w
Headlines
Home » ನೋಟಿಸ್ ನೀಡದ ಮನೆ ತೆರವು: ಅರಣ್ಯ ಇಲಾಖೆ ಮುಂಭಾಗ ಗ್ರಾಮಸ್ಥರ ಧರಣಿ

ನೋಟಿಸ್ ನೀಡದ ಮನೆ ತೆರವು: ಅರಣ್ಯ ಇಲಾಖೆ ಮುಂಭಾಗ ಗ್ರಾಮಸ್ಥರ ಧರಣಿ

GridArt 20260529

ನೋಟಿಸ್ ನೀಡದ ಮನೆ ತೆರವು: ಅರಣ್ಯ ಇಲಾಖೆ ಮುಂಭಾಗ ಗ್ರಾಮಸ್ಥರ ಧರಣಿ

A shocking incident has come to light in Aragodi village under Maruthipura Gram Panchayat in Hosnagar, where officials from the Forest Department allegedly demolished a poor family’s house without any prior warning or legal notice. The eviction was reportedly carried out during the Bakrid holiday when the family members were away.

ಹೊಸನಗರ: ಹೊಸನಗರದ ಅರಣ್ಯ ಇಲಾಖೆ ಯಾವುದೇ ಮುನ್ಸೂಚನೆ ನೀಡದೇ ಮೇ ೨೮ರ ಬಕ್ರೀದ್ ರಜೆಯ  ಸಂದರ್ಭದಲ್ಲಿ  ಮನೆಯನ್ನುತೆರವು ಮಾಡಿದ ಘಟನೆ ನಡೆದಿದ್ದು ಮನೆಯ ಮಾಲೀಕರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯ ಮುಂಭಾಗ ಧರಣಿ ನಡೆಸಿದ ಘಟನೆ ನಡೆದಿದೆ.

ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಗೋಡಿ ಗ್ರಾಮದ ಸರ್ವೆ ನಂಬರ್ ೭ರಲ್ಲಿ ನಾಗರಾಜ ಎನ್ನುವವರು ವಾಸವಿದ್ದ ಮನೆಯನ್ನು  ಯಾವುದೇ ನೋಟೀಸು ನೀಡದೆ  ಯಾರೂ ಇಲ್ಲದ ಸಮಯದಲ್ಲಿ ಅರಣ್ಯ  ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಸುಮಾರು ೪೦ ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದೇವೆ. ನಮಗೆ ಕಂದಾಯ ಡಿಮ್ಯಾಂಡ್ ಹಾಗೂ ಇಲ್ಲಿ ವಾಸವಗಿರುವುದಕ್ಕೆ ಎಲ್ಲ ದಾಖಲೆಗಳು ಇವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮನೆಯ ಮೇಲೆ ದಾಳಿ ಮಾಡಿ ಮನೆಯನ್ನು ದ್ವಂಸ ಮಾಡಿ ಕಿತ್ತು ಹಾಕಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವ ಬಡಕುಟುಂಬಕ್ಕೆ ವಾಸಿಸಲು ಮನೆಯೇ ಇಲ್ಲದಂತಾಗಿದ್ದು ಮುಂದೆ ಮಳೆಗಾಲವಿರುವುದರಿಂದ ವಾಸಿಸಲು ಯಾವುದೇ ಮನೆಯಿಲ್ಲ. ಬಡಕುಟುಂಬಕ್ಕೆ ನ್ಯಾಯ ಕೊಡಬೇಕೆಂದು ಕೇಳಿಕೊಂಡರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.