ಮಳೆ ಬಂದಾಗ ಕೆಸರು ಗದ್ದೆಯಂತಾಗುವ ಬೆನವಳ್ಳಿ – ಮಸರೂರು ರಸ್ತೆ : ಜನಪ್ರತಿನಿಧಿಗಳೇ ಇನ್ನಾದರೂ ಇತ್ತ ಗಮನಹರಿಸಿ!!!!!
ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ-ಮಸರೂರು-ಆಚಾಪುರ ಸಂಪರ್ಕದ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯ್ತಿ ರಸ್ತೆಮಳೆ ಬಂದಾಗ ಕೆಸರು ಗದ್ದೆಯಂತಾಗಿ ಸಾರ್ವಜನಿಕರು ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ. ಬೆನವಳ್ಳಿಯಿಂದ ಮಸರೂರು, ಮಾಣಿಕರೆ, ಹಾಲಬಾವಿ, ಕೆಂಚನಾಲ, ಆಲುವಳ್ಳಿ, ಗಾಳಿಬೈಲು, ವಿರಕ್ತಮಠ, ಕಮದೂರು, ಮಾದಾಪುರ, ಕುರುಬರಜಡ್ಡು, ಲಕ್ಕವಳ್ಳಿ, ಕೆರೆಹಿತ್ತಲು, ಗಿಳಾಲಗುಂಡಿ, ಮುರುಘಾಮಠ ಆಚಾಪುರ ಇಸ್ಲಾಂಪುರ ಅಂದಾಸುರ ಹೀಗೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಸಂಪರ್ಕದ ರಸ್ತೆಯಾಗಿದ್ದು ಈ ರಸ್ತೆಯನ್ನು ಕಳೆದ ಹಲವಾರು ವರ್ಷಗಳಿಂದ ಈ…