ಜಿಲ್ಲಾ ಸುದ್ದಿ:
SHIVAMOGGA | ‘ಅಕ್ಕ ಪಡೆ’ ತಂಡ ರಚನೆಗೆ ಮಹಿಳೆಯರಿಂದ ಅರ್ಜಿಆಹ್ವಾನ
SHIVAMOGGA | ಅಕ್ಕ ಪಡೆ ತಂಡ ರಚನೆಗೆ ಮಹಿಳೆಯರಿಂದ ಅರ್ಜಿಆಹ್ವಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಕ್ಕ ಪಡೆ ತಂಡ ರಚನೆ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ತಂಡಕ್ಕೆ ಎನ್ ಸಿ ಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 35 ರಿಂದ 45 ವರ್ಷದೊಳಗಿನವರಾಗಿದ್ದು,…
ರಿಪ್ಪನ್ ಪೇಟೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಜಾರಿಗೆ ವಿಶೇಷ ದಾಳಿ – 40 ಪ್ರಕರಣ ದಾಖಲು
ರಿಪ್ಪನ್ ಪೇಟೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಜಾರಿಗೆ ವಿಶೇಷ ದಾಳಿ – 40 ಪ್ರಕರಣ ದಾಖಲು ರಿಪ್ಪನ್‌ಪೇಟೆ : ಪಟ್ಟಣದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ (COTPA) ಉಲ್ಲಂಘನೆ ವಿರುದ್ಧ ಆರೋಗ್ಯ ಇಲಾಖೆ ವತಿಯಿಂದ ವಿಶೇಷ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಒಟ್ಟು 40 ಪ್ರಕರಣಗಳನ್ನು ದಾಖಲಿಸಿ, ₹5000 ದಂಡವನ್ನು ಸಂಗ್ರಹಿಸಲಾಯಿತು. ಈ ದಾಳಿ ಕಾರ್ಯಾಚರಣೆಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ನೇತೃತ್ವ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್…
ನಿಟ್ಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ – 6.5 ಕೋಟಿ ಅನುದಾನ ನೀಡಿದ ಶಾಸಕರಿಗೆ ಧನ್ಯವಾದ, ಹೊಸ ಪದಾಧಿಕಾರಿಗಳಿಗೆ ಸನ್ಮಾನ
ನಿಟ್ಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ – 6.5 ಕೋಟಿ ಅನುದಾನ ನೀಡಿದ ಶಾಸಕರಿಗೆ ಧನ್ಯವಾದ, ಹೊಸ ಪದಾಧಿಕಾರಿಗಳಿಗೆ ಸನ್ಮಾನ ಹೊಸನಗರ, ನವೆಂಬರ್ 3: ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಘಟಕದ ವತಿಯಿಂದ ಕಾರ್ಯಕರ್ತರ ಸಭೆ ಜರುಗಿತು. ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಹಸಿರೆಮಕ್ಕಿ–ಕೆ.ಬಿ. ಸರ್ಕಲ್ ರಸ್ತೆ, ರಾಮೇಶ್ವರ, ಮಹಾಗಣಪತಿ ಹಾಗೂ ವೀರಭದ್ರ ದೇವಸ್ಥಾನಗಳ ರಸ್ತೆ, ಕಾಲುಸಂಕ ನಿರ್ಮಾಣ ಹಾಗೂ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ವಿಶೇಷ…
ಸಮಟಗಾರು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ಸಮಟಗಾರು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ “ಗೋವಿಂದ ಬಾಬು ಪೂಜಾರಿಯಂತಹ ಹೃದಯವಂತರು ಸಮಾಜದ ನಿಜವಾದ ಶಕ್ತಿ” — ಆರಗ ಜ್ಞಾನೇಂದ್ರ ಹುಂಚ : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಟಗಾರಿನಲ್ಲಿ ಇಂದು ಶ್ರೀ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ (ರಿ) ಉಪ್ಪುಂದ ಅವರ ಆಶ್ರಯದಲ್ಲಿ ಸ್ಥಾಪಿಸಲಾದ ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯ ಉದ್ಘಾಟನಾ ಸಮಾರಂಭ ಭವ್ಯವಾಗಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರರವರು, “ಗೋವಿಂದ ಬಾಬು ಪೂಜಾರಿಯವರ ಸಾಮಾಜಿಕ ಸೇವಾ ಮನೋಭಾವ…
ನೆತ್ತಿಗೇರಿದ ಅಧಿಕಾರದ ಅಮಲು – ಸಾಗರ ನಗರಸಭೆ ಆಯುಕ್ತ ನಾಗಪ್ಪರಿಂದ ಬೀದಿ ವ್ಯಾಪಾರಿಗಳಿಗೆ ಅವಾಚ್ಯ ನಿಂದನೆ – ವಿಡಿಯೋ ವೈರಲ್
ನೆತ್ತಿಗೇರಿದ ಅಧಿಕಾರದ ಅಮಲು – ಸಾಗರ ನಗರಸಭೆ ಆಯುಕ್ತ ನಾಗಪ್ಪರಿಂದ ಬೀದಿ ವ್ಯಾಪಾರಿಗಳಿಗೆ ಅವಾಚ್ಯ ನಿಂದನೆ – ವಿಡಿಯೋ ವೈರಲ್ ಸಾಗರ: ನಗರಸಭೆ ಆಯುಕ್ತ ನಾಗಪ್ಪನವರು ಬೀದಿ ಬದಿ ವ್ಯಾಪಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ನಿನ್ನೆ ರಾತ್ರಿ ಸಾಗರದ ರಾಣಿ ಚೆನ್ನಮ್ಮ ವೃತ್ತದ ಬಳಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಸ್ಥಳ ಖಾಲಿ ಮಾಡಿಸುವ ವೇಳೆ ನಾಗಪ್ಪನವರು ಸ್ಥಳಕ್ಕೆ ಬಂದು ವ್ಯಾಪಾರಿಗಳಿಗೆ ಜಾಗ ತೆರವುಗೊಳಿಸಲು ಸೂಚಿಸಿದ್ದಾರೆ. ಈ…
ಉದ್ಯೋಗದಲ್ಲಿ ಕನ್ನಡಿಗರಿಗೆ ಶೇಕಡಾ ತೊಂಬತ್ತರಷ್ಟು ಮೀಸಲಾತಿ ನೀಡಲಿ – ಶಾಸಕ ಬೇಳೂರು ಗೋಪಾಲಕೃಷ್ಣ
ಉದ್ಯೋಗದಲ್ಲಿ ಕನ್ನಡಿಗರಿಗೆ ಶೇಕಡಾ ತೊಂಬತ್ತರಷ್ಟು ಮೀಸಲಾತಿ ನೀಡಲಿ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಹೊರ ರಾಜ್ಯದವರು ಕೆಲಸ ಪಡೆಯುತ್ತಿರುವುದಕ್ಕೆ ಕಾರಣ ನಮ್ಮದೇ ನಿರ್ಲಕ್ಷ್ಯ. ಸರ್ಕಾರದ ನಿಯಮಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಶಿಫಾರಸು ಈಗಾಗಲೇ ಮಾಡಲಾಗಿದೆ. ಕೈಗಾರಿಕೆ, ಬ್ಯಾಂಕ್, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸ್ಥಳೀಯ ಯುವಕರಿಗೆ ಶೇ. 90 ಉದ್ಯೋಗಾವಕಾಶ ಒದಗಿಸಿದರೆ ನಾಡು ನಿಜವಾದ ಅರ್ಥದಲ್ಲಿ ಅಭಿವೃದ್ಧಿಯಾಗುತ್ತದೆ,” ಎಂದು ಸಾಗರ…
ರಿಪ್ಪನ್‌ಪೇಟೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಅದ್ದೂರಿ ಮೆರವಣಿಗೆ | ಮನಸೆಳೆದ ಜಾನಪದ ಕಲಾ ಮೆರುಗು
ರಿಪ್ಪನ್‌ಪೇಟೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಅದ್ದೂರಿ ಮೆರವಣಿಗೆ | ಮನಸೆಳೆದ ಜಾನಪದ ಕಲಾ ಮೆರುಗು ರಿಪ್ಪನ್‌ಪೇಟೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಸ್ತೂರಿ ಕನ್ನಡ ಸಂಘದ ವತಿಯಿಂದ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ನಡೆಯಿತು. ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಪಟ್ಟಣದ ಪಿಎಸ್ಐ ರಾಜುರೆಡ್ಡಿ ಚಾಲನೆ ನೀಡಿದರು. ನೂರಾರು ಪುಟಾಣಿ ಮಕ್ಕಳು ಭುವನೇಶ್ವರಿ ವೇಷದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಮನಸೆಳೆದರು. ಡೊಳ್ಳು ಕುಣಿತ, ಪಟಾಕಿ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು….
ರಿಪ್ಪನ್‌ಪೇಟೆ – ಸಿ.ಟಿ. ರವಿ ವಿವಾದಿತ ಹೇಳಿಕೆಗೆ ಸವಿತಾ ಸಮಾಜದ ಆಕ್ರೋಶ | ಕ್ಷಮೆಯಾಚಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆಯ ಎಚ್ಚರಿಕೆ
ಸಿ.ಟಿ. ರವಿ ವಿವಾದಿತ ಹೇಳಿಕೆಗೆ ಸವಿತಾ ಸಮಾಜದ ಆಕ್ರೋಶ ಕ್ಷಮೆಯಾಚಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ಎಚ್ಚರಿಕೆ ರಿಪ್ಪನ್‌ಪೇಟೆ : ಮಾಜಿ ಸಚಿವ ಸಿ.ಟಿ. ರವಿ ರವರು ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಸಿ ಮಾತನಾಡಿದ ಆರೋಪದ ಹಿನ್ನೆಲೆ, ರಿಪ್ಪನ್‌ಪೇಟೆ ಸವಿತಾ ಸಮಾಜ ಘಟಕದಿಂದ ಅವರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. ಸಮಾಜದ ಸದಸ್ಯರು ನಾಡ ಕಚೇರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಸಿ.ಟಿ. ರವಿರವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರಾಜ್ಯದಾದ್ಯಂತ ಸಮಾಜದ ಬಾಂಧವರು…
ಹುಂಚಾ ಗ್ರಾಮದಲ್ಲಿ ರಕ್ತದಾನ ಶಿಬಿರ ಯಶಸ್ವಿ – 62 ಯೂನಿಟ್‌ಗಳ ರಕ್ತ ಸಂಗ್ರಹ
ಹುಂಚಾ ಗ್ರಾಮದಲ್ಲಿ ರಕ್ತದಾನ ಶಿಬಿರ ಯಶಸ್ವಿ – 62 ಯೂನಿಟ್‌ಗಳ ರಕ್ತ ಸಂಗ್ರಹ ಹೊಸನಗರ ತಾಲೂಕಿನ ಹುಂಚಾ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹುಂಚಾ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 29ರಂದು ನಡೆದ ಸ್ವಯಂ ಪ್ರೇರಿತ ಬಹುತ್ ರಕ್ತದಾನ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಒಟ್ಟು 62 ಯೂನಿಟ್‌ಗಳ ರಕ್ತ ಸಂಗ್ರಹಿಸಲಾಯಿತು. ಈ ಶಿಬಿರದಲ್ಲಿ ಸ್ಥಳೀಯ ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾನವೀಯತೆಯ ನಿಜವಾದ ಸಂದೇಶವನ್ನು ಸಾರಿದರು. ರಕ್ತದಾನದ ಮಹತ್ವವನ್ನು ಜನರಿಗೆ ತಲುಪಿಸುವ…
ಅಭಿಮಾನಿಗಳ ಹೃದಯದಲ್ಲಿ ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಶಾಶ್ವತ – ಜಿ ಆರ್ ಗೋಪಾಲಕೃಷ್ಣ
ಅಭಿಮಾನಿಗಳ ಹೃದಯದಲ್ಲಿ ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಶಾಶ್ವತ – ಜಿ ಆರ್ ಗೋಪಾಲಕೃಷ್ಣ ರಿಪ್ಪನ್‌ಪೇಟೆ : “ತಮ್ಮ ಅಭಿನಯ, ಸರಳತೆ ಮತ್ತು ಹೃದಯ ಶ್ರೀಮಂತಿಕೆಯ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ” ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಜಿ.ಆರ್ ಗೋಪಾಲಕೃಷ್ಣ ಹೇಳಿದರು. ಪಟ್ಟಣದ ವಿನಾಯಕ ಸರ್ಕಲ್‌ನಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ನಡೆದ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಪ್ಪು ಅವರ…