ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿ ಮಹಿಳೆಯೊಬ್ಬಳ ಟ್ರ್ಯಾಪ್ನಲ್ಲಿ ಸಿಲುಕಿದ ಯುವಕನೊಬ್ಬ ಇದೀಗ ತನಗಾದ ಮೋಸದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದಷ್ಟೆ ಅಲ್ಲದೆ ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಸ್ಠೇಷನ್ನಲ್ಲಿ ದೂರು ನೀಡಿದ್ಧಾರೆ. ಆತ ದಾಖಲಿಸಿದ ದೂರು ದಾಖಲಾದ ಎಫ್ಐಆರ್ ಪ್ರಕಾರ, ನಡೆದಿದ್ದಿಷ್ಟು!
2015 ರಲ್ಲಿ ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ ಕಾಳಿಂಗೇಶ್ವರ ದೇವಾಲಯದಲ್ಲಿ ಯುವಕನೊಬ್ಬ ಮದುವೆಯಾಗಿದ್ದರು. ಅನಾಥ ಹುಡುಗಿಯನ್ನು ಯಾವುದೇ ಡಿಮ್ಯಾಂಡ್ ಇಲ್ಲದೇ ಮದುವೆಯಾದ ಯುವಕ, ಮದುವೆ ಖರ್ಚನ್ನ ಕೂಡ ಖುದ್ಧಾಗಿ ವ್ಯಯಿಸಿದ್ರು. ಆದರೆ ಅನಾಥಳು ಎಂದು ಹೇಳಿ ಮದುವೆಯಾದ ಯುವತಿಯ ವರ್ತನೆ ಮದುವೆಯಾದ ಮೇಲೆ ಬದಲಾಗಿದೆ. ಅತ್ತೆಯೊಂದಿಗೆ ಜಗಳ ತೆಗೆಯುತ್ತಿದ್ದ ಆಕೆ, ಅತ್ತೆ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಳಂತೆ.
ಈ ಮಧ್ಯೆ ಪತ್ನಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದು ತನ್ನ ಅಕ್ಕನ ಮಕ್ಕಳು ಎಂದು ಗಂಡನಿಗೆ ಪರಿಚಯ ಮಾಡಿದ್ಧಾಳೆ. ಆನಂತರ ಕೆಲದಿನಗಳ ನಂತರ ಪತಿಗೆ ಒಂದೊಂದೆ ಅನುಮಾನಗಳು ಆರಂಭವಾಗಿದೆ. ಅದರ ನಡುವೆ ಮಹಿಳೆ ತನಗೆ ಅಪೆಂಡಿಕ್ಸ್ ಆಪರೇಷನ್ ಆಗುವಾಗ , ಸಂತಾನ ಹರಣ ಚಿಕಿತ್ಸೆ ಆಗಿದೆ ತನಗೆ ಎಂದು ಹೇಳಿದ್ದಾಳೆ. ಇದನ್ನ ಕೇಳಿದ ಯುವಕ , ತನಗೆ ಗೊತ್ತಿರುವ ಡಾಕ್ಟರ್ನ್ನ ಸಂಪರ್ಕಿಸಿದ್ಧಾನೆ.ಅಲ್ಲಿ ಆಕೆಯನ್ನು ಪರೀಕ್ಷೆಗೆ ಒಳಪಡಿಸಿ, ಮಕ್ಕಳಾಗುವಂತೆ ಚಿಕಿತ್ಸೆ ಕೊಡಿಸಿ ಎಂದಿದ್ಧಾನೆ. ಆದರೆ ವೈದ್ಯರು ಇರುವ ವಿಚಾರ ಹೇಳಿದ್ದು, ಆಕೆಗೆ ಅದಾಗಲೇ ಮಕ್ಕಳಾಗಿದ್ದು, ಆಕೆಯೇ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಬಗ್ಗೆ ಯುವಕ , ಮಹಿಳೆಯನ್ನು ಪ್ರಶ್ನಿಸಿದ್ಧಾನೆ. ಅಷ್ಟೆ ಅಲ್ಲದೆ, ಆಕೆಯ ಪೂರ್ವ ಪರ ವಿಚಾರಸಿದ್ದಾನೆ. ಆಗ ಅಕ್ಕನ ಮಕ್ಕಳು ಎಂದು ಕರೆದುಕೊಂಡು ಬಂದವರು, ಈಕೆಯದ್ದೆ ಮಕ್ಕಳು ಎಂಬುದು ಗೊತ್ತಾಗಿದೆ. ತನ್ನ ಬಂಡವಾಳ ಆಚೆ ಬರುತ್ತೆ ಎಂಬ ಭಯದಲ್ಲಿ ಮಹಿಳೆ ತಾನು ಕರೆದುಕೊಂಡು ಬಂದ ತನ್ನ ಮಗಳ ಜೊತೆ ಯುವಕನಿಗೆ ಸಂಬಂಧ ಕಲ್ಪಿಸಿ ಮಾತನಾಡಿ, ಬೆದರಿಕೆ ಹಾಕಿದ್ಧಾಳೆ.
ಅಂತಿಮವಾಗಿ ಬೇಸತ್ತ ಯುವಕ ಕೋರ್ಟ್ನಲ್ಲಿ ಪಿಸಿಆರ್ ಸಲ್ಲಿಸಿ ತನಗೆ ನ್ಯಾಯಕೊಡಿಸಿ ಅಂಗಲಾಚಿ, ಎಂದು ತನಗೆ ಲಭ್ಯವಿರುವ ಸಾಕ್ಷ್ಯಗಳನ್ನ ಒದಗಿಸಿದ್ದಾನೆ. ಕೋರ್ಟ್ ಸೂಚನೆಯಂತೆ ಪೇಪರ್ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ.