ಹೊಂಬುಜ : ಅಮೇರಿಕಾದ ಕೆನಡಾದ ಟೊರಂಟೋ ನಗರದ ಜಿನಮಂದಿರದಲ್ಲಿ 24 ತೀರ್ಥಂಕರರ ಭವ್ಯ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ವಿಧಿ-ವಿಧಾನಗಳ ನೇತೃತ್ವ, ದಿವ್ಯ ಮಾರ್ಗದರ್ಶನ ನೀಡಲು ಹೊಂಬುಜ ಅತಿಶಯ ಶ್ರೀಕ್ಷೇತ್ರ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ವಿದೇಶ ವಿಹಾರಕ್ಕಾಗಿ ತೆರಳಿದರು.
ಪಟ್ಟಾಭಿಷಿಕ್ತರಾಗಿ 11 ವರ್ಷದ ಬಳಿಕ ಶ್ರೀಗಳವರು ಪ್ರಥಮ ಬಾರಿಗೆ ವಿದೇಶದಲ್ಲಿ ಜಿನಧರ್ಮ ಪ್ರಭಾವನೆಯ ಪ್ರವಚನಗಳನ್ನು ನೀಡಲಿರುವರು. ಜೂ. 24 ರಿಂದ 28ರವರೆಗೆ ಟೊರಂಟೋ ಜಿನಮಂದಿರದ ಪಂಚಕಲ್ಯಾಣ ವಿಧಾನಗಳಿವೆ.
ಹೊಂಬುಜ ಶ್ರೀಕ್ಷೇತ್ರದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀಕ್ಷೇತ್ರಪಾಲ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀಗಳವರಿಗೆ ಶ್ರೀಮಠದ ಭಕ್ತರಿಂದ, ಪುರೋಹಿತವರ್ಗ, ಸಿಬ್ಬಂದಿಯವರಿಂದ ಭಕ್ತಿಪೂರ್ವಕ ಪ್ರಣಾಮಗಳನ್ನು ಸಮರ್ಪಿಸಲಾಯಿತು.
ಜೈನ ಧರ್ಮದ ಧಾರ್ಮಿಕ ಪೂಜಾ ವಿಧಿ, ಧರ್ಮಸಿದ್ಧಾಂತ, ಆಚಾರ ವಿಚಾರ ಮತ್ತು ಆಹಾರವಿಧಿ-ಪರಿಸರ ರಕ್ಷಣೆಯೊಂದಿಗೆ ಶೈಕ್ಷಣಿಕ ಪ್ರಗತಿಗಾಗಿ ಪ್ರಭಾವನಾ ಪ್ರವಚನ ದಯಪಾಲಿಸಲಿದ್ದಾರೆ ಎಂದು ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ ತಿಳಿಸಿರುವರು.
ರಿಪ್ಪನ್‌ಪೇಟೆ : ತೀರ್ಥಹಳ್ಳಿಯ ಅಶ್ಲೀಲ ವೀಡಿಯೋ ವೈರಲ್ ಪ್ರಕರಣ – ಆರೋಪಿಯ ವಿರುದ್ದ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮನವಿ
ರಿಪ್ಪನ್‌ಪೇಟೆ : 16-06-2023 ರಂದು ವಾಟ್ಸಪ್ ಗ್ರೂಫ್‌ಗಳಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜು ಯುವತಿಯರ ಅಶ್ಲೀಲ ನಗ್ನ ಚಿತ್ರಗಳನ್ನು ಹರಿಬಿಡಲಾಗಿದ್ದು, ವಿಡಿಯೋದಲ್ಲಿ ABVP ವಿದ್ಯಾರ್ಥಿ ಸಂಘಟನೆಯ ತೀರ್ಥಹಳ್ಳಿ ಘಟಕದ ಅಧ್ಯಕ್ಷನೂ ಕೂಡ ಇದ್ದು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆತನ ವಿರುದ್ಧ ಕಾನೂನು ಕಠಿಣ ಕ್ರಮ ಜರುಗಿಸುವಂತೆ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ವತಿಯಿಂದ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಗೆ ಸದಸ್ಯತ್ವ ಆಮಿಷ ತೋರಿಸಿ, ವೀಡಿಯೋ ಮಾಡಿ ದೇಹದ ನಗ್ನ ದೃಶ್ಯಗಳನ್ನು ಅಶ್ಲೀಲವಾಗಿ ಚಿತ್ರಿಸಿ ವೈರಲ್ ಮಾಡುವ ಬೆದರಿಕೆ ಒಡ್ಡಿ ಬ್ಲಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ
ಕಂಡುಬಂದಿದೆ. ಇದೊಂದು ಸಮಾಜ ತಲೆತಗ್ಗಿಸುವ ಪ್ರಕರಣವಾಗಿದ್ದು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹ ಮಾಡಲಾಯಿತು.
ಈ ರೀತಿಯ ಪ್ರಕರಣ ಮುಂದುವರೆದರೆ ಮರ್ಯಾದಸ್ಥ ಕುಟುಂಬದ ಹೆಣ್ಣುಮಕ್ಕಳು ಶಾಲಾ ಕಾಲೇಜುಗಳಿಗೆ ಬರುವುದು ಕಷ್ಟ ಸಾಧ್ಯವಾಗಲಿದ್ದು ಪೋಲೀಸ್ ಇಲಾಖೆ ಪ್ರಭಾವಿಗಳ ಪ್ರಭಾವಕ್ಕೆ ಮಣಿಯದೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೊಳ್ಳುತ್ತೇವೆ ಎಂದು ಮನವಿ ಸಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಮುಖಂಡರಾದ ಈಶ್ವರಪ್ಪ ಗೌಡ ಹೆಚ್ ವಿ , ಆಸೀಫ಼್ ಭಾಷಾಸಾಬ್ ,ಮಧುಸೂಧನ್ ,ಮಹೇಂದ್ರ ಬುಕ್ಕಿವರೆ ,ಗಣಪತಿ ,ರವಿ ,ಶ್ರೀಧರ್ ಹಾಗೂ ಇನ್ನಿತರರಿದ್ದರು.