ಸಾಹಿತಿ ಮೈನಾ ನಾಸಿರ್ ಕಾರ್ಗಲ್ ರವರಿಗೆ ಒಲಿದ ರಾಜ್ಯ ಮಟ್ಟದ ಗುರುಕುಲ ಸಾರ್ವಭೌಮ ಕವಿತಾಕೃಷ್ಣ ಪ್ರಶಸ್ತಿ :
ಕಾರ್ಗಲ್: ಗುರುಕುಲಾ ಕಲಾ ಪ್ರತಿಷ್ಠಾನ ರಾಜ್ಯ ಘಟಕದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದಗುರುಕುಲ ಸಾರ್ವಭೌಮ ಕವಿತಾಕೃಷ್ಣ ಪ್ರಶಸ್ತಿಗೆ ಕಾರ್ಗಲ್ ನ ಸಾಹಿತಿ ಮೈನಾ ನಾಸಿರ್ ಕಾರ್ಗಲ್ ರವರು ಆಯ್ಕೆಯಾಗಿದ್ದಾರೆ.ಈ ಕುರಿತು ಗುರುಕುಲ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈನಾ ನಾಸಿರ್ ಕಾರ್ಗಲ್ ರವರು ಮೂಲತಃ ಉಡುಪಿ ತಾಲೂಕಿನ ಕೋಟಾದ ಸಮೀಪವಿರುವ ಮಧುವನದವರು. ಮದುವೆಯ ನಂತರ22 ವರ್ಷಗಳಿಂದ ಇವರು ಸಾಗರ ತಾಲೂಕಿನ ಜೋಗದ ಸಮೀಪವಿರುವ ಕಾರ್ಗಲ್ ನಲ್ಲಿ ವಾಸವಾಗಿರುತ್ತಾರೆ. 25 ವರ್ಷಗಳಿಂದಲೂ ಸಾಹಿತ್ಯ…