ಸಾಹಿತಿ ನಯನ ಕೋಟ ರವರಿಗೆ ಒಲಿದ ರಾಜ್ಯಮಟ್ಟದ ಗುರುಕುಲ ಸಾರ್ವಭೌಮ ಕವಿತಾ ಕೃಷ್ಣ ಪ್ರಶಸ್ತಿ:
ಚಿತ್ರದುರ್ಗ: ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಪ್ರಶಸ್ತಿ “ಗುರುಕುಲ ಕಲಾ ಸಾರ್ವಭೌಮ ಕವಿತಾಕೃಷ್ಣ” ಪ್ರಶಸ್ತಿಗೆ ಚಿತ್ರದುರ್ಗದ ಸಾಹಿತಿಯಾದ ನಯನ ಕೋಟ ರವರು ಆಯ್ಕೆಯಾಗಿದ್ದಾರೆ. ಈ ಕುರಿತು ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಶ್ರೀ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಯನ ಕೋಟ ರವರು ಮೂಲತಃ ಉಡುಪಿ ಜಿಲ್ಲೆಯ ಕೋಟದವರು.ಪ್ರಸ್ತುತ 25 ವರ್ಷದಿಂದ ಚಿತ್ರದುರ್ಗದ ನಿವಾಸಿ. ಇವರ ತಾಯಿ ಸಾಹಿತಿ ನಾಗರತ್ನ ಬಿ(ವನಸುಮ ವಡ್ಡರ್ಸೆ) ಅವರಿಂದ ಪ್ರೇರಣೆ ಪಡೆದು 20 ವರ್ಷಗಳಿಂದ ಎಲೆಮರೆಯ…