w
Headlines

Shivamogga | ಮೂವರು ಯುವಕರನ್ನು ಅಡ್ಡಗಟ್ಟಿ ದರೋಡೆಗೈದ ಖದೀಮರು

ಮೂವರು ಯುವಕರನ್ನು ಅಡ್ಡಗಟ್ಟಿ ದರೋಡೆಗೈದ ಖದೀಮರು ಶಿವಮೊಗ್ಗ ನಗರದ ಶೇಷಾದ್ರಿಪುರಂ  ರೈಲ್ವೆ ಓವರ್ ಬ್ರಿಡ್ಜ್ ಕೆಳಗೆ ಬೈಕ್ ನಲ್ಲಿ ಬಂದ ಮೂವರು ಯುವಕರಿಂದ ಮೊಬೈಲ್,ನಗದು ಹಣ ಹಾಗೂ ದಾಖಲಾತಿಗಳನ್ನ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಜಯನಗರ ರಾಮಮಂದಿರ ನಿವಾಸಿ ವಿನಿತ್ ರಾಮ್ಜಿಯಾ ಎಂಬುವವರು ಫೆ.28 ರಂದು ರಾತ್ರಿ ರೈಲಿಗೆ ಹೋಗಲು  ಸ್ನೇಹಿತರನ್ನ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಿಡಲು ವಿನೀತ್ ಬಂದಿದ್ದರು. ರೈಲು ಬರಲು ಸಮಯವಿದ್ದಿದ್ದರಿಂದ ಗೂಡ್ ಶೆಡ್ ಬಳಿ ವಿನೀತ್ ಸ್ನೇಹಿತರಾದ ಮಾರುತಿ ಮತ್ತು‌ ರಮೆಶ್ ಎಂಬುವರ…

Read Full News

Thirthahalli | ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ವಶಕ್ಕೆ ಪಡೆದ ತೀರ್ಥಹಳ್ಳಿ ಪೊಲೀಸರು

ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ವಶಕ್ಕೆ ಪಡೆದ ತೀರ್ಥಹಳ್ಳಿ ಪೊಲೀಸರು ತೀರ್ಥಹಳ್ಳಿ :  ನಕ್ಸಲ್ ಹೋರಾಟದ ಕೇಸ್ ಗಳ ತನಿಖೆಯನ್ನು ಚುರುಕುಗೊಳಿಸಿರುವ ಜಿಲ್ಲೆಯ ತೀರ್ಥಹಳ್ಳಿ ಪೊಲೀಸರು ಇದೀಗ ಮತ್ತೋರ್ವ ನಕ್ಸಲ್ ಹೋರಾಟಗಾರ್ತಿಯನ್ನು ವಶಕ್ಕೆ ಪಡೆದುಕೊಂಡಿರುವುದು ವರದಿಯಾಗಿದೆ. ವಶಕ್ಕೆ ಪಡೆದಿರುವ ನಕ್ಸಲ್ ಹೋರಾಟಗಾರ್ತಿ ಶೃಂಗೇರಿಯ ಶ್ರೀಮತಿಯನ್ನು ಪೊಲೀಸರು ಮಾ.04 ರಂದು ಬೆಳಿಗ್ಗೆ 10.30ಕ್ಕೆ ತೀರ್ಥಹಳ್ಳಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ʼಬಾಡಿ ವಾರೆಂಟ್ʼ ಮೇಲೆ ತೀರ್ಥಹಳ್ಳಿಗೆ ಕರೆತಂದಿರುವ…

Read Full News

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ  ವೇಶ್ಯವಾಟಿಕೆ ನಡೆಸುತಿದ್ದ ಮನೆಯೊಂದರ ಮೇಲೆ ಶಿವಮೊಗ್ಗದ ವಿನೋಬನಗರ ಪೊಲೀಸರಿಂದ ‌ದಾಳಿ ನಡೆದಿದೆ. ಬಾಡಿಗೆಗೆ ಮನೆ ಪಡೆದು ಮನೆಯಲ್ಲಿ ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ದಾಳಿ ನಡೆದಿದೆ. ಶಿವಮೊಗ್ಗದ ಆಲ್ಕೊಳ ವೃತ್ತ ಸಮೀಪದ ಮನೆಯಲ್ಲಿ ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆದಿದೆ. ವೇಶ್ಯವಾಟಿಕೆ ನಡೆಸುತ್ತಿದ್ದ ಮಹಿಳೆ ಹಾಗು ಮನೆಯಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ವೇಶ್ಯವಾಟಿಕೆಯಲ್ಲಿ ತೊಡಗಿದ್ದ ಯುವತಿಯನ್ನು ರಕ್ಷಿಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full News

ಕೋಡೂರಿನ ಬೇಕರಿಯಲ್ಲಿ ಮಾರಾಮಾರಿ – ಬೇಕರಿ ಮಾಲೀಕಳ ಮೇಲೆ ಹಲ್ಲೆ | ಎರಡು ಪ್ರತ್ಯೇಕ ಪ್ರಕರಣ ದಾಖಲು | ಅಷ್ಟಕ್ಕೂ ದೂರಿನಲ್ಲೇನಿದೆ..?? ಈ ಸುದ್ದಿ ನೋಡಿ | Crime News

ಕೋಡೂರಿನ ಬೇಕರಿಯಲ್ಲಿ ಮಾರಾಮಾರಿ – ಬೇಕರಿ ಮಾಲೀಕಳ ಮೇಲೆ ಹಲ್ಲೆ | ಎರಡು ಪ್ರತ್ಯೇಕ ಪ್ರಕರಣ ದಾಖಲು | ಅಷ್ಟಕ್ಕೂ ದೂರಿನಲ್ಲೇನಿದೆ..?? ಈ ಸುದ್ದಿ ನೋಡಿ ರಿಪ್ಪನ್‌ಪೇಟೆ : ಸಮೀಪದ ಕೋಡೂರಿನ ಬೇಕರಿಯೊಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಎರಡು ಪ್ರತ್ಯೇಕ ಪ್ರಕರಣಗಳು ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಗಿದೆ. ಘಟನೆ 1 : ಕೋಡೂರಿನ ಲಕ್ಷ್ಮಿ ಮಲ್ನಾಡ್ ಬೇಕರಿಯಲ್ಲಿ ಶುಕ್ರವಾರ ಸಂಜೆ ಗುಂಪೊಂದು ಏಕಾಏಕಿ ಬೇಕರಿಗೆ ನುಗ್ಗಿ ಬೇಕರಿ ಮಾಲೀಕನ ಪತ್ನಿ , ತಾಯಿ ಹಾಗೂ ಬೇಕರಿಯ…

Read Full News

Ripponpete | ವಿಷ ಸೇವಿಸಿ ಮೂಗೂಡ್ತಿಯ ಯುವಕ ಆತ್ಮಹತ್ಯೆ

ವಿಷ ಸೇವಿಸಿ ಯುವಕ ಆತ್ಮಹತ್ಯೆ ರಿಪ್ಪನ್‌ಪೇಟೆ : ಪಟ್ಟಣದ ಸಮೀಪದ ಮೂಗೂಡ್ತಿ ಗ್ರಾಮದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಡೆದಿದೆ. ಮೂಗೂಡ್ತಿ ಗ್ರಾಮದ ನಿವಾಸಿ ಕೀರ್ತಿ (22) ಮೃತಪಟ್ಟ ಯುವಕನಾಗಿದ್ದು ಈತನು ಬೆಂಗಳೂರಿನಲ್ಲಿ ಕ್ಯಾಟರಿಂಗ್ ವೃತ್ತ್ತಿ ಮಾಡಿಕೊಂಡಿದ್ದನು. ಗುರುವಾರ ಸಂಜೆ ಬೆಂಗಳೂರಿನಿಂದ ಸ್ವಗ್ರಾಮ ಮೂಗೂಡ್ತಿಗೆ ಬಂದು ತನ್ನ ಅಣ್ಣನಿಗೆ ಮೊಬೈಲ್ ಮೂಲಕ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತಿದ್ದೇನೆ ಎಂದು ಸ್ವತೋಟಕ್ಕೆ ತೆರಳಿ ವಿಷ ಸೇವಿಸಿದ್ದಾನೆ.ಗಾಬರಿಗೊಂಡ ಅಣ್ಣ ತಮ್ಮನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾನೆ. ಕೆಲಸಮಯದ ನಂತರ ಆತನಿಗೆ…

Read Full News

ಉದ್ಯೋಗವಿಲ್ಲದೇ ಮನನೊಂದ ವ್ಯಕ್ತಿ ಮನೆಯ ಟೆರೇಸ್ ಮೇಲೆ ನೇಣುಬಿಗಿದುಕೊಂಡು ಆತ್ಮಹತ್ಯೆ |Crime News

ಉದ್ಯೋಗವಿಲ್ಲದೇ ಮನನೊಂದ ವ್ಯಕ್ತಿ ಮನೆಯ ಟೆರೇಸ್ ಮೇಲೆ ನೇಣುಬಿಗಿದುಕೊಂಡು ಆತ್ಮಹತ್ಯೆ | Crime News SaGara | ಮನೆಯ ಟೆರೇಸ್‌ ಮೇಲಿನ ಸಿಂಟೆಕ್ಸ್ ಸ್ಟ್ಯಾಂಡಿಗೆ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದಲ್ಲಿ ನಡೆದಿದೆ. ಮಧುಸೂದನ್(55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಸಾಗರದ ಹೆಸರಾಂತ ಬೇಕರಿ ಒಂದರ ಉದ್ಯೋಗಿಯಾಗಿದ್ದ ಮಧುಸೂದನ್ ಇತ್ತಿಚೆಗೆ ಕೆಲಸ ಬಿಟ್ಟಿದ್ದ ಎನ್ನಲಾಗಿದೆ. ಬೇಕರಿಯಲ್ಲಿ ಕೆಲಸ ಬಿಟ್ಟ ಬಳಿಕ ಬೇರೆಡೆ ಸಿಕ್ಕಿರಲಿಲ್ಲ. ಉದ್ಯೋಗಕ್ಕಾಗಿ ಸಿರ್ಸಿಗೆ ಹೋಗಬೇಕಾಗಿತ್ತು.ಉದ್ಯೋಗ ಅರಸಿಕೊಂಡು ಸಿರ್ಸಿಗೆ ಹೋಗಲಾಗದೆ,…

Read Full News

ಒಡಹುಟ್ಟಿದ ಅಣ್ಣನನ್ನೇ ಸ್ಕೆಚ್ ಹಾಕಿ ಬರ್ಬರವಾಗಿ ಹತ್ಯೆಗೈದ ತಮ್ಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!! ಈ ಸುದ್ದಿ ನೋಡಿ | Crime News

ಒಡಹುಟ್ಟಿದ ಅಣ್ಣನನ್ನೇ ಸ್ಕೆಚ್ ಹಾಕಿ ಬರ್ಬರವಾಗಿ ಹತ್ಯೆಗೈದ ತಮ್ಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!! ಈ ಸುದ್ದಿ ನೋಡಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ಗುರುವಾರ ಸಂಜೆ ಓರ್ವ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಹೆದ್ದಾರಿ ಪಕ್ಕದಲ್ಲಿ ಕೊಲೆ ನೋಡಿದ ಜನರು ಗಾಬರಿಯಾಗಿದ್ದರು.   ಕೊಲೆಯಾದ ವ್ಯಕ್ತಿ ಸೊರಬ ತಾಲೂಕಿನ ಉಡಿನೀರು ಗ್ರಾಮದ ರಫಿಕ್ (39) ಎನ್ನುವುದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ. ನಡೆದಿದ್ದೇನು..???? ಮೃತ ರಫ಼ಿಕ್ ನನ್ನು ಅವನ…

Read Full News

Ripponpete | ಹೊಸನಗರ ರಸ್ತೆಯ ಗ್ಯಾಸ್ ಸಿಲಿಂಡರ್ ಗೋದಾಮು ಬಳಿ ಅಗ್ನಿ ಅವಘಡ – ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Ripponpete | ಹೊಸನಗರ ರಸ್ತೆಯ ಗ್ಯಾಸ್ ಸಿಲಿಂಡರ್ ಗೋದಾಮು ಬಳಿ ಅಗ್ನಿ ಅವಘಡ – ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ ರಿಪ್ಪನ್‌ಪೇಟೆ : ಪಟ್ಟಣದ ಹೊಸನಗರ ರಸ್ತೆಯ ಮಾಡ್ರನ್ ರೈಸ್ ಮಿಲ್ ಸಮೀಪದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಉರಿದಿದ್ದು ಸೂಕ್ತ ಸಮಯಕ್ಕೆ ಸ್ಥಳೀಯ ಯುವಕರು ಬೆಂಕಿ ನಂದಿಸಿ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸಿದ್ದಾರೆ. ಇಂದು ಮಧ್ಯಾಹ್ನ ಗ್ಯಾಸ್ ಸಿಲಿಂಡರ್ ಗೋದಾಮು ಸಮೀಪದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮರಕ್ಕೆ ಆಕಸ್ಮಿಕವಾಗಿ…

Read Full News

Ripponpete | ಪಾದಚಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ – ವ್ಯಕ್ತಿ ಸಾವು

Ripponpete | ಪಾದಚಾರಿಗೆ ಲಾರಿ ಡಿಕ್ಕಿ – ಗವಟೂರಿನ ಸುರೇಶ್ ಚಿಕಿತ್ಸೆ ಫಲಿಸದೇ ಸಾವು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗವಟೂರು ಗ್ರಾಮದಲ್ಲಿ ಪಾದಚಾರಿಗೆ ಲಾರಿ ಡಿಕ್ಕಿಯಾಗಿ ಚಿಕಿತ್ಸೆ ಫಲಿಸದೇ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಗವಟೂರು ಬಳಿಯ ಹಳೂರು ನಿವಾಸಿ ಸುರೇಶ್ ಮೃತ ದುರ್ಧೈವಿಯಾಗಿದ್ದಾರೆ. 23/02/2024 ರಂದು ಸಂಜೆ ಗವಟೂರು ಗ್ರಾಮದ ಸುರೇಶ ಬಿನ್ ಹಾಲಪ್ಪ, 60 ವರ್ಷ ಮನೆ ಬಳಿಯ ದಿನಸಿ ಅಂಗಡಿಗೆ ಹೋಗಿ ವಾಪಾಸ್‌ ಮನೆ ಕಡೆ ಮುಖ್ಯ ಟಾರ್ ರಸ್ತೆಯ ಬದಿಯಲ್ಲಿ…

Read Full News

Hosanagara | ಮಹಿಳೆಗೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರಿಂದ ಚೂರಿ ಇರಿತ

Hosanagara | ವಿವಾಹಿತ ಮಹಿಳೆಗೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರಿಂದ ಚೂರಿ ಇರಿತ ಹೊಸನಗರ : ಮಹಿಳೆಯೊಬ್ಬರಿಗೆ ಅಪರಿಚಿತ ಯುವಕರು ಚಾಕು ಇರಿದು ಪರಾರಿಯಾಗಿರುವ ಘಟನೆ ನಡೆದಿದೆ. ಪಟ್ಟಣದ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುವ ಮಹಿಳೆ ಗಣಪತಿ ದೇವಸ್ಥಾನ ರಸ್ತೆಯ ದೇವಸ್ಥಾನದ ಎದುರು ಮನೆಯಲ್ಲಿ ಊಟ ಮುಗಿಸಿ ಪಾರ್ಲರ್ಗೆ ಮರಳುತ್ತಿರುವಾಗ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಚಾಕುವಿನಿಂದ ಬಲಗೈ ಬಲ ತೋಳಿನ ಮೇಲ್ಭಾಗ ಇರಿದು ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ….

Read Full News

ಗೃಹಿಣಿಗೆ 16.42 ಲಕ್ಷ ವಂಚನೆ – ದೂರು ದಾಖಲು

ಗೃಹಿಣಿಗೆ 16.42 ಲಕ್ಷ ವಂಚನೆ – ದೂರು ದಾಖಲು  ಷೇರು ವ್ಯವಹಾರದಲ್ಲಿ ಅತ್ಯಧಿಕ ಲಾಭವಿದೆ ಎಂದು ನಂಬಿಸಿ ಶಿವಮೊಗ್ಗದ ಗೃಹಿಣಿಯೊಬ್ಬರಿಗೆ 16.42 ಲಕ್ಷ ರೂ. ವಂಚಿಸಿರುವ ಘಟನೆ ವರದಿಯಾಗಿದೆ. ಟ್ರೇಡಿಂಗ್ ಕುರಿತು ಕೋಚಿಂಗ್ ನೀಡಲಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್ ಒಂದರಲ್ಲಿ ಪ್ರಕಟಿಸಲಾಗಿತ್ತು. ಅಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಶಿವಮೊಗ್ಗದ ಗೃಹಿಣಿ (ಹೆಸರು ಗೌಪ್ಯ) ಒಂದು ವಾಟ್ಸಾಪ್ ಗ್ರೂಪ್ ಸೇರಿದ್ದರು ಎನ್ನಲಾಗಿದೆ. ಅಲ್ಲಿ ಟ್ರೇಡಿಂಗ್ ಎಂದರೇನು, ಲಾಭ ಪಡೆಯುವುದು ಹೇಗೆ ಎಂಬ ಮಾಹಿತಿ ತಿಳಿಸಲಾಯಿತು. ನಿತ್ಯ ಒಂದೊಂದು ವಿಷಯ…

Read Full News

ದರೋಡೆಗೆ ಹೊಂಚು ಹಾಕಿದ್ದ ಇಬ್ಬರು ಆರೋಪಿಗಳ ಬಂಧನ | Crime News

ದರೋಡೆಗೆ ಹೊಂಚು ಹಾಕಿದ್ದ ಇಬ್ಬರು ಆರೋಪಿಗಳ ಬಂಧನ  ರಾತ್ರಿ ವೇಳೆ ಮಚ್ಚು, ಚಾಕು, ಖಾರದ ಪುಡಿ ಹಿಡಿದುಕೊಂಡು ಡಕಾಯಿತಿಗೆ ಸಂಚು ರೂಪಿಸಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು ಮೂವರು ಪರಾರಿಯಾಗಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪುರದಾಳು ರಸ್ತೆಯಲ್ಲಿ ಐವರು ಯುವಕರು ದಾರಿಯಲ್ಲಿ ಹೋಗುವವರನ್ನು ತಡೆದು, ಡಕಾಯಿತಿಗೆ ಹೊಂಚು ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ರಾತ್ರಿ 11.30ರ ಹೊತ್ತಿಗೆ ಪುರದಾಳು ರಸ್ತೆಯಲ್ಲಿ ಗ್ಯಾಂಗ್ ಇದ್ದ…

Read Full News

Anandapura | ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು,ಇನ್ನೋರ್ವನ ಕಾಲು ಜಖಂ

Anandapura | ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು,ಇನ್ನೋರ್ವನ ಕಾಲು ಜಖಂ ಬೈಕ್ ಮತ್ತು ಕಾರುಗಳ ನಡುವೆ ಭೀಕರ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿ ಮತ್ತೋರ್ವನ ಕಾಲು ಮುರಿತವಾಗಿರುವ ಘಟನೆ ಆನಂದಪುರ ಸಮೀಪದ ಗೌತಮಪುರ ಸಮೀಪದಲ್ಲಿ ನಡೆದಿದೆ. ಬೈಕ್ ಸವಾರ ಭೀಮೇಶ್ (42) ಸಾವನ್ನಪ್ಪಿದ್ದಾರೆ ,ಸಹ ಸವಾರ ಪ್ರತಾಪ್ ಕಾಲು ಮುರಿತವಾಗಿದೆ. ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಹಬ್ಬವನ್ನು ನೋಡಿಕೊಂಡು  ಬರುವ ಸಂದರ್ಭದಲ್ಲಿ…

Read Full News

ಪ್ರೀತ್ಸೆ ಪ್ರೀತ್ಸೆ ಅಂತ ಕಾಟ ಕೊಟ್ಟ ಯುವಕ; ಅಪ್ರಾಪ್ತೆ ನೇಣಿಗೆ ಶರಣು!| Crime News

ಪ್ರೀತ್ಸೆ ಪ್ರೀತ್ಸೆ ಅಂತ ಕಾಟ ಕೊಟ್ಟ ಯುವಕ; ಅಪ್ರಾಪ್ತೆ ನೇಣಿಗೆ ಶರಣು! ತನ್ನನ್ನು ಪ್ರೀತಿಸು ಎಂದು ಬೆನ್ನು ಬಿದ್ದಿದ್ದ ಯುವಕನ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಗೊಂದಿಚಟ್ನಿ ಹಳ್ಳಿಯಲ್ಲಿ ನಡೆದಿದೆ. ವರ್ಷಿಣಿ (14) ಆತ್ಮಹತ್ಯೆಗೆ ಶರಣಾದ ಬಾಲಕಿ. ತ್ಯಾಗರಾಜ್ ಎಂಬ ಯುವಕ ಬಾಲಕಿಗೆ ತನ್ನನ್ನು ಪ್ರೀತಿಸು ಎಂದು ಬೆನ್ನುಬಿದ್ದಿದ್ದ. ಆದರೆ ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಸುಮಾರು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ತ್ಯಾಗರಾಜ್ ಬಾಲಕಿಗೆ ಟಾರ್ಚರ್ ನೀಡಿದ್ದು,…

Read Full News

Ripponpete | ಬೈಕ್ ಕಳ್ಳತನ : ಎರಡು ಗಂಟೆಯೊಳಗೆ ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ

Ripponpete | ಬೈಕ್ ಕಳ್ಳತನ : ಎರಡು ಗಂಟೆಯೊಳಗೆ ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ ಕಳ್ಳತನವಾದ ಬೈಕ್‌ನ್ನು ಕೇವಲ 2 ಗಂಟೆಯೊಳಗೆ ಪತ್ತೆ ಮಾಡಿ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ರಿಪ್ಪನ್‌ಪೇಟೆ ಠಾಣೆ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗದ ತೊಪ್ಪಿನಘಟ್ಟದ ಡ್ರೈವರ್ ಕೆಲಸ ಮಾಡುವ 23 ವರ್ಷದ ಸತೀಶ್ ಎಲ್ ಎಸ್ ಹಾಗೂ ಅಪ್ರಾಪ್ತ (ಕಾನೂನು ಸಂಘರ್ಷಕ್ಕೊಳಗಾದ ಬಾಲಕ) ಸೇರಿದಂತೆ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಶನಿವಾರ ರಾತ್ರಿ ದೂನ…

Read Full News

ಜೋಕಾಲಿ ಆಡುವಾಗ ಕೊರಳಿಗೆ ಹಗ್ಗ ಸಿಲುಕಿ ಬಾಲಕ ಮೃತ್ಯು | Crime News

ಜೋಕಾಲಿ ಆಡುವಾಗ ಕೊರಳಿಗೆ ಹಗ್ಗ ಸಿಲುಕಿ ಬಾಲಕ ಮೃತ್ಯು 13 ವರ್ಷದ ಬಾಲಕನೊಬ್ಬ ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಿಗಿಯಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕೊಟ್ರೇಶ್ ಮೃತ ಬಾಲಕನಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ. ಬಾಲಕ ಶಾಲೆ ಮುಗಿಸಿ ಮನೆಗೆ ಬಂದು ಜೋಕಾಲಿ ಆಡುತ್ತಿದ್ದ ವೇಳೆ ಕೊರಳಿಗೆ ಹಗ್ಗ ಸಿಲುಕಿ ಈ ಸಂಭವಿಸಿದೆ. ಶನಿವಾರ ಮುಂಜಾನೆಯ ಶಾಲೆ ಮುಗಿಸಿ ಮನೆಗೆ ಬಂದ…

Read Full News

ವಿಷ ಸೇವಿಸಿ ಮಹಿಳೆ ಸಾವು , ಐದು ತಿಂಗಳ ಮಗುವಿನ ಸ್ಥಿತಿ ಚಿಂತಾಜನಕ – ವರದಕ್ಷಿಣೆ ಕಿರುಕುಳ ಆರೋಪ | Crime News

ವಿಷ ಸೇವಿಸಿ ಮಹಿಳೆ ಸಾವು , ಐದು ತಿಂಗಳ ಮಗುವಿನ ಸ್ಥಿತಿ ಚಿಂತಾಜನಕ – ವರದಕ್ಷಿಣೆ ಕಿರುಕುಳ ಆರೋಪ  ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಒಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಎಂಬ ಗ್ರಾಮದಲ್ಲಿ ನಡೆದಿದೆ.  ಘಟನೆಯಲ್ಲಿ ಮಗುವಿಗೂ ಕೂಡ ವಿಷ ನೀಡಿಲಾಗಿದೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಗಂಡನ ಮನೆಯವರ ವಿರುದ್ಧ ಆರೋಪಿಸುತ್ತಿದ್ದಾರೆ. ಗಂಡನ ಮನೆಯವರು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪತ್ನಿ ಕಸ್ತೂರಿ ಗಂಡ…

Read Full News

Hosanagara | ಟಿಪ್ಪರ್ ಲಾರಿ ಹಾಗೂ ಓಮಿನಿ ಕಾರಿನ ನಡುವೆ ಭೀಕರ ಅಪಘಾತ – ಹಲವರು ಗಂಭೀರ

Hosanagara | ಟಿಪ್ಪರ್ ಲಾರಿ ಹಾಗೂ ಓಮಿನಿ ಕಾರಿನ ನಡುವೆ ಭೀಕರ ಅಪಘಾತ – ಹಲವರು ಗಂಭೀರ ಹೊಸನಗರ : ಮಾರುತಿ ಓಮಿನಿ‌ ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತವಾದ ಘಟನೆ ಕರಿನಗೊಳ್ಳಿ ಸಮೀಪದಲ್ಲಿ ನಡೆದಿದೆ. ಕಾರಿನಲ್ಲಿದ್ದ 4 ಮಕ್ಕಳು ಸೇರಿದಂತೆ ಏಳು ಜನರಿಗೆ ಗಂಭೀರ ಗಾಯಗಳಾಗಿದೆ ಎನ್ನಲಾಗುತ್ತಿದೆ. ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ನ ಮುಂಭಾಗದಲ್ಲಿ ಹೊಸನಗರದಿಂದ ಶಿವಮೊಗ್ಗ ಕಡೆಗೆ ಹೋಗುತಿದ್ದ ಮಾರುತಿ ಓಮ್ನಿ ಕಾರು ಹಾಗೂ ಶಿವಮೊಗ್ಗ ಕಡೆಯಿಂದ ಹೊಸನಗರ ಕಡೆಗೆ…

Read Full News

Anandapura | ಪ್ಯಾಸೆಂಜರ್ ಆಟೋ ಚಾಲಕ ಶಶಿಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ

Anandapura | ಪ್ಯಾಸೆಂಜರ್ ಆಟೋ ಚಾಲಕ ಶಶಿಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಆಟೋ ಚಾಲಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮಾಸ್ತಿಕಲ್ಲು ಬಳಿ ನಡೆದಿದೆ. 38 ವರ್ಷದ ಆಟೋ ಚಾಲಕ ಶಶಿಕುಮಾರ್ ಮೃತ ದುರ್ದೈವಿ. ಶಶಿಕುಮಾರ್ ಪ್ಯಾಸೆಂಜರ್ ಆಟೋ ಚಾಲಕನಾಗಿದ್ದ, ಮೂಲತಃ ಮಲ್ಲಂದೂರು ನಿವಾಸಿಯಾಗಿರುವ ಶಶಿ, ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ.ಸಾಲದ ಬಡ್ಡಿ ಹೆಚ್ಚಾದ ಹಿನ್ನೆಲೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ….

Read Full News

ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ | Crime News

ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮನೆಯಲ್ಲಿ ಪೋಷಕರು ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಳೇ ಕೋಡಿಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸಾಗರ್ (29) ಎಂದು ಗುರುತಿಸಲಾಗಿದೆ. ಕೆಲಸಕ್ಕೆ ಹೋಗು ಎಂದು ಮನೆಯವರು ಹೇಳಿದ್ದಕ್ಕೆ ಈತ ಫೆ.19 ರಂದು ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು, ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ…

Read Full News

Ripponpete | ವಡಗೆರೆ ಬಳಿ ಟೋಯಿಂಗ್ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಗಂಭೀರ

Ripponpete | ಟೋಯಿಂಗ್ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಗಂಭೀರ ರಿಪ್ಪನ್ ಪೇಟೆ : ಇಲ್ಲಿನ ಸಾಗರ ರಸ್ತೆಯ ವಡಗೆರೆ ಬಳಿ ಬೈಕ್ ಹಾಗೂ ಟೋಯಿಂಗ್ ವಾಹನ (ಟಾಟಾ 207) ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಆನಂದಪುರಕ್ಕೆ ತೆರಳುತಿದ್ದ ಬೈಕ್ ಹಾಗೂ ಆನಂದಪುರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಟೋಯಿಂಗ್ (ಟಾಟಾ 207) ವಾಹನದ ನಡುವೆ ವಡಗೆರೆ ಸಮೀಪದಲ್ಲಿ ಮುಖಾಮುಖಿ…

Read Full News

Hosanagara | ಪ್ಲಾಂಟೇಷನ್ ನಲ್ಲಿ ನೇಣು ಬಿಗಿದುಕೊಂಡು ಕಾರ್ಪೆಂಟರ್ ರಾಘು ಆತ್ಮಹತ್ಯೆ

ಪ್ಲಾಂಟೇಷನ್ ನಲ್ಲಿ ನೇಣು ಬಿಗಿದುಕೊಂಡು ಕಾರ್ಪೆಂಟರ್ ರಾಘು ಆತ್ಮಹತ್ಯೆ ಹೊಸನಗರ : ಪಟ್ಟಣದ ಮಾವಿನಕೊಪ್ಪ ನಿವಾಸಿ 45 ರ ಹರೆಯದ ಕಾರ್ಪೆಂಟರ್ ವೃತ್ತಿ ಮಾಡುವ ರಾಘವೇಂದ್ರ ಆಚಾರ್ ಇಂದು ಸೋಮವಾರ ಮಧ್ಯಾಹ್ನ ಸಾಗರ ರಸ್ತೆಯ ಕಳೂರು ಗ್ರಾಮದ ಅಕೇಶಿಯ ಪ್ಲಾಂಟೇಶನ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮೃತ ರಾಘವೇಂದ್ರ ಉತ್ತಮ ಮರಗೆಲಸ ಮಾಡುತ್ತಿದ್ದು ವಿವಾಹಿತನಾಗಿದ್ದು ಪತ್ನಿ ಇಬ್ಬರು ಪುತ್ರಿಯರನ್ನು ಅಪಾರ ಬಂಧು ಬಳಗದವರನ್ನು ಹೊಂದಿದ್ದು ಆತನು ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ…

Read Full News

ಚಲಿಸುತಿದ್ದ ಬಸ್ ನಿಂದ ಆಯತಪ್ಪಿ ಕೆಳಗೆ ಬಿದ್ದು SSLC ವಿದ್ಯಾರ್ಥಿ ಸಾವು

ಚಲಿಸುತಿದ್ದ ಬಸ್ ನಿಂದ ಆಯತಪ್ಪಿ ಕೆಳಗೆ ಬಿದ್ದು SSLC ವಿದ್ಯಾರ್ಥಿ ಸಾವು ಶಿವಮೊಗ್ಗ(Shivamogga) ಜಿಲ್ಲೆ ಶಿಕಾರಿಪುರ ತಾಲೂಕಿನ ಸಿದ್ದನಪುರ ಗ್ರಾಮದಲ್ಲಿ ಬಸ್(bus) ನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಎಸ್‌ಎಸ್‌ಎಲ್ ಸಿ (SSLC) ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ಆದಿತ್ಯ(15) ಮೃತಪಟ್ಟ ವಿದ್ಯಾರ್ಥಿ ಎಂದು ಹೇಳಲಾಗಿದೆ.  ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ ಓದುತ್ತಿದ್ದ ಆದಿತ್ಯ ಭಾನುವಾರ ಶಿಕಾರಿಪುರಕ್ಕೆ ಬಂದಿದ್ದು, ಸಂಜೆ ಊರಿಗೆ ಮರಳುವಾಗ ಘಟನೆ ನಡೆದಿದೆ. ಬಸ್ ನಿಲ್ದಾಣ ಬರುತ್ತಿದ್ದಂತೆ ಆದಿತ್ಯ ಬಾಗಿಲ ಬಳಿ ಬಂದಿದ್ದಾರೆ. ಈ ವೇಳೆ ಬಸ್…

Read Full News

Accident | ಹಿಂಬದಿಯಿಂದ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ – ಬೈಕ್ ಸವಾರ ಸಾವು

Accident | ಹಿಂಬದಿಯಿಂದ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ – ಬೈಕ್ ಸವಾರ ಸಾವು ಶಿವಮೊಗ್ಗ: ಬೈಕ್ ಗೆ ಟ್ರ್ಯಾಕ್ಟರ್ ಹಿಂಬದಿಯಿಂದ ಗುದ್ದಿದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಮಂಡ್ಲಿ ಪಂಪ್ ಹೌಸ್ ಬಳಿ ನಡೆದಿದೆ.  ಸೈಯದ್ ಸಫನ್ (22) ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕ. ಸೈಫನ್ ಕೆಲಸ ಮುಗಿಸಿಕೊಂಡು ಊಟಕ್ಕೆಂದು ಮನೆಗೆ ಹೋಗುತ್ತಿದ್ದನು. ಈ ವೇಳೆ ಟ್ರ್ಯಾಕ್ಟರ್ ಸವಾರ ಜಲ್ಲಿ ಕಲ್ಲು ಲೋಡ್ ಮಾಡಿಕೊಂಡು ಬರುತ್ತಿದ್ದನು. ನಿರ್ಲಕ್ಷದಿಂದ ಹಾಗೂ ಅತಿ ವೇಗದಲ್ಲಿ ಬರುತ್ತಿದ್ದ…

Read Full News

Thirthahalli | ಡಿವೈಎಸ್ಪಿ ನೇತ್ರತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತಿದ್ದ ಮೂವರು ಯುವಕರ ಬಂಧನ

Thirthahalli |  ಡಿವೈಎಸ್ಪಿ ನೇತ್ರತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತಿದ್ದ ಮೂವರು ಯುವಕರ ಬಂಧನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯ ಕೆರೆ ದಂಡೆಯ ಮೇಲೆ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ‌. ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆಕೊಪ್ಪ ಗ್ರಾಮದ ತ್ಯಾರಂದೂರು ಆದಿತ್ಯ (23), ಕುರುವಳ್ಳಿಯ ಬಿ ಅಗ್ರಹಾರದ ಅಭಿಷೇಕ್ (21) ಮತ್ತು ಆರಗದ ಅಮೀರ್ ಕೆ. (20) ಬಂಧಿತ ಆರೋಪಿಗಳು‌….

Read Full News

Accident | ಗರ್ತಿಕೆರೆಯಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಗಂಭೀರ | ಮಣಿಪಾಲ್ ಗೆ ರವಾನೆ

Accident | ಗರ್ತಿಕೆರೆಯಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಗಂಭೀರ | ಮಣಿಪಾಲ್ ಗೆ ರವಾನೆ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗನ ಕಾಲು ತುಂಡಾಗಿರುವ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ಹೊಸನಗರ(Hosanagara) ತಾಲೂಕಿನ ಗರ್ತಿಕೆರೆಯಲ್ಲಿ(garthikere) ಶನಿವಾರ ರಾತ್ರಿ 08 ಗಂಟೆ ಸುಮಾರಿಗೆ ನಡೆದಿದೆ. ಗಾಯಾಳುಗಳನ್ನು ಇಲ್ಲಿನ ಅವುಕ ನಿವಾಸಿಗಳಾದ ಗಿರಿಯಪ್ಪ ಮತ್ತು ಆತನ ಪುತ್ರ ಮಂಜುನಾಥ್ ಎಂದು ಗುರುತಿಸಲಾಗಿದೆ. ಹುಂಚದಕಟ್ಟೆ ಕಡೆಯಿಂದ ಗರ್ತಿಕೆರೆ ಕಡೆಗೆ…

Read Full News

Shivamogga | ಹುಂಡೈ ಕಾರು ಶೋರೂಂಗೆ ಆಕಸ್ಮಿಕ ಬೆಂಕಿ – ಮೂರು ಕಾರು ಸಂಪೂರ್ಣ ಸುಟ್ಟು ಭಸ್ಮ, 7 ಕಾರುಗಳಿಗೆ ಭಾಗಶಃ ಹಾನಿ

Shivamogga | ಹುಂಡೈ ಕಾರು ಶೋರೂಂಗೆ ಆಕಸ್ಮಿಕ ಬೆಂಕಿ – ಮೂರು ಕಾರು ಸಂಪೂರ್ಣ ಸುಟ್ಟು ಭಸ್ಮ, 7 ಕಾರುಗಳಿಗೆ ಭಾಗಶಃ ಹಾನಿ ಶಿವಮೊಗ್ಗ (Shivamogga) ನಗರದ ಶಂಕರಮಠದಲ್ಲಿರುವ ರಾಹುಲ್ ಹುಂಡೈ ಕಾರು ಶೋ ರೂಂನಲ್ಲಿ ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಆಕಸ್ಮಿಕ ಬೆಂಕಿ ಅವಘಡ ನಡೆದಿದೆ. ಕಾರು ಶೋ ರೂಂ ಸಂಪೂರ್ಣ ವಾಲ್ ಸೀಲಿಂಗ್​ನಿಂದ ಮಾಡಿದ್ದಾಗಿದ್ದರಿಂದ ಬೆಂಕಿ ಕೆನ್ನಾಲಿಗೆಗೆ ಶೋರೂಂನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಲ್ಲದೇ ಬೆಂಕಿಯು ಶೋ ರೂಂನ ಮೇಲ್ಭಾಗ ಸೇರಿದಂತೆ…

Read Full News

ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ಮಹಿಳಾ ಅಧಿಕಾರಿಗೆ 1 ಲಕ್ಷ ರೂ ವಂಚನೆ – ಪ್ರಕರಣ ದಾಖಲು

ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ಮಹಿಳಾ ಅಧಿಕಾರಿಗೆ 1 ಲಕ್ಷ ರೂ ವಂಚನೆ – ಪ್ರಕರಣ ದಾಖಲು ಶಿವಮೊಗ್ಗ(Shivamogga) : ಮಹಿಳಾ ಆಫೀಸರ್‌ಗೆ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ, ₹1 ಲಕ್ಷ ಹಣ ವಂಚನೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಆಹಾರ ಇಲಾಖೆಯಲ್ಲಿ ಶಿರಸ್ತೇದಾರ್‌ ಆಗಿರುವ ಮಹಿಳಾ ಅಧಿಕಾರಿಯೊಬ್ಬರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯಲ್ಲಿದ್ದರು. ಈ ಸಂದರ್ಭ ವಾಟ್ಸಪ್‌ನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಲೋಕಾಯುಕ್ತ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ‘ತಮ್ಮ ವಿರುದ್ಧ ದೂರು…

Read Full News

Sagara: ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಇಬ್ಬರು ಅಂತರಾಜ್ಯ ಕಳ್ಳರ ಬಂಧನ

Sagara: ಪೊಲೀಸರಿಂದ ಇಬ್ಬರು ಅಂತರಾಜ್ಯ ಕಳ್ಳರ ಬಂಧನ ಸಾಗರ(sagara) ನಗರದ ಶಿಕ್ಷಕರ ಬಡಾವಣೆಯ ಮನೆಯೊಂದರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ ಮಾಲು, ಪ್ರಕರಣಕ್ಕೆ ಬಳಸಿದ್ದ ಕಾರು ಸಹಿತ 2.84 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಾಗರ ಟೌನ್ ಪೊಲೀಸರು(sagara town police) ವಶಕ್ಕೆ ಪಡೆದಿದ್ದಾರೆ. ಶಿಗ್ಗಾಂವ್(shiggav) ತಾಲೂಕಿನ ಸಾವದಗಾರ್ ಓಣಿಯಲ್ಲಿ ವಾಸವಿರುವ ಚಾಲಕ ಅಮೀರ್ ಖಾನ್ (42) ಹಾಗೂ ಬೆಳಗಾವಿಯ ಉಡಚಗಾವ್ ನಿವಾಸಿ ವಿಶಾಲ್ ನರಸಿಂಗ ಶೇರ್ಖಾನೆ (52)ನನ್ನು ಪೇಟೆ ಠಾಣೆ…

Read Full News

Accident | ಖಾಸಗಿ ಶಾಲಾ ಬಸ್ ಪಲ್ಟಿ – ವಿದ್ಯಾರ್ಥಿಗಳಿಗೆ ಗಂಭೀರ ಗಾಯ!

ಖಾಸಗಿ ಶಾಲಾ ಬಸ್ ಪಲ್ಟಿ – ವಿದ್ಯಾರ್ಥಿಗಳಿಗೆ ಗಂಭೀರ ಗಾಯ! ಓವರ್ ಟೇಕ್ ಮಾಡುವ ವೇಳೆ ಕಾರು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಖಾಸಗಿ ಶಾಲೆ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಈ ವೇಳೆ ಕಾರಿನ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಅಡ್ಡಾದಿಡ್ಡಿ ಚಲಿಸಿದ್ದಾನೆ. ಇದರಿಂದ ಗೊಂದಲಕ್ಕೀಡಾಗಿ ಖಾಸಗಿ ಶಾಲಾ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಮುಗ್ಗರಿಸಿ ಬಿದ್ದ ಬಸ್‌ನೊಳಗೆ ಚಿಕ್ಕಮಕ್ಕಳು ತಲೆ ಕಾಲುಗಳಿಗೆ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.