ಜಿಲ್ಲಾ ಸುದ್ದಿ:
ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪಿಸುವಂತೆ ಒತ್ತಾಯಿಸಿ ನಾಳೆ ರಸ್ತೆ ತಡೆ :
ಹೊಸನಗರ ವಿಧಾನಸಭೆ ಕ್ಷೇತ್ರ ಪುನರ್ ಸ್ಥಾಪಿಸುವ ಹೋರಾಟಕ್ಕೆ ಮತ್ತೆ ಕಹಳೆ ಮೊಳಗಿದ್ದು,ನಾಳೆ ಹೊಸನಗರದ ಹಳೆ ಕೋರ್ಟ್ ಸರ್ಕಲ್ ನಲ್ಲಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ. ಹೊಸನಗರ ವಿಧಾನಸಭಾ ಕ್ಷೇತ್ರ ಕಳೆದುಕೊಂಡು ಹಲವು ವರುಷಗಳೇ ಕಳೆದು ಹೋಗಿದೆ. ಹೊಸನಗರ ಕ್ಷೇತ್ರ ರಾಜ್ಯದ ಅತಿ ದೊಡ್ಡ ಕ್ಷೇತ್ರವಾಗಿದೆ. 175 ಕಿ.ಮೀ. ಉದ್ದವಿರುವ ಈ ಕ್ಷೇತ್ರ ಈಗ ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಿ ಹೋಗಿದ್ದರಿಂದ ಹೊಸನಗರ ತಾಲೂಕು ಅನಾಥವಾಗಿ ಪರಿಣಮಿಸಿದೆ. 2001 ರ ಕುಲದೀಪ್ ಸಿಂಗ್ ಕಮಿಟಿ ವರದಿ ಪ್ರಕಾರ ಜನಸಂಖ್ಯಾ…
ಬಿದರಹಳ್ಳಿಯಲ್ಲಿ ಮಗು ಸಮೇತ ತಾಯಿ ಆತ್ಮಹತ್ಯೆ ಪ್ರಕರಣ : ಅಮಾಯಕ ಮಗುವಿನ ಹತ್ಯೆಗೆ ಹೊಣೆ ಯಾರು……!?
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯಿತಿಯ ಬಿದರಹಳ್ಳಿ ಗ್ರಾಮದ ಸಮೀಪದ ಚಿಟ್ಟೆ ಗೆದ್ದೆಯ ಮುದ್ದುಮುಖದ ನಾಲ್ಕು ವರ್ಷದ ತನ್ವಿ ಎಂಬ ಪುಟ್ಟ ಮುದ್ದು ಕಂದಮ್ಮನ ಹತ್ಯೆಗೆ ಹೊಣೆ ಯಾರು. ಅಜ್ಜ-ಅಜ್ಜಿಯೋ?. ತಂದೆಯೋ? ಅಥವಾ ಲೋಕದ ಅರಿವಿಲ್ಲದ ಚಂದದ ಮುಗ್ಧ ಬಾಲಕಿಯನ್ನು ವೇಲಿನಿಂದ ಸೊಂಟಕ್ಕೆ ಕಟ್ಟಿ ಬಾವಿಗೆ ಹಾರಿದ ತಾಯಿ ವಿದ್ಯಾ ಕಾರಣವಾದರೆ ??? 2014 ರಲ್ಲಿ ಚಿಟ್ಟೆಗೆದ್ದೆ ಯ ಲೋಹಿತ ಎಂಬುವರೊಂದಿಗೆ ಮದುವೆಯಾಗಿದ್ದ ವಿದ್ಯಾ ಅತ್ತೆ ಮಾವ ಮತ್ತು ಗಂಡನ ಕಿರುಕುಳದಿಂದ ಬೇಸತ್ತು ಮೇಲಿನಿಂದ…
ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ : ವಿಡಿಯೋ ಈಗ ವೈರಲ್
ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದ ವಿಡಿಯೋ ಈಗ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಬಸ್ ನಿಲ್ದಾಣದಿಂದ ಹೊರಟ ಬಸ್ಸನ್ನು ಓಡಿ ಹೋಗಿ ಹತ್ತಲು ವಿದ್ಯಾರ್ಥಿ ಯತ್ನಿಸಿದ್ದಾನೆ. ಆದರೆ ಬಸ್ಸು ಸ್ಪೀಡ್ ಇದ್ದಿದ್ದರಿಂದ ವಿದ್ಯಾರ್ಥಿಗೆ ಹತ್ತಲು ಸಾಧ್ಯವಾಗದೆ ಕೆಳಗೆ ಬಿದ್ದಿದ್ದಾನೆ. ಕಾರ್ಗಲ್ ನ ಇಡುವಾಣಿಯ ಚಿಪ್ಪಲಮಕ್ಕಿಯ ಒಂಭತ್ತನೇ ತರಗತಿ ವಿದ್ಯಾರ್ಥಿ ವೈಭವ್ ಎಂಬಾತ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ….
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದ ಬಳಿ ನಡುರಾತ್ರಿ ದಿಡೀರ್ ಬೆಂಕಿ : ತಪ್ಪಿತು ಭಾರಿ ಅನಾಹುತ
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದ ಸಮೀಪವಿರುವ ಸುಲ್ತಾನ್ ಮಾರ್ಕೆಟ್’ನಲ್ಲಿ ನಡುರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸುಲ್ತಾನ್ ಮಾರ್ಕೆಟ್’ನ ಗುಜರಿ ಅಂಗಡಿಗಳ ಮುಂದೆ ಇಡಲಾಗಿದ್ದ ಟಯರ್ ಮತ್ತು ಇತರೆ ಗುಜರಿಗೆ ವಸ್ತುಗಳು ಧಗಧಗ ಹೊತ್ತಿ ಉರಿದಿವೆ. ಸ್ಥಳೀಯರು ಇದನ್ನು ಗಮನಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬೆಂಕಿ ಹೊತ್ತುಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಗುಜರಿ ವಸ್ತುಗಳು ಇರಿಸಿದ್ದ ಸ್ಥಳದ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್’ಫಾರ್ಮರ್ ಇದೆ….
ರಿಪ್ಪನ್ ಪೇಟೆ : 4.30 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಹರತಾಳು ಹಾಲಪ್ಪ : ಫೆ.12 ರಂದು ಧರ್ಮಸ್ಥಳಕ್ಕೆ ಆರೋಪಿತರಿಗೆ ಶಾಸಕ ಹಾಲಪ್ಪ ಆಹ್ವಾನ
ರಿಪ್ಪನ್ ಪೇಟೆ : ಸುಳ್ಳು ಹೇಳಿಕೆ ಕೊಟ್ಟು ಪಲಾಯನಗೈಯುವ ಹುಡುಗಾಟದ ಕೆಲಸವನ್ನು ಮಾಡದೇ ಫೆಬ್ರವರಿ 12 ರಂದು ಧರ್ಮಸ್ಥಳದ ಶ್ರೀಮಂಜುನಾಥನ ಸನ್ನಿಧಿಗೆ ಬಂದು ನಾನು ಹಣ ಪಡೆದಿರುವುದನ್ನು ಸಾಬೀತುಪಡಿಸಲಿ ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಸವಾಲು ಹಾಕಿದರು. ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೂಜಾರದಿಂಬದಲ್ಲಿ ಬುಧವಾರ ನೂತನವಾಗಿ ನಿರ್ಮಾಣವಾಗಿರುವ 4.30 ಕೋಟಿ ವೆಚ್ಚದ ಪಿಎಂಜಿಎಸ್ ವೈ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ನಂತರ ಮಾತನಾಡಿದ ಶಾಸಕರು ಸಾಗರ ಕ್ಷೇತ್ರದಲ್ಲಿ ವ್ಯಕ್ತಿಯೋರ್ವ ನನ್ನ…
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರ ಆಣೆ ಪ್ರಮಾಣ ಪಂಥಾಹ್ವಾನಕ್ಕೆ ಶಾಸಕ ಹಾಲಪ್ಪರಿಂದ ಡೇಟ್ ಫಿಕ್ಸ್ : ಸವಾಲು ಸ್ವೀಕರಿಸುವರೇ ಮಾಜಿ ಶಾಸಕರು???
ಸಾಗರದಲ್ಲಿ ಆಣೆ ಪ್ರಮಾಣದ ರಾಜಕೀಯ ಮೇಲಾಟ ತಾರಕಕ್ಕೇರಿದ್ದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಶಾಸಕ ಹಾಲಪ್ಪ ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ, ತಾಕತಿದ್ದರೆ ಕಮೀಷನ್ ಪಡೆದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಹಿರಂಗ ಸವಾಲಿಗೆ ಇಂದು ಪ್ರತಿಕ್ರಿಯಿಸಿರುವ ಶಾಸಕ ಹರತಾಳು ಹಾಲಪ್ಪ ಪ್ರಮಾಣ ಮಾಡುವ ದಿನಾಂಕವನ್ನು ಸಹ ಘೋಷಿಸಿದ್ದಾರೆ. ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ…
ಡಿಜಿಟಲ್ ಕಲಿಕೆ,ನವೋದ್ಯಮಕ್ಕೆ ಒತ್ತು ನೀಡಿರುವ ಬಜೆಟ್ : ಎಂ ಬಿ ಮಂಜುನಾಥ್
ರಿಪ್ಪನ್ ಪೇಟೆ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಡಿಜಿಟಲ್ ಕಲಿಕೆ, ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳನ್ನು ಕೈ ಬಲಪಡಿಸುವುದಕ್ಕೆ ಒತ್ತು ನೀಡಿದೆ ಎಂದು ರಿಪ್ಪನ್ ಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ಇನ್ನಿತರ ವಸತಿ ಯೋಜನೆಗಳಿಗೆ ಒತ್ತು ನೀಡುವುದರೊಂದಿಗೆ, ಕೇಂದ್ರ ಸರ್ಕಾರದ ದೂರದೃಷ್ಟಿಯ ಈ ಬಜೆಟ್ ರಾಜ್ಯದ ‘ಸರ್ವರಿಗೂ ಸೂರು’ ಒದಗಿಸುವಲ್ಲಿ ಸ್ಫೂರ್ತಿ ನೀಡಲಿದೆ…
ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ನಿರಾಶಾದಾಯಕ : ಅರ್ ಎ ಚಾಬುಸಾಬ್
ರಿಪ್ಪನ್ ಪೇಟೆ : ಕೇಂದ್ರ ಸರ್ಕಾರದ ಈ ವರ್ಷದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಬಡವರ ಮತ್ತು ಮಧ್ಯಮ ವರ್ಗದವರ ನಿರೀಕ್ಷೆಯನ್ನು ಹುಸಿ ಯನ್ನಾಗಿ ಮಾಡಿದೆ ಎಂದು ರಾಜ್ಯ ಜ್ಯಾತ್ಯಾತೀತ ಜನತಾದಳದ ಮಾಜಿ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕಿನಿಂದ ಎರಡು ವರ್ಷಗಳಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ, ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ, ಜನರಿಗೆ ಏನಾದ್ರೂ ಕೊಡುಗೆ ಸಿಗುತ್ತೆ ಎಂಬ ನಿರೀಕ್ಷೆಯಿತ್ತು, ಆದರೆ ಈ ಬಜೆಟ್ ಬಡವರ, ಜನಸಾಮಾನ್ಯರ ಪರ…
ಮರಳು ಲಾರಿ ಮಾಲೀಕರಿಂದ ಶಾಸಕ ಹರತಾಳು ಹಾಲಪ್ಪರವರಿಗೆ ಕಮಿಷನ್ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ: ಬೇಳೂರು ಗೋಪಾಲಕೃಷ್ಣ
ಹೊಸನಗರ: ಹೊಸನಗರ-ಸಾಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ, ತಾಕತ್ತಿದ್ದರೆ ಹಾಲಪ್ಪನವರು ಕಮೀಷನ್ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹೊಸನಗರ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣರವರು ಸವಾಲು ಹಾಕಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ತಾವು ಪ್ರಾಮಾಣಿಕರು ಮರಳು ಮಾಧ್ಯಮದವರಿಂದ…
ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮೊದಲ ಆದ್ಯತೆ : ಗೃಹ ಸಚಿವ ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಯೆ ಬಿಜೆಪಿ ಸರಕಾರಗಳ ಮೊದಲ ಆದ್ಯತೆಯಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು . ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಯಳಗಲ್ಲು ಗ್ರಾಮದಲ್ಲಿ ಸುಮಾರು 26.50 ಕೋಟಿ ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಶಂಕುಸ್ಥಾಪನೆ ಮತ್ತು ಕೋಡೂರು ಗ್ರಾಮದ ಸ.ನಂ.14ರಲ್ಲಿ ಪಿಕಪ್ ಚಾನಲ್ ಕಾಮಗಾರಿ ಶ್ರೀ ಶಂಕರೇಶ್ವರ ದೇವಸ್ಥಾನದ ರಸ್ತೆ, ಹಳೇಕೋಟೆ ರಸ್ತೆ ಮರು ಡಾಂಬರಿಕರಣ…