w
Headlines
Home » ಯುವಕನ ಮಾರಣಾಂತಿಕ ದಾಳಿ : ಎರಡು ಕೈಗಳು ತುಂಡಾಗುವಂತೆ ಹಲ್ಲೆ  , ಸ್ಥಿತಿ ಗಂಭೀರ

ಯುವಕನ ಮಾರಣಾಂತಿಕ ದಾಳಿ : ಎರಡು ಕೈಗಳು ತುಂಡಾಗುವಂತೆ ಹಲ್ಲೆ  , ಸ್ಥಿತಿ ಗಂಭೀರ

GridArt 20260608

ಯುವಕನ ಮಾರಣಾಂತಿಕ ದಾಳಿ : ಎರಡು ಕೈಗಳು ತುಂಡಾಗುವಂತೆ ಹಲ್ಲೆ  , ಸ್ಥಿತಿ ಗಂಭೀರ

A 35-year-old man was seriously injured after being attacked by a group of assailants in Bhadravathi’s Anwar Colony. Police suspect old rivalry as the motive and have launched a search for the accused.

ಭದ್ರಾವತಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ ಅನ್ವರ್ ಕಾಲೋನಿ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಳದಮ್ಮ ಬೀದಿಯ ನಿವಾಸಿ ವಿಶ್ವ (35) ಹಲ್ಲೆಗೊಳಗಾದ ಯುವಕನಾಗಿದ್ದಾನೆ. ವಿಶ್ವ ಸಂಚರಿಸುತ್ತಿದ್ದ ವೇಳೆ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆತನನ್ನು ಸುತ್ತುವರೆದು ಹಳೇ ವೈಷಮ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ದಾಳಿಯ ತೀವ್ರತೆಗೆ ವಿಶ್ವನ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಕೈಗಳು ತುಂಡಾಗುವ ಮಟ್ಟಿಗೆ ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶ್ವನನ್ನು ಸ್ಥಳೀಯರು ತಕ್ಷಣವೇ ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಹಳೇ ಹಗೆತನವೇ ಕೃತ್ಯಕ್ಕೆ ಕಾರಣವಾಗಿರಬಹುದೆಂದು ಶಂಕಿಸಿದ್ದಾರೆ. ದಾಳಿ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.