Headlines

ಶಿವಮೊಗ್ಗ : ನಡುರಾತ್ರಿ ಮೂವರು ದುಷ್ಕರ್ಮಿಗಳಿಂದ ಯುವಕನ ಬರ್ಬರ ಹತ್ಯೆ

ಶಿವಮೊಗ್ಗ : ನಗರದಲ್ಲಿ ನಡುರಾತ್ರಿ ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಜೈನುದ್ದೀನ್ (23) ಎಂಬ ರೌಡಿಶೀಟರ್ ನನ್ನು ದುಷ್ಕರ್ಮಿಗಳು ನಿನ್ನೆ ರಾತ್ರಿ 12ರ ಸಮಯದಲ್ಲಿ ನಗರದ ವಾದಿ-ಎ ಹುದಾ ಬಡಾವಣೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇತ್ತೀಚೆಗಷ್ಟೇ ವಾದಿ-ಎ ಹುದಾ ಬಡಾವಣೆಗೆ ಜೈನುದ್ದೀನ್ ಸ್ಥಳಾಂತರಗೊಂಡಿದ್ದ. ಜೈನುದ್ದೀನ್ ಮನೆಯ ಬಳಿ ನಿಂತು ಮಾತನಾಡುತ್ತಿದ್ದಾಗ ಮೂರು ಜನ ದುಷ್ಕರ್ಮಿಗಳು ಏಕಾಏಕಿ ಬಂದು ಲಾಂಗ್, ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಯಿಂದಾಗಿ ಜೈನುದ್ದಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಅಥವಾ ಯಾವ ಕಾರಣಕ್ಕಾಗಿ ಈ…

Read More

ತೀರ್ಥಹಳ್ಳಿಯ ಕಟ್ಟೆಹಕ್ಲು ಬಳಿ ವಾಹನ ಸವಾರರ ಮೇಲೆ ಮಚ್ಚಿನಿಂದ ದಾಳಿ ನೆಡೆಸಿದ್ದ ಆರೋಪಿ ಅಂದರ್

ತೀರ್ಥಹಳ್ಳಿ : ತಾಲೂಕಿನ ಕಟ್ಟೆಹಕ್ಕಲಿನ ಪ್ರಾರ್ಥಮಿಕ ಶಾಲೆಯ ಬಳಿ ವಾಹನ ಸವಾರರ ಮೇಲೆ ಮಚ್ಚಿನಿಂದ ದಾಳಿ ನಡೆಸುತ್ತಿದ್ದ ವ್ಯಕ್ತಿಯನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.  ಅ. 26 ರಾತ್ರಿ ಶಾಲೆಯ ಸಮೀಪ ಕಾರಿನ ಮತ್ತು ಬೈಕಿನ ಮೇಲೆ ಕಟ್ಟೆಹಕ್ಲು ನಿವಾಸಿ ಸಂದೀಪ್ ಮಚ್ಚಿನಿಂದ ದಾಳಿ ನಡೆಸಿದ್ದಾನೆ.   ಬೆಂಗಳೂರಿನ ನಿವಾಸಿ  ಮಹದೇವ ಪ್ರಸಾದ್ ಅವರು ಪತ್ನಿ, ಪತ್ನಿಯ ತಮ್ಮನ ಹೆಂಡತಿ, ದೊಡ್ಡಪ್ಪನ ಮಗ ಹಾಗೂ ಅವರ ಪತ್ನಿ ಯೊಂದಿಗೆ ಕಾರಿನಲ್ಲಿ ತೀರ್ಥಹಳ್ಳಿಗೆ ತಲುಪಿ ಕಟ್ಟೆಹಕ್ಲು ಮೂಲಕ ಹೆದ್ದೂರು ಹೊರಬೈಲಿಗೆ ಹೋಗುವಾಗ ಕಟ್ಟೆಹಕ್ಲುವಿನ…

Read More

ಗೃಹ ಸಚಿವರ ಜಿಲ್ಲೆಯಲ್ಲಿ ಮಿತಿಮೀರಿದ ರೌಡಿಗಳ ಹಾವಳಿ! ಜೀವ ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರರವರ ಜಿಲ್ಲೆಯಲ್ಲೇ ರೌಡಿಗಳ ಹಾವಳಿ ಮಿತಿಮೀರಿದೆ. ರೌಡಿಗಳು ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಹಣ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಶಿವಮೊಗ್ಗದ ಕುಖ್ಯಾತ ರೌಡಿ ಬಚ್ಚಾ ಅಲಿಯಾಸ್ ಜಮೀರ್ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಹಣ ನೀಡುವಂತೆ ಹೆದರಿಸಲು ಜಮೀರ್ ಸಹಚರರು ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ್ದು, ಈ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಜಮೀರ್ ಶಿವಮೊಗ್ಗದ ಶಾದ್ ನಗರದ ಉದ್ಯಮಿಯಾಗಿರುವ ಅನ್ಸರ್ ಎಂಬುವವರಿಗೆ…

Read More

ಜೋಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ.

ಸಾಗರ : ತಾಲ್ಲೂಕಿನ ಜೋಗದಲ್ಲಿ ಮನೆಯ ಸಮೀಪ ಇರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಜೋಗದ ನಿವಾಸಿ ಗಂಗಾಧರ್ (38) ಆತ್ಮಹತ್ಯೆ ಮಾಡಿಕೊಂಡವರು.ಗಂಗಾಧರ್ ಮದ್ಯವ್ಯಸನಿಯಾಗಿದ್ದು,ನಿನ್ನೆ ರಾತ್ರಿ ಸಹ ವಿಪರೀತ ಕುಡಿದು ಬಂದು ಪತ್ನಿ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ. ತದ ನಂತರ ಮನೆಯ ಹೊರಗೆ ಇರುವ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ನಿರ್ಮಲಾ ಭೇಟಿ ನೀಡಿ ಪರಿಶೀಲಿಸಿದರು.   

Read More