Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ರಿಪ್ಪನ್‌ಪೇಟೆ : ಸಿಡಿಲು ಬಡಿದು ಮೂರು ಎಮ್ಮೆ ಸಾವು|lighting

ಮೇಯಲು ಹೋಗಿದ್ದ ಜಾನುವಾರುಗಳಿಗೆ ಸಿಡಿಲು ಬಡಿದು ಮೂರು ಎಮ್ಮೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತಮ್ಮಡಿಕೊಪ್ಪ ಗ್ರಾಮದ ಪುರುಮಠ ಎಂಬಲ್ಲಿ ನಡೆದಿದೆ. ಪುರುಮಠ ಗ್ರಾಮದ ರಾಜು ಎಂಬವರಿಗೆ ಸೇರಿದ ಮೂರು ಸಾಕು ಎಮ್ಮೆಗಳು ಮನೆ ಸಮೀಪದ ಕಾಡಿನಲ್ಲಿ ಮೇಯಲು ಹೋದಾಗ ಈ ಘಟನೆ ನಡೆದಿದೆ. ಗುರುವಾರ ಮೇಯಲು ಬಿಟ್ಟಿದ್ದ ಎಮ್ಮೆ ಮನೆಗೆ ಬಾರದ ಹಿನ್ನಲೆಯಲ್ಲಿ ಸ್ಥಳೀಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದ ಮನೆ ಮಂದಿ, ಕೊನೆಗೆ ಮನೆ ಸಮೀಪದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೂರು ಎಮ್ಮೆಯ…

Read More

ರೌಡಿ ಶೀಟರ್ ಸೈಫು ಕಾಲಿಗೆ ಪೊಲೀಸರ ಗುಂಡೇಟು|firing

ಶಿವಮೊಗ್ಗ : ಕೊಲೆ ಯತ್ನ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ ಮಾಡಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ದೊಡ್ಡದಾನವಂದಿ ಅರಣ್ಯದ ಬಳಿ ನಡೆದಿದೆ. ಮಾರ್ಕೆಟ್ ಫೌಜನ್​​ ಗ್ಯಾಂಗ್​ನ ಸದಸ್ಯನಾಗಿರುವ ರೌಡಿಶೀಟರ್​ ಸೈಫುಲ್ಲಾ ಖಾನ್​ ಅಲಿಯಾಸ್ ಸೈಫುಗೆ ಜಯನಗರ ಠಾಣೆ ಪಿಎಸ್​ಐ ನವೀನ್​ರಿಂದ ಫೈರಿಂಗ್​​ ಮಾಡಲಾಗಿದೆ.  ಕೊಲೆ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದಾಗ ಕಾನ್ಸ್​ಟೇಬಲ್​ ನಾಗರಾಜ್ ಮೇಲೆ ಸೈಫುಲ್ಲಾ ಖಾನ್​ನಿಂದ ಹಲ್ಲೆ ಮಾಡಲಾಗಿದೆ. ಆತ್ಮರಕ್ಷಣೆಗಾಗಿ ಸೈಫು ಕಾಲಿಗೆ ಗುಂಡು ಹಾರಿಸಲಾಗಿದೆ. ಸದ್ಯ ಗಾಯಾಳು ಸೈಫುಲ್ಲಾ ಸೇರಿದಂತೆ ಪೊಲೀಸರಿಗೆ ಮೆಗ್ಗಾನ್…

Read More

JDS ಪಕ್ಷದಿಂದ ವಿಧಾನಸಭೆ ಉಪ ನಾಯಕಿಯಾಗಿ ಶಾರದಾ ಪೂರ್ಯಾ ನಾಯಕ್ ಆಯ್ಕೆ|

ವಿಧಾನಸಭೆಯ ಜೆಡಿಎಸ್ ಪಕ್ಷದಿಂದ ನಾಯಕರಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪ ನಾಯಕಿಯನ್ನಾಗಿ ಶಾಸಕಿ ಶಾರದಾ ಪೂರ್ಯಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರನ್ನು ಪಕ್ಷದ ವರಿಷ್ಠರು ವಿಧಾನಸಭೆಯ ನಾಯಕರನ್ನಾಗಿ ನೇಮಿಸಿದ್ದರೇ, ಉಪ ನಾಯಕಿಯನ್ನಾಗಿ ಶಿವಮೊಗ್ಗ ಗ್ರಾಮಾಂತರದಿಂದ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕಿಯಾಗಿರುವಂತ ಶಾರದ ಪೂರ್ಯಾ ನಾಯಕ್ ಅವರನ್ನು ನೇಮಕ ಮಾಡಲಾಗಿದೆ. ಜೆಡಿಎಸ್ ಪಕ್ಷದ ಏಕೈಕ ಮಹಿಳಾ ಶಾಸಕಿಯಾಗಿರುವಂತ ಶಾರಾ ಪೂರ್ಯಾ ನಾಯಕ್ ಅವರನ್ನು ವಿಧಾನಸಭೆಯ ಉಪ ನಾಯಕಿಯನ್ನಾಗಿ…

Read More

ಗಂಡು ಕರುಗಳನ್ನು ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾದ ಅಪರಿಚಿತರು|bull calf

ಸಾಗರ : ಮಿಶ್ರ ತಳಿ ದನಗಳ ಒಟ್ಟು ನಾಲ್ಕು ಎಳೆಯ ಗಂಡು ಕರುಗಳನ್ನು ಯಾರಿಗೂ ಗೊತ್ತಾಗದಂತೆ ರಸ್ತೆ ಮಧ್ಯೆ ಅನಾಥವಾಗಿ ಬಿಟ್ಟು ಪರಾರಿಯಾದ ಘಟನೆ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಸರದ ಬನ್ನಿಕಟ್ಟೆ ವೃತ್ತದ ಬಳಿ ನಡೆದಿದೆ. ಪಶುಸಂಗೋಪನೆಯಲ್ಲಿ ಲಾಭದಾಯಕವಲ್ಲದ ಹೋರಿ ಕರುಗಳು ಒಂದು ವರ್ಷದೊಳಗಿನ ಪ್ರಾಯದಾಗಿದ್ದು, ಇವುಗಳಿಂದ ಯಾವುದೇ ಫಲವಿಲ್ಲ ಎಂಬ ಕಾರಣಕ್ಕೆ ಹೀಗೆ ಬಿಟ್ಟುಹೋಗಲಾಗಿದೆ ಎಂದು ಭಾವಿಸಲಾಗಿದೆ. ಈ ಹಂತದಲ್ಲಿ ಮಾಹಿತಿ ತಿಳಿದ ಸ್ಥಳೀಯ ಯುವಕರು ಸ್ಥಳಕ್ಕೆ ಆಗಮಿಸಿ, ಕರುಗಳಿಗೆ ನೀರು, ತಿಂಡಿ ಒದಗಿಸಿದರು….

Read More

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ|kimmane

ಶಿವಮೊಗ್ಗ : ಕಾಂಗ್ರೆಸ್ ಗ್ಯಾರೆಂಟಿಯ ಬಗ್ಗೆ ಮಾತನಾಡುವ ಮತ್ತು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದಲ್ಲಿ ಮೋದಿಯವರು ಅಧಿಕಾರ ಹಿಡಿಯುವಾಗ ನೀಡಿದ್ದ ಭರವಸೆಯಲ್ಲಿ  15 ಲಕ್ಷ ರೂ ಜನರ ಅಕೌಂಟ್ ಗೆ ಹಾಕುವುದಾಗಿ ಹೇಳಿಕೆ ನೀಡಿದ್ದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆಯನ್ನ ನೀಡಿದ್ದರು. ಆದರೆ 9 ವರ್ಷದಿಂದ ಇದ್ಯಾವುದನ್ನು ಈಡೇರಿಸಿಲ್ಲ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದರು. ಕೇಂದ್ರದ ಮೋದಿ ಸರ್ಕಾರವನ್ನು ವಿರೋಧಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಗರದ ಗಾಂಧಿ ಪಾರ್ಕ್ ನಲ್ಲಿ ಗಾಂಧಿ ಪ್ರತಿಮೆಯ…

Read More

ಕಾರು ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರಿಗೆ ಗಾಯ|accident

ಶಿವಮೊಗ್ಗ : ಮಂಡಗದ್ದೆ ರಸ್ತೆಯಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ  ರಸ್ತೆ ಅಪಘಾತ ಸಂಭವಿಸಿದ್ದು ಓರ್ವರಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿ ಕಡೆ ಹೋಗುತ್ತಿದ್ದ ಕೆಎ 14 ಪಿ 2982 ಕ್ರಮ ಸಂಖ್ಯೆಯ ಟಾಟಾ ಸಂಸ್ತೆಯ ಕಾರಿಗೆ ಸಕ್ರೇಬೈಲಿನ ಬಳಿಯ ತಿರುವಿನಲ್ಲಿ  ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕೆಎ 11-7360 ಕ್ಯಾಂಟರ್ ಗೆ  ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ಸ್ಥಳದಿಂದ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿ ಇಬ್ಬರು ಇದ್ದಾರೆ ಎಂಬ ಮಾಹಿತಿ ಇದ್ದು ಅದರಲ್ಲಿ…

Read More

ರಿಪ್ಪನ್‌ಪೇಟೆ : ತೋಟದಲ್ಲಿ ಹುಲ್ಲು ಕೊಯ್ಯುವಾಗ ಹಾವು ಕಚ್ಚಿ ವೃದ್ದೆ ಸಾವು|snake bite

ಮನೆ ಹಿಂಬಾಗದ ಅಡಿಕೆ ತೋಟದಲ್ಲಿ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಸಮೀಪದ ಕೆ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಯಮ್ಮ (72 )ಹಾವು ಕಡಿತದಿಂದ ಮೃತಪಟ್ಟ ಮಹಿಳೆಯಾಗಿದ್ದು, ಜಾನುವಾರುಗಳಿಗೆ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಶನಿವಾರ ಮಧ್ಯಾಹ್ನ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿದೆ. ಕೂಡಲೇ ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರುವಾಗ ಮಹಿಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ…

Read More

ರಿಪ್ಪನ್‌ಪೇಟೆ: ಚಲಿಸುತಿದ್ದ ಬೈಕ್ ಗೆ ನರಿ ಅಡ್ಡ ಬಂದು ಅಪಘಾತ – ಗಾಯಾಳು ಮೆಗ್ಗಾನ್ ದಾಖಲು | ಜೀವನ್ಮರಣ ಹೋರಾಟದಲ್ಲಿದ್ದ ನರಿಗೆ ಸ್ಪಂದಿಸಿದ ಅರಣ್ಯ ಇಲಾಖೆ|Accident

ರಿಪ್ಪನ್‌ಪೇಟೆ : ಚಲಿಸುತಿದ್ದ ಬೈಕ್ ಗೆ ನರಿ ಅಡ್ಡ ಬಂದು ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಪಟ್ಟಣದ ಸಮೀಪದ ವರಾನಹೊಂಡದ ಮುಖ್ಯರಸ್ತೆಯಲ್ಲಿ ರಿಪ್ಪನ್‌ಪೇಟೆ ಕಡೆಯಿಂದ ಮೂಗೂಡ್ತಿ ಕಡೆಗೆ ತೆರಳುತಿದ್ದ ಹೀರೋ ಹೊಂಡ ಸ್ಪ್ಲೆಂಡರ್ ಬೈಕ್ ಗೆ ನರಿ ಅಡ್ಡ ಬಂದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ತೀರ್ಥಹಳ್ಳಿ ರಸ್ತೆಯ ಕುವೆಂಪು ನಗರದ ನಿವಾಸಿ ಉಪನ್ಯಾಸಕ ಶ್ರೀಧರ್(50) ರವರಿಗೆ ತಲೆ ಹಾಗೂ ಕೈ ಗೆ ಗಂಭೀರ ಗಾಯಗಳಾಗಿದ್ದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ…

Read More

ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸಲು ಎನ್ಎಸ್ಎಸ್ ಶಿಬಿರ ಸಹಕಾರಿ|NSS

ವಿದ್ಯಾರ್ಥಿಗಳಲ್ಲಿ  ಸೇವಾ ಮನೋಭಾವನೆ ಬೆಳೆಸಲು ಎನ್ಎಸ್ಎಸ್ ಸಹಕಾರಿ ರಿಪ್ಪನ್‌ಪೇಟೆ;-ವಿದ್ಯಾರ್ಥಿ ಜೀವನ ಅತ್ಯುತ್ತಮವಾಗಿದ್ದು ತಮ್ಮ ವ್ಯಾಸಂಗದ ಜೊತೆ ಗ್ರಾಮದಲ್ಲಿನ ಸ್ವಚ್ಚತೆ ಹಾಗೂ ಪರಿಸರ ರಕ್ಷಣೆಯೊಂದಿಗೆ ಗ್ರಾಮೀಣ ಭಾಗದ ಮೂಲಭುತ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಸೇವಾ ಶಿಬಿರಗಳು ಪೂರಕವಾಗಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು. ಸಮೀಪದ ಕಲ್ಲುಹಳ್ಳ ಮಲೆನಾಡು ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಅವರಣದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ವತಿಯಿಂದ ಅಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷೀಕ…

Read More

ಆರೋಗ್ಯದಾಯಕ ಸಮಾಜ ನಿರ್ಮಾಣಕ್ಕಾಗಿ ಜೈನ ಧರ್ಮ – ಹೊಂಬುಜ ಶ್ರೀ | ಕೆನಡಾದಲ್ಲಿ ನಡೆದ 24 ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

ಹೊಂಬುಜ : ಕೆನಡಾದ ಟೊರೆಂಟೋ ನಗರದಲ್ಲಿ ಜೈನ ಮಂದಿರದಲ್ಲಿ ಇಪ್ಪತ್ತನಾಲ್ಕು ತೀರ್ಥಂಕರರ ವಿಗ್ರಹಗಳಿಗೆ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪಿಸಲಾಯಿತು. ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸಾನಿಧ್ಯ ವಹಿಸಿ “ಜೈನ ಧರ್ಮ ಅನಾದಿ ಕಾಲದಿಂದಲೂ ಅಹಿಂಸೆ, ಸತ್ಯ, ಅಚೌರ್ಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯೆ ಆಚರಣೆಯ ಮಹತ್ವವನ್ನು ಆರೋಗ್ಯದಾಯಕ ಸಮಾಜದ ನಿರ್ಮಾಣಕ್ಕಾಗಿ ಉಪದೇಶಿಸಲ್ಪಟ್ಟಿದೆ” ಎಂದು ವಿವರಿಸಿದರು. ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂದರೆ ಬದುಕುವ ಮಾರ್ಗವನ್ನು ಬದಲಿಸಿಕೊಳ್ಳ ಬೇಕಾಗುತ್ತದೆ. ಮನುಷ್ಯನು ಜೀವನದಲ್ಲಿ ಎಲ್ಲಾ ರೀತಿಯ ಪ್ರಗತಿಯನ್ನು…

Read More