POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಮೈ ಮೇಲೆ ‘ದೆವ್ವ’ ಬರುತ್ತೆಂದು ಹೆದರಿ ‘ನೇಣಿಗೆ’ ಕೊರಳೊಡ್ಡಿದ ಯುವಕ | Crime News

ಮೈ ಮೇಲೆ ‘ದೆವ್ವ’ ಬರುತ್ತೆಂದು ಹೆದರಿ ‘ನೇಣಿಗೆ’ ಕೊರಳೊಡ್ಡಿದ ಯುವಕ


ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಹಲವು ಬಲವಾದ ಕಾರಣಗಳಿರುತ್ತವೆ. ಅಲ್ಲದೆ ಮಾನಸಿಕವಾಗಿಯೂ ಹಲವರು ಖಿನ್ನತೆಗೆ ಒಳಗಾಗಿರುತ್ತಾರೆ. ಆದರೆ ಮೈಸೂರಿನಲ್ಲಿ ಯುವಕನೊಬ್ಬ ಮೈಮೇಲೆ ದೆವ್ವ ಬರುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಹೆದರಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು ಘಟನೆಯು ಮೈಸೂರಿನ ಮೈ ಮೇಲೆ ದೆವ್ವ ಬರುತ್ತೆ ಎಂದು ಹೆದರಿ ಯುವಕ ಆತ್ಮಹತ್ಯೆ ಖನ್ನತೆಗೆ ಒಳಗಾಗಿ ಋಷಭೇಂದ್ರ (21) ಎನ್ನುವ ಯುವಕ ಮೈಸೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಋಷಭೇಂದ್ರ ತೀವ್ರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೈಸೂರಿನ ಬೆಮಲ್ ಬಡಾವಣೆ ಉದ್ಯಾನವನದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಕುರಿತಂತೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.