ರಿಪ್ಪನ್‌ಪೇಟೆ : 16-06-2023 ರಂದು ವಾಟ್ಸಪ್ ಗ್ರೂಫ್‌ಗಳಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜು ಯುವತಿಯರ ಅಶ್ಲೀಲ ನಗ್ನ ಚಿತ್ರಗಳನ್ನು ಹರಿಬಿಡಲಾಗಿದ್ದು, ವಿಡಿಯೋದಲ್ಲಿ ABVP ವಿದ್ಯಾರ್ಥಿ ಸಂಘಟನೆಯ ತೀರ್ಥಹಳ್ಳಿ ಘಟಕದ ಅಧ್ಯಕ್ಷನೂ ಕೂಡ ಇದ್ದು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆತನ ವಿರುದ್ಧ ಕಾನೂನು ಕಠಿಣ ಕ್ರಮ ಜರುಗಿಸುವಂತೆ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ವತಿಯಿಂದ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಗೆ ಸದಸ್ಯತ್ವ ಆಮಿಷ ತೋರಿಸಿ, ವೀಡಿಯೋ ಮಾಡಿ ದೇಹದ ನಗ್ನ ದೃಶ್ಯಗಳನ್ನು ಅಶ್ಲೀಲವಾಗಿ ಚಿತ್ರಿಸಿ ವೈರಲ್ ಮಾಡುವ ಬೆದರಿಕೆ ಒಡ್ಡಿ ಬ್ಲಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ
ಕಂಡುಬಂದಿದೆ. ಇದೊಂದು ಸಮಾಜ ತಲೆತಗ್ಗಿಸುವ ಪ್ರಕರಣವಾಗಿದ್ದು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹ ಮಾಡಲಾಯಿತು.
ಈ ರೀತಿಯ ಪ್ರಕರಣ ಮುಂದುವರೆದರೆ ಮರ್ಯಾದಸ್ಥ ಕುಟುಂಬದ ಹೆಣ್ಣುಮಕ್ಕಳು ಶಾಲಾ ಕಾಲೇಜುಗಳಿಗೆ ಬರುವುದು ಕಷ್ಟ ಸಾಧ್ಯವಾಗಲಿದ್ದು ಪೋಲೀಸ್ ಇಲಾಖೆ ಪ್ರಭಾವಿಗಳ ಪ್ರಭಾವಕ್ಕೆ ಮಣಿಯದೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೊಳ್ಳುತ್ತೇವೆ ಎಂದು ಮನವಿ ಸಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಮುಖಂಡರಾದ ಈಶ್ವರಪ್ಪ ಗೌಡ ಹೆಚ್ ವಿ , ಆಸೀಫ಼್ ಭಾಷಾಸಾಬ್ ,ಮಧುಸೂಧನ್ ,ಮಹೇಂದ್ರ ಬುಕ್ಕಿವರೆ ,ಗಣಪತಿ ,ರವಿ ,ಶ್ರೀಧರ್ ಹಾಗೂ ಇನ್ನಿತರರಿದ್ದರು.


