Headlines

ಖಾಯಂ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಆಸ್ಪತ್ರೆಯ ಕಟ್ಟಡ ಏರಿ ಕುಳಿತ ಹೊಸನಗರ ತಾಲೂಕಿನ ನಗರ ಗ್ರಾಪಂ ಅಧ್ಯಕ್ಷ…!!!|nagara

ಗ್ರಾಮೀಣ ಭಾಗದ ಆಸ್ಪತ್ರೆಗೆ ಖಾಯಂ ವೈದ್ಯರನನು ನೇಮಿಸುವಂತೆ ಒತ್ತಾಯಿಸಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡವನ್ನು ಏರಿ ಗ್ರಾಮಪಂಚಾಯಿತಿ ಅಧ್ಯಕ್ಷರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ (ಬಿದನೂರು) ನಗರದ ಸರ್ಕಾರಿ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕ ಮಾಡುವಂತೆ ಆಗ್ರಹಿಸಿ ಆಸ್ಪತ್ರೆಯ ಕಟ್ಟಡ ಏರಿ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಪ್ರತಿಭಟಿಸಿದ್ದಾರೆ. ಸುಮಾರು 30 ರಿಂದ 40 ಸಾವಿರ ಜನಸಂಖ್ಯೆ ಇರುವ ನಗರ ಹೋಬಳಿಯಲ್ಲಿ ಯಾವುದೇ ಖಾಯಂ ವೈದ್ಯರಿಲ್ಲದೇ ಸ್ಥಳೀಯರು  ಪರದಾಡುವಂತಾಗಿದೆ.  ಈ ಹಿನ್ನೆಲೆಯಲ್ಲಿ ಕಟ್ಟಡವೇರಿ…

Read Full News

ಹೊಸನಗರ : ಸಂಸಾರದಲ್ಲಿ‌ ಮನಸ್ತಾಪ ಹಿನ್ನಲೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಕೋರ್ಟ್ ನಲ್ಲಿ ಮತ್ತೇ ಒಂದಾದರು|lok adalath

ಹೊಸನಗರ : ದಾಂಪತ್ಯ ಕಲಹದಿಂದ ವಿಚ್ಛೇಧನದ ದಾವೆ ಹೂಡಿದ್ದ ದಂಪತಿಗೆ ಹೊಸನಗರ ನ್ಯಾಯಾಲಯ ಹೊಸ ಬದುಕು ಕಟ್ಟಿಕೊಳ್ಳಲು ದಾರಿ ತೋರಿಸಿದೆ. ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ನೀಡಿದ ಹಿತವಚನಗಳಿಗೆ ತಲೆಬಾಗಿ ಮತ್ತೆ ಬಾಳ ಸಂಗಾತಿಗಳಾದ ಪ್ರಸಂಗ ನಡೆದಿದೆ. ಸಂಸಾರದಲ್ಲಿ ಮನಸ್ತಾಪ ಉಂಟಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ದಂಪತಿ ನ್ಯಾಯಾಲಯದ ಆವರಣದಲ್ಲಿ ಒಂದಾದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ಕೋರ್ಟ್ ನಲ್ಲಿ ನಡೆದಿದೆ. ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ದಂಪತಿ ಒಂದಾಗಿದ್ದಾರೆ. ವೀರೇಶ್ ಮತ್ತು ಉಷಾ ಒಂದಾದ ದಂಪತಿ. ಮದುವೆಯಾಗಿ…

Read Full News

ಹೆರಿಗೆ ವಾರ್ಡ್ ನಲ್ಲಿ 6 ತಿಂಗಳ ಮಗುವನ್ನು ಬಿಟ್ಟು ಮಹಿಳೆ ನಾಪತ್ತೆ…!!!!

ಶಿವಮೊಗ್ಗದ  ಮೆಗ್ಗಾನ್ ಹೆರಿಗೆ ವಾರ್ಡ್ ಗೆ ಬಂದಿದ್ದ ಅಪರಿಚಿತ ಮಹಿಳೆ ವಾರ್ಡ್ ನಲ್ಲಿದ್ದ ಮಹಿಳೆಯೊಬ್ವರ ಕೈಯಲ್ಲಿ ಮಗುವನ್ನ ನೀಡಿ ದಿಡೀರನೆ ಕಣ್ಮರೆಯಾಗಿರುವ ಘಟನೆ ನಡೆದಿದೆ. ಮೆಗ್ಗಾನ್ ಹೆರಿಗೆ ವಾರ್ಡ್ ನಲ್ಲಿ ಹೊರಗಿನಿಂದ ಬಂದ ಮಹಿಳೆಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವೆ ಎಂದು ಹೇಳಿ ವಾರ್ಡ್ ನಲ್ಲಿದ್ದ ಮಹಿಳೆಯೊಬ್ಬಳಿಗೆ ಮಗುವನ್ನ ನೀಡಿ ಹೋಗಿದ್ದಾಳೆ. ಮಗುವನ್ನ ಎತ್ತುಕೊಂಡವರು ಕಳೆದ ಮೂರು ಗಂಟೆಯಿಂದ ಕಾದರೂ ಮಗುವನ್ನ ನೀಡಿದ ಮಹಿಳೆ ವಾಪಾಸ್ ಬರಲೇ ಇಲ್ಲ. ಆ ತಾಯಿ ಯಾಕೆ ಹೀಗೆ ಮಾಡಿದ್ದಾಳೋ, ಬಡತನವೋ ಗೊತ್ತಿಲ್ಲ….

Read Full News

ಹೆದ್ದಾರಿಪುರ : ಗ್ರಾಪಂ ಉಪ ಚುನಾವಣೆಗೆ ಬೇಕರಿ ಸುರೇಶ್ ನಾಮಪತ್ರ ಸಲ್ಲಿಕೆ|election

ರಿಪ್ಪನ್‌ಪೇಟೆ : ಇಲ್ಲಿನ ಹೆದ್ದಾರಿಪುರ ಗ್ರಾಮ ಪಂಚಾಯತ್ ನ ತಳಲೆ ವಾರ್ಡ್ ನ ಉಪ ಚುನಾವಣೆಗೆ ಬೇಕರಿ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.ಫೆ.25 ರ ಶನಿವಾರ ಚುನಾವಣೆ ನಡೆಯಲಿದೆ. ಹೆದ್ದಾರಿಪುರ ಗ್ರಾಮ ಪಂಚಾಯತ್ ನ ತಳಲೆ ವಾರ್ಡ್ ನ ಸದಸ್ಯರಾಗಿದ್ದ ಚೂಡಾಮಣಿ ರವರು ಇತ್ತೀಚಿಗೆ ನಿಧನರಾದ ಹಿನ್ನಲೆಯಲ್ಲಿ ಉಪ ಚುನಾವಣೆ ನಡೆಯುತಿದ್ದು ಈ ಸ್ಥಾನಕ್ಕೆ ಕ್ರೀಯಾಶೀಲ ಯುವಕ ಬೇಕರಿ ಸುರೇಶ್ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಂದು ಹೆದ್ದಾರಿಪುರ ಗ್ರಾಮ ಪಂಚಾಯತಿಯಲ್ಲಿ ಚುನಾವಣಾಧಿಕಾರಿ ಸತೀಶ್ ರವರಲ್ಲಿ ಬೇಕರಿ ಸುರೇಶ್ ನಾಮಪತ್ರ…

Read Full News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಸ್ ಬಂಗಾರಪ್ಪ ಹೆಸರು ಪರಿಗಣಿಸದೇ ಇರುವುದು ಬೇಸರದ ಸಂಗತಿ – ಜಿಲ್ಲಾ ಎಸ್ ಬಂಗಾರಪ್ಪ ಅಭಿಮಾನಿಗಳ ಸಂಘ|airport

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಸ್ ಬಂಗಾರಪ್ಪ ಹೆಸರು ಪರಿಗಣಿಸದೇ ಇರುವುದು ಬೇಸರದ ಸಂಗತಿ – ಜಿಲ್ಲಾ ಎಸ್ ಬಂಗಾರಪ್ಪ ಅಭಿಮಾನಿಗಳ ಸಂಘ ಶಿವಮೊಗ್ಗ : ಈ ನಾಡು ಕಂಡ ಧೀಮಂತ ನಾಯಕ ಎಸ್ ಬಂಗಾರಪ್ಪ. ರಾಜ್ಯದ ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಯುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಸೂಕ್ತ ಗೌರವ ನೀಡಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸರ್ಕಾರ ಅವರ ಹೆಸರಿಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಎಸ್ ಬಂಗಾರಪ್ಪ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಅಮೀರ್…

Read Full News

ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು|leopard

ಶಿವಮೊಗ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆ ಸಿಕ್ಕಿರುವ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ಮಲ್ಲಾಪುರ ಗ್ರಾಮದ ಸುತ್ತಮುತ್ತಲಿನ ಹೊಲಗದ್ದೆ, ತೋಟಗಳಲ್ಲಿ ಎರಡು ಚಿರತೆಗಳು ಓಡಾಡುತ್ತಿದ್ದವು. ಇದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯನೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳು ಓಡಾಡುವ ಸ್ಥಳದಲ್ಲಿ ಬೋನೊಂದನ್ನು ಇರಿಸಿದ್ದರು. ಮುಂಜಾನೆ ಚಿರತೆ ಬೋನಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನಿನಲ್ಲಿ…

Read Full News

ಹೊಸನಗರ : ಜೇನುನೊಣ ದಾಳಿ – ಒಂದೇ ಕುಟುಂಬದ 6 ಮಂದಿಗೆ ಗಾಯ | ಮೆಗ್ಗಾನ್ ಗೆ ದಾಖಲು

ಹೊಸನಗರ : ಜೇನು ಹುಳುಗಳ ದಾಳಿಯಿಂದ 6 ಜನ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪದ ಮಳಲಿ ಗ್ರಾಮದಲ್ಲಿ ನಡೆದಿದೆ. ಕೋಣಂದೂರು ಮೂಲದ ಒಂದೇ ಕುಟುಂಬದ 9 ಜನ ಮಳಲಿ ಗ್ರಾಮದಲ್ಲಿ ಫಿಶಿಂಗ್ ಮಾಡಲು ತೆರಳಿದ್ದಾರೆ.ಮಧ್ಯಾಹ್ನ ಕೆರೆಯ ಏರಿಯ ಮೇಲೆ ಊಟ ಮಾಡುತ್ತಿರುವಾಗ ಏಕಾಏಕಿ ಜೇನುನೊಣಗಳು ದಾಳಿ ಮಾಡಿದ್ದು ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಕೋಣಂದೂರಿನ ಫಯಾಜ್ ಮತ್ತು ಇಂತಿಯಾಜ್ ಕುಟುಂಬ ಭಾನುವಾರವಾದ ಹಿನ್ನಲೆಯಲ್ಲಿ ಕುಟುಂಬದೊಂದಿಗೆ ಮಳಲಿ ಗ್ರಾಮದಲ್ಲಿ ಫಿಶಿಂಗ್ ಮಾಡಲು ತೆರಳಿದ್ದರು ಎನ್ನಲಾಗುತ್ತಿದೆ. ಗಾಯಾಳುಗಳನ್ನು…

Read Full News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರ ಕವಿ ಕುವೆಂಪು ಹೆಸರು ಫಿಕ್ಸ್ – ಯಡಿಯೂರಪ್ಪ ಘೋಷಣೆ|airport

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ಧಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡಲಾಗುವುದು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಿಸಿದ್ಧಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್​ವೈ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ..ಈ ಸಂಬಂಧ ವಿಮಾನ ನಿಲ್ಧಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡಲು ತೀರ್ಮಾನಿಸಿದ್ದೇವೆ.  ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸರ್ವಾನುಮತದ ತೀರ್ಮಾನವನ್ನು ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಲಾಗುವುದು. ನರೇಂದ್ರ ಮೋದಿಯವರೇ ಈ ಹೆಸರನ್ನು ಘೋಷಿಸಲಿದ್ಧಾರೆ…

Read Full News

ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು – ಧರ್ಮಗುರು ರೋಷನ್ ಪಿಂಟೋ|church

ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು – ಧರ್ಮಗುರು ರೋಷನ್ ಪಿಂಟೋ ರಿಪ್ಪನ್‌ಪೇಟೆ : ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಪ್ರಭು ಏಸು ಸ್ವಾಮಿಯವರ ಶುಭ ಸಂದೇಶ ಇಂದಿಗೂ ಪ್ರಸ್ತುತ ಎಂದು ಶಿವಮೊಗ್ಗ ಮಲ್ಟಿಪಲ್ ಸೋಷಿಯಲ್ ಸರ್ವಿಸ್ ನಿರ್ದೇಶಕರಾದ ಧರ್ಮಗುರು ರೋಷನ್ ಪಿಂಟೋ ಹೇಳಿದರು. ಪಟ್ಟಣದ ಗುಡ್ ಶೆಪರ್ಡ್ ಚರ್ಚ್ ನ ವಾರ್ಷಿಕ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶುಭ ಸಂದೇಶವನ್ನು ನೀಡಿದ ಅವರು ಸಮಾಜದಲ್ಲಿನ ಪ್ರತಿಯೊಬ್ಬರು ಪ್ರೀತಿಯನ್ನು…

Read Full News

ಶಿವಮೊಗ್ಗ ವಿಮಾನನಿಲ್ದಾಣಕ್ಕೆ ರಾಷ್ಟ್ರ ಕವಿ ಕುವೆಂಪು ಹೆಸರಿಡುವಂತೆ ಜೆಡಿಎಸ್ ಆಗ್ರಹ|airport

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರ ಕವಿ ಕುವೆಂಪು ಹೆಸರಿಡುವಂತೆ ಜೆಡಿಎಸ್ ಆಗ್ರಹ ರಿಪ್ಪನ್‌ಪೇಟೆ : ಇದೇ 27 ರಂದು ಪ್ರಧಾನಿ ನರೇಂದ್ರ ಮೋದಿ ಯಿಂದ ಲೋಕಾರ್ಪಣೆಗೊಳ್ಳಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರ ಕವಿ ಕುವೆಂಪು ಹೆಸರಿಡುವುದು ಸೂಕ್ತ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗಿದ್ದು, ರಾಷ್ಟ್ರ ಕವಿ ಕುವೆಂಪು ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಪರ್ವತ ಶ್ರೇಣಿ ತಪ್ಪಲಿನ ತೀರ್ಥಹಳ್ಳಿಯವರಾಗಿದ್ದು…

Read Full News

ಶಿಕ್ಷಣ ಸಂಸ್ಥೆಗಳ ಸೇವಾ ಚಟುವಟಿಕೆಯಿಂದ ಮಕ್ಕಳಲ್ಲಿ ಮೌಲ್ಯ ಹೆಚ್ಚುತ್ತದೆ – ಚಿದಂಬರ|gurukula

ಶಿಕ್ಷಣ ಸಂಸ್ಥೆಗಳ ಸೇವಾ ಚಟುವಟಿಕೆಯಿಂದ ಮಕ್ಕಳಲ್ಲಿ ಮೌಲ್ಯ ಹೆಚ್ಚುತ್ತದೆ – ಚಿದಂಬರ ಹೊಸನಗರ : ಮಕ್ಕಳಲ್ಲಿ ಮಾನವೀಯ ಮೌಲ್ಯ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳು ಸೇವಾ ಚಟುವಟಿ  ಹೆಚ್ಚಿಸಬೇಕು ಎಂದು ಮಾರುತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ ಅಭಿಪ್ರಾಯಪಟ್ಟರು. ಇಂದು ತಾಲ್ಲೂಕಿನ ಬಟ್ಟೆಮಲ್ಲಪ್ಪ ಶ್ರೀ ವ್ಯಾಸ ಮಹರ್ಷಿ ಗುರುಕುಲದ ತ್ರಯೋದಶ ಪ್ರದರ್ಶಿನಿ ಕಾರ್ಯಕ್ರಮದ ಎರಡನೇ ಸೇವಾ ಚಟುವಟಿಕೆ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಇಂದಿನ ಶಿಕ್ಷಣದಲ್ಲಿ ಮಾನವೀಯ ಮೌಲ್ಯ ಹೆಚ್ಚಿಸುವ ಪಠ್ಯ ಕೊರತೆ ಹೆಚ್ಚುತ್ತಿದೆ. ಮತ್ತೊಂದೆಡೆ…

Read Full News

ಬಡ ಬಾಲಕನ ಚಿಕಿತ್ಸೆಗೆ ವ್ಯವಸ್ಥೆ – ಮಾನವೀಯತೆ ಮೆರೆದ ಸಂಸದ ಬಿ ವೈ ರಾಘವೇಂದ್ರ|BYR

ಲೋ ಶುಗರ್ ಹಾಗೂ ಗ್ರೋತ್ ಆರ್ಗನ್ ಸಮಸ್ಯೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ನಿರಂತರ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಇಟ್ಟಿಗೆ ಹಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಾಘವೇಂದ್ರ ಹಾಗೂ ಅಶ್ವಿನಿ ದಂಪತಿಗೆ ಇಬ್ಬರು ಮಕ್ಕಳು. ಮೊದಲನೆಯವನು ಎಲ್ಲರಂತೆಯೇ ಇದ್ದರೂ ಎರಡನೆಯ ಮಗು ಶ್ರೇಯಸ್‍ಗೆ 6 ತಿಂಗಳಿನಿಂದಲೇ ವಿಚಿತ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಲೋ ಶುಗರ್‌ನಿಂದ ಬಳಲುತ್ತಿದ್ದ. ಜೊತೆಗೆ ಗ್ರೋತ್ ಆರ್ಗನ್ ಸಮಸ್ಯೆ ಕೂಡ…

Read Full News

ರಿಪ್ಪನ್‌ಪೇಟೆ : ಕರ್ಕಶ ಶಬ್ದ ಮಾಡುತಿದ್ದ ಬೈಕ್ ಸೈಲೆನ್ಸರ್ ಗಳನ್ನು ಸೈಲೆಂಟ್ ಮಾಡಿದ ಪೊಲೀಸರು|silencers

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಡಿಫೆಕ್ಟಿವ್ ಸೈಲೆನ್ಸರ್ ಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಹಿನ್ನೆಲೆ ಕರ್ಕಶ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡಿರುವ ಬೈಕ್ ಗಳನ್ನು ವಶಪಡಿಸಿಕೊಂಡ ಪೊಲೀಸರು ಸೈಲೆನ್ಸರ್ ಬದಲಾಯಿಸಿ ಭಾರಿ ದಂಡದ ಬಿಸಿ ಮುಟ್ಟಿಸಿದ್ದಾರೆ. ವಾಹನಗಳ ಸೈಲೆನ್ಸರ್‌ಗಳನ್ನು ಮಾರ್ಪಾಡು ಮಾಡಿ ಬಳಸುವುದರಿಂದ ವಾಹನಗಳ ಮೈಲೇಜ್ ಕೂಡ ಕಡಿಮೆಯಾಗುತ್ತದೆ. ಆರ್‌ಟಿಒ ನಿಯಮಗಳ ಅನುಸಾರ ಇದು ತಪ್ಪ ಕೂಡ. ಶಬ್ದ ಹೆಚ್ಚು ಬರುವುದರಿಂದ ಶಬ್ದ ಮಾಲಿನ್ಯದ ಜೊತೆಗೆ ವೃದ್ಧರು, ರೋಗಿಗಳಿಗೆ ತೊಂದರೆ ಆಗುತ್ತೆ. ಆದರೂ ಇದರ ಬಳಕೆ ಮಾತ್ರ…

Read Full News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಹನೀಯರ ಹೆಸರಿಡಿ – ನನ್ನದು ಕೇವಲ ಅಳಿಲು ಸೇವೆ – ಬಿ ಎಸ್ ಯಡಿಯೂರಪ್ಪ|BSY

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವುದು ಬೇಡ ಎಂದು ಮತ್ತೊಮ್ಮೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ನಿರಾಕರಿಸಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಶಿವಮೊಗ್ಗಕ್ಕೆ ಬಂದಾಗ, ವಿಮಾನ ನಿಲ್ಧಾಣಕ್ಕೆ ಬಿಎಸ್​ವೈ ಹೆಸರನ್ನು ಇಟ್ಟು ದೆಹಲಿಗೆ ಪ್ರಸ್ತಾವನೆ ಕಳಿಸಲಾಗುವುದು ಎಂದು ತಿಳಿಸಿದ್ದರು.  ಇದರ ಬೆನ್ನಲ್ಲೆ ಇದೀಗ ಶಿವಮೊಗ್ಗ ಏರ್‌ಪೋರ್ಟ್‌ಗೆ ತಮ್ಮ ಹೆಸರಿಡದಂತೆ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡಲು ಮಾಡಿದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಹಾಗೂ…

Read Full News

ಫೆ.27 ಕ್ಕೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ – ಯಾವ್ಯಾವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಗೊತ್ತಾ..??? ಈ ಸುದ್ದಿ ನೋಡಿ

ವಿಮಾನ ನಿಲ್ದಾಣ ಲೋಕಾರ್ಪಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ ೨೭ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ಗುರುವಾರ ಅಧಿಕಾರಿಗಳ ಪೂರ್ವಸಿದ್ಧತಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರವರಿ ೨೭ರಂದು ಪ್ರಧಾನಿ ಅವರು ಶಿವಮೊಗ್ಗ ಆಗಮಿಸುತ್ತಿದ್ದು, ವಿಮಾನ ನಿಲ್ದಾಣ ಲೋಕಾರ್ಪಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಮನ್ವ ಯದಿಂದ ಕಾರ್ಯನಿರ್ವಹಿಸಬೇಕು ಎಂದರು. ಪ್ರಧಾನಿ…

Read Full News

ಗಡಿ ಗುರುತಿಗೆ ಬಂದ ಅರಣ್ಯಾಧಿಕಾರಿಗಳು – ಜಮೀನು ಕಳೆದುಕೊಳ್ಳುವ ಭಯದಲ್ಲಿ ರೈತ ಸಾವು|forest

ಅರಣ್ಯ ಇಲಾಖೆ ಅಧಿಕಾರಿಗಳು ಈಗ ರೈತರ ಸ್ವಾಧೀನದಲ್ಲಿರುವ ಜಾಗದಲ್ಲಿ ಅರಣ್ಯ ಗಡಿ ಗುರುತು ಹಾಕಲು ಬಂದಿದ್ದನ್ನು ನೋಡಿ, ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದ ಮಂಜಪ್ಪ ಎಂಬವರೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟವರು. ಅವರಿಗೆ ಸೇರಿದ ಜಾಗದ ಅರಣ್ಯ ಇಲಾಖೆ ಅಧಿಕಾರಿಗಳು ಗಡಿಗುರುತಿನ ಬಾಂದ್‌ ಕಲ್ಲು ಹಾಕಿದ್ದರಿಂದ ಅವರು ಆತಂಕಿತರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಭೂಮಿ ಸಂರಕ್ಷಣೆಯ ಭಾಗವಾಗಿ ಗಡಿ…

Read Full News

ಭಾರತೀಯ ಜನತಾ ಪಾರ್ಟಿ ಅಲ್ಲ ಭ್ರಷ್ಟ ಜನತಾ ಪಾರ್ಟಿ – ಡಿ ಕೆ ಶಿವಕುಮಾರ್|DK

ಭಾರತೀಯ ಜನತಾ ಪಾರ್ಟಿ ಅಲ್ಲ ಭ್ರಷ್ಟ ಜನತಾ ಪಾರ್ಟಿ – ಡಿ ಕೆ ಶಿವಕುಮಾರ್  ತೀರ್ಥಹಳ್ಳಿ : ಬಿಜೆಪಿ ಸರ್ಕಾರ ಬಂದು ಆರಗ ಜ್ಞಾನೇಂದ್ರ ಗೃಹ ಸಚಿವರಾದಾಗ ಸಂತೋಷವಾಗಿತ್ತು. ಅವರಿಗೆ ಒಳ್ಳೆಯ ಸಂಸ್ಕೃತಿ ಇದೆ ಅಂದುಕೊಂಡಿದ್ದೆ ಆದರೆ ಪೊಲೀಸ್ ಅನ್ನು ಉಪಯೋಗಿಸಿಕೊಂಡು ದುರಾಡಳಿತ ಮಾಡುತ್ತಿದ್ದಾರೆ. ನಿಮ್ಮ ಆಡಳಿತಾವಧಿಯಲ್ಲಿ ಇನ್ಸ್ಪೆಕ್ಟರ್ ಹುದ್ದೆಗೆ ಓ.ಎಂ.ಆರ್. ಶೀಟ್ ತಿದ್ದುವ ಕೆಲಸ ಮಾಡಿದ್ರು. ಆರಗ ಜ್ಞಾನೇಂದ್ರ ಅವರೇ ಕೇಸ್ ಹಾಕಿಸ್ತೀರೋ ಹಾಕಿಸಿ ಇನ್ನು 60 ದಿನದಲ್ಲಿ ಎಲ್ಲಾ ಬದಲಾಗಲಿದೆ ನಿಮ್ಮ ಅಧಿಕಾರ ಕೊನೆಗೊಳ್ಳಲಿದೆ…

Read Full News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ ಎಸ್ ಯಡಿಯೂರಪ್ಪ ಹೆಸರಿಡಲು ಸಚಿವ ಸಂಪುಟ ನಿರ್ಧಾರ – ಮುಖ್ಯಮಂತ್ರಿ ಬೊಮ್ಮಾಯಿ|airport

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನಿಡಲು ಸಚಿವ ಸಂಪುಟ ನಿರ್ಧರಿಸಿದ್ದು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ನಗರದ ಎನ್‍ಇಎಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಒಂದು ನಿರಂತರ ಪ್ರಕ್ರಿಯೆ. 2006 ರ…

Read Full News

ಮಂಗನ ಖಾಯಿಲೆ(KFD) ಬಗ್ಗೆ ಆತಂಕ ಬೇಡ – ಶಾಸಕ ಹರತಾಳು ಹಾಲಪ್ಪ

ಮಂಗನ ಖಾಯಿಲೆ ಬಗ್ಗೆ ಆತಂಕ ಬೇಡ – ಶಾಸಕ ಹರತಾಳು ಹಾಲಪ್ಪ ರಿಪ್ಪನ್‌ಪೇಟೆ : ಸಮೀಪದ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚಿಗೆ ವ್ಯಕ್ತಿಯೋರ್ವನಿಗೆ ಮಂಗನ ಖಾಯಿಲೆ ಕಂಡುಬಂದಿದ್ದು ಜನರಲ್ಲಿ ಆತಂಕ ಮೂಡಿದ್ದ ಹಿನ್ನಲೆಯಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಅಧಿಕಾರಿಗಳೊಂದಿಗೆ ಸಮಾಲೋಚನ ಸಭೆ ನಡೆಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಮಂಗನ ಖಾಯಿಲೆ ಬಗ್ಗೆ ಗ್ರಾಮೀಣ ಪ್ರದೇಶದ ನಾಗರೀಕರು ಆತಂಕ ಪಡುವ ಅವಶ್ಯಕತೆಯಿಲ್ಲ ಈಗಾಗಲೇ ಆರೋಗ್ಯ ,ಕಂದಾಯ ಹಾಗೂ…

Read Full News

ಹೊಂಬುಜದಲ್ಲಿ ಶಿಲ್ಪ ಸಹಿತ ಮೊದಲ ಕಂದುಕ (ಪೋಲೋ) ಕ್ರೀಡಾ ಶಾಸನಗಂಭ ಪತ್ತೆ|hombuja

ಶಿಲ್ಪ ಸಹಿತ ಮೊದಲ ಕಂದುಕ(ಪೋಲೋ)ಕ್ರೀಡಾ ಶಾಸನಗಂಭ ಪತ್ತೆ. ಶ್ರೀಕ್ಷೇತ್ರ ಹೊಂಬುಜದಲ್ಲಿ ಇತ್ತೀಚೆಗೆ ಶಿಲ್ಪ ಸಹಿತ ಕಂದುಕ ಕ್ರೀಡೆಯ ಮಹತ್ವದ ಮೊದಲ ಶಾಸನವೊಂದು ಪತ್ತೆಯಾಗಿದೆ. ಸ್ವಸ್ತಿ ಶ್ರೀ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರ ನೇತೃತ್ವದಲ್ಲಿ ಹೊಂಬುಜದ ಅಧಿದೇವಿ ಪದ್ಮಾವತಿ ಅಮ್ಮನವರ ಬಸದಿಯನ್ನು ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ. ಪದ್ಮಾವತಿ ಅಮ್ಮನವರ ಬಸದಿಯ ಹಿಂದಿನ ಲಕ್ಕಿಗಿಡದ ಒತ್ತುಗಟ್ಟೆಯ ಗೋಡೆಯಲ್ಲಿದ್ದ ಈ ಶಾಸನಗಂಭದ ಒಂದೇ ಮುಖದ ಶಾಸನವು ಇದುವರೆಗೂ ಗೋಚರಿಸುತ್ತಿತ್ತು. ಈಗ ಈ ಶಾಸನವನ್ನು ಗೋಡೆಯಿಂದ ಹೊರ ತೆಗೆದಾಗ…

Read Full News

“ಖೇಲೋ ಇಂಡಿಯಾ” ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ರಿಪ್ಪನ್‌ಪೇಟೆ ಮೂಲದ ಯುವ ಪ್ರತಿಭೆ ಭೂಮಿಕಾ|khelo india

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಜೀರಿಗೆಮನೆ ಗ್ರಾಮದ ಯುವ ಪ್ರತಿಭೆಯೊಂದು 2023 ನೇ ಸಾಲಿನ “ಖೇಲೋ ಇಂಡಿಯಾ ” ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾಳೆ. ಹೌದು ಮಧ್ಯಪ್ರದೇಶ ರಾಜ್ಯದ ಭೋಫಾಲ್ ನಲ್ಲಿ ಜನವರಿ 30 ರಿಂದ ಫೆ 11 ರವರೆಗೆ ನಡೆಯುತ್ತಿರುವ ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಜೀರಿಗೆಮನೆ ಗ್ರಾಮದ ನಾಗರಾಜ್ ಮತ್ತು ಜಯಮ್ಮ ದಂಪತಿಗಳ ಪುತ್ರಿ ಭೂಮಿಕಾ‌…

Read Full News

ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯ ನಿರ್ವಾಹಕರುಗಳು ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಬೇಕು – ಎ ಆರ್ ಪ್ರಸನ್ನ ಕುಮಾರ್|hombuja

ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯ ನಿರ್ವಾಹಕರುಗಳು ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ಉಪಾಧ್ಯಕ್ಷರಾದ ಎ.ಆರ್ ಪ್ರಸನ್ನಕುಮಾರ್ ಹೇಳಿದರು. ಅವರು ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆದ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಎರಡು ದಿನದ “ಆಡಳಿತ ಪರಿಣಿತಿ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಸಹಕಾರ ಸಂಸ್ಥೆಗಳ…

Read Full News

ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ R M ಮಂಜುನಾಥ್ ಗೌಡ ಮತ್ತು ಕಿಮ್ಮನೆ ರತ್ನಾಕರ್ ರವರ ಕೈಗಳನ್ನು ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು..!!??

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ ಸಾಕಷ್ಟು ಬೆಳವಣಿಗಳು ನಡೆಯುತ್ತಿವೆ. ಜಿಲ್ಲಾಧ್ಯಕ್ಷ ಸುಂದರೇಶ್​ರವರು, ಇಲ್ಲಿನ ಕಾಂಗ್ರೆಸ್​ ಮುಖಂಡರಾದ ಕಿಮ್ಮನೆ ರತ್ನಾಕರ್ ಹಾಗೂ ಆರ್​ಎಂ ಮಂಜುನಾಥ್​ ಗೌಡರ ನಡುವಿನ ಭಿನ್ನಮತ ಶಮನ ಮಾಡುವ ಸಂಧಾನ ಮಾಡಿದ್ದರು. ಅಲ್ಲದೆ ಇಬ್ಬರು ನಾಯಕರು ಒಗ್ಗಟ್ಟಿನಿಂದ ಸಾಗುತ್ತಾರೆ ಎಂದು ಸುದ್ದಿಗೋಷ್ಟಿಯಲ್ಲಿ ಪ್ರಕಟಿಸಿದ್ದರು.  ಇದರ ಬೆನ್ನೆಲ್ಲೆ ಇದೀಗ ಕಾಂಗ್ರೆಸ್​ ಕಾರ್ಯಕರ್ತರು ಕಾಂತಾರ ಸಿನಿಮಾದ ಲಾಸ್ಟ್​ ಸೀನ್​ ಮಾದರಿಯಲ್ಲಿ ಇಬ್ಬರು ನಾಯಕರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಗಾಡರಗದ್ದೆ ನರಸಿಂಹ ಸ್ವಾಮಿಯ ದೇವಾಲಯದ ಜಾತ್ರೆ….

Read Full News

ಅಶಾ,ಅಂಗನವಾಡಿ ಕಾರ್ಯಕರ್ತೆಯರ ಸೇವೆ ಪರಮ ಶ್ರೇಷ್ಟ ಸೇವೆ – ಹರತಾಳು ಹಾಲಪ್ಪ|haratalu

ರಿಪ್ಪನ್‌ಪೇಟೆ : ಜಗತ್ತನ್ನೆ ತಲ್ಲಣಗೊಳಿಸಿದ ಕೋರೋನಾ ಮಹಾಮಾರಿಯ ಸಂದರ್ಭದಲ್ಲಿ ಹಗಲಿರುಳು ತಾಯಿಯಂತೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜದ ರಕ್ಷಣೆಗಾಗಿ ಅಶಾ ಅಂಗನವಾಡಿ ಕಾರ್ಯಕರ್ತೆಯರು ಸೇವೆ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆಂದು ಕ್ಷೇತ್ರದ ಶಾಸಕ ಹಾಗೂ ಎಂ.ಎಸ್.ಐ.ಎಲ್.ಅಧ್ಯಕ್ಷ ಹರತಾಳು ಹಾಲಪ್ಪ ಪ್ರಶಂಶೆ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆ ಸಮೀಪದ ಹರತಾಳು ಗ್ರಾಮದ ಶ್ರೀರಾಘವೇಂದ್ರ ಸ್ವಾಮಿ ಮಠದ ಸಭಾ ವನದಲ್ಲಿ ಅಯೋಜಿಸಲಾದ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಅವರು ಸರ್ಕಾರದ ಕನಿಷ್ಟ ವೇತನದ ನೌಕರರಾಗಿದ್ದರು ಸಹ…

Read Full News

VISIL ಕಾಮಿಕರ ಪರವಾಗಿ ಜೈಲಿಗೆ ಹೋಗಲು ಸಿದ್ದ – ಹೆಚ್ ಡಿ ಕುಮಾರಸ್ವಾಮಿ

ಭದ್ರಾವತಿ : ವಿಐಎಸ್‌ಎಲ್ ವಿಷಯದಲ್ಲಿ ಕನ್ನಡಿಗರು ಇನ್ನೂ ಬದುಕಿದ್ದಾರೆ ಎಂದು ಕೇಂದ್ರಕ್ಕೆ ತಿಳಿಸುವ ಅಗತ್ಯ ಇದೆ.ಕಾರ್ಮಿಕರ ಪರವಾಗಿ ಜೈಲಿಗೆ ಹೋಗಲು ಸಿದ್ದ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಭದ್ರಾವತಿಯಲ್ಲಿ ಪ್ರತಿಭಟನಾ ನಿರತ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದ ಕುಮಾರಸ್ವಾಮಿಯವರು, ಅಂದು 650 ಕೋಟಿ ವೆಚ್ಚ ಮಾಡಿ ಕಾರ್ಖಾನೆ ಅಭಿವೃದ್ಧಿಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.  ದೇವೇಗೌಡರು ಪ್ರಧಾನಿ ಆಗಿದ್ದಾಗ ವಿಐಎಸ್‌ಎಲ್ ಅನ್ನು ಸೈಲ್​ಗೆ ಹಸ್ತಾಂತರಿಸುವ ತೀರ್ಮಾನ ತೆಗೆದುಕೊಂಡರು. ಈ ವಿಷಯದಲ್ಲಿ ಮಾಜಿ ಶಾಸಕ ದಿವಂಗತ ಅಪ್ಪಾಜಿ ಗೌಡರ ಶ್ರಮ ಇದೆ  ನಿರ್ಗಮಿಸಿದ…

Read Full News

ಹುಲಿಕಲ್ ಘಾಟಿ ಎರಡು ತಿಂಗಳು ಬಂದ್ – ಪರ್ಯಾಯ ಮಾರ್ಗ ಇಲ್ಲಿದೆ ನೋಡಿ|hulikal ghat

ಶಿವಮೊಗ್ಗ – ಕುಂದಾಪುರ ರಾಜ್ಯ ಹೆದ್ದಾರಿಯ ಬಾಳೆಬರೆ(ಹುಲಿಕಲ್) ಘಾಟ್ ನಲ್ಲಿ ಕಾಂಕ್ರಿಟ್ ಪೇವ್ ಮೆಂಟ್ ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆ ಫೆಬ್ರವರಿ 5 ರಿಂದ ಏಪ್ರಿಲ್ 5ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಯಾವೆಲ್ಲ ಬದಲಿ ಮಾರ್ಗ? ರಾಜ್ಯ ಹೆದ್ದಾರಿ 52ರಲ್ಲಿ ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು – ಕುಂದಾಪುರ ರಸ್ತೆಗೆ ತಲುಪಬಹುದು….

Read Full News

ರಿಪ್ಪನ್‌ಪೇಟೆ : ಕಾರ್ಯಕರ್ತರನ್ನು ಭೇಟಿ ಮಾಡಿದ ಸಂಸದ ಬಿ ವೈ ರಾಘವೇಂದ್ರ – ಹೈಮಾಸ್ಕ್ ವಿದ್ಯುತ್ ದೀಪ ಅಳವಡಿಕೆಗೆ ವೀರೇಶ್ ಆಲುವಳ್ಳಿ ಮನವಿ|BYR

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕ ವೃತ್ತದಲ್ಲಿ ಇರುವ ಹೈಮಾಸ್ಕ್ ವಿದ್ಯುತ್ ದೀಪವನ್ನು ಉನ್ನತೀಕರಣಗೊಳಿಸುವಂತೆ ಸಂಸದ ಬಿ ವೈ ರಾಘವೇಂದ್ರ ರವರಿಗೆ ಹೊಸನಗರ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಮನವಿ ಮಾಡಿದರು. ಕಾರ್ಯನಿಮಿತ್ತ ಬೈಂದೂರಿಗೆ ತೆರಳುತಿದ್ದ ಸಂಸದರು ವಿನಾಯಕ ವೃತ್ತದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿದರು. ಈ ಸಂಧರ್ಭದಲ್ಲಿ ಸಂಸದರನ್ನು ಅಭಿನಂದಿಸಿದ ವೀರೇಶ್ ಆಲುವಳ್ಳಿ ಪಟ್ಟಣದ ವಿನಾಯಕ ವೃತ್ತದಲ್ಲಿ ಹೈಮಾಸ್ಕ್ ವಿದ್ಯುತ್ ದೀಪದ ಉನ್ನತೀಕರಣ ಹಾಗೂ ನಾಲ್ಕು ರಸ್ತೆಗಳಲ್ಲಿನ ಪ್ರಮುಖ ವೃತ್ತಗಳಾದ ಆಸ್ಪತ್ರೆ ವೃತ್ತ…

Read Full News

ರಿಪ್ಪನ್‌ಪೇಟೆ : ಬಾಳೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪದ್ಮನಾಭ ಆಯ್ಕೆ|baluru

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬಾಳೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪಧ್ಮನಾಭ ರವರು ಆಯ್ಕೆಯಾಗಿದ್ದಾರೆ. ಕಳೆದ ಡಿ.14 ರಂದು ಬಿಜೆಪಿ ಬೆಂಬಲಿತರಾಗಿದ್ದ ಬಾಳೂರು ಗ್ರಾಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದರು.ಈ ಹಿನ್ನಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪದ್ಮನಾಭ ಜಯಭೇರಿ ಬಾರಿಸುವ ಮೂಲಕ ಬಿಜೆಪಿಗೆ ಭಾರಿ‌ ಮುಖಭಂಗವಾಗಿದೆ. 9 ಜನ ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪದ್ಮನಾಭ ರವರು…

Read Full News

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶ – ಈ ಸುಳ್ಳು ಜಾಹಿರಾತನ್ನು ನಂಬಿ ಅರ್ಜಿ ಸಲ್ಲಿಸಬೇಡಿ|FAKE

 ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಓಡಾಡುತ್ತಿದೆ. ಇದನ್ನು ನಂಬಿ ಯಾರಾದರೂ ಅರ್ಜಿ ಸಲ್ಲಿಸಿದ್ದರೆ, ಸಲ್ಲಿಸಬೇಕು ಎಂದಿದ್ದರೆ ಹುಷಾರಾಗಿರಿ. ಏಕೆಂದರೆ ಇದು ನಕಲಿ ಪ್ರಕಟಣೆ ಎಂಬ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಏರ್ ಹೋಸ್ಟೆಸ್, ಬಿಸಿನೆಸ್ ಡೆವಲೆಪ್‍ಮೆಂಟ್ ಮ್ಯಾನೇಜರ್, ಏರ್‌ಲೈನ್ ಎಕ್ಸಿಕ್ಯೂಟಿವ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ್ಸ್, ಕ್ಲೀನರ್ಸ್, ಟೀಂ ಮೆಂಬರ್ಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ….

Read Full News

ಗರ್ತಿಕೆರೆಯಲ್ಲಿ ವ್ಯಕ್ತಿಯೊಬ್ಬನಿಗೆ ಕೆಎಪ್ ಡಿ (ಮಂಗನ ಖಾಯಿಲೆ) ಪತ್ತೆ ಶಂಕೆ!!|KFD

ಶಿವಮೊಗ್ಗ ಜಿಲ್ಲೆಯ ಹೊಸನಗರ  ತಾಲೂಕಿನ ಗರ್ತಿಕೆರೆಯ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಸೋಂಕು ಕಾಣಿಸಿಕೊಂಡ ಶಂಕೆ ವ್ಯಕ್ತವಾಗಿದೆ. ಇವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ 45 ವರ್ಷ ಎಂದು ಹೇಳಲಾಗಿದೆ. ಜ.26 ರಂದು ವಿಪರೀತ ಜ್ವರದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಇವರಿಗೆ ಕಳೆದ ನಾಲ್ಕೈದು ದಿನಗಳಿಂದ ಜ್ವರ ಕಡಿಮೆ ಆಗಿರಲಿಲ್ಲ. ನಿನ್ನೆ ಆರ್ ಟಿ ಪಿ ಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರ್ ಟಿ ಪಿ ಸಿಆರ್ ಪರೀಕ್ಷೆಯಲ್ಲಿ ಕೆಎಫ್ ಡಿ ನೆಗೆಟಿವ್ ಬಂದಿದೆ. ಆರ್ ಟಿ…

Read Full News