರಾಮದ ನಿವಾಸಿ ತಿಮ್ಮಪ್ಪ (40) ಇವರ ಬಜಾಜ್…
ಆಗುಂಬೆ ಪೊಲೀಸರ ಭರ್ಜರಿ ಕಾರ್ಯಾಚರಣೆ : ಒಂದೂವರೆ ಕ್ವಿಂಟಲ್ ಅಡಿಕೆ ಕದ್ದಿದ್ದ ಆರೋಪಿ ಮಾಲು ಸಮೇತ ಬಂಧನ
ತೀರ್ಥಹಳ್ಳಿ : ಅಡಿಕೆ ಮೂಟೆ ಕದ್ದ ಕಳ್ಳನನ್ನು ಆಗುಂಬೆ ಪೊಲೀಸರು ಬಂಧಿಸಿ ಆತನಿಂದ ಸುಮಾರು ಒಂದೂವರೆ ಕ್ವಿಂಟಲ್ ಅಡಿಕೆ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸುಧಾಕರ್ ಎಂಬುವವನು ಜನವರಿ ತಿಂಗಳಲ್ಲಿ ಕೌರಿಹಕ್ಕಲು ಬಿಎಸ್ಎನ್ಎಲ್ ವೆಂಕಟೇಶ್ ಎಂಬುವವರ ಮನೆಯಲ್ಲಿ ಒಣಹಾಕಿದ್ದ ಒಂದುವರೆ ಕ್ವಿಂಟಲ್ ಅಡಿಕೆ ಕದ್ದಿದ್ದ. ಈ ಬಗ್ಗೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಿವೈಎಸ್ ಪಿ ಶಾಂತವೀರ, ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರ್,ಆಗುಂಬೆ ಪಿಎಸ್ ಐ ಶಿವಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ವೀರೇಂದ್ರ,…