ಜಿಲ್ಲಾ ಸುದ್ದಿ:
ಆಸ್ಪತ್ರೆಯ ನಿರ್ಲಕ್ಷವೋ.. ಬಡ ಕುಟುಂಬದ ದುರಂತವೋ..?ಇಂಜೆಕ್ಷನ್ ನೋವಿನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿ ಬಾಲಕಿ.!!!!|Nagara
ಆಸ್ಪತ್ರೆಯ ನಿರ್ಲಕ್ಷವೋ.. ಬಡ ಕುಟುಂಬದ ದುರಂತವೋ..? ಕಾಲು ಕಳೆದುಕೊಳ್ಳುವ ಭೀತಿಯಲ್ಲಿ ಬಾಲೆ.!!!! ವರದಿ : ರವಿ ಬಿದನೂರು ಹೊಸನಗರ: ಆಕೆಗಿನ್ನು 7 ವರ್ಷ. ಮನೆಯಂಗಳದಲ್ಲಿ ಆಟ ಆಡಿಕೊಂಡಿದ್ದ ಬಾಲಕಿ ಇದೀಗ ಕಾಲನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾಳೆ. ಇದು ಹೆತ್ತಕರುಳಿಗೆ ಬೆಂಕಿ ಇಟ್ಟಂತಾಗಿದೆ. ಹೌದು ಇದು ಮೂಡುಗೊಪ್ಪ ಗ್ರಾಪಂ, ಬೈಸೆ ಗ್ರಾಮದ ಸುಳುಗೋಡಿನ ಬಡ ಕುಟುಂಬದ ರೋಧನ ಇದು. ಅಂಬಿಕಾ ಮತ್ತು ಸುಂದರ ದಂಪತಿಗಳ ಮಗಳು ಶ್ರವಂತಿಯ ಇಂದಿನ ಧಾರುಣ ಸ್ಥಿತಿ ಮುಂದೇನು ಅನ್ನುವ ಪ್ರಶ್ನೆ ಹುಟ್ಟುಹಾಕಿದೆ. ಏನಿದು…
ಅನಾಥ ಮಹಿಳೆಗೆ ಬಾಳು ಕೊಟ್ಟ ಯುವಕನಿಗೆ ಬರೋಬ್ಬರಿ ಏಳು ವರ್ಷಗಳ ನಂತರ ಬಿಗ್ ಶಾಕ್|cheating
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿ ಮಹಿಳೆಯೊಬ್ಬಳ ಟ್ರ್ಯಾಪ್ನಲ್ಲಿ ಸಿಲುಕಿದ ಯುವಕನೊಬ್ಬ ಇದೀಗ ತನಗಾದ ಮೋಸದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದಷ್ಟೆ ಅಲ್ಲದೆ ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಸ್ಠೇಷನ್ನಲ್ಲಿ ದೂರು ನೀಡಿದ್ಧಾರೆ. ಆತ ದಾಖಲಿಸಿದ ದೂರು ದಾಖಲಾದ ಎಫ್ಐಆರ್ ಪ್ರಕಾರ, ನಡೆದಿದ್ದಿಷ್ಟು! 2015 ರಲ್ಲಿ ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ ಕಾಳಿಂಗೇಶ್ವರ ದೇವಾಲಯದಲ್ಲಿ ಯುವಕನೊಬ್ಬ ಮದುವೆಯಾಗಿದ್ದರು. ಅನಾಥ ಹುಡುಗಿಯನ್ನು ಯಾವುದೇ ಡಿಮ್ಯಾಂಡ್ ಇಲ್ಲದೇ ಮದುವೆಯಾದ ಯುವಕ, ಮದುವೆ ಖರ್ಚನ್ನ ಕೂಡ ಖುದ್ಧಾಗಿ ವ್ಯಯಿಸಿದ್ರು. ಆದರೆ ಅನಾಥಳು ಎಂದು ಹೇಳಿ…
ಸಿಇಟಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ರಿಪ್ಪನ್‌ಪೇಟೆಯ ಶಂಕರ್ ಪಟೇಲ್|CET
ರಿಪ್ಪನ್‌ಪೇಟೆ : ಸಿಇಟಿ ಪರೀಕ್ಷೆಯಲ್ಲಿ ಪಟ್ಟಣದ ಸಾಗರ ರಸ್ತೆಯ ಯುವಕ ಶಂಕರ್ ಪಟೇಲ್ 976 ನೇ ರ‍್ಯಾಂಕ್ ಉತ್ತಮ ಸಾಧನೆಗೈದಿದ್ದಾನೆ. ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ (KCET 2023 Result) ಪ್ರಕಟವಾಗಿದ್ದು ಕಾರ್ಕಳದ ಜ್ಞಾನ ಸುಧಾ ಕಾಲೇಜಿನ ಶಂಕರ್ ಪಟೇಲ್ 976ನೇ ರ‍್ಯಾಂಕ್ ಪಡೆದು ಉತ್ತಮ ಸಾಧನೆಗೈದಿದ್ದಾರೆ. ಪಟ್ಟಣದ ಉದ್ಯಮಿ ಕೆ ಎಂ ಉಮೇಶ್ ಮತ್ತು ರಾಜೇಶ್ವರಿ ದಂಪತಿಗಳ ಪುತ್ರ ಶಂಕರ್…
ವಿದ್ಯಾಸಂಸ್ಥೆಗಳು ನೈತಿಕ ಶಿಕ್ಷಣ ನೀಡಿ – ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ|NES
ಎನ್.ಇ.ಎಸ್ ಹಬ್ಬದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅಭಿಮತ ವಿದ್ಯಾಸಂಸ್ಥೆಗಳು ನೈತಿಕ ಶಿಕ್ಷಣ ನೀಡಿ ಶಿವಮೊಗ್ಗ : ನಮಗೆ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಶೈಕ್ಷಣಿಕತೆಯ ಜೊತೆಗೆ ನೈತಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅಭಿಪ್ರಾಯಪಟ್ಟರು. ಬುಧವಾರ ನಗರದ ಎನ್ಇಎಸ್ ಮೈದಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವ ಸಮಾರೋಪ ಸಮಾರಂಭದ ‘ಎನ್.ಇ.ಎಸ್ ಹಬ್ಬ’ ಸಮಾರೋಪ ಮಾತುಗಳನ್ನಾಡಿದರು. ವಿದ್ಯಾಸಂಸ್ಥೆಗಳಲ್ಲಿ ನೈತಿಕ ಶಿಕ್ಷಣ ನೀಡುವ ಕುರಿತು ಸರ್ಕಾರ ಹೆಚ್ಚು ಚಿಂತನೆ ನಡೆಸಬೇಕಿದೆ. ನೈತಿಕ…
ಸಾಗರದಲ್ಲಿನ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನ|Application
ಸಾಗರ : 2023-24 ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಆಹ್ವಾನಿಸಿದೆ. ಪಿ.ಯು.ಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಬಯಸುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಾಗೂ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿನಿಲಯದ ತಂತ್ರಾಂಶ http://shp.karnataka.gov.in ರಲ್ಲಿ ಜು.16 ರೊಳಗಾಗಿ ಅರ್ಜಿಯನ್ನು ಸಲ್ಲಿಸಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ…
ಹೊಸನಗರ-ತೀರ್ಥಹಳ್ಳಿ ತಾಲೂಕಿನ ಗ್ರಾಪಂ ಅಧ್ಯಕ್ಷ,ಉಪಾಧ್ಯಕ್ಷ ಮೀಸಲಾತಿ ಪ್ರಕಟ : ಎಲ್ಲೆಲ್ಲಿ ಯಾರ್ಯಾರು? ವಿವರ ಇಲ್ಲಿದೆ ನೋಡಿ|GPM
ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 30 ಗ್ರಾಮ ಪಂಚಾಯಿತಿಗಳ 2 ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಇಲ್ಲಿನ ಗಾಯತ್ರಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ, ಮೀಸಲಾತಿಯನ್ನು ಪ್ರಕಟಿಸಿದ್ದಾರೆ. ಯಾವ ಪಂಚಾಯಿತಿಗೆ ಯಾವ ಮೀಸಲಾತಿ ಮಾಹಿತಿ ಇಲ್ಲಿದೆ ಗ್ರಾಮ ಪಂಚಾಯಿತಿ ಹೆಸರು – ಅಧ್ಯಕ್ಷ – ಉಪಾಧ್ಯಕ್ಷ ಹುದ್ದೆ 1-ರಿಪ್ಪನ್ ಪೇಟೆ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗಎ, 2-ಪರುಪ್ಪೆಮನೆ-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ, 3-ಹರತಾಳು -ಸಾಮಾನ್ಯ ಮಹಿಳೆ, ಸಾಮಾನ್ಯ, 4-ಮಾರುತಿಪುರ- ಸಾಮಾನ್ಯ ಮಹಿಳೆ,…
ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ
ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ ತೀರ್ಥಹಳ್ಳಿ : ಹೆಲ್ಮೆಟ್ ಧರಿಸದೆ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದ ಅಪ್ರಾಪ್ತ ಯುವಕನ ಪ್ರಕರಣದಲ್ಲಿ ನ್ಯಾಯಾಲಯ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ ವಿಧಿಸಿದೆ. 17 ವರ್ಷದ ಯುವಕ ಹೆಲ್ಮೆಟ್ ಧರಿಸದೆ, ಲೈಸೆನ್ಸ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ. ತೀರ್ಥಹಳ್ಳಿ ಪೊಲೀಸರು ಸೋಮವಾರ ತಪಾಸಣೆ ಮಾಡುವಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಸಂಚಾರ ನಿಯಮ ಉಲ್ಲಂಘನೆ, ಅಪ್ರಾಪ್ತ ಯುವಕನಿಗೆ ಬೈಕ್ ನೀಡಿದ…
ರಿಪ್ಪನ್‌ಪೇಟೆ : ಅಶ್ಲೀಲ ವೀಡಿಯೋ ವೈರಲ್ ಪ್ರಕರಣ – ಆರೋಪಿಯ ವಿರುದ್ದ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ|protest
ರಿಪ್ಪನ್‌ಪೇಟೆ : 16-06-2023 ರಂದು ವಾಟ್ಸಪ್ ಗ್ರೂಫ್‌ಗಳಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜು ಯುವತಿಯರ ಅಶ್ಲೀಲ ನಗ್ನ ಚಿತ್ರಗಳನ್ನು ಹರಿಬಿಡಲಾಗಿದ್ದು, ವಿಡಿಯೋದಲ್ಲಿ ABVP ವಿದ್ಯಾರ್ಥಿ ಸಂಘಟನೆಯ ತೀರ್ಥಹಳ್ಳಿ ಘಟಕದ ಅಧ್ಯಕ್ಷನೂ ಕೂಡ ಇದ್ದು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆತನ ವಿರುದ್ಧ ಕಾನೂನು ಕಠಿಣ ಕ್ರಮ ಜರುಗಿಸುವಂತೆ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ವತಿಯಿಂದ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಗೆ ಸದಸ್ಯತ್ವ ಆಮಿಷ ತೋರಿಸಿ, ವೀಡಿಯೋ ಮಾಡಿ ದೇಹದ ನಗ್ನ ದೃಶ್ಯಗಳನ್ನು ಅಶ್ಲೀಲವಾಗಿ…
ಹೊಂಬುಜ ಸ್ವಸ್ತಿಶ್ರೀಗಳವರ ವಿದೇಶ ವಿಹಾರ|hombuja
ಹೊಂಬುಜ : ಅಮೇರಿಕಾದ ಕೆನಡಾದ ಟೊರಂಟೋ ನಗರದ ಜಿನಮಂದಿರದಲ್ಲಿ 24 ತೀರ್ಥಂಕರರ ಭವ್ಯ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ವಿಧಿ-ವಿಧಾನಗಳ ನೇತೃತ್ವ, ದಿವ್ಯ ಮಾರ್ಗದರ್ಶನ ನೀಡಲು ಹೊಂಬುಜ ಅತಿಶಯ ಶ್ರೀಕ್ಷೇತ್ರ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ವಿದೇಶ ವಿಹಾರಕ್ಕಾಗಿ ತೆರಳಿದರು. ಪಟ್ಟಾಭಿಷಿಕ್ತರಾಗಿ 11 ವರ್ಷದ ಬಳಿಕ ಶ್ರೀಗಳವರು ಪ್ರಥಮ ಬಾರಿಗೆ ವಿದೇಶದಲ್ಲಿ ಜಿನಧರ್ಮ ಪ್ರಭಾವನೆಯ ಪ್ರವಚನಗಳನ್ನು ನೀಡಲಿರುವರು. ಜೂ. 24 ರಿಂದ 28ರವರೆಗೆ ಟೊರಂಟೋ ಜಿನಮಂದಿರದ ಪಂಚಕಲ್ಯಾಣ ವಿಧಾನಗಳಿವೆ. ಹೊಂಬುಜ…
ವಿವಾಹಿತ ಮಹಿಳೆ ಕಾಣೆ – ಪತ್ತೆಗೆ ಮನವಿ|missing
ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಬಡಾವಣೆ 3ನೇ ಕ್ರಾಸ್, ಕರುಮಾರಿಯಮ್ಮ ದೇವಸ್ಥಾನದ ಹತ್ತಿರದ ವಾಸಿ ರಮೇಶಪ್ಪ ಎಂಬುವವರ ಪತ್ನಿ 30 ವರ್ಷದ ಅನಿತಾ ಎಂಬ ಮಹಿಳೆ ಜೂನ್ 15 ರಂದು ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈಕೆಯ ಚಹರೆ 5.0 ಅಡಿ ಎತ್ತರ, ಎಣ್ಣೆಕೆಂಪು ಮೈಬಣ್ಣ, ಸಾಧಾರಣಾ ಮೈಕಟ್ಟು ಹೊಂದಿದ್ದು, ಬಲಗೈನಲ್ಲಿ ನವಿಲುಗರಿ ಟ್ಯಾಟು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಮೆರೂನ್ ಕಲರ್ ಟಾಪ್ ಮತ್ತು ಗೋಲ್ಡ್ ಕಲರ್ ಪ್ಯಾಂಟ್ ಧರಿಸಿರುತ್ತಾಳೆ. ಈಕೆಯ ಸುಳಿವು…