January 11, 2026

RIPPONPETE | ಕಾಡು ಪ್ರಾಣಿಗಳ ಬೇಟೆಗೆ ಸಂಚು – ಮೂವರು ಆರೋಪಿಗಳ ಬಂಧನ , ಇಬ್ಬರು ಪರಾರಿ

RIPPONPETE | ಕಾಡು ಪ್ರಾಣಿಗಳ ಬೇಟೆಗೆ ಸಂಚು – ಮೂವರು ಆರೋಪಿಗಳ ಬಂಧನ , ಇಬ್ಬರು ಪರಾರಿ

ರಿಪ್ಪನ್‌ಪೇಟೆ : ಮೂಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಯ ಕುಮದ್ವತಿ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಬಂದಿದ್ದ ಐವರ ಗುಂಪನ್ನು ಅರಣ್ಯಾಧಿಕಾರಿ ಪವನ್ ಕುಮಾರ್ ಎನ್ ನೇತೃತ್ವದ ತಂಡ ದಿಡೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ , ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರ ಪತ್ತೆಗೆ ಬಲೆ ಬೀಸಿದ್ದಾರೆ‌

ಮಂಗಳವಾರ ಮುಂಜಾನೆ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಶಂಕಾಸ್ಪದ ಮಾಹಿತಿ ಲಭ್ಯವಾದ ತಕ್ಷಣ ದಿಡೀರ್ ಕಾರ್ಯಾಚರಣೆ ನಡೆಸಿ ಕಾಡುಪ್ರಾಣಿಗಳ ಬೇಟೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಬಂಧಿಸಿ ಅವರಿಂದ ಭೇಟೆ ಬಳಸಲು ತಂದಿದ್ದ ನಾಡ ಬಂದೂಕು, ಮದ್ದು ಗುಂಡು ಹಾಗೂ ಆಲ್ಟೋ ಕಾರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬಟ್ಟೆ ಮಲ್ಲಪ್ಪ ಗ್ರಾಮದ ವಿಶ್ವನಾಥ, ಬಳಸಗೋಡು ಗ್ರಾಮದ ಚನ್ನವೀರಮೂರ್ತಿ ಹಾಗೂ ಹಾಲೇಶ ಎಂದು ಗುರುತಿಸಲಾಗಿದೆ. ಗಾಜಿನಗೋಡು ಮೂಲದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಡಿಆರ್ ಎಫ಼್ಓ ಪುಟ್ಟಣ್ಣ ಕೆ, ಫಾರೆಸ್ಟ್ ಗಾರ್ಡ್ ಸಚಿನ್ ಕೆ ಟಿ, ವಾಚರ್ ಸವಿನ್ ಮತ್ತು ಇತರ ಸಿಬ್ಬಂದಿ ಭಾಗವಹಿಸಿದ್ದರು.

About The Author