ಭದ್ರಾವತಿ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ?
ಆರೋಪಿಗಳ ಪತ್ತೆಗೆ ಮೂರು ತಂಡ – ಎಸ್ ಪಿ ಮಿಥುನ್ ಕುಮಾರ್
ಪಾಕಿಸ್ತಾನ ಪರ ಘೋಷಣೆ; ಮತಾಂಧರ ಸೊಕ್ಕಿಗೆ ಕಾಂಗ್ರೆಸ್ ಸರ್ಕಾರದ ಒಲೈಕೆ ಕಾರಣ: ಕೆಎಸ್ ಈಶ್ವರಪ್ಪ ಕಿಡಿ
ಭದ್ರಾವತಿಯಲ್ಲಿ ಸೋಮವಾರ ರಾತ್ರಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಭದ್ರಾವತಿಯ ಅಂಬೇಡ್ಕರ್ ವೃತ್ತದಲ್ಲಿ ಮೆರವಣಿಗೆ ಸಾಗುವಾಗ ಕೆಲವು ಯುವಕರಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಬರುತ್ತದೆ.
ಸ್ವಯಂ ಪ್ರೇರಿತ ಪ್ರಕರಣ ದಾಖಲು: ‘ವಿಡಿಯೊ ಸಂಬಂಧ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಡಿಯೊದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ಅದು ಎಲ್ಲಿ ಹಾಗೂ ಯಾವಾಗ ಚಿತ್ರೀಕರಣಗೊಂಡಿದೆ. ನೈಜತೆ ದೃಢಪಟ್ಟರೆ ಘೋಷಣೆ ಕೂಗಿದವರು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದೇವೆ’ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
“ವೈರಲ್ ವೀಡಿಯೋಗೆ ಸಂಬಂಧಿಸಿ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವೈರಲ್ ವಿಡಿಯೋವನ್ನು ಎಫ್‌ಎಸ್‌ಎಲ್ ಗೆ ಈಗಾಗಲೇ ಕಳುಹಿಸಲಾಗಿದೆ. ಯಾವಾಗ, ಯಾರು, ಎಲ್ಲಿ ಈ ವಿಡಿಯೋ ಮಾಡಿದ್ದಾರೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ” ಎಂದು ಎಸ್ಪಿ ತಿಳಿಸಿದ್ದಾರೆ.
“ವಿಡಿಯೋದಲ್ಲಿ ಕಾಣಿಸುತ್ತಿರುವವರನ್ನು ಗುರುತಿಸುವ ಕೆಲಸ ಆಗುತ್ತಿದೆ. ವಿಡಿಯೋದಲ್ಲಿರುವವರ ಶೋಧಕ್ಕಾಗಿಯೇ ಒಂದು ಪೊಲೀಸ್ ತಂಡ ಕಾರ್ಯನಿರ್ವಹಿಸುತ್ತಿದೆ. ಎಲ್ಲವನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ಭದ್ರಾವತಿ ನಗರದ ತರೀಕೆರೆ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರಾತ್ರಿ ಮೀಲಾದ್ ಮೆರವಣಿಗೆಯ ವೇಳೆ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾದ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಭದ್ರಾವತಿಯ ಓಲ್ಡ್ ಟೌನ್ ಪೊಲೀಸರು, ವಿಡಿಯೋ ಸತ್ಯಾಸತ್ಯತೆ ಪರಿಶೀಲನೆಗೆ ಮುಂದಾಗಿದ್ದಾರೆ.
ಪಾಕಿಸ್ತಾನ ಪರ ಘೋಷಣೆ; ಮತಾಂಧರ ಸೊಕ್ಕಿಗೆ ಕಾಂಗ್ರೆಸ್ ಸರ್ಕಾರದ ಒಲೈಕೆ ಕಾರಣ: ಕೆಎಸ್ ಈಶ್ವರಪ್ಪ ಕಿಡಿ
ಈ ದೇಶದ ಅನ್ನ ತಿಂದು, ಗಾಳಿ ಉಸಿರಾಡಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ಮನಸ್ಥಿತಿಯ ಮುಸ್ಲಿಮರ ಇನ್ನು ಇಲ್ಲಿ ಬದುಕಿದ್ದಾರಲ್ಲ ಅದು ನಾಚಿಕೆಗೇಡು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ವೇಳೆ ಮುಸ್ಲಿಂ ಯುವಕರು ಗುಂಪು ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಈ ಸಂಬಂಧ ಸುವರ್ಣನ್ಯೂಸ್ ಪ್ರತಿನಿಧಿ ರಾಜೇಶ್ ಜೊತೆ ಮಾತನಾಡಿದ ಕೆಎಸ್ ಈಶ್ವರಪ್ಪ ಅವರು, ನಮ್ಮ ಬೆಂಬಲಕ್ಕೆ ಆಡಳಿತರೂಢ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ ಎಂಬ ದೇಶದ್ರೋಹಿ ಭಾವನೆ ಮತಾಂಧ ಮುಸ್ಲಿಂರಲ್ಲಿದೆ.
ಹೀಗಾಗಿ ಯಾವುದೇ ಕಾನೂನು ಪೊಲೀಸರ ಭಯವಿಲ್ಲದೇ ಈ ರೀತಿ ಪಾಕಿಸ್ತಾನ ಪರ ಘೋಷಣೆ ಕೂಗುವುದು, ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದ ವಿರುದ್ಧ ಕಿಡಿಕಾರಿದರು.
ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನ ಪರ ಘೋಷಣೆ ಕೂಗುವುದು ಸರಿಯಲ್ಲ. ಪಹಲ್ಗಾಂ ದಾಳಿ ವೇಳೆ ಇಡೀ ದೇಶ ಒಗ್ಗಟ್ಟಾಗಿತ್ತು. ಮುಸ್ಲಿಮರು ನರೇಂದ್ರ ಮೋದಿ ಮತ್ತು ಭಾರತದ ಪರ ನಿಂತಿದ್ದರು. ಇದೀಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.