Coffee shop ವಾಶ್ ರೂಮ್ ನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ವೀಡಿಯೋ – ಶಿವಮೊಗ್ಗ ಮೂಲದ ಆರೋಪಿಯ ಬಂಧನ
ಕಾಫಿ ಶಾಪ್ ನ ವಾಶ್ ರೂಮ್ ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಮನೋಜ್ ಬಂಧಿತ ಆರೋಪಿ. ಬೆಂಗಳೂರಿನ ಬಿಇಎಲ್ ರಸ್ತೆಯ ಥರ್ಡ್ ವೇವ್ ಕೆಫೆಯಲ್ಲಿ ಈ ಘಟನೆ ನಡೆದಿದೆ.
ಕೆಫೆಯಲ್ಲಿ ಕಾಫಿ ಮೇಕರ್ ಆಗಿದ್ದ ಮನೋಜ್ ತನ್ನ ಮೊಬೈಲ್ ನ್ನು ಫ್ಲೈಟ್ ಮೋಡ್ ನಲ್ಲಿ ರೆಕಾರ್ಡಿಂಗ್ ಆನ್ ಮಾಡಿ, ವಾಶ್ ರೂಮ್ ನಲ್ಲಿ ಇಟ್ಟಿದ್ದ.
ಮಹಿಳೆಯೊಬ್ಬರು ವಾಶ್ ರೂಮ್ ಗೆ ಹೋದಾಗ ಮೊಬೈಲ್ ಇರುವುದು ಪತ್ತೆಯಾಗಿದೆ. ತಕ್ಷಣ ಸದಾಶಿವನಗರ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶಿವಮೊಗ್ಗ ಮೂಲದ ಆರೋಪಿ ಮನೋಜ್ ನನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಹಿಳೆಯ ಕ್ಷಮೆ ಕೇಳಿದ ಕಾಫಿ ಶಾಪ್ ಮಾಲೀಕರು, ಇತರ ಸಿಬ್ಬಂದಿಗಳು, ಮನೋಜ್ ನನ್ನು ಕೆಲಸದಿಂದ ವಜಾ ಮಾಡಿದ್ದಾರೆ.