ಕ್ರೈಂ ಸುದ್ದಿ:
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ಇಬ್ಬರು ಶಿಕ್ಷಕರ ಸಸ್ಪೆಂಡ್ | harassment
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ಇಬ್ಬರು ಶಿಕ್ಷಕರ ಸಸ್ಪೆಂಡ್ | harassment Shikaripura | ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕರನ್ನ ಅಮಾನತು ಮಾಡಿ ಡಿಡಿಪಿಐ ಆದೇಶಿಸಿದ್ದಾರೆ. ಶಿಕಾರಿಪುರ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹಾಯಕ ಶಿಕ್ಷಕ ಶಾಂತಕುಮಾರ್ ಹಾಗೂ ಮುಖ್ಯ ಶಿಕ್ಷಕ ನಾಗರಾಜ್ ಕೋರಿ ಅವರನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಕ ಶಾಂತಕುಮಾರ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದ್ದು, ಪ್ರಕರಣದ ಬಗ್ಗೆ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸದೇ ಕರ್ತವ್ಯ ಲೋಪ ಎಸಗಿದ್ದಾರೆ…
Ripponpete | ಜಮೀನು ವ್ಯಾಜ್ಯ – ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ : ಪ್ರಕರಣ ದಾಖಲು
Ripponpete | ಜಮೀನು ವ್ಯಾಜ್ಯ – ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ – ಪ್ರಕರಣ ದಾಖಲು ಜಮೀನು ವ್ಯಾಜ್ಯದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಮಳಲಿಕೊಪ್ಪದಲ್ಲಿ ನಡೆದಿದೆ. ಮಳಲಿಕೊಪ್ಪದ ನಾಗೇಶ್ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಘಟನೆಗೆ ಸಂಬಂದಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಳಲಿಕೊಪ್ಪದ ಯೋಗೇಂದ್ರಪ್ಪ ಹಾಗೂ ಸರಸ್ವತಿ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ಘಟನೆಯ ಹಿನ್ನಲೆ…
ಮನೆಯಂಗಳದಲ್ಲಿದ್ದ ಶ್ರೀಗಂಧದ ಮರಗಳನ್ನು ರಾತ್ರೋರಾತ್ರಿ ಕದ್ದೊಯ್ದ ಕಳ್ಳರು | sandal theft
ಮನೆಯಂಗಳದಲ್ಲಿದ್ದ ಶ್ರೀಗಂದದ ಮರಗಳನ್ನು ರಾತ್ರೋರಾತ್ರಿ ಕದ್ದೊಯ್ದ ಕಳ್ಳರು ಸಾಗರ : ನಗರದ ಶ್ರೀರಾಂಪುರ ಬಡಾವಣೆಯ ಪ್ರಗತಿಪರ ಕೃಷಿಕ ಗೌತಮ್ ಪೈರವರ ಮನೆ ಅಂಗಳದಲ್ಲಿದ್ದ ಎರಡು ಗಂಧದ ಮರದ ಕಾಂಡವನ್ನು ಕತ್ತರಿಸಿಕೊಂಡು ಕಳ್ಳರು ಹೊತ್ತೊಯ್ದಿರುವ ಪ್ರಕರಣ ನಡೆದಿದೆ. ಗೌತಮ್ ಪೈ ಪ್ರಗತಿಪರ ಕೃಷಿಕರಾಗಿದ್ದು, ಮನೆಯ ಅಂಗಳದಲ್ಲಿ ಪಶ್ಚಿಮಘಟ್ಟದ ವಿವಿಧ ಜಾತಿಯ ಹೂ, ಹಣ್ಣಿನ ಗಿಡಗಳನ್ನು ಬೆಳೆದು ಮಾದರಿಯಾಗಿದ್ದಾರೆ. ಎರಡು ಗಂಧದ ಮರಗಳು 18 ಹಾಗೂ 22 ವರ್ಷದ ಅವಧಿಯಲ್ಲಿ ಬೆಳೆದಿದ್ದು, ಕಾಂಡಗಳು ಸದೃಢವಾಗಿ ಬೆಳೆದಿದ್ದವು. ಅವರೇ ತಿಳಿಸಿದಂತೆ ಸುಮಾರು…
Accident | ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ – ಪತಿ ಸ್ಥಳದಲ್ಲೇ ಸಾವು , ಪತ್ನಿ ಗಂಭೀರ
ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ – ಸವಾರ ಸ್ಥಳದಲ್ಲೇ ಸಾವು ತೀರ್ಥಹಳ್ಳಿ: ಬೈಕ್ ಚಲಿಸುವ ವೇಳೆ ನಾಯಿ ಅಡ್ಡ ಬಂದು ಅಪಘಾತವಾಗಿ ಸವಾರ ಸ್ಥಳದಲ್ಲೇ ಸಾವು ಕಂಡು ಪತ್ನಿ ಗಂಭೀರ ಗಾಯಗೊಂಡಿರುವ ಘಟನೆ ಕಲ್ಮನೆ ಸಮೀಪದ ಹೆಗ್ಗೋಡಿ ನಲ್ಲಿ ನಡೆದಿದೆ. ಕಮ್ಮರಡಿ ಸಮೀಪದ ಅರೇಹಳ್ಳಿ ಗ್ರಾಮ ಪಂಚಾಯಿತಿಯ ಜೋಡುಕಟ್ಟೆ ಬೈಲು ಊರಿನ ಹಮೀದ್ (55) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಹಮೀದ್ ಮತ್ತು ರೆಹಮತ್ ದಂಪತಿಗಳು ಇಂದು TVS ಜುಪಿಟರ್ ಸ್ಕೂಟರ್ ನಲ್ಲಿ ಹೋಗುವಾಗ ನಾಯಿ ಬೈಕ್…
Shivamogga | ಕಾಲೇಜಿನ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣ – ಪ್ರಾಂಶುಪಾಲ ಸೇರಿದಂತೆ ಎಂಟು ಜನ ಮೇಲೆ ಪ್ರಕರಣ ದಾಖಲು
Shivamogga | ಕಾಲೇಜಿನ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣ – ಪ್ರಾಂಶುಪಾಲ ಸೇರಿದಂತೆ ಎಂಟು ಜನ ಮೇಲೆ ಪ್ರಕರಣ ದಾಖಲು ಶಿವಮೊಗ್ಗ : ಕಾಲೇಜಿನ ಕಟ್ಟಡದಿಂದ ಬಿದ್ದು ಪ್ರಾಣ ಕಳೆದುಕೊಂಡ 17 ವರ್ಷದ ವಿದ್ಯಾರ್ಥಿನಿ ಮೇಘಶ್ರೀಯ ಸಾವಿನ ಪ್ರಕರಣದಲ್ಲಿ ಎಂಟು ಜನರ ಮೇಲೆ ಎಫ಼್ ಐಆರ್ ದಾಖಲಾಗಿದೆ. ಹೆಚ್ಚಿನ ಅಂಕ ಗಳಿಸದೆ ಇದ್ದರೆ ಶಾಲೆಯ ಹೆಸರು ಹಾಳಾಗಲಿದೆ ಎಂದು ಒತ್ತಡಹಾಕುತ್ತಿದ್ದ ಕಾಲೇಜಿನ ಪ್ರಾಂಶುಪಾಲ, ಶಿಕ್ಷಕ ಪ್ರಫುಲ್ಲಾ, ದಿವ್ಯಾ, ಮಧು, ಹಾಗೂ ಹಾಸ್ಟೆಲ್ ನ ವಾರ್ಡನ್ ಗಳಾದ…
ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ| Life imprisonment
ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಶಿವಮೊಗ್ಗ – ಹಳೆಯ ದ್ವೇಷದ ಹಿನ್ನಲೆಯಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ನ ಎದುರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ 10 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಇಲ್ಲಿನ ರಾಜೀವ್ ಗಾಂಧಿ ಬಡಾವಣೆಯ ವಾಸಿ ಪರಶುರಾಮ ಎಂಬಾತನು ಚಂದ್ರಶೇಖರ್, ಎಂಬುವನ ಮೇಲೆ ಹಳೆಯ ದ್ವೇಶದ ಹಿನ್ನೆಲೆಯಲ್ಲಿ, ದಿನಾಂಕಃ 02-03-2022 ರಂದು ಮಧ್ಯ ರಾತ್ರಿ ಶಿವಮೊಗ್ಗ ಟೌನ್ ಪಿಂಗಾರ…
ಪೆಸಿಟ್ ಕಾಲೇಜಿನ ಪದವಿ ವಿದ್ಯಾರ್ಥಿನಿ ಮಹಡಿಯಿಂದ ಕೆಳಗೆ ಬಿದ್ದು ಸ್ಥಿತಿ ಗಂಭೀರ – ಒಂದೇ ದಿನ ನಡೆಯಿತು ಎರಡು ದುರ್ಘಟನೆ| Smg
ಪೆಸಿಟ್ ಕಾಲೇಜಿನ ಪದವಿ ವಿದ್ಯಾರ್ಥಿನಿ ಮಹಡಿಯಿಂದ ಕೆಳಗೆ ಬಿದ್ದು ಸ್ಥಿತಿ ಗಂಭೀರ – ಒಂದೇ ದಿನ ನಡೆಯಿತು ಎರಡು ದುರ್ಘಟನೆ ಶಿವಮೊಗ್ಗ : ಇಲ್ಲಿನ ಪೆಸಿಟ್ ಕಾಲೇಜಿನ ಪದವಿ ವಿದ್ಯಾರ್ಥಿನಿಯೊಬ್ಬಳು ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಇಂದು ನಡೆದಿದೆ. ಕುವೆಂಪು ರಸ್ತೆಯ ಆದಿಚುಂಚನಗಿರಿ ಪಿಯು ಕಾಲೇಜಿನ ಕಟ್ಟಡದಿಂದ ವಿದ್ಯಾರ್ಥಿನಿ ಮೇಘನಾ ಕೆಳಗೆ ಬಿದ್ದು ಮೃತ ಪಟ್ಟ ಘಟನೆಯ ಬೆನ್ನಲ್ಲೆ ಮತ್ತೊಬ್ಬ ವಿದ್ಯಾರ್ಥಿಯು ಮಹಡಿ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮೂಲತಃ ಚಿಕ್ಕಮಗಳೂರು…
Crime News | ರಬ್ಬರ್ ತೋಟದಲ್ಲಿ ಕೇರಳ ಮೂಲದ ವ್ಯಕ್ತಿಯ ಕೊಲೆ – ಓರ್ವ ವಶಕ್ಕೆ
ರಬ್ಬರ್ ತೋಟದಲ್ಲಿ ಕೇರಳ ಮೂಲದ ವ್ಯಕ್ತಿಯ ಕೊಲೆ ಕಾರ್ಮಿಕರಿಬ್ಬರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ. ಕೇರಳ ರಾಜ್ಯದ ಕಣ್ಣೂರು ಮೂಲದ ಶಿಜು(42) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಕೇರಳ ಮೂಲದ ವ್ಯಕ್ತಿಗಳು ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದರು.ಇವರ ನಡುವಿನ ಜಗಳ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಘಟನೆ ಸಂಬಂಧ ಓರ್ವ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ. ಘಟನೆಗೆ ವೈಯಕ್ತಿಕ ವಿಚಾರ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾಲೇಜಿನ ಕಟ್ಟಡದಿಂದ ಕೆಳಗೆ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು – ಕಾಲೇಜಿನ ಮುಂದೆ ಪೋಷಕರ ಆಕ್ರೋಶ | SMG
ಶಿವಮೊಗ್ಗ ಇಲ್ಲಿನ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಯೋರ್ವಳು ಶಾಲೆ ಕಟ್ಟದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕುವೆಂಪು ರಸ್ತೆಯಲ್ಲಿರುವ ಆದಿಚುಂಚನಗಿರಿ ಪಿಯು ಕಾಲೇಜಿನಲ್ಲಿ ಈ ಅವಘಡ ನಡೆದಿದ್ದು ಮೇಘನಾ (18) ಪಿಯುಸಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಮೂಲದವರಾಗಿದ್ದಾರೆ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ವಾಶ್ ರೂಂಗೆ ಹೋಗುವುದಾಗಿ ಹೇಳಿ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಸಿಬ್ಬಂದಿಯು ಅವರ ಜೊತೆಗಿದ್ದರು ಎಂಬ ಮಾಹಿತಿಯಿದೆ. ಸದ್ಯ ಸ್ಥಳದಲ್ಲಿ ವಿದ್ಯಾರ್ಥಿನಿಯ ಕುಟುಂಬಸ್ಥರು ,ಸಂಬಂಧಿಗಳು ಕಾಲೇಜಿನ…
Thirthahalli | ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
ತೀರ್ಥಹಳ್ಳಿಯ ಕುಶಾವತಿ ಬಳಿ ಎರಡು ಕಾರುಗಳ ನಡುವೆ ಅಪಘಾತ ತೀರ್ಥಹಳ್ಳಿ : ಪಟ್ಟಣದ ಕುಶಾವತಿ ಸೇತುವೆ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬ್ರೀಜಾ ಕಾರು ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಸಿಯಾಜ್ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಒಂದು ಕಾರಿನ ಮುಂಭಾಗ ಹಾಗೂ ಮತ್ತೊಂದು ಕಾರಿನ ಬಲ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸಣ್ಣ ಪುಟ್ಟ ಗಾಯವಾಗಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ತೀರ್ಥಹಳ್ಳಿ…