Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಹರಿದ್ರಾವತಿ ಸರ್ಕಾರಿ ವೈದ್ಯರನ್ನು ಬದಲಾಯಿಸುವಂತೆ ಬೃಹತ್ ಪ್ರತಿಭಟನೆ : ಪ್ರತಿಭಟನೆಗೆ ಮಣಿದ ತಾಲ್ಲೂಕು ಆರೋಗ್ಯಧಿಕಾರಿ

ಹರಿದ್ರಾವತಿ : ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರ ಗೈರಾಗಿರುವ ವೈದ್ಯಧಿಕಾರಿಗಳ ಬದಲಿಗೆ ಬೇರೆ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಡೆದ ಪ್ರತಿಭಟನೆಗೆ ಸ್ಪಂದಿಸಿರುವ ತಾಲ್ಲೂಕು ವೈದ್ಯಾಧಿಕಾರಿಗಳು ಸೋಮವಾರದಿಂದಲೇ ಬದಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇಂದು ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರದ ಎದುರು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಹಳ್ಳಿ ಬಟ್ಟೆಮಲ್ಲಪ್ಪ -ಆಲಗೇರಿಮಂಡ್ರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ್…

Read More

ನ್ಯಾಯಲಯದ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ : ಮಹಾಲಕ್ಷ್ಮಿ ಅಣ್ಣಪ್ಪ

ರಿಪ್ಪನ್‌ಪೇಟೆ: ಕಳೆದ ವರ್ಷ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಬರುವೆ 1ನೇ ವಾರ್ಡ್ ನಲ್ಲಿ ನಡೆದ ಮತದಾನದಲ್ಲಿ ಅಕ್ರಮವಾಗಿದೆ ಎಂದು ದಾಖಲಾಗಿದ್ದ ಮೊಕದ್ದಮೆಯನ್ನು ಹೊಸನಗರ ಜೆ ಎಂಎಫ್ ಸಿ ನ್ಯಾಯಾಲಯ ವಜಾ ಮಾಡಿದೆ. ಘಟನೆಯ ಹಿನ್ನಲೆ:  ಒಬ್ಬನೇ ವ್ಯಕ್ತಿ ಎರಡು-ಮೂರು ವಾರ್ಡ್‌ಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಮತದಾನದ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ಬರುವೆ 1ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪರಾಜಿತ ಅಭ್ಯರ್ಥಿ ಮೆಣಸೆ ಆನಂದ್ ರವರು ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ…

Read More

ಸಾಗರ ಬಳಿ ಭೀಕರ ಅಪಘಾತ : ಬೈಕ್ ಸವಾರ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ

ಸಾಗರ: ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಸಂಜೆ ಸುಮಾರಿಗೆ ದ್ವಿಚಕ್ರವಾಹನ ಅಪಘಾತವಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ ಸಾಗರ ತಾಲೂಕಿನ ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.  ಮತ್ತೋರ್ವ ವ್ಯಕ್ತಿಗೆ ಬಲವಾದ ಪೆಟ್ಟು ಬಿದ್ದಿದೆ ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟ ವ್ಯಕ್ತಿ ಶಿವಮೊಗ್ಗ ಮೂಲದ…

Read More

ಸಂಘದ ಕಾರ್ಯವೈಖರಿಗೆ ಬೇಸತ್ತು ಭಂಡಾರಿ ಸಮಾಜದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ !!!

ರಿಪ್ಪನ್ ಪೇಟೆ : ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳನ್ನೊಳಗೊಂಡ ಭಂಡಾರಿ ಸಮಾಜದ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೇವರಾಜ್ ಭಂಡಾರಿ ಬಾಳೂರು ರಾಜಜೀನಾಮೆ ನೀಡಿದ್ದಾರೆ.  ಡಿ,3 ಶುಕ್ರವಾರ ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನ ಸಿದ್ದಪ್ಪನ ಗುಡಿ ದೇವಸ್ಥಾನ ಇಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಸಂಘದ ಕಾರ್ಯವೈಖರಿಗೆ ಬೇಸತ್ತು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿ ಸಂಘದ ಅಧ್ಯಕ್ಷ ಹಿರಿಯಣ್ಣ ಭಂಡಾರಿ ಯವರಿಗೆ ರಾಜೀನಾಮೆಯನ್ನು ಸಲ್ಲಿಸಿದರು. ಈ ಸಭೆಯಲ್ಲಿ ಭಂಡಾರಿ ಸಮಾಜದ ಮುಖಂಡರಾದ ನಾಗರಾಜ್ ಭಂಡಾರಿ ಅರಸಾಳು,ವಾಸು ಎಂ,ಬಾಲು ದೂನ,ಪಾಂಡುರಂಗ…

Read More

ಅಪಘಾತಕ್ಕೀಡಾದ ಕುಟುಂಬದ ನೆರವಿಗೆ ತಕ್ಷಣ ಧಾವಿಸಿ ಉಪಚಾರಗೈದಾ ಸಾಗರದ ಯುವ ಪತ್ರಕರ್ತ ಜಮೀಲ್ ಸಾಗರ್

ಇಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ರಟ್ಟಿಹಳ್ಳಿ ತಾಲ್ಲೂಕಿನ  ಒಂದು ಕುಟುಂಬದವರು ಸಿಗಂದೂರು ಶ್ರೀಚೌಡೇಶ್ವರಿ ದರ್ಶನಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯೆ ಅಪಘಾತ ಸಂಭವಿಸುತ್ತದೆ ತಕ್ಷಣ ಅವರು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಬರುತ್ತಾರೆ.ಇದೇ ಸಮಯಕ್ಕೆ ಸಾಗರದ ಆಸ್ಪತ್ರೆಗೆ ಧಾವಿಸಿದ ಯುವ ಪತ್ರಕರ್ತ ಜಮೀಲ್ ಸಾಗರ್ ರವರು ಮುತವರ್ಜಿ ವಹಿಸಿ ವೈದ್ಯರ ಬಳಿ ಇವರನ್ನು ಕರೆದುಕೊಂಡು ಹೋಗಿ ವಿಶೇಷ ಚಿಕಿತ್ಸೆಯನ್ನು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಇಬ್ಬರು ಪುಟ್ಟ ಮಕ್ಕಳೊಂದಿಗೆ ವೃದ್ಧರೂ ಆಗಮಿಸಿದಂತಹ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಇವರ ಜೊತೆಗಿದ್ದು ಇವರಿಗೆ ಚಿಕಿತ್ಸೆಯನ್ನು…

Read More

ದನಗಳ್ಳರಿಗೆ ಸಹಕರಿಸುವ ಪೊಲೀಸರ ವಿರುದ್ದ ಕಿಡಿಕಾರಿದ ಗೃಹ ಸಚಿವ ಆರಗ ಜ್ಞಾನೇಂದ್ರ :ಸ್ವಪಕ್ಷದ ಕಾರ್ಯಕರ್ತರಿಂದಲೇ ವೈರಲ್ ಆಯ್ತಾ ವಿಡಿಯೋ :

ಕರ್ನಾಟಕ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ತಮ್ಮ ನಿವಾಸದ ಕಚೇರಿಯಿಂದ ಪಕ್ಷದ ಕಾರ್ಯಕರ್ತರ ಎದುರಲ್ಲೇ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧಿಕಾರಿಗೆ ಕರೆ ಮಾಡಿ ದನಕಳ್ಳತನದ ಬಗ್ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.  ಪೊಲೀಸರಿಗೆ ಸರ್ಕಾರದಿಂದ ಕೈ ತುಂಬಾ ಸಂಬಳ ಕೊಡಲಾಗಿದೆ. ಆದರೂ ನಾಯಿ ಎಂಜಲು ಕಾಸನ್ನು ತಿಂದು ಹಾಗೆ ಬಿದ್ದಿರ್ತಾರೆ. ಯೋಗ್ಯತೆ ಇಲ್ಲವೆಂದರೆ ಯೂನಿಫಾರ್ಮ್ ಬಿಚ್ಚಿಟ್ಟು ಮನೆಗೆ ಹೋಗಲಿ. ಮಣ್ಣು ಹೊರಲಿ ಎಂದು ಕೂಗಾಡಿದ್ದಾರೆ. ಪ್ರತಿನಿತ್ಯ ಗೋವು ಸಾಗಾಟ ಮಾಡುವವರು ಯಾರೆಂದು ಪೊಲೀಸರಿಗೆ. ಆದರೂ ಲಂಚ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಬಹುತೇಕ ಜೆಡಿಎಸ್ ಬೆಂಬಲಿತ ಸದಸ್ಯರು ಕಾಂಗ್ರೆಸ್ ಬಗ್ಗೆ ಒಲವು : ವರಿಷ್ಠರ ಗಮನಕ್ಕೆ ತಂದು ಖಚಿತ ನಿರ್ಧಾರ – ಎಂ ಶ್ರೀಕಾಂತ್

ಶಿವಮೊಗ್ಗ: ಜೆಡಿಎಸ್ ಕಚೇರಿಯಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಬೆಂಬಲಿತ ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಯಿತು. ಭದ್ರಾವತಿ ಹೊರತುಪಡಿಸಿ ಬೇರೆ ತಾಲೂಕಿನ ಜೆಡಿಎಸ್ ಬೆಂಬಲಿತ ಬಹುತೇಕ ಸದಸ್ಯರು ಕಾಂಗ್ರೆಸ್ ಬೆಂಬಲಿಸಲು ಒಲವು ತೋರಿದ್ದು, ಇನ್ನೂ ಎರಡು ತಾಲೂಕಿನ ಸದಸ್ಯರ ಜೊತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸದಸ್ಯರ ತೀರ್ಮಾನವನ್ನು ವರಿಷ್ಠರ ಗಮನಕ್ಕೆ ತಂದು ಖಚಿತ ನಿರ್ಧಾರ ತೆಗೆದುಕೊಳ್ಳುವುದಾಗಿ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ತಿಳಿಸಿದ್ದಾರೆ. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಎಂ. ಶ್ರೀಕಾಂತ್…

Read More

ಆರ್ಯ ಈಡಿಗ ನೌಕರರ ಕ್ರಿಯಾವೇದಿಕೆಯಿಂದ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಆರ್ಥಿಕ ನೆರವು :

ರಿಪ್ಪನ್ ಪೇಟೆ : ಕಳೆದ ಎರಡು ತಿಂಗಳ ಹಿಂದೆ ರಿಪ್ಪನ್ ಪೇಟೆ ಪಟ್ಟಣದ ಮೇರಿ ಮಾತಾ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಭರತ್ ಬೆಳ್ಳಿ (14)ಎಂಬ ವಿದ್ಯಾರ್ಥಿ ಆಕಸ್ಮಿಕವಾಗಿ ಕಾಲುಜಾರಿ ತಮ್ಮ ಮನೆಯ ಸಮೀಪದಲ್ಲಿರುವ ಹಳ್ಳಕ್ಕೆ ಬಿದ್ದು ಮೃತನಾಗಿದ್ದ.  ಮೃತನ ತಂದೆ ವಾಸು ರವರು ರಿಪ್ಪನ್ ಪೇಟೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುಟುಂಬಕ್ಕೆ ಹೊಸನಗರ ತಾಲೂಕು ಆರ್ಯ ಈಡಿಗ ನೌಕರರ ಕ್ರಿಯಾ ವೇದಿಕೆಯ ವತಿಯಿಂದ 31 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದರು. …

Read More

ಅಪ್ಪು ನಮನ ಕಾರ್ಯಕ್ರಮದಲ್ಲಿ ಇಡೀ ಊರೂರಿಗೆ ಬಾಡೂಟ ಬಡಿಸಿ ಅಭಿಮಾನ ಮೆರೆದ ಚನ್ನಶೆಟ್ಟಿಕೊಪ್ಪ ಗ್ರಾಮಸ್ಥರು :

ಕರ್ನಾಟಕದ ಪವರ್ ಸ್ಟಾರ್ ಅಪ್ಪು ನಮ್ಮನ್ನ ಅಗಲಿ ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ ಆದರೆ ಅವರ ಸಾಧನೆ ಸಾರ್ಥಕತೆ ಹಾಗೂ ಅವರ ದಾನ ಧರ್ಮದ ಕಾರ್ಯಗಳು ಎಂದು ಕೂಡ ನಮ್ಮ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಕರ್ನಾಟಕದ ದೊಡ್ಮನೆ ಹುಡುಗನ ಹೆಸರಿನಲ್ಲಿ ಇದೀಗ ರಾಜ್ಯಾದ್ಯಂತ ಗಲ್ಲಿಗಲ್ಲಿಗಳಲ್ಲಿ ಸರ್ಕಲ್ ಸರ್ಕಲ್ ಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಪ್ಪು ಹೆಸರನ್ನು ನಾಮಕರಣ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳು ಇದೀಗ ಚನ್ನಶೆಟ್ಟಿಕೊಪ್ಪ ವೃತ್ತಕ್ಕೆ ಪುನೀತ್…

Read More

ಸಾಗರದಲ್ಲಿ ಫೀಲ್ಡ್ ಗೆ ಇಳಿದ ನೂತನ ಎಎಸ್ಪಿ ರೋಹನ್ ಜಗದೀಶ್:: ಸಾಗರದಲ್ಲಿ ಗಾಂಜಾ ಮಾಫಿಯಾ ಸಂಪೂರ್ಣ ಫಿನಿಷ್ ಫಿನಿಷ್ !!

ನೂತನ ಸ್ಮಾರ್ಟ್ ಐಪಿಎಸ್ ಆಫೀಸರ್ ರೋಹನ್ ಜಗದೀಶ್  ಇದೀಗ ಸಾಗರಕ್ಕೆ ಬಂದದ್ದೇ ತಡ ಅಪರಾಧಗಳನ್ನು ತಡೆಯುವಲ್ಲಿ ಪ್ರಾಮಾಣಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸಾಗರ ತಾಲ್ಲೂಕಿನಲ್ಲಿ ಇಂದು ಗಾಂಜಾ ಸೇವನೆ ಮಾಡುತ್ತಿದ್ದ 3 ಜನರನ್ನು ಹಾಗೂ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರದ ವಿವಿಧೆಡೆ ದಾಳಿ ನಡೆಸಿದ ಎಎಸ್ ಪಿ ತಂಡ 15000 ಸಾವಿರ ರೂ ಹಾಗೂ 250 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ….

Read More