ಜಿಲ್ಲಾ ಸುದ್ದಿ:
ಹರತಾಳು ಹಾಲಪ್ಪ ಓರ್ವ ಗೂಂಡಾ ಹಾಗೂ ದುಷ್ಟ ಶಾಸಕ : ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು
ಸಾಗರ ; ಹಲ್ಲೆ ಎನ್ನುವುದು ನಡೆಯಬಾರದು. ಅದು ಸಹ ಶಾಸಕರ ಸಮ್ಮುಖದಲ್ಲಿ ನಡೆದಂತಹ ಹಲ್ಲೆಗಳು ಖಂಡಿಸಬೇಕಾಗಿದೆ. ಇತ್ತಿಚೆಗೆ ಸಾಗರದ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳ ಜನಕವಾಗಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ಸರ್ವ ಸದಸ್ಯರ ಸಭೆಯಲ್ಲಿ ನಡೆದ ಶಾಸಕರು ಮತ್ತು ಬೆಂಬಲಿಗರು ಮಾಡಿದ ಹಲ್ಲೆ ಮಾನವ ಸಮಾಜ ತಲೆ ತಗ್ಗಿಸುವಂತದ್ದು ಎಂದು ಮಾಜಿ ಸಾಗರ ಕ್ಷೇತ್ರ ಶಾಸಕ ಮತ್ತು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕರನ್ನು ಆಹ್ವಾನ ಮಾಡಿದ್ದರು ಅದಕ್ಕೆ ಅವರು ಅರ್ಹರಾದರೂ…
ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಹಿಂದಿ ಶಿಕ್ಷಕಕನ ಬೇಜವಬ್ದಾರಿ ನಡೆ : ಸ್ಥಳೀಯರ ಹಾಗೂ ಪೋಷಕರ ಆಕ್ರೋಶ
ಶಿಕ್ಷಣ ಎಂದರೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಓದು ಬರಹ ಹಾಗೂ ಶಿಸ್ತುಬದ್ಧವಾಗಿರುವಂತೆ ಮಾಡುವುದಕ್ಕೆ ಶಿಕ್ಷಣ ಎಂದು ಹೇಳಲಾಗುವುದು. ಗುರುಗಳಾದವರು ತಮ್ಮ ತಮ್ಮ ವಿದ್ಯಾರ್ಥಿಗಳು ಸರಿಯಾಗಿ ಶಿಕ್ಷಣ ಪಡೆಯದಿದ್ದಲ್ಲಿ, ಏನಾದರು ತಪ್ಪು ಮಾಡಿದಲ್ಲಿ ಅವರನ್ನು ತಿದ್ದಿ ತೀಡಿ ಸರಿದಾರಿಯಲ್ಲಿ ನಡೆಸುವ ಅಥವಾ ಅವರಿಗೆ ಶೈಕ್ಷಣಿಕವಾಗಿ ತಮ್ಮನ್ನು ತಾವು ಬೆಳೆಸಿಕೊಳ್ಳುವ ದಾರಿ ತೋರುವುದಲ್ಲದೇ, ವಿದ್ಯಾರ್ಥಿಗಳಿಗೆ ದೇಶದ ಸದ್ಪ್ರಜೆಯಾಗಿಸುವುದು ಶಿಕ್ಷಕರ ಹೊಣೆಯಾಗಿದೆ. ಇಂತಹ ಮಹತ್ವದ ಶಿಕ್ಷಣ ನೀಡುವ ಶಿಕ್ಷಕರೇ ಶಾಲೆಯ ಶಿಸ್ತನ್ನು ಪ್ರತಿಪಾದಿಸಿದ್ದರೆ ಆ ಶಾಲೆಯ ವಿದ್ಯಾರ್ಥಿಗಳು ಶಿಸ್ತನ್ನು ಹಾಗೂ ಶಿಕ್ಷಣ…
ತೀರ್ಥಹಳ್ಳಿಯಲ್ಲಿ ಪ್ರತಿದಿನ ನೆಡೆಯುತ್ತಿದ್ದ ಪ್ರಸಿದ್ಧ ತುಂಗಾ ಆರತಿ ನಿಂತಿದ್ದು ಹೇಗೆ…? ಯಾರಿಂದ….?
ತೀರ್ಥಹಳ್ಳಿ : ಪ್ರಧಾನಿ ನರೇಂದ್ರ ಮೋದಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ಗಂಗಾ ಆರತಿ ಮಾಡಿದ್ದ ಹಾಗೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಕುರುವಳ್ಳಿಯ ಕಾಶಿ ದೀಕ್ಷಿತ್ ಇವರ ನೇತೃತ್ವದಲ್ಲಿ ತುಂಗಾ ಆರತಿಯನ್ನು ಮಾಡಲಾಯಿತು. ಇದಕ್ಕೆ ತೀರ್ಥಹಳ್ಳಿಯ ಜನಪ್ರತಿನಿಧಿಗಳಿಂದ ಹಾಗೂ ಸಾರ್ವಜನಿಕರಿಂದ ಪ್ರಶಂಸೆ ಕೂಡ ವ್ಯಕ್ತವಾಯಿತು. ನಂತರ ತೀರ್ಥಹಳ್ಳಿಯ ತಹಸೀಲ್ದಾರ್ ಡಾ. ಶ್ರೀಪಾದ್ ಇವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿಯಲ್ಲಿ ಪ್ರತಿದಿನ ಸಂಜೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಅರ್ಚಕರು ಒಂದೊಂದು ತಿಂಗಳು ತುಂಗೆಗೆ ಆರತಿ ನೆಡೆಸಲಿ…
ಕಲ್ಲೂರು ಗ್ರಾಮದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ:
ಲಕ್ಷಾಂತರ ಜನರ ಬದುಕಿಗೆ ಭರವಸೆ ತುಂಬಿದ, ಭೂಮಿ ಹಕ್ಕು ಕೊಡಿಸಲು ಮಲೆನಾಡಿನಲ್ಲಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಹರಡಿ ಸಮ ಸಮಾಜದ ಬದುಕಿಗೆ ಕಟ್ಟಿದ ಹೊಸ ಕನಸನ್ನು ನನಸು ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟ ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಶಾಂತವೇರಿ ಗೋಪಾಲಗೌಡರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ಭಾನುವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ನಡೆದ ಶಾಂತವೇರಿ…
ಶಿವಮೊಗ್ಗದಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ!
ಶಿವಮೊಗ್ಗ: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಈ ಘಟನೆ ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಬಾಲಿಕಾ ಶಾಲೆಯಲ್ಲಿ ನಡೆದಿದೆ. ಸದ್ಯ ವಿದ್ಯಾರ್ಥಿಗಳು ಪ್ರಾಥಮಿಕ ಚಿಕಿತ್ಸೆ ಪಡೆದು ಪರೀಕ್ಷೆಗೆ ಹಾಜರಾಗಿದ್ದಾರೆ. ಹೆಜ್ಜೇನು ದಾಳಿಗೊಳಗಾದ ಪೋಷಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ಡಿಡಿಪಿಐ ರಮೇಶ್, ಪರೀಕ್ಷೆಗೆ ಬರೆಯಲು ಬಂದ ಐದು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆದಿದೆ. ಪರೀಕ್ಷೆ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಹೆಜ್ಜೇನು ದಾಳಿಗೊಳಗಾದ…
ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪೂರಕ : ಆರಗ ಜ್ಞಾನೇಂದ್ರ.
ರಿಪ್ಪನ್ ಪೇಟೆ: ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳ ತೆರೆಯುವಿಕೆಯಿಂದ ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಇಂಗ್ಲಿಷ್ ಭಾಷೆಯ ಬಳಕೆಯ ದುರುಪಯೋಗ ಸಿಗುತ್ತದೆ ಎಂದು ರಾಜ್ಯ ಗೃಹ ಸಚಿವ ಹಾಗೂ ತೀರ್ಥಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಅಮೃತ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಎರಡು ಕೋಟಿ ರೂ ವೆಚ್ಚದ ಕರ್ನಾಟಕ ಪಬ್ಲಿಕ್ ಸ್ಕೂಲಿನ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ…
ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಮದ ಬಡ ರೋಗಿಯ ಚಿಕಿತ್ಸೆಗೆ ನೆರವಾಗಿ :
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಾಳೂರೂ ವಾಸಿಯಾದ ರಾಜೇಶ್ 34 ವರ್ಷ ಇವರು (GBS syndrome )ಕಾಯಿಲೆಗೆ ತುತ್ತಾಗಿದ್ದು ಇವರ ಚಿಕಿತ್ಸೆಗೆ ಸುಮಾರು 15 ಲಕ್ಷದ ಅವಶ್ಯಕತೆಯಿದ್ದು,ಕೂಲಿ ಮಾಡಿ ಬದುಕುವ ಇವರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಚಿಕಿತ್ಸೆಯ ಹಣಕ್ಕಾಗಿ ನಮ್ಮ ಮಾದ್ಯಮದ ಮೂಲಕ ದಾನಿಗಳ ಮುಂದೆ ಬಂದಿದ್ದಾರೆ. ಈ ಖಾಯಿಲೆಯಿಂದ ಬಳಲುತ್ತಿರುವ ಇವರಿಗೆ ಸುಮಾರು ಐದಾರು ತಿಂಗಳುಗಳಿಂದ ಮಂಗಳೂರಿನ ಎನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು ಈಗಾಗಲೇ 6 ರಿಂದ 7 ಲಕ್ಷ ಹಣ ಖರ್ಚಾಗಿದ್ದು ಹಣದ…
ಕೊಡಚಾದ್ರಿ ಬೆಟ್ಟಕ್ಕೆ ಕೇಬಲ್ ಕಾರ್ ಗೆ ಅನುಮೋದನೆ : ಸಂಸದ ಬಿ ವೈ ರಾಘವೇಂದ್ರ
1200 ಕೋಟಿ ರೂ. ವೆಚ್ಚದ 7 ಕಿ.ಮೀ. ಉದ್ದದ ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಕೇಬಲ್ ಕಾರ್ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೊದನೆ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಕೊಡಚಾದ್ರಿ ಬೆಟ್ಟಕ್ಕೆ ರಸ್ತೆ ನಿರ್ಮಾಣ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 20 ಕೋಟಿ ರೂ. ನೀಡಿದ್ದರು.ಆದರೆ, ಕಾನೂನು ತೊಡಕಿನಿಂದ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಶುಕ್ರವಾರ ದೆಹಲಿಯಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ…
ಮಲೆನಾಡಿನಲ್ಲಿ ಮತ್ತೆ ಶುರುವಾಯಿತಾ ಮಂಗನ ಕಾಯಿಲೆ ಆತಂಕ..!
ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬರು ಮಹಿಳೆಯರಿಗೆ ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರೂ ಕಾಡಿನಲ್ಲಿ ದರಗು ತರಲು ಹೋಗಿದ್ದು ಅಲ್ಲಿಯೇ ಸೋಂಕು ತಗುಲಿದೆ. ಕುಡುವಳ್ಳಿ ಗ್ರಾಮದ ಸುಶೀಲಮ್ಮ (69) ಹಾಗೂ ಹಿರೇಬೈಲು ಗ್ರಾಮದ ಉಷಾ (47) ಸೋಂಕಿತರು. ಈ ಇಬ್ಬರೂ ಸ್ಥಳೀಯರೇ ಆಗಿದ್ದಾರೆ. ಒಬ್ಬರನ್ನು ಇಲ್ಲಿನ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಈ ವರ್ಷದ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ….
ಬಿಜೆಪಿಯವರ ಮಾತನ್ನು ಕೇಳುವ ಪೊಲೀಸರು ಕೇಸರಿ ಸಮವಸ್ತ್ರ ತೊಡಲಿ : ಮಾಜಿ ಸಚಿವ ಕಿಮ್ಮನೆ ರತ್ನಾಕರ್
ತೀರ್ಥಹಳ್ಳಿ:ಕೇಂದ್ರ ಮತ್ತು ರಾಜ್ಯ ಎರಡು ಕಡೆಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲಿಗೆ ಪ್ರತಿದಿನ ಜನರ ಹೃದಯ ಕೊಲ್ಲುವ ಕೆಲಸವನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ಶುಕ್ರವಾರ ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಹಿಜಾಬ್ ನಿಂದ ಪ್ರಾರಂಭವಾದ ಘಟನೆ ಇಂದು ವ್ಯಾಪಾರಕ್ಕೆ ನಿರ್ಬಂಧ ಹಾಕುವ ಮಟ್ಟಕ್ಕೆ ಬಂದು ನಿಂತಿದೆ.ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಒಬ್ಬ ನಾಯಕರು ಬಿಜೆಪಿ ಪಕ್ಷದಲ್ಲಿ ಇಲ್ಲ ಮೋದಿಗೂ ಪುಟಿನ್…