w
Headlines
Home » Ripponpete | ಪಾದಚಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ – ವ್ಯಕ್ತಿ ಸಾವು

Ripponpete | ಪಾದಚಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ – ವ್ಯಕ್ತಿ ಸಾವು

Ripponpete | ಪಾದಚಾರಿಗೆ ಲಾರಿ ಡಿಕ್ಕಿ – ಗವಟೂರಿನ ಸುರೇಶ್ ಚಿಕಿತ್ಸೆ ಫಲಿಸದೇ ಸಾವು


ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗವಟೂರು ಗ್ರಾಮದಲ್ಲಿ ಪಾದಚಾರಿಗೆ ಲಾರಿ ಡಿಕ್ಕಿಯಾಗಿ ಚಿಕಿತ್ಸೆ ಫಲಿಸದೇ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗವಟೂರು ಬಳಿಯ ಹಳೂರು ನಿವಾಸಿ ಸುರೇಶ್ ಮೃತ ದುರ್ಧೈವಿಯಾಗಿದ್ದಾರೆ.

23/02/2024 ರಂದು ಸಂಜೆ ಗವಟೂರು ಗ್ರಾಮದ ಸುರೇಶ ಬಿನ್ ಹಾಲಪ್ಪ, 60 ವರ್ಷ ಮನೆ ಬಳಿಯ ದಿನಸಿ ಅಂಗಡಿಗೆ ಹೋಗಿ ವಾಪಾಸ್‌ ಮನೆ ಕಡೆ ಮುಖ್ಯ ಟಾರ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ರಿಪ್ಪನ್ ಪೇಟೆ ಕಡೆಯಿಂದ ಹೊಸನಗರ ಕಡೆಗೆ ತೆರಳುತಿದ್ದ ಗೂಡ್ಸ್ ಲಾರಿಯ (KA16C8587)
ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ ಸುರೇಶನಿಗೆ ಡಿಕ್ಕಿಯಾಗಿತ್ತು.

ತೀವ್ರ ಗಾಯಗೊಂಡಿದ್ದ ಸುರೇಸ್ ರನ್ನು ಖಾಸಗಿ ವಾಹನದಲ್ಲಿ ರಿಪ್ಪನ್ ಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಮೃತಪಟ್ಟಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.