POSTMANNEWS

ನೈಜ ಸುದ್ದಿ ನೇರ ಬಿತ್ತರ..

ಬಸ್‌-ಬೈಕ್‌ ಮುಖಾಮುಖಿ ಡಿಕ್ಕಿ, ಯುವಕ ಸಾವು; ಬೈಕ್‌ಗೆ ಹೊತ್ತಿದ ಬೆಂಕಿ

GridArt 20260529

ಬಸ್‌-ಬೈಕ್‌ ಮುಖಾಮುಖಿ ಡಿಕ್ಕಿ, ಯುವಕ ಸಾವು; ಬೈಕ್‌ಗೆ ಹೊತ್ತಿದ ಬೆಂಕಿ

A tragic road accident near Suttukote in Shivamogga claimed the life of a 23-year-old biker after a KSRTC bus and bike collided head-on. The bike caught fire following the impact, creating panic among passengers.

ಶಿವಮೊಗ್ಗ:  ತಾಲೂಕಿನ ಸುತ್ತುಕೋಟೆ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಇಂದು ಸಂಜೆ ಸುತ್ತುಕೋಟೆಯ ಸಪ್ತಕೋಟಿ ಪೆಟ್ರೋಲ್‌ ಬಂಕ್‌ ಮುಂಭಾಗ ಈ ದುರ್ಘಟನೆ ಸಂಭವಿಸಿದೆ. ಮೃತ ಯುವಕನನ್ನು ಅಬ್ನಾನ್‌ (23) ಎಂದು ಗುರುತಿಸಲಾಗಿದೆ.

ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ, ಶಿವಮೊಗ್ಗದಿಂದ ಶಿಕಾರಿಪುರದತ್ತ ತೆರಳುತ್ತಿದ್ದ ಪಲ್ಸರ್‌ ಬೈಕ್‌ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ ನೇರವಾಗಿ ಬಸ್‌ನ ರೇಡಿಯೇಟರ್‌ ಭಾಗಕ್ಕೆ ನುಗ್ಗಿ ಸಿಲುಕಿಕೊಂಡಿದೆ.

ಅಪಘಾತದ ಪರಿಣಾಮ ಬೈಕ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಬಸ್‌ನೊಳಗಿದ್ದ ಪ್ರಯಾಣಿಕರು ಬೆಂಕಿ ಕಾಣುತ್ತಿದ್ದಂತೆಯೇ ಗಾಬರಿಗೊಂಡು ಎಮರ್ಜನ್ಸಿ ಡೋರ್‌ ಹಾಗೂ ಕಿಟಕಿಗಳ ಮೂಲಕ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದಾಗಿ ಸವಳಂಗ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಾಹಿತಿ ತಿಳಿದ ಕೂಡಲೇ ಡಿವೈಎಸ್‌ಪಿ ಸಂಜೀವ್‌ ಕುಮಾರ್‌, ಕುಂಸಿ ಠಾಣೆಯ ಪಿಎಸ್‌ಐ ಪಾರ್ವತಿಬಾಯಿ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.