ರಿಪ್ಪನ್ ಪೇಟೆ ರೋಟರಿ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ |Rotary
ರಿಪ್ಪನ್‌ಪೇಟೆ;-ಪಟ್ಟಣದ ಸಮಾಜ ಸೇವಕ ಹಾಗೂ ಕೊಡಗೈ ದಾನಿ ಹಾಸ್ಟಲ್ ಮಂಜಣ್ಣ ದಂಪತಿಗೆ ರಿಪ್ಪನ್‌ಪೇಟೆ ರೋಟರಿ ಸಂಸ್ಥೆಯವರು ಸನ್ಮಾನಿಸಿ ಗೌರವಿಸಿದರು. ಪಟ್ಟಣದ ಸಮೀಪದ ಗವಟೂರು ನಿವಾಸಿಯಾದ ಹಾಸ್ಟಲ್ ಮಂಜಣ್ಣ ಮುವತ್ತು ವರ್ಷಗಳ ಕಾಲ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತ ಹೊಂದಿ ತನ್ನ ಸೇವಾವಧಿಯಲ್ಲಿ ಉಳಿತಾಯ ಮಾಡಿದ ೬ ಲಕ್ಷ ಕ್ಕೂ ಅಧಿಕ ಮೊತ್ತದ ಹಣವನ್ನು “ಮುಕ್ತಿವಾಹಿನಿ’’ವಾಹನಕ್ಕೆ ವಿನಿಯೋಗಿಸಿ ಸಾರ್ವಜನಿಕರ ಸೇವೆಗಾಗಿ ರೋಟರಿ ಸಂಸ್ಥೆಯವರ ಮೂಲಕ ಲೋಕಾರ್ಪಣೆ ಮಾಡುವುದರೊಂದಿ ಎಲೆಮರೆಯ ಕಾಯಿಯಂತೆ ಎಡಗೈಗೆ ಕೊಟ್ಟಿರುವುದು ಬಲಗೈಗೆ…