
ಜಿಲ್ಲಾ ಸುದ್ದಿ:

ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ – ಡಾ. ಸೊನಲೆ ಶ್ರೀನಿವಾಸ್
ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ವಾರ್ಷಿಕೋತ್ಸವ ಉತ್ತಮ ವೇದಿಕೆ – ಡಾ. ಸೊನಲೆ ಶ್ರೀನಿವಾಸ್ ರಿಪ್ಪನ್‌ಪೇಟೆ : ಮಕ್ಕಳಲ್ಲಿ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕ್ರೀಡಾ ಚಟುವಟಿಕೆಯ ಮೂಲಕ ಪ್ರತಿಭೆಯನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಒಂದು ಉತ್ತಮ ವೇದಿಕೆಯಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಪ್ರಗತಿಪರ ಕೃಷಿಕ ಡಾ.ಸೊನಲೆ ಶ್ರೀನಿವಾಸ ಹೇಳಿದರು. ರಿಪ್ಪನ್‌ಪೇಟೆಯ ಗುಡ್‌ಶಫರ್ಡ್ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಮತ್ತು…

ಬೈಕ್ ಸಮೇತ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು – ಆಸ್ಪತ್ರೆಗೆ ಶಾಸಕರ ಆಪ್ತರ ಭೇಟಿ
ಬೈಕ್ ಸಮೇತ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು – ಆಸ್ಪತ್ರೆಗೆ ಶಾಸಕರ ಆಪ್ತರ ಭೇಟಿ ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಪಂ ವ್ಯಾಪ್ತಿಯ ಅಡ್ಡೆರಿ ಗ್ರಾಮದ ಬಳಿಯಲ್ಲಿ ಮಳೆಯಿಂದ ಕೊರೆದಿರುವ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆಯ ಹಿನ್ನಲೆಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಶಾಸಕ ಬೇಳೂರು ಗೋಪಾಲಕೃಷ್ಣ ರವರು ವಿಧಾನಸಭೆ ಅಧಿವೇಶನದಲ್ಲಿರುವ ಹಿನ್ನಲೆಯಲ್ಲಿ ಅವರ ಸೂಚನೆ ಮೇರೆಗೆ ಶಾಸಕರ ಆಪ್ತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ…

NSUI ವತಿಯಿಂದ ಅಮಿತ್‌ಶಾರನ್ನು ಸಂಪುಟದಿಂದ ವಜಾ ಗೊಳಿಸಲು ಆಗ್ರಹಿಸಿ ಪ್ರತಿಭಟನೆ
NSUI ವತಿಯಿಂದ ಅಮಿತ್‌ಶಾರನ್ನು ಸಂಪುಟದಿಂದ ವಜಾ ಗೊಳಿಸಲು ಆಗ್ರಹಿಸಿ ಪ್ರತಿಭಟನೆ ಶಿವಮೊಗ್ಗ: ಬಿ.ಆರ್.ಅಂಬೇಡ್ಕರ್ ಜಗತ್ತು ಕಂಡ ಅಪ್ರತಿಮ ಹೋರಾಟಗಾರರು, ಅವರು ಸಂವಿಧಾನ ರಚಿಸದೇ ಇದ್ದಿದ್ದರೆ ಇಂದು ನಾವೆಲ್ಲಾ ದಾಸ್ಯದ ಸಂಕೋಲೆಯಲ್ಲೇ ಇರಬೇಕಿತ್ತು. ಇದನ್ನು ಅರಿತುಕೊಳ್ಳದ ಅಮಿತ್ ಶಾ ಈ ದೇಶದ ಕೇಂದ್ರ ಗೃಹ ಸಚಿವರಾಗಿರುವುದು ನಮ್ಮೆಲ್ಲರ ದುರ್ದೈವ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನಕುಮಾರ್ ಹೇಳಿದರು. ಒಬ್ಬ ಜನಪ್ರತಿನಿಧಿಯಾಗಿ ಅಂಬೇಡ್ಕರ್‌ರವರಂತಹವರ ಮಹಾನ್ ನಾಯಕರ ಹೋರಾಟದ ಫಲವಾಗಿ ಸೃಷ್ಟಿಯಾಗಿರುವ ಸಂಸತ್ತಿನಲ್ಲೇ ‘ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್,…

ಹೆಚ್ಚಿನ ಬಡ್ಡಿ ವಸೂಲಿಗೆ ಇಳಿದರೆ ನಿರ್ದಾಕ್ಷಿಣ್ಯ ಕ್ರಮ – ಸಿಪಿಐ ಗುರಣ್ಣ ಹೆಬ್ಬಾಳ್
ಹೆಚ್ಚಿನ ಬಡ್ಡಿ ವಸೂಲಿಗೆ ಇಳಿದರೆ ನಿರ್ದಾಕ್ಷಿಣ್ಯ ಕ್ರಮ – ಸಿಪಿಐ ಗುರಣ್ಣ ಹೆಬ್ಬಾಳ್ ರಿಪ್ಪನ್‌ಪೇಟೆ : ಖಾಸಗಿ ಅನಧಿಕೃತ ಹಣಕಾಸು ಲೇವಾದೇವಿದಾರರು ಮತ್ತು ಪಾನ್ ಬ್ರೋಕರ್ ಗಳು ಸಾಲ ನೀಡುವುದು ಮತ್ತು ಆಭರಣದ ಮೇಲೆ ಗಿರವಿ ಇಟ್ಟುಕೊಂಡು ಹಣ ನೀಡುವ ಮೂಲಕ ಹೆಚ್ಚಿನ ಬಡ್ಡಿ ವಸೂಲಾತಿ ಮಾಡುವ ಬಗ್ಗೆ ಗ್ರಾಹಕರಿಂದ ದೂರು ಬಂದರೆ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ಖಡಕ್ ವಾರ್ನಿಂಗ್ ನೀಡಿದರು….

ಲಾಡ್ಜ್ ಮೇಲೆ ಪೊಲೀಸರ ದಾಳಿ – ಹನ್ನೊಂದು ಮಂದಿ ವಿರುದ್ದ ಕೇಸ್
ಲಾಡ್ಜ್ ಮೇಲೆ ಪೊಲೀಸರ ದಾಳಿ – ಹನ್ನೊಂದು ಮಂದಿ ವಿರುದ್ದ ಕೇಸ್ ಲಾಡ್ಜ್‌ವೊಂದ ಮೇಲೆ ಪೊಲೀಸರು ದಾಳಿ ನಡೆಸಿ ಅಂದರ್ ಬಾಹರ್ ಆಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಲಾಡ್ಜ್‌ನ ಕೊಠಡಿ ಸಂಖ್ಯೆ 303ರಲ್ಲಿ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹನ್ನೊಂದು ಮಂದಿಯನ್ನು ವಶಕ್ಕೆ ಪಡೆದು ಕೇಸ್ ದಾಖಲೊಸಿದ್ದಾರೆ. ದೊಡ್ಡಪೇಟೆ ಠಾಣೆ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿಗಳ ವಿರುದ್ಧ…

ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆಯ ಗಾನಕೋಗಿಲೆ ಪ್ರಣತಿ ಅಣ್ಣಪ್ಪ
ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆಯ ಗಾನಕೋಗಿಲೆ ಪ್ರಣತಿ ಅಣ್ಣಪ್ಪ ರಿಪ್ಪನ್ ಪೇಟೆ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗಾನಕೋಗಿಲೆ ಪ್ರಣತಿ ಅಣ್ಣಪ್ಪ ಇಂದು ರಾಮನಗರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಭಾಗಿಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವ ಗೀತೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಣತಿ ಅಣ್ಣಪ್ಪ ಭಾವಗೀತೆಯಲ್ಲಿ ವಿಭಾಗಿಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುವುದರ ಮೂಲಕ…

ಹಲ್ಲೆಗೊಳಗಾಗಿದ್ದ ಗ್ರಾಪಂ ಸದಸ್ಯನ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ
ಹಲ್ಲೆಗೊಳಗಾಗಿದ್ದ ಗ್ರಾಪಂ ಸದಸ್ಯನ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ , ಸಾಂತ್ವಾನ ಹೊಸನಗರ: ಇತ್ತೀಚೆಗೆ ಹಳೇ ರಾಜಕೀಯ ದ್ವೇಷದ ಹಿನ್ನಲೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ ವಿಶ್ವನಾಥ್ ಮನೆಗೆ ಮಂಗಳವಾರ ಮಾಜಿ ಶಿಕ್ಷಣ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ವಿಶ್ವನಾಥ್ ಅವರಿಗೆ ಸಾಂತ್ವನ ಹೇಳುವ ಮೂಲಕ ನೈತಿಕ ಸ್ಥೈರ್ಯ ತುಂಬಿದರು. ಅಲ್ಲದೆ, ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉನ್ನತ…

RIPPONPETE | ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ
RIPPONPETE | ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ರಿಪ್ಪನ್ ಪೇಟೆ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್ ನ ವಿದ್ಯಾರ್ಥಿಗಳು ಶಿವಮೊಗ್ಗ ದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಭಾವ ಗೀತೆ ಹಾಗೂ ಜನಪದ ಗೀತೆಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಣತಿ ಅಣ್ಣಪ್ಪ ಭಾವಗೀತೆಯಲ್ಲಿ ಪ್ರಥಮ ಸ್ಥಾನ. ಹಾಗೂ ಪ್ರಥಮ…

ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳ ನಿಷೇಧ
ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳ ನಿಷೇಧ ಶಿವಮೊಗ್ಗ : ಡಿಸೆಂಬರ್-16 : ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತದ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದು,್ದ ಜನವರಿ 01 ರಿಂದ ಮಾರ್ಚ್ 15ರ ವರೆಗೆ 3 ತಿಂಗಳುಗಳ ಕಾಲ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಭಂದಿಸಲಾಗಿದೆ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ತೊಂದರೆಯಾಗಬಾರದೆAಬ ಕಾರಣದಿಂದ ಪ್ರವೇಶ ನಿರ್ಭಂದಿಸಲಾಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು…

ನಿಟ್ಟೂರು ಗ್ರಾಪಂ ಸದಸ್ಯನ ಮೇಲೆ ಹಲ್ಲೆ – ಆರೋಪಿಯನ್ನು ಬಂಧಿಸಿ ಗೂಂಡಾ ಕಾಯ್ದೆ ಜಾರಿಗೆ ಸಾರ್ವಜನಿಕರ ಮನವಿ
ನಿಟ್ಟೂರು ಗ್ರಾಪಂ ಸದಸ್ಯನ ಮೇಲೆ ಹಲ್ಲೆ – ಆರೋಪಿಯನ್ನು ಬಂಧಿಸಿ ಗೂಂಡಾ ಕಾಯ್ದೆ ಜಾರಿಗೆ ಸಾರ್ವಜನಿಕರ ಮನವಿ ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ನಿಟ್ಟೂರು ಗ್ರಾಮದ ಸಾರ್ವಜನಿಕರು ನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಿಟ್ಟೂರು ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ನಾಗೋಡಿ ವಿಶ್ವನಾಥ್ ಎಂಬುವವರ ಮೇಲೆ ಬಿಜೆಪಿ ಕಾರ್ಯಕರ್ತ…