Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Ripponpete | ಅಕ್ರಮವಾಗಿ ಮರಳು,ಕಲ್ಲು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ..!

Ripponpete | ಅಕ್ರಮ ಮರಳು,ಕಲ್ಲು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ..! ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್‌ ಲಾರಿ,ಹಾಗೂ ಕಲ್ಲು ಸಾಗಿಸುತಿದ್ದ ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದಲ್ಲಿ ಸೋಮವಾರ ರಾತ್ರಿ ಹರತಾಳು ರಸ್ತೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 2 ಟಿಪ್ಪರ್‌ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಗವಟೂರು ಬಳಿಯಲ್ಲಿ ಅಕ್ರಮ ಕಲ್ಲು ಸಾಗಿಸುತಿದ್ದ ಒಂದು ಟಿಪ್ಪರ್ ಲಾರಿಯನ್ನು ವಶಕ್ಕೆ…

Read More

Ripponpete | ಮೋದಿ ಹೆಸರಿನಲ್ಲಿ ಗೆದ್ದವರು ಹಿಂದೂ‌ ಕಾರ್ಯಕರ್ತರ ರಕ್ಷಣೆಗೆ ನಿಲ್ಲಲಿ – ಪ್ರಮೋದ್ ಮುತಾಲಿಕ್

ಮೋದಿ ಹೆಸರಿನಲ್ಲಿ ಗೆದ್ದವರು ಹಿಂದೂ‌ ಕಾರ್ಯಕರ್ತರ ರಕ್ಷಣೆಗೆ ನಿಲ್ಲಲಿ – ಪ್ರಮೋದ್ ಮುತಾಲಿಕ್  ರಿಪ್ಪನ್‌ಪೇಟೆ : ಮೋದಿ ಹೆಸರಿನಲ್ಲಿ ಗೆಲ್ಲುವ ಸಂಸದರು ಮುಂದಿನ ದಿನಗಳಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಿ ಘೋಷಿಸುವಂತೆ ಲೋಕಸಭೆಯಲ್ಲಿ ಒತ್ತಾಯಿಸಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ನಾಯಕ ಪ್ರಮೋದ್ ಮುತ್ತಾಲಿಕ್ ಹೇಳಿದರು. ಇಂದು ಹೊಸನಗರದ ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿ ಹಿಂದಿರುಗುವಾಗ ಮಾರ್ಗ ಮಧ್ಯೆ ರಿಪ್ಪನ್‌ಪೇಟೆಗೆ ಭೇಟಿ ನೀಡಿ ಹಿಂದೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮ್ಮದು 10 ಅಂಶಗಳ…

Read More

Ripponpete | ರಸ್ತೆ ಅಗಲೀಕರಣಕ್ಕೆ ಬಡ ಮಹಿಳೆಯ ಮನೆ ನೆಲಸಮ – ಪಿಡಿಓ ಮಧುಸೂಧನ್ ಭೇಟಿ , ಸಹಾಯದ ಭರವಸೆ

Ripponpete | ರಸ್ತೆ ಅಗಲೀಕರಣಕ್ಕೆ ಬಡ ಮಹಿಳೆಯ ಮನೆ ನೆಲಸಮ – ಪಿಡಿಓ ಮಧುಸೂಧನ್ ಭೇಟಿ , ಸಹಾಯದ ಭರವಸೆ ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಬಡ ಮಹಿಳೆಯ ಮನೆಯನ್ನು ಒಡೆದು ಹಾಕಿದ್ದು ದಿಕ್ಕು ತೋಚದಂತಾಗಿದ್ದ ಕುಟುಂಬಕ್ಕೆ ಗ್ರಾಪಂ ಪಿಡಿಓ ಮಧುಸೂಧನ್ ಧೈರ್ಯ ತುಂಬಿ ಸಹಾಯದ ಭರವಸೆ ನೀಡಿದ್ದಾರೆ. ಸಾಗರ ರಸ್ತೆ ಅಗಲೀಕರಣ ಕಾಮಗಾರಿ ಸುಮಾರು 5.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ ಈ ಹಿನ್ನಲೆಯಲ್ಲಿ ಸಾಗರ ರಸ್ತೆಯ ಬಡ…

Read More

ಶಿಕಾರಿಪುರದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ – ಈಶ್ವರಪ್ಪ ಗುಡುಗು | KSE

ಶಿಕಾರಿಪುರದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ – ಈಶ್ವರಪ್ಪ ಗುಡುಗು ಶಿವಮೊಗ್ಗ : ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ದುಡ್ಡು ನಡೆಯಲ್ಲ, ಶಿಕಾರಿಪುರದಲ್ಲಿ ಅಪ್ಪ-ಮಕ್ಕಳ ಶಿಕಾರಿ ಮಾಡುತ್ತೇನೆ, ಬಿಡುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಅವರ ಸ್ಥಿತಿ ನೋಡಿಕೊಳ್ಳಲಿ. ಲಿಂಗಾಯತರಾದಿಯಾಗಿ ಎಲ್ಲರೂ ಅವರ ಕುಟುಂಬದ ಬಗ್ಗೆ ಜರಿಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ದುಡ್ಡು ನಡೆಯಲ್ಲ. ಶಿಕಾರಿಪುರದಲ್ಲಿ ಅಪ್ಪ-ಮಕ್ಕಳ ಶಿಕಾರಿ ಮಾಡುತ್ತೇನೆ ಎಂದರು. …

Read More

ಕನ್ನಡ ಚಿತ್ರರಂಗದಿಂದ ಕಣ್ಮರೆಯಾದ ಪ್ರಚಂಡ ಕುಳ್ಳ – ಆಪ್ತಮಿತ್ರ ದ್ವಾರಕೀಶ್ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು | sandalwood

ಕನ್ನಡ ಚಿತ್ರರಂಗದಿಂದ ಕಣ್ಮರೆಯಾದ ಪ್ರಚಂಡ ಕುಳ್ಳ – ಆಪ್ತಮಿತ್ರ ದ್ವಾರಕೀಶ್ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು | sandalwood ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ಕರುನಾಡ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ಹಿರಿಯ ನಟ ದ್ವಾರಕೀಶ್‌ ಅವರು ಇಂದು (ಏಪ್ರಿಲ್ 16) ಹೃದಯಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಇನ್ನಿಲ್ಲ ಎಂಬ ಸುದ್ದಿ ಸಾಕಷ್ಟು ನೋವುಂಟು ಮಾಡಿದೆ….

Read More

ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್ ನಿಧನ | Thirthahalli

ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್ ನಿಧನ! ತೀರ್ಥಹಳ್ಳಿ : ಶ್ವಾಸಕೋದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್. ಪಿ ಇಂದು ಸಂಜೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.  ಆರೋಗ್ಯ ಗಂಭೀರವಾಗಿ ಹದಗೆಟ್ಟಿದ್ದ ಕಾರಣ ಇಂದು ಬೆಳಿಗ್ಗೆಯಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ .ಸಂಜೆ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಜುನಾಥ್ ರವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More

ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು – ಬಿ ವೈ ವಿಜಯೇಂದ್ರ | BYV

ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು – ಬಿ ವೈ ವಿಜಯೇಂದ್ರ ಬಿಜೆಪಿ ವಿರುದ್ಧ ಬಂಡಾಯವೆದ್ದು, ಶಿವಮೊಗ್ಗದಿಂದ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ  ಪರ ಪ್ರಚಾರ ನಡೆಸಿದ ಅವರು, ಈಶ್ವರಪ್ಪ ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ರು. ಈ ಹಿಂದೆ ಈಶ್ವರಪ್ಪ ಸಚಿವರು, ಡಿಸಿಎಂ ಆಗಿದ್ದರು. ಹಾಗಿದ್ದರೂ ಶಿವಮೊಗ್ಗಕ್ಕೆ ಅವರ ಕೊಡುಗೆ ಏನು ಅಂತ ಪ್ರಶ್ನಿಸಿದ್ರು….

Read More

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರ‍್ಯಾಲಿ ವೇಳೆ LED ಬೋರ್ಡ್ ಕುಸಿದು ನಾಲ್ವರಿಗೆ ಗಾಯ

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರ‍್ಯಾಲಿ ವೇಳೆ LED ಬೋರ್ಡ್ ಕುಸಿದು ನಾಲ್ವರಿಗೆ ಗಾಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆ ರ‍್ಯಾಲಿ ವೇಳೆ ಎಲ್‌ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಶಿವಮೊಗ್ಗ (Shivamogga) ನಗರದ ಗಾಂಧಿ ಬಜಾರ್‌ನಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಭಾರಿ ಗಾತ್ರದ ಗಾತ್ರದ ಎಲ್‌ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ಖಾಸಗಿ ನ್ಯೂಸ್‌ ಚಾನೆಲ್‌ ವರದಿಗಾರ, ಮಹಿಳೆ ಸೇರಿ ನಾಲ್ವರು ಗಾಯಗೊಂಡಿದ್ದಾರೆ….

Read More

sagara | ಅಡಿಕೆ ವ್ಯಾಪಾರಿಗಳಿಗೆ 4 ಕೋಟಿ ರೂ ವಂಚಿಸಿದ್ದ ಆರೋಪಿಯ ಬಂಧನ

ಅಡಿಕೆ ವ್ಯಾಪಾರಿಗಳಿಗೆ 4 ಕೋ. ರೂ. ವಂಚನೆ : ಓರ್ವನ ಸೆರೆ ಸಾಗರ :  ಸುಮಾರು 60ಕ್ಕೂ ಹೆಚ್ಚು ಸಣ್ಣ ಅಡಿಕೆ ವ್ಯಾಪಾರಿಗಳಿಗೆ ಅಂದಾಜು 4 ಕೋ. ರೂ. ವಂಚಿಸಿದ್ದ ಆರೋಪದಲ್ಲಿ ನಗರದ ಅಜೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ನೆಹರು ನಗರದ ಮದೀನಾ ಮಸೀದಿ ಪಕ್ಕದ ನಿವಾಸಿಯಾಗಿದ್ದ ಅಜೀಂ ಬೆಂಗಳೂರಿನಲ್ಲಿ ಖಾಸಗಿ ಚಿಟ್‌ಫಂಡ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕೊರೊನಾ ಕಾಲದಲ್ಲಿ, ಅಂದರೆ 2020ರಲ್ಲಿ ಸಾಗರಕ್ಕೆ ಬಂದು ಸಣ್ಣದಾಗಿ ಅಡಿಕೆ ವ್ಯವಹಾರ ಆರಂಭಿಸಿದ್ದ. ಜತೆಯಲ್ಲಿ ಆನ್‌ಲೈನ್‌ ಜೂಜಾಟ…

Read More

Shivamogga | ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಕೆ

ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಕೆ ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಸೋಮವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು. ಈ ವೇಳೆ ಗೀತಾ ಜೊತೆ ಪತಿ ಶಿವರಾಜಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇದ್ದರು. ಗೀತಾ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ನಟ ಶಿವರಾಜಕುಮಾರ್ ಅವರತ್ತ ಕೈಬೀಸಿ ‘ಶಿವಣ್ಣ, ಶಿವಣ್ಣ’ ಎಂದು ಕೂಗಿದರು….

Read More