ಕ್ರೈಂ ಸುದ್ದಿ:
ಆಸ್ತಿ ವಿಚಾರಕ್ಕೆ ಕಲಹ – ಪೆಟ್ರೋಲ್ ಸುರಿದು,ಬೆಂಕಿ ಹಚ್ಚಿ ಚಿಕ್ಕಪ್ಪನ ಕೊಲೆಗೈದ ದುರುಳರು |Crime News
ಆಸ್ತಿ ವಿಚಾರಕ್ಕೆ ಕಲಹ – ಪೆಟ್ರೋಲ್ ಸುರಿದು,ಬೆಂಕಿ ಹಚ್ಚಿ ಚಿಕ್ಕಪ್ಪನ ಕೊಲೆಗೈದ ದುರುಳರು ಶಿವಮೊಗ್ಗ : ಬೆಳಲಕಟ್ಟೆ ಗ್ರಾಮದಿಂದ ಮಗಳ ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಪೆಟ್ರೋಲ್ ಎರಚಿ ಜೀವಂತವಾಗಿ ಸುಟ್ಟಿರುವ ಘಟನೆ ನಡೆದಿದೆ. ಬೆಳಲಕಟ್ಟೆ ಗ್ರಾಮದ ಮಹೇಶಪ್ಪ (60) ಕೊಲೆಯಾದ ವ್ಯಕ್ತಿ. ಬಿಕ್ಕೋನಹಳ್ಳಿಯ ಮಗಳ ಮನೆಯಿಂದ ಬರುತ್ತಿದ್ದ ವೇಳೆ ಅಡ್ಡಗಟ್ಟಿ ಪೆಟ್ರೋಲ್ ಎರಚಿ ಕೊಲೆ ಮಾಡಲಾಗಿದೆ. ಬೆಳಲಕಟ್ಟೆಯ ಕಾರ್ತಿಕ್ ಮತ್ತು ಕುಮಾರ್ ಎಂಬುವರಿಂದ ಈ ಕೃತ್ಯ ನೆಡೆದಿದೆ. ಮಹೇಶಪ್ಪನವರಿಗೆ ಬೆಳಲಕಟ್ಟೆಯಲ್ಲಿ ಮೂರು ಎಕರೆ ಜಮೀನು ಇದ್ದು ನ್ಯಾಯಾಲಯದಲ್ಲಿ…
Ripponpete | ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು
Ripponpete | ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ರಿಪ್ಪನ್‌ಪೇಟೆ : ಬಣ್ಣ ಬಣ್ಣದ ಮಾತುಗಳನ್ನಾಡಿ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಕೋಡೂರು ಗ್ರಾಪಂ ವ್ಯಾಪ್ತಿಯ 24ನೇ ಮೈಲಿಕಲ್ಲಿನ ಪ್ರತಾಪ್ (26) ಬಂಧಿತ ಆರೋಪಿಯಾಗಿದ್ದಾನೆ. ಕೋಡೂರು ಗ್ರಾಪಂ ವ್ಯಾಪ್ತಿಯ ಯುವತಿಯೊಬ್ಬಳ್ಳನ್ನು ಮದುವೆಯಾಗುವುದಗಿ ನಂಬಿಸಿ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿ ಗಂಡು ಮಗುವಿಗೆ ಜನ್ಮ ನೀಡಿದ ಮೇಲೆ ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ…
Accident | ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಕಟ್ಟೆಗೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ
Accident | ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಕಟ್ಟೆಗೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪ ಕಾರೊಂದು ಅಫಘಾತಕ್ಕೀಡಾಗಿದೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿ ಮೂವರಿಗೆ ಗಾಯವಾದ ಘಟನೆ ನಡೆದಿದೆ. ಪಿಳ್ಳಂಗೇರಿ ಗ್ರಾಮದ ಹೆದ್ದಾರಿ ಸಮೀಪದಲ್ಲಿಯೇ ಇರುವ ಗಣಪತಿ ದೇವಸ್ಥಾನದ ಕಟ್ಟೆಗೆ ಕಾರು ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರು ಚನ್ನಗಿರಿಯ ಅರಿಶಿನಘಟ್ಟಕ್ಕೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಈ ಘಟನೆ ಸಂಭವಿಸಿದೆ. ಪಿಳ್ಳಂಗೇರಿ ಗ್ರಾಮದ ಸಮೀಪ ಚಾಲಕ ನಿಯಂತ್ರಣ ತಪ್ಪಿ, ಕಾರು ದೇವಸ್ಥಾನದ ಕಟ್ಟೆಗೆ…
Anandapura | ಕನ್ನಡ ರಾಜ್ಯೋತ್ಸವದಲ್ಲಿ ಅಶ್ಲೀಲ ನೃತ್ಯ ಪ್ರಕರಣ – ಆಯೋಜಕರ ವಿರುದ್ದ ದಾಖಲಾಯ್ತು ಫೋಕ್ಸೋ ಕೇಸ್
Anandapura | ಕನ್ನಡ ರಾಜ್ಯೋತ್ಸವದಲ್ಲಿ ಅಶ್ಲೀಲ ನೃತ್ಯ ಪ್ರಕರಣ – ಆಯೋಜಕರ ವಿರುದ್ದ ದಾಖಲಾಯ್ತು ಫೋಕ್ಸೋ ಕೇಸ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಅಪ್ರಾಪ್ತನ ಜೊತೆಗೆ ಯುವತಿಯೊಬ್ಬಳು ಅಸಭ್ಯವಾಗಿ ಕುಣಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಪೋಕ್ಸೋ ಕೇಸ್ ದಾಖಲಾಗಿದೆ ಅಶ್ಲೀಲ ನೃತ್ಯದ ವೀಡಿಯೋ ಎಲ್ಲೆಡೆ ವೈರಲ್ ಆದ ಹಿನ್ನಲೆಯಲ್ಲಿ ಸದ್ಯ ಘಟನೆ ಸಂಬಂಧ ಪೊಲೀಸ್ ಇಲಾಖೆಯು ಸಹ ಎಚ್ಚೆತ್ತುಕೊಂಡಿದ್ದು, ವೈರಲ್ ವಿಡಿಯೋವನ್ನು ಆಧರಿಸಿ ಪೋಕ್ಸೋ ಕಾಯಿದೆಯಡಿ ಆನಂದಪುರ ಪೊಲೀಸ್ ಠಾಣೆಯಲ್ಲಿ…
ಇನೋವಾ ಕಾರಿನಲ್ಲಿ ತಂಬಾಕು ಚೀಲದಲ್ಲಿ ದಾಖಲೆಯಿಲ್ಲದ 08 ಕೋಟಿ ಪತ್ತೆ
ಇನೋವಾ ಕಾರಿನಲ್ಲಿ ತಂಬಾಕು ಚೀಲದಲ್ಲಿ ದಾಖಲೆಯಿಲ್ಲದ 08 ಕೋಟಿ ಪತ್ತೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಇನ್ನೋವಾ ಕಾರಿನಲ್ಲಿ ದಾಖಲೆಯಿಲ್ಲದ 8 ಕೋಟಿ ರೂಪಾಯಿ ಹಣ ಪತ್ತೆಯಾಗಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪೊಲೀಸರು ತಪಾಸಣೆ ವೇಳೆ ಮಲ್ಲಾಡಿ ಹಳ್ಳಿ ಬಳಿಯಲ್ಲಿ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಇನೋವಾ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ತಂಬಾಕು ಚೀಲಗಳಲ್ಲಿ ದಾಖಲೆ ಇಲ್ಲದ 8 ಕೋಟಿ ರೂಪಾಯಿ ಪತ್ತೆಯಾಗಿದೆ. ಈ ಹಣದ ಮೂಲದ ಬಗ್ಗೆ ಚಿತ್ರದುರ್ಗದ ಪೊಲೀಸ್ ವರಿಷ್ಟಾಧಿಕಾರಿ ಸ್ಥಳೀಯ…
Shivamogga | ಗದ್ದೆಯಲ್ಲಿ ಕೆಲಸ ಮಾಡುತಿದ್ದಾಗ ಸಿಡಿಲು ಬಡಿದು ಸಹೋದರರಿಬ್ಬರು ಸಾವು
ಶಿವಮೊಗ್ಗ – ಸಿಡಿಲು ಬಡಿದು ಇಬ್ಬರು ಸಹೋದರರು ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ ನಗರದ ಹುಣಸಕಟ್ಟೆ ಜಂಕ್ಷನ್ ನಲ್ಲಿ ನಡೆದಿದೆ. ಮೃತರನ್ನು ಎಸ್ ಬೀರೇಶ್(33) ಮತ್ತು ಎಸ್ ಸುರೇಶ್ (30) ಎಂದು ಗುರುತಿಸಲಾಗಿದೆ. ಇಬ್ಬರೂ ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆಗೆ ಕಾವಲು ಕಾಯಲು ಸಹೋದರರಿಬ್ಬರು ಹೋಗಿದ್ದರು. ರಾತ್ರಿ ಗದ್ದೆಗೆ ಕಾವಲಿಗೆಂದು ಹೋಗಿದ್ದವರು ಬೆಳಗ್ಗೆ ಮನೆಗೆ ಬಾರದ ಕಾರಣ ಆತಂಕಗೊಂಡಿದ್ದ ಕುಟುಬಸ್ಥರು ಗದ್ದೆಗೆ ತೆರಳಿ ನೋಡಿದಾಗ, ಸಹೋದರರಿಬ್ಬರೂ ಅಲ್ಲೇ…
Accident | ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ – ಕಾರು ಚಾಲಕ ಗಂಭೀರ
ತುಂಗಾ ಕಾಲೇಜ್ ಸಮೀಪ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ – ಚಾಲಕನ ಸ್ಥಿತಿ ಗಂಭೀರ ತೀರ್ಥಹಳ್ಳಿ : ಪಟ್ಟಣದ ತುಡಕಿ ಸಮೀಪದ ತುಂಗಾ ಕಾಲೇಜ್ ಸಮೀಪದಲ್ಲಿ ಶಿವಮೊಗ್ಗದಿಂದ ಬರುವ ಖಾಸಗಿ ಬಸ್ ಮತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಫಾರ್ಚುನರ್ ವಾಹನ ಮುಖಾಮುಖಿ ಡಿಕ್ಕಿಯಾಗಿದ ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಟೊಯೋಟಾ ಫಾರ್ಚುನರ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ. ಫಾರ್ಚುನರ್ ವಾಹನದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಅಡಿಗೆ ಗುತ್ತಿಗೆದಾರರಾದ ಬಳಗಟ್ಟೆ ಶಾಂತಪ್ಪ ಮತ್ತು ಕುಟುಂಬದವರಿದ್ದರು…
Hosanagara | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ – ಅಕ್ರಮ ಮರಳು ಮಾಫ಼ಿಯಾಕ್ಕೆ ಸಿಂಹಸ್ವಪ್ನವಾದ ಪಿಎಸ್‌ಐ ಶಿವಾನಂದ್
Hosanagara | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ – ಮರಳು ಮಾಫ಼ಿಯಾಕ್ಕೆ ಸಿಂಹಸ್ವಪ್ನವಾದ ಪಿಎಸ್‌ಐ ಶಿವಾನಂದ್ ಹೊಸನಗರ : ಅಕ್ರಮವಾಗಿ ಮರಳು ಸಾಗಾಟ ನಡೆಸುತಿದ್ದ ಟಿಪ್ಪರ್ ವಾಹನವನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಶಿವಾನಂದ್ ವೈ ಕೆ ರವರ ನೇತೃತ್ವ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಟಿಪ್ಪರ್ (KA 17 F 2543) ಲಾರಿಯನ್ನು ವಶಕ್ಕೆ ಪಡೆದಿದ್ದಾರೆ ಅಕ್ರಮ ಮರಳು ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವ…
Sagara | ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ನುಗ್ಗಿ 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು
Sagara | ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ನುಗ್ಗಿ 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು ಸಾಗರ : ಪಟ್ಟಣದ ವಿಜಯನಗರದ ಬಾಪಟ್ ಕಲ್ಯಾಣ ಮಂಟಪ ಹಿಂಭಾಗದ ರಸ್ತೆಯ ನಿವೃತ್ತ ಮೆಸ್ಕಾಂ ಇಂಜಿನಿಯರ್ ನಾಗರಾಜ್ ಎಂಬುವವರ ಮನೆಗೆ ನುಗ್ಗಿರುವ ಕಳ್ಳರು ಸುಮಾರು 9 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿರುವ ಘಟನೆಗೆ ಸಂಬಂಧಪಟ್ಟಂತೆ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೃತ್ತ ಮೆಸ್ಕಾಂ ಇಂಜಿನೀಯರ್ ನಾಗರಾಜ್ ಮತ್ತವರ ಕುಟುಂಬ ಕಾರ್ಯಕ್ರಮ ನಿಮಿತ್ತ ನ. 24ರಂದು ಸಿದ್ದಾಪುರ ಸಮೀಪದ…
Ripponpete | ಅನಾರೋಗ್ಯ ಹಿನ್ನಲೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
Ripponpete | ಅನಾರೋಗ್ಯ ಹಿನ್ನಲೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಶವಂತ್ (19) ಮೃತಪಟ್ಟ ದುರ್ಧೈವಿಯಾಗಿದ್ದಾನೆ ಅನಾರೋಗ್ಯ ಹಿನ್ನಲೆಯಲ್ಲಿ ಮನನೊಂದು ಶನಿವಾರ ಮಧ್ಯಾಹ್ನ ವಿಷ ಸೇವಿಸಿದ್ದಾನೆ ತಕ್ಷಣ ಕುಟುಂಬಸ್ಥರು ಯುವಕನನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದರು.ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಯುವಕನು ಭಾನುವಾರ ತಡರಾತ್ರಿ…