ಜಿಲ್ಲಾ ಸುದ್ದಿ:
ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಡೀರ್ ರಾಜೀನಾಮೆ|Resign
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ಅಧ್ಯಕ್ಷೆ ಸ್ಥಾನಕ್ಕೆ ದಿಡೀರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರಿಂದ ಅಧ್ಯಕ್ಷರಾಗಿ ಆಯ್ಕೆಯಾದ ಲೀಲಾವತಿ ದೊಡ್ಡಯ್ಯ ಕಳೆದ 20 ತಿಂಗಳ ಕಾಲ ಬಾಳೂರು ಗ್ರಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಗೆ ಬಂದ ಮಾಹಿತಿ ಪ್ರಕಾರ ಗ್ರಾಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ತಮ್ಮ ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇಂದು ಲೀಲಾವತಿ ದೊಡ್ಡಯ್ಯ ಸಾಗರದ…
ರಾಷ್ಟ್ರ ಮಟ್ಟದಲ್ಲಿ ಮಲೆನಾಡಿನ ಮರ್ಯಾದೆ ಕಳೆದ ಸಾಗರ ತಾಲೂಕಿನ ಸರ್ಕಾರಿ ಶಾಲೆಯ ಸೀರೆ ಶೌಚಾಲಯ|viral video
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬರುವೆ ಗ್ರಾಮದ ಸಮೀಪ ಇರುವ ಏಳಿಗೆ ಗ್ರಾಮದಲ್ಲಿನ ಶಾಲೆಯೊಂದರ ಸೀರೆ ಶೌಚಾಲಯದ ವಿಡಿಯೋವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇಂತಹದ್ದೊಂದು ಅವ್ಯವಸ್ಥೆಯು ಇನ್ನೂ ಇದೇ ಎಂದು ರಾಷ್ಟ್ರೀಯವಾಹಿನಿಗಳು ಸೀರೆ ಶೌಚಾಲಯದ ಸರ್ಕಾರಿ ಶಾಲೆಯ ಸ್ಥಿತಿಯನ್ನು ಬಿಚ್ಚಿಡುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಮಾಜಿ ಸಿಎಂ ಬಿಎಸ್ ವೈ ತವರು, ಘಟಾನುಘಟಿ ರಾಜಕಾರಣಗಳ ಶಕ್ತಿಕೇಂದ್ರ ಹಾಗೂ ವಿಮಾನ ನಿಲ್ಧಾಣವನ್ನು ಹೊಂದಿ ಅಭಿವೃದ್ಧಿ ಕಾಣುತ್ತಿರುವ ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಗೆ ಶೌಚಾಲಯ ಕಟ್ಟಿಸಿಕೊಡುವಂತಹ…
ಸಾಗರ ಸಮೀಪದ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಂಡ ಕಾಡು ಕೋಣಗಳು – ಭಯ ಭೀತರಾದ ಸ್ಥಳೀಯರು|wild corner
ಜನನಿಬಿಡ ಸ್ಥಳಗಳಲ್ಲಿ ಗುಂಪು ಗುಂಪಾಗಿ ಕಾಡುಕೋಣ ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಭಯಭೀತರಾದ ಘಟನೆ ಶಿವಮೊಗ್ಗ ಜಿಲ್ಲೆಯ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಲುಕೊಪ್ಪದ ಗ್ರಾಮದ ಭಾಗದಲ್ಲಿ ಹಿಂಡುಹಿಂಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಅಧಿಕ ಭಯ ಹುಟ್ಟಿಸಿವೆ. ಏಕಾಏಕಿ 16 ಕಾಡುಕೋಣಗಳು ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರ ಆತಂಕವನ್ನು ದುಪ್ಪಟ್ಟುಗೊಳಿಸಿವೆ. ಕಾಡುಕೋಣಗಳು ಚಿರತೆ ಹುಲಿಯಷ್ಟು ಅಪಾಯಕಾರಿಯಾಗದೆ ಇದ್ದರೂ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿರುವ ಉದಾಹರಣೆಗಳಿದೆ. ಕಾಡುಕೋಣಗಳು ಗುಂಪು ಗುಂಪಾಗಿ ರಾಜರೋಷವಾಗಿ ಸುತ್ತಾಡುತ್ತಿರುವುದನ್ನು ಕಂಡು ಸ್ಥಳೀಯರು ಭಯಭೀತರಾಗಿ ಅರಣ್ಯ ಇಲಾಖೆಯ ಗಮನಕ್ಕೆ…
ಅಕಾಲಿಕ ಮಳೆಯಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು : ಚಂದನ್ ಗೌಡ|jaya Karnataka
ರಿಪ್ಪನ್‌ಪೇಟೆ : ತಮಿಳುನಾಡಿನಲ್ಲಿ ಉಂಟಾಗಿರುವ ಚಂಡಮಾರುತದಿಂದ ಮಲೆನಾಡಿನ ರೈತ ಬದುಕು ಮೂರಾಬಟ್ಟೆಯಾಗಿದ್ದು ಈ ಗಂಭೀರ ಸಮಸ್ಯೆಯನ್ನು ಮಲೆನಾಡಿನ ಸಚಿವರು ಹಾಗೂ ಶಾಸಕರುಗಳು ಸರ್ಕಾರದ ಮುಂದಿಟ್ಟು ಮನದಟ್ಟು ಮಾಡಿ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕ್ ಅಧ್ಯಕ್ಷ ಚಂದನ್ ಗೌಡ ಹೇಳಿದ್ದಾರೆ. ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ತಮಿಳುನಾಡಿನಲ್ಲಿ ಎದ್ದಿರುವ ಮಂಡೋಸ್ ಚಂಡಮಾರುತ ಕರುನಾಡಿಗೂ ಅಪಾಯ ಉಂಟು ಮಾಡುತ್ತಿದೆ ಅಕಾಲಿಕ ಮಳೆಯ ಕಾರಣ ದಕ್ಷಿಣ ಒಳನಾಡು ಮತ್ತು ಬಹುಮುಖ್ಯವಾಗಿ ಮಲೆನಾಡು…
ಹೊಸನಗರ ತಾಲೂಕಿನ ಮೆಸ್ಕಾಂ ಇಲಾಖೆಗೆ ಇನ್ನೆಷ್ಟು ಬಲಿ ಬೇಕು…!???? ಅಪಾಯದ ಮುನ್ಸೂಚನೆ ನೀಡಿದರು ಸಹ ಸಾವಿನ ಜಾತ್ರೆ ಮಾಡಲು ಹೊರಟ ಕೆಲ ಜಡ್ಡುಗಟ್ಟ ಅಧಿಕಾರಿಗಳು|Mescom
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮದ ನಿವಾಸಿ ರೈತ ಶೇಷಗಿರಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ ಆದರೆ ಈ ದುರ್ಮರಣಕ್ಕೆ ನೇರವಾಗಿ ಮೆಸ್ಕಾಂ ಇಲಾಖೆಯ ಬಿಳಿಯಾನೆಯಂತಹ ಜಡ್ಡು ಹಿಡಿದ ಅಧಿಕಾರಿಗಳು ಹಾಗೂ ಕೆಲ ಸೋಮಾರಿ ಸಿಬ್ಬಂದಿಗಳೇ ನೇರ ಹೊಣೆ. ಇಂದು ಬೆಳಿಗ್ಗೆ ಶೇಷಗಿರಿ ಮೂರು ಬಾರಿ ಕರೆ ಮಾಡಿ ನೀಡಿದ್ದ ದೂರನ್ನು ಮನ್ನಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಲ್ಲಿ ಒಬ್ಬ ಅಮಾಯಕ ರೈತನ ಜೀವ ಉಳಿಸಬಹುದಿತ್ತಲ್ಲವೇ,ವಿದ್ಯುತ್ ತಂತಿ ನೆಲದ ಮೇಲೆ ಬಿದ್ದರೂ fuse ಯಾಕೆ ಕೆಲಸ ನಿರ್ವಹಿಸಿಲ್ಲ..???? ಅದು…
ಅಧಿಕಾರಕ್ಕಿಂತ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯೇ ನನ್ನ ಮೊದಲ ಆದ್ಯತೆ – ಆರ್ ಎನ್ ಮಂಜುನಾಥ್ ಗೌಡ|RMM
ತೀರ್ಥಹಳ್ಳಿ : ಸಹಕಾರಿ ಕ್ಷೇತ್ರದಲ್ಲಿ ಮಂಜುನಾಥ್ ಗೌಡರ ಇನ್ನಿಂಗ್ಸ್ ಮುಗಿತು ಮಂಜುನಾಥ್ ಗೌಡರನ್ನು ಮುಗಿಸಿ ಬಿಟ್ವಿ ಅಂತ ಬಹಳ ಜನ ಎಂದು ಕೊಳ್ಳುತ್ತಾರೆ ಕನಸು ಕಾಣುತ್ತಾರೆ. ನಾವು ಕನಸು ಕಂಡರೆ ನನಸು ಆಗುವಂತಹ ಕನಸು ಕಾಣಬೇಕು. ಡಿಸಿಸಿ ಅಥವಾ ಯಾವುದೇ ಸೊಸೈಟಿಯಲ್ಲಿ ಭಾಗಿಯಾಗಬೇಕಾದರೆ ಶಿವಮೊಗ್ಗದ ಟಿಎಪಿಸಿಎಂಎಸ್ ಅಲ್ಲಿ ಗೆದ್ದರೆ ಮಾತ್ರ. ಆದ್ದರಿಂದ ಅಲ್ಲಿ ಸೋಲಿಸಬೇಕೆಂದು ನಮ್ಮ ವಿರೋಧ ಪಕ್ಷದವರ ಆಸೆಗೆ ಅಲ್ಲಿನ ಜನರು ಸುಳ್ಳು ಮಾಡಿ ನನನ್ನು ಗೆಲ್ಲಿಸಿದರು. ಅಲ್ಲಿನ ಗೆಲುವಿನ ಮೂಲಕ ಅಲ್ಲಿಂದ ನನ್ನ ಎರಡನೇ…
ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು|Athletic
ರಿಪ್ಪನ್‌ಪೇಟೆ : ಅಥ್ಲೆಟಿಕ್ಸ್ 17 ವರ್ಷದೊಳಗಿನ ವಿಭಾಗದಲ್ಲಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳಾದ ನಿತೀಶ್ ಟಿ ,ನಿತಿನ್ ಟಿ ,ಆಯುಷ್ ಎಸ್ ಆರ್ ಮತ್ತು ಅರ್ಜುನ್ 4*100 ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ…
ತಾಳಗುಪ್ಪ – ಮೈಸೂರು ರೈಲು ಹತ್ತುವಾಗ ಜಾರಿ ಕೆಳಗೆ ಬಿದ್ದ ಪ್ರಯಾಣಿಕ : ಕರ್ತವ್ಯ ಪ್ರಜ್ಞೆ ಮೆರೆದ ರೈಲ್ವೆ ಸಿಬ್ಬಂದಿಗಳು -ಸಿಸಿಟಿವಿ ವೀಡಿಯೋ ವೈರಲ್|Train
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಮೈಸೂರು ತಾಳಗುಪ್ಪ ರೈಲು ಹತ್ತುವಾಗ ಪ್ರಯಾಣಿಕನೋರ್ವ ಸ್ಲಿಪ್ ಆಗಿ ಕೆಳಗೆ ಬಿದ್ದ ಘಟನೆ ನಡೆದಿದ್ದು ಈ ಘಟನೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಯಾಣಿಕರು ಕೆಳಗೆ ಬೀಳುವುದನ್ನ ಗಮನಿಸಿದ ರೈಲ್ವೆ ಆರ್ ಪಿ ಎಫ್ ನ ಸಿಬ್ಬಂದಿ ಮಂಜುನಾಥ್ ಮತ್ತು ಅಣ್ಣಪ್ಪ ಅವರನ್ನ ರಕ್ಷಿಸಿದ್ದಾರೆ. ನಂತರ ಸಾರ್ವಜನಿಕರು ಸಹ ಸಿಬ್ವಂದಿಗಳ ಜೊತೆ ಕೈಜೋಡಿಸಿದ್ದಾರೆ. ಈ ವಿಡಿಯೋವನ್ನ ಟ್ವೀಟರ್ ನಲ್ಲಿ ಆರ್ ಪಿ ಎಫ್ ಮೈಸೂರು ವಿಭಾಗದ ರೈಲ್ವೆಯವರು ಪೋಸ್ಟ್ ಮಾಡಿದ್ದಾರೆ. ನಿನ್ನೆ…
ಯೋಗ ಪ್ರಶಸ್ತಿ ಪಡೆದ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು|GFGCC
ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶಿವಮೊಗ್ಗ ದಲ್ಲಿ ನಡೆದ ಕುವೆಂಪು ವಿಶ್ವವಿದ್ಯಾನಿಲಯ ಮಟ್ಟದ ಯೋಗ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಹಿಳಾ ಮತ್ತು ಪುರುಷ ವಿದ್ಯಾರ್ಥಿಗಳು ತೃತೀಯ ಚಾಂಪಿಯನ್ ಪಟ್ಟ ಪಡೆದು ಕೊಂಡಿದ್ದಾರೆ . ಕಾಲೇಜಿನ ವಿದ್ಯಾರ್ಥಿಗಳಾದ ಕಾರ್ತಿಕ್. ಎನ್. ಜಿ, ಉಜ್ವಲ್. ಎಂ, ಮುಸ್ತಾಫ ಎಂ, ನಂದನ್ ಕುಮಾರ್, ಅಭಿಷೇಕ್, ಮೇಘ. ಎನ್ ಕೆ, ಸನು ಜೆ, ಶೈಲಜಾ. ಜೆ. ಎಂ, ಸಂಧ್ಯಾ. ಹೆಚ್. ಎ, ಜಯಶ್ರೀ. ಹೆಚ್. ಎಸ್, ರವರಿದ್ದ…
ಸೇವಾ ಕಾರ್ಯ ಜನಮಾನಸದಲ್ಲಿ ಉಳಿಯುವಂತಾಗಲು ಸದಾ ಶ್ರಮಿಸಬೇಕು : ಡಾ ಜಿ ಡಿ ನಾರಾಯಣಪ್ಪ|Ripponpet
ರಿಪ್ಪನ್‌ಪೇಟೆ : ಮನುಷ್ಯನ ಹುಟ್ಟು- ಆಕಸ್ಮಿಕ ಸಾವು ನಿಶ್ಚಿತ ಈ ಮಧ್ಯದಲ್ಲಿನ ಬದುಕು ಜನಮಾನಸದಲ್ಲಿ ಉಳಿಯವಂತಾಗಲು ಸದಾ ಶ್ರಮಿಸುವಂತಾಗಬೇಕು ಅಂತಹ ಕಾರ್ಯದಲ್ಲಿ ಜಿ.ಆರ್.ಕೆ.ಮೂರ್ತಿ ಜನಸೇವಾ ಕಾರ್ಯ ಪ್ರಶಂಸನೀಯವೆಂದು ವೈದ್ಯರತ್ನ, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ಹೇಳಿದರು. ಪಟ್ಟಣದ ಜಿ.ಆರ್.ಕೆ.ಮೂರ್ತಿ ಸೇವಾ ಟ್ರಸ್ಟ್ ಗೆಳೆಯರ ಬಳಗ ಇವರ ಸಹಯೋಗದಲ್ಲಿ ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕ್ರೀಡಾಂಗಣದಲ್ಲಿ ಅಯೋಜಿಸಲಾದ ಅಭಿನಂದನಾ ಮಹೋತ್ಸವ ಮತ್ತು ನಗೆಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಸ್ವಾರ್ಥ ಮನೋಭಾವನೆಯಿಂದಾಗಿ ನಮ್ಮ ತನವನ್ನು ಮರೆಯುವಂತಾಗಿದೆ. ಸಂಬಂಧಗಳಿಂದಲೂ…