Headlines

ರಿಪ್ಪನ್‌ಪೇಟೆ : ಸುತ್ತಮುತ್ತಲಿನ ಸಾರ್ವಜನಿಕ ಗಣಪತಿ ವಿಸರ್ಜನೆ

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಾದ ಕೊಳವಂಕ, ಕಲ್ಲುಹಳ್ಳ, ಬಸವಾಪುರ, ಕಳಸೆ, ಸೂಡೂರು ಕೋಣನಜಡ್ಡು, ಹಾರೋಹಿತ್ತಲು,ದೂನ ,ಬೆನವಳ್ಳಿ ಮತ್ತು ಜೀರಿಗೆಮನೆ,ಗ್ರಾಮದಲ್ಲಿ ಯುವಕ ಸಂಘಗಳು  ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣಪತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ  ರಾಜಬೀದಿ ಉತ್ಸವದಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಿದರು. ಉತ್ಸವಮೂರ್ತಿ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸ್ಥಳೀಯ ಜನಪದ ಕಲಾಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಿತು  ಡೊಳ್ಳು ಕುಣಿತದ ತಾಳಕ್ಕೆ ತಕ್ಕಂತೆ ಯುವಕ ಯುವತಿಯರು ಚಿಣ್ಣರು ಹಾಗೂ ಹೆಂಗಳೆಯರು ಹೆಜ್ಜೆ ಹಾಕಿದರು. ಸಂಪೂರ್ಣ ವೀಡಿಯೋ ಇಲ್ಲಿ…

Read More

ರಿಪ್ಪನ್ ಪೇಟೆ : ಅದ್ದೂರಿಯಾಗಿ ಜರುಗಿದ ವಿನಾಯಕ ನಗರ ಗಣೇಶ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ

ರಿಪ್ಪನ್ ಪೇಟೆ : ಪಟ್ಟಣದ ವಿನಾಯಕ ನಗರದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಐದನೇ ವರ್ಷದ ಗಣೇಶಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ ಸಡಗರ ಹಾಗೂ ಸಂಭ್ರಮದಿಂದ ನೆರವೇರಿತು. ಮಕ್ಕಳು ಮಹಿಳೆಯರು ಹಿರಿಯರು ಸೇರಿದಂತೆ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Read More

ರಿಪ್ಪನ್‌ಪೇಟೆಯಲ್ಲಿ ಸುರಿದ ಭಾರಿ ಮಳೆಗೆ ತತ್ತರಿಸಿದ ಜನತೆ : ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿದ ನೀರು

ರಿಪ್ಪನ್‌ಪೇಟೆ : ಭಾರಿ ಗುಡುಗು ಸಿಡಿಲು ಮಳೆಯಿಂದ ತತ್ತರಿಸಿದ ಪಟ್ಟಣದ ಜನತೆ,ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆ. ಪಟ್ಟಣದ ಸುತ್ತಮುತ್ತಲಿನ ಅರಸಾಳು ,ಬೆನವಳ್ಳಿ,ದೂನ,ಬಾಳೂರು ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತ ವಾಗಿದೆ. ರಿಪ್ಪನ್‌ಪೇಟೆಯಲ್ಲಿ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ನೀರು ಹರಿದು ಹಲವಾರು ಅಂಗಡಿಗಳಿಗೆ ನೀರು ನುಗ್ಗಿದೆ.ತೀರ್ಥಹಳ್ಳಿ ರಸ್ತೆಯಲ್ಲಿ ಪ್ರಭಾಕರ್ ಎಂಬುವವರ ಅಂಗಡಿಗೆ ನೀರು‌ ನುಗ್ಗಿದೆ. ರಸ್ತೆಯ ಮೇಲೆ ಹರಿಯುತ್ತಿರುವ ಭಾರಿ ಪ್ರಮಾಣದ ನೀರಿನಿಂದ ಸಂಚಾರ ಅಸ್ತವ್ಯಸ್ತವಾಗಿದ್ದು,ವಿದ್ಯುತ್ ವ್ಯತ್ಯಯ ಉಂಟಾಗಿದೆ….

Read More

ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ : ಹಲವರ ನಾಮಪತ್ರ ಸಲ್ಲಿಕೆ

ರಿಪ್ಪನ್‌ಪೇಟೆ : ಹೊಸನಗರ ತಾಲೂಕು ಒಕ್ಕಲಿಗರ ಸಂಘ (ರಿ) ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ಹಲವು ನಾಮಪತ್ರ ಸಲ್ಲಿಕೆಯಾಯಿತು. ಸೆಪ್ಟೆಂಬರ್ 04 ರಂದು ನಿರ್ದೇಶಕ ಸ್ಥಾನದ ಚುನಾವಣೆ ನಡೆಯಲಿದ್ದು 15 ಕ್ಷೇತ್ರದಲ್ಲಿ ಚುನಾವಣೆಗೆ ಈಗಾಗಲೇ ಸಿದ್ದತೆ ಪ್ರಾರಂಭವಾಗಿದೆ. ರಿಪ್ಪನ್‌ಪೇಟೆ ಮತಕ್ಷೇತ್ರ ವ್ಯಾಪ್ತಿಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಮಾಜಿ‌ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಇಂದು ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ಸಮಾಜದ ಅಭಿವೃದ್ಧಿಗೆ ದುಡಿಯುವ ಹಂಬಲದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.ಸಮಾಜದ ಎಲ್ಲಾ ಬಾಂಧವರು ನನ್ನನ್ನು ಬೆಂಬಲಿಸುವ ಮೂಲಕ…

Read More

ಬಾಳೂರು ಗ್ರಾಮದಲ್ಲಿ ಏಕಾಏಕಿ ಬಾಳೆ ಬೆಳೆ ನಾಶಕ್ಕೆ ಹೊರಟ ಅರಣ್ಯ ಇಲಾಖೆ : ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವೀರೇಶ್ ಆಲುವಳ್ಳಿ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ  ಬಾಳೂರು ಗ್ರಾಮ ಸ ನಂ 14 ರಲ್ಲಿ 50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ  ಬೆಳೆದ ಬಾಳೆ ಬೆಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಪಡಿಸಲು ಮುಂದಾಗಿದ್ದರು.  ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ಏಕಾಏಕಿ ಬಾಳೆ ಗೆಡ್ಡೆಗಳನ್ನು ಕಿತ್ತು,ಕೊಚ್ಚಿ ನಾಶಪಡಿಸುತ್ತಿರುವ ಘಟನೆಯನ್ನು ಖಂಡಿಸಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ನಂತರ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಬಾಳೂರು ಗ್ರಾಮ, ಸರ್ವೆ ನಂ 14 ರಲ್ಲಿ…

Read More

ರಿಪ್ಪನ್‌ಪೇಟೆ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಗಣೇಶ್ ಎನ್ ಕಾಮತ್ ಅವಿರೋಧ ಆಯ್ಕೆ : ನೂತನ ಅಧ್ಯಕ್ಷರನ್ನು ಸನ್ಮಾನಿಸಿದ ಬೇಳೂರು

ರಿಪ್ಪನ್ ಪೇಟೆ : ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಗಣೇಶ್ ಎನ್.ಕಾಮತ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್‌ ಶಂಕರ್ ಶರಾಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಜುನಾಥ ಕಾಮತ್ (ಗೌರವಾಧ್ಯಕ್ಷರು), ಉಮೇಶ್‌ಭಟ್, ಸುಧೀಂದ್ರ ಪ್ರಭು (ಉಪಾಧ್ಯಕ್ಷರು), ಜೆ.ರಾಧಾಕೃಷ್ಣ (ಸಹಕಾರ್ಯದರ್ಶಿ), ಹರೀಶ್‌ಪ್ರಭು (ಸಂಘಟನಾ ಕಾರ್ಯದರ್ಶಿ), ಎಂ.ಆರ್.ಭಟ್ (ಖಜಾಂಚಿ) ಉಳಿದಂತೆ 20 ಕ್ಕೂ ಅಧಿಕ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರನ್ನು ಸನ್ಮಾನಿಸಿದ ಮಾಜಿ ಶಾಸಕ ಬೇಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯದ…

Read More

ಆನಂದಪುರ : ಮೂರು ಮುತ್ತು ಕಲಾವಿದರಿಗೆ ಕಸಾಪ ಹಾಗೂ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ವತಿಯಿಂದ ಸನ್ಮಾನ

ಆನಂದಪುರ : ಮೂರು ಮುತ್ತು ಕಲಾವಿದರನ್ನು ಪಟ್ಟಣದ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್  ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ರೂಪಕಲಾ (ಕುಳ್ಳಪ್ಪು) ತಂಡದವರಿಂದ ಆನಂದಪುರ ಸಮೀಪದ ಮಲಂದೂರಿನಲ್ಲಿ ಮೂರು ಮುತ್ತು ನಾಟಕ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ  ಕಳೆದ 28 ವರ್ಷಗಳಿಂದ ದೇಶ ವಿದೇಶಗಳಲ್ಲೂ ಕನ್ನಡ  ಹಾಸ್ಯಮಯ ನಾಟಕ ಪ್ರದರ್ಶನಗಳನ್ನು ನಡೆಸಿರುವ ಕುಳ್ಳಪ್ಪು ತಂಡ ಇಲ್ಲಿಯ ತನಕ  2200 ನೇ ಮೂರು ಮುತ್ತು ನಾಟಕದ ಪ್ರದರ್ಶನ ಮಾಡಿರುತ್ತಾರೆ . ಇವರ ಸೇವೆಯನ್ನು ಗುರುತಿಸಿ …

Read More

ರಿಪ್ಪನ್‌ಪೇಟೆಯಲ್ಲಿ ಪ್ರಾಥಮಿಕ ಶಾಲೆಯ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ : ಪಲಿತಾಂಶದ ವಿವರ ಇಲ್ಲಿದೆ ನೋಡಿ

ರಿಪ್ಪನ್‌ಪೇಟೆ;-ಮಕ್ಕಳ ದೈಹಿಕ ಸಾಮಾರ್ಥ್ಯವನ್ನು ಹೆ ಚ್ಚಿಸಲು ಕ್ರೀಡೆ ಅಗತ್ಯವಾಗಿದೆ.ವಿದ್ಯಾರ್ಥಿ ಸದಾ ಉಲ್ಲಾಸದಿಂದಿರಲು ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ.ಕ್ರೀಡೆ ಸೋಲು ಗೆಲುವು ಮುಖ್ಯವಾಗದೇ ಮಕ್ಕಳು ಭಾಗವಹಿಸುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಅರ್.ಕೃಷ್ಣಮೂರ್ತಿ ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜ್ ಚಿನ್ನೆಗೌಡ ಕ್ರೀಡಾಂಗಣದಲ್ಲಿ ರಿಪ್ಪನ್‌ಪೇಟೆ-ಬಾಳೂರು ಗ್ರಾಮ ಪಂಚಾಯ್ತಿ ಸಮೂಹ ಸಂಪನ್ಮೂಲ ಕೇಂದ್ರ ಎಸ್.ಡಿ.ಎಂ.ಸಿ.ಹಾಗೂ ಗುಡ್‌ಶಫರ್ಡ್ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಅಶ್ರಯದಲ್ಲಿ “ಕ್ಲಸ್ಟರ್ ಮಟ್ಟದ ೧೪ ವರ್ಷದೊಳಗಿನ ಮಕ್ಕಳ ೨೦೨೨-೨೩ ನೇ ಸಾಲಿನ ಪ್ರಾಥಮಿಕ ಪಾಠಶಾಲೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಸರ್ಕಾರದಿಂದ…

Read More

ಸರ್ವರನ್ನು ಪ್ರೀತಿಸುವ ಧರ್ಮವೇ ವೀರಶೈವ ಧರ್ಮ : ಮಳಲಿ ಶ್ರೀ

ರಿಪ್ಪನ್‌ಪೇಟೆ : ವೀರಶೈವ ಧರ್ಮ ಸರ್ವರನ್ನು ಪ್ರೀತಿಸುವ ಧರ್ಮವಾಗಿದೆಯೆಂದು ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.  ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾ, ಪೂಜಾರಗೊಪ್ಪ- ಮಸರೂರಿನಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಕ್ತ ಮಂಡಳಿ ಹಮ್ಮಿಕೊಂಡಿದ್ದ ಇಷ್ಟ ಲಿಂಗ ಪೂಜೆ ನೆರವೇರಿಸಿ ನುಡಿದರು. ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಸಿದ್ಧಾಂತ ಶಿಖಾಮಣಿಯಲ್ಲಿ ಸರ್ವ ಧರ್ಮದವರಿಗೂ ಅನ್ವಯವಾಗುವ ದಶಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಅಹಿಂಸಾ, ಸತ್ಯ, ಆಸ್ತೇಯ, ಬ್ರಹ್ಮಚರ್ಯ. ದಯ, ಕ್ಷಮ, ಜಪ, ಪೂಜೆ,…

Read More

ಡಾಕ್ಟರ್ ನಾಗರಾಜ್ ಚಡಗ ನಿಧನಕ್ಕೆ ಹೊಸನಗರ ತಾಲೂಕು ಜೆಡಿಎಸ್ ಸಂತಾಪ

ಹೊಸನಗರ : ವೈದ್ಯರು ಹೊಸ ನಗರ ಪುರಸಭೆಯ ಮಾಜಿ ಅಧ್ಯಕ್ಷರು ಜೆಡಿಎಸ್ ಪಕ್ಷದ ಮುಖಂಡರಾಗಿದ್ದ ಡಾ ನಾಗರಾಜ ಚಡಗ ರವರ ನಿಧನಕ್ಕೆ ತಾಲೂಕು ಜೆಡಿಎಸ್ ಪಕ್ಷ ತುರ್ತು ಸಭೆ ಸೇರಿ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿ ಶಾಂತಿ ಕೋರಿದರು.  ತುರ್ತು ಸಭೆಯಲ್ಲಿ ಜೆಡಿಎಸ್ ಪಕ್ಷದ ತಾಲೂಕ್ ಅಧ್ಯಕ್ಷ ವರ್ತೇಶ್, ಜೆಡಿಎಸ್ ಮುಖಂಡರಾದ ಅರ್ ಎ ಚಾಬುಸಾಬ್ , ಎಂ ವಿ ಜಯರಾಮ, ಯಡೂರು ರಾಜರಾಮ್,  ಸುಮತಿ ಪೂಜಾರಿ, ಭಾಗ್ಯ ಗೋಪಾಲಕೃಷ್ಣ ಮೂಡಬಾಗಿಲು ರಮಾನಂದ ಎಚ್ ಆರ್ ಪ್ರಕಾಶ್…

Read More