ಜಿಲ್ಲಾ ಸುದ್ದಿ:
ಸಾಗರದಲ್ಲಿ ಆರ್‌ಸಿಬಿ ಕ್ರೇಜ್ ಜೋರು..! ಈ ಸಲ ಕಪ್ ನಮ್ದೇ ಎಂದ RCB ಅಭಿಮಾನಿ ಸಂತೋಷ್ ಸದ್ಗುರು…! ವಿಶೇಷ ಕಾರನ್ನು ಉದ್ಘಾಟಿಸಿದ ಕಿರುತೆರೆ ನಟಿ ರಜನಿ
ಸಾಗರ :ಈ ಸಲ ಕಪ್ ನಮ್ದೆ’ ಈಗಾಗಲೇ ಈ ವಾಕ್ಯ ನಿಮ್ಮ ಮನದಲ್ಲೂ ಗುಣುಗುಡುತ್ತಿರಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್, ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿರೀಟ ಗೆಲ್ಲಲು ಪಣತೊಟ್ಟಿದೆ.ಅಭಿಮಾನಿಗಳಂತೂ ಈ ಬಾರಿ ಕಪ್ ಗೆದ್ದೇ ಗೆಲ್ತೀವಿ ಎಂಬ ಅಚಲ ಆತ್ಮವಿಶ್ವಾಸದಲ್ಲಿದ್ದಾರೆ. ಇದರಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಈ ಸಲ ಕಪ್ ನಮ್ದೆ’ ಎಂಬ ಹ್ಯಾಶ್‌ಟ್ಯಾಗ್ ಗಳು ಕೂಡ ವೈರಲ್ ಆಗಿ ಹರಡುತ್ತಿದೆ. ಈ ಡೈಲಾಗ್ ಮೂಲಕ ಆರ್ಸಿಬಿ ಫ್ಯಾನ್ಸ್‌ಗಳು ಒಂದಲ್ಲ ಒಂದು ರೀತಿ…
ಮನೆ ಮಾರಾಟ ಮಾಡಿ ನಂತರ ನಕಲಿ ದಾಖಲೆ ಎಂದು ಪೊಲೀಸರಿಗೆ ಯಾಮಾರಿಸುತ್ತಿರುವ ಮನೆ ಒಡತಿ :
ಭದ್ರಾವತಿ : ಇಲ್ಲಿನ ಬೊಮ್ಮನಕಟ್ಟೆಯ ಲಕ್ಷ್ಮಮ್ಮ ಎಂಬುವವರು ಕಳೆದ ವರ್ಷ ನವೆಂಬರ್ ನಲ್ಲಿ ಹೊಳೆಸಿದ್ದಾಪುರ ವಾಸಿ ಕೌಶಿಕ್ ಎಂಬುವವರಿಗೆ ಬೊಮ್ಮನಕಟ್ಟೆಯಲ್ಲಿರುವ ಮನೆಯನ್ನು ಮಾರಾಟ ಮಾಡಿ ಹಣವನ್ನು ಪಡೆದು ಈಗ ಹೈಡ್ರಾಮ ನಡೆಸುತ್ತಿರುವ ಘಟನೆ ನಡೆದಿದೆ. ಹೌದು !! ಮನೆಯನ್ನು ಕಾನೂನು ಪ್ರಕಾರವಾಗಿ 31ಲಕ್ಷ 32000 ಸಾವಿರ ರೂಗಳಿಗೆ ವ್ಯಾಪಾರ ಮಾಡಿ ಹಣ ಪಡೆದು ಭದ್ರಾವತಿ ನೋಂದಣಿ ಕಛೇರಿಯಲ್ಲಿ ಸ್ವತಃ ಅವರೇ ನೋಂದಣಿ ಮಾಡಿಕೊಟ್ಟು ಈಗ ಹೈಡ್ರಾಮ ನಡೆಸಿ ದೇಶಕ್ಕಾಗಿ 20 ವರ್ಷ ಸೈನ್ಯದಲ್ಲಿ ಕಾರ್ಯ ನಿರ್ವಹಿಸಿ ಈಗ…
ಸಾಗರದ ಮಹಾಗಣಪತಿ ಜಾತ್ರೆಯಲ್ಲಿ ಹಿಂದೂ ಸಮಾಜದ ವ್ಯಾಪಾರಿಗಳಿಗೆ ಮಾತ್ರ ಜಾತ್ರಾ ಮಳಿಗೆ ನೀಡಲು ಒತ್ತಾಯ:
ಏಪ್ರಿಲ್ 5 ರಿಂದ ನಡೆಯುವ ಇತಿಹಾಸ ಪ್ರಸಿದ್ಧವಾದ ನಗರದ ಮಹಾಗಣಪತಿ ಜಾತ್ರೆ ವ್ಯಾಪಾರ ಮಳಿಗೆಗಳನ್ನು ಹಿಂದೂ ಸಮಾಜದ ವ್ಯಾಪಾರಿಗಳಿಗೆ ನೀಡುವಂತೆ ಒತ್ತಾಯಿಸಿ ಗುರುವಾರ ವಿಶ್ವಹಿಂದೂ ಪರಿಷತ್ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಾತ್ರೆಯಲ್ಲಿ ಮಹಾಗಣಪತಿ ರಸ್ತೆಯ ಇಕ್ಕೆಲಗಳಲ್ಲಿ ಹಣ್ಣುಕಾಯಿ, ಆಟಿಕೆ, ತಿಂಡಿತಿನಿಸು ಇತ್ಯಾದಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿ ತಮ್ಮ ಕಡೆಯಿಂದ ಹರಾಜು ಹಾಕಿ ಹೆಚ್ಚು ಹರಾಜು ಹಿಡಿದವರಿಗೆ ನೀಡಲಾಗುತ್ತಿದೆ. ದೇವಸ್ಥಾನವು ಮುಜರಾಯಿಗೆ ಸೇರಿದ್ದು, ಅನ್ಯಧರ್ಮಿಯರಿಗೆ ನೀಡಲು ಅವಕಾಶ ಇರುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ. ಪ್ರಸ್ತುತ ಮುಸ್ಲೀಂರು ಈ…
ಗ್ರಾಮಠಾಣಾ ರಸ್ತೆಗೆ ಗೇಟ್ ನಿರ್ಮಾಣ ಮಾಡಿ ಬೀಗ ಹಾಕಿದ ಖಾಸಗಿ ವ್ಯಕ್ತಿ :
ರಿಪ್ಪನ್ ಪೇಟೆ: ಚಿಕ್ಕ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಸಾರ್ವಜನಿಕರು ಓಡಾಡುವ ಗ್ರಾಮಠಾಣ ರಸ್ತೆಗೆ ಗೇಟ್ ನಿರ್ಮಾಣಮಾಡಿ ಬೀಗ ಹಾಕಿ ರೈತರು ತಮ್ಮ ಹೊಲಗದ್ದೆಗಳಿಗೆ ಓಡಾಡದಂತೆ ಅಡ್ಡಿ ಉಂಟು ಮಾಡಿರುವ ಘಟನೆ ನಡೆದಿದೆ. ಶಾಂತಪುರ ಮತ್ತು ಕೇಶವಪುರ ನಡುವಿನ ಹೊಸಹಳ್ಳಿ ಗ್ರಾಮದ ರೈತ ಕುಟುಂಬಗಳು ತಮ್ಮ ಹೊಲಗಳಿಗೆ ಹೋಗಲು ಕಳೆದ ಕೆಲವು ದಶಕಗಳಿಂದಲೂ ಗ್ರಾಮಠಾಣ ರಸ್ತೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಹೊಸಹಳ್ಳಿಯ ಖಾಸಗಿ ವ್ಯಕ್ತಿಯೊಬ್ಬ ಗ್ರಾಮ ಠಾಣದ ರಸ್ತೆಗೆ…
ಸಚಿವ ಕೆ ಎಸ್ ಈಶ್ವರಪ್ಪ ಸೇರಿದಂತೆ ಇಬ್ಬರ ವಿರುದ್ದ ಎಫ಼್ ಐ ಆರ್ ದಾಖಲಿಸಲು ಕೋರಿ ಕೋರ್ಟ್ ಗೆ ಅರ್ಜಿ :
ಶಿವಮೊಗ್ಗ ನಗರದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ನಡೆದ ನಂತರ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರು, ಮುಸಲ್ಮಾನ ಗೂಂಡಾಗಳನ್ನು ಬಿಡುವುದಿಲ್ಲ, ಅವರನ್ನು ದಮನ ಮಾಡುತ್ತೇವೆ ಎಂಬ ಪ್ರಚೋದನಕಾರಿ ಹೇಳಿಕೆಯೇ ಗಲಭೆಗೆ ಮುಖ್ಯ ಕಾರಣವಾಗಿದ್ದರಿಂದ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲು ಶಿವಮೊಗ್ಗ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಬೆಂಗಳೂರು ನಗರದ 40ನೆ ಎಸಿಎಂಎಂ ಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ.ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಹರ್ಷ ಹತ್ಯೆಯ ನಂತರ ಹೇಳಿಕೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ…
ಎಲ್ ಬಿ ಕಾಲೇಜಿನ ಹಲ್ಲೆ ಪ್ರಕರಣಕ್ಕೆ ಶಾಸಕ ಹಾಲಪ್ಪ ರವರೇ ನೇರ ಕಾರಣ : ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು
ಸಾಗರ: ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಈಚೆಗೆ ನಡೆದಿರುವ ಹಲ್ಲೆ ನಡೆದಿರುವ ಪ್ರಕರಣಕ್ಕೆ ಶಾಸಕ ಹರತಾಳು ಹಾಲಪ್ಪ ಅವರೇ ನೇರವಾಗಿ ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಗೌಡ ಅವರ ಮನೆಗೆ ಬುಧವಾರ ತೆರಳಿ ಯೋಗಕ್ಷೇಮ ವಿಚಾರಿಸಿದ ನಂತರ ಮಾತನಾಡಿದ ಅವರು ಎಂಡಿಎಫ್ ಸಂಸ್ಥೆಯ ಆಂತರಿಕ ವಿಚಾರದಲ್ಲಿ ಶಾಸಕ ಹಾಲಪ್ಪ ಅವರು ಅನಗತ್ಯವಾಗಿ ಮೂಗು ತೂರಿಸಿದ್ದಾರೆ. ಸರ್ವ ಸದಸ್ಯರ ಸಭೆಗೆ ಹಾಜರಾಗಲು ಸಂಸ್ಥೆಯ ನಿಯಮಗಳ…
ಹೊಸನಗರ ಮತ್ತು ರಿಪ್ಪನ್ ಪೇಟೆಯಲ್ಲಿ ಭಗತ್ ಸಿಂಗ್,ಸುಖದೇವ್,ರಾಜಗುರು ಅವರ ಹುತಾತ್ಮ ದಿನಾಚರಣೆ :
ಇಂದು ಮಾರ್ಚ್ 23. 1931ರ ಇದೇ ದಿನದಂದು ಭಾರತ ದೇಶದ ಮೂವರು ಮಹಾನ್ ಚೇತನಗಳಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರುಗಳು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತಾ ಅತ್ಯಂತ ಸಂತೋಷದಿಂದಲೇ ಕೊರಳಿಗೆ ಹಾಕಿದ್ದ ಉರುಳನ್ನು ಚುಂಬಿಸಿ ನೇಣಿನ ಕುಣಿಕೆಗೆ ಕೊರಳನ್ನೊಡ್ಡಿದ ತ್ಯಾಗ ಮತ್ತು ಬಲಿದಾನದ ದಿನ. ಈ ಬಲಿದಾನ್ ದಿವಸ್ ಅಂಗವಾಗಿ ಹೊಸನಗರದಲ್ಲಿ ಎಬಿವಿಪಿ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.ಗಣಪತಿ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೂ ಪಂಜಿನ ಮೆರವಣಿಗೆ ಮೂಲಕ ಎಬಿವಿಪಿ ತಾಲೂಕ್ ಅಧ್ಯಕ್ಷರು ಹಾಗೂ ಸದಸ್ಯರು ದೇಶದ…
ರಿಪ್ಪನ್‌ಪೇಟೆಯಲ್ಲಿ ಕಾಳಸಂತೆಯಲ್ಲಿ ಪಡಿತರ ಮಾರಾಟ : ಆಟೋ ಸಮೇತ ಅಕ್ಕಿ ಹಿಡಿದ ಸಾರ್ವಜನಿಕರು
ರಿಪ್ಪನ್ ಪೇಟೆ : ಇಲ್ಲಿನ ಹಾಸ್ಟೆಲ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯ ಮಾಲೀಕರು ಅಕ್ರಮವಾಗಿ ಬಡವರಿಗೆ ನೀಡಬೇಕಾಗಿದ್ದ ಸರ್ಕಾರದ ಉಚಿತ ಪಡಿತರ ಸುಮಾರು ಏಳು ಕ್ವಿಂಟಾಲ್ 50 ಕೆಜಿ ಅಕ್ಕಿಯನ್ನು ಕದ್ದು ಆಟೋದಲ್ಲಿ ಅಕ್ರಮವಾಗಿ ಸಾಗಿಸುವಾಗ ಸಾರ್ವಜನಿಕರು ಶಿವಮೊಗ್ಗ ರಸ್ತೆಯ ಖಾಸಗಿ ರೈಸ್ ಮಿಲ್ ನ ಆವರಣದಲ್ಲಿ ತಡೆಹಿಡಿದು ನಿಲ್ಲಿಸಿದ ಪ್ರಸಂಗ ಇಂದು ಮಧ್ಯಾಹ್ನ ನಡೆದಿದೆ. ಇಂದು ಮದ್ಯಾಹ್ನ ಖಾಸಗಿ ಆಟೋ ಗೆ 25 ಕೆಜಿ ಪ್ರಮಾಣದಲ್ಲಿ 30 ಚೀಲ ಪಡಿತರ ಅಕ್ಕಿಯನ್ನು ತುಂಬುತ್ತಿರುವುದನ್ನು ಗಮನಿಸಿದ ವಿನಾಯಕ ನಗರದ…
ಸಮಾಜದ ಮಹಿಳಾ ವರ್ಗಕ್ಕೆ ಸ್ಪೂರ್ತಿಯ ಚಿಲುಮೆಯಾಗಿರುವ ಹೊಸನಗರದ ಸೀಮಾ ಕಿರಣ್ ತೆಂಡೂಲ್ಕರ್ :
ಹೊಸನಗರ, ತಾಲ್ಲೂಕಿನ ಕೊಡಚಾದ್ರಿ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷೆ ಸೀಮಾ ಶರಾವ್ ರವರ ಸಮಾಜ ಮುಖಿ ಕೆಲಸಗಳಿಗೆ ಸಾರ್ವಜನಿಕರ ಗಮನ ಸೆಳೆದಿದೆಯಲ್ಲದೇ ತಾಲ್ಲೂಕಿನ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಲಾಗಿದೆ. ಸೀಮಾ ಕಿರಣ್ ತೆಂಡೂಲ್ಕರ್ ರವರು ಹಲವು ವರ್ಷಗಳಿಂದ ಸದಸ್ಯರಾಗಿದ್ದ ಹೊಸನಗರದ ಕೊಡಚಾದ್ರಿ ಜೆಸಿಐ ಸಂಸ್ಥೆಯಲ್ಲಿ ಅಧ್ಯಕ್ಷೆಯಾಗಿ ಮೂರೇ ತಿಂಗಳಲ್ಲಿ ಸಾಮಾಜಿಕ ಕಳಕಳಿಯನ್ನು ಹೊತ್ತು ಅನೇಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೊಸನಗರ…
ಶಾಸಕ ಹರತಾಳು ಹಾಲಪ್ಪ ವರ್ಚಸ್ಸಿಗೆ ಧಕ್ಕೆ ತರಲು ಕಾಂಗ್ರೆಸ್ ಷಡ್ಯಂತ್ರ : ರಾಜೇಂದ್ರ ಆವಿನಹಳ್ಳಿ
ಸಾಗರ: ಎಲ್‌ಬಿ ಕಾಲೇಜಿನ ಆವರಣದಲ್ಲಿ ನಡೆದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ೫೬ನೇ ಸರ್ವಸದಸ್ಯರ ಸಭೆಯಲ್ಲಿ ನಡೆದ ಗಲಾಟೆಗೂ ಶಾಸಕ ಹಾಲಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಲೇಜಿಗೆ ಜಮೀನು ನೀಡಿದ ಕುಟುಂಬದ ಎಚ್.ಎಂ.ಬಸವರಾಜ್‌ಗೌಡ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸ್ರಾಣಿ ನಡೆಸುತ್ತಿದ್ದ ಆಡಳಿತ ವಿರೋಧಿ ನಿಲುವಿನ ಬಗ್ಗೆ ನಾನು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಪ್ರತಿಷ್ಠಾನದ ಸದಸ್ಯತ್ವದಿಂದಲೇ ವಜಾ ಮಾಡಲಾಗಿತ್ತು ಎಂದರು. ಸರ್ವಸದಸ್ಯರ ಸಭೆ ನಡೆಯುತ್ತಿದ್ದ ಮಾ. 17ರಂದು ಬೆಳಿಗ್ಗೆ ನಾನು…