ವ್ಯಕ್ತಿಯನ್ನು ಬೆದರಿಸಿ ಲಕ್ಷಾಂತರ ರೂ ದರೋಡೆ – ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ ಪೊಲೀಸರು

ವ್ಯಕ್ತಿಯನ್ನು ಬೆದರಿಸಿ ಲಕ್ಷಾಂತರ ರೂ ದರೋಡೆ – ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ ಪೊಲೀಸರು

ಬೈಕ್ ನಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಬೆದರಿಸಿ ದರೋಡೆ ಮಾಡಿದ್ದ ಪ್ರಕರಣವನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಭೇದಿಸಿದ್ದು,  ಇಬ್ಬರು ಆರೋಪಿಗಳನ್ನ ಬಂಧಿಸಿ, 1.5 ಲಕ್ಷ ರೂ.ಗಳ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.

ಘಟನೆಯ ಹಿನ್ನಲೆ :

ಆ.09 ರಂದು ಶಾರದಾ ಮಂದಿರದ ಬಳಿ ನಿಂತಿದ್ದ  ಮುರುಳಿಧರ್ (64) ಎಂಬುವರಿಗೆ ಬೈಕ್ ನಲ್ಲಿ ಬಂದಿದ್ದ 4-5 ಜನ ಹುಡುಗರು  ಹೆದರಿಸಿ ಅವರ ಬಳಿ ಇದ್ದ ಉಂಗುರ, ಕೊರಳಿನ ಚಿನ್ನದ ಸರ, ಹಣ ಮತ್ತು ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಪ್ರಕರಣ ಭದ್ರಾವತಿಯ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.   

ಪ್ರರಕಣದಲ್ಲಿ ಸುಲಿಗೆ ಮಾಡಿಕೊಂಡ ಹೋದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮ ರಡ್ಡಿ  ಮತ್ತು  ಕಾರ್ಯಪ್ಪ ಎ ಜಿ,ರವರ  ಮಾರ್ಗದರ್ಶನದಲ್ಲಿ, ಭದ್ರಾವತಿಯ ಡಿವೈಎಸ್ಪಿ ನಾಗರಾಜ್ ಎಂಬುವರ ಮೇಲ್ವಿಚಾರಣೆಯಲ್ಲಿ ನಗರ ವೃತ್ತದ ಸಿಪಿಐ ಕುಮಾರ್  ನೇತೃತ್ವದಲ್ಲಿ ನ್ಯೂ ಪೊಲೀಸ್ ಠಾಣೆಯ ಪಿಎಸ್ಐ ಟಿ. ರಮೇಶ,  ಭಾರತಿ ಮತ್ತು ಹಳೆನಗರ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ ನಾಯ್ಕ ಹಾಗೂ ನ್ಯೂಟೌನ್ ಸಿಬ್ಬಂಧಿಗಳಾದ  ಟಿ ಪಿ ಮಂಜಪ್ಪ ಎ ಎಸ್ ಐ,  ಸಿ.ಹೆಚ್.ಸಿ  ನವೀನ್, ಸಂತೋಷ ನಾಯ್ಕ, ಮತ್ತು ಸಿಪಿಸಿ ಪ್ರಸನ್ನ ಹಾಗೂ ಹಳೆನಗರ ಪೊಲೀಸ್ ಠಾಣೆಯ ಸಿ.ಹೆಚ್.ಸಿ ಹಾಲಪ್ಪ, ಸಿಪಿಸಿ ಮೌನೇಶ ಶಿಕಲ್, ಚಿಕ್ಕಪ್ಪ ಎಪ್ ಎಸ್, ಪ್ರವೀಣ್ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ಪ್ರಕರಣದ  ಆರೋಪಿಗಳಾದ 1) ಜಬೀವುಲ್ಲಾ @ ಮಲ್ಲಿ, 23 ವರ್ಷ, ಮೊಮಿನ್ ಮೊಹಲ್ಲಾ ಅನ್ವರ್ ಕಾಲೋನಿ ಭದ್ರಾವತಿ ಮತ್ತು 2) ಮಹಮದ್ ಗೌಸ್ @ ಗುಂಡಾ, 24 ವರ್ಷ, ಮೊಮಿನ್ ಮೊಹಲ್ಲಾ ಅನ್ವರ್ ಕಾಲೋನಿ, ಭದ್ರಾವತಿ ಇವರನ್ನು ಬಂಧಿಸಲಾಗಿದೆ, ಆರೋಪಿಗಳಿಂದ ಅಂದಾಜು ಮೌಲ್ಯ 1,59,000/- ರೂ ಗಳ 24.5 ಗ್ರಾಂ ತೂಕದ ಬಂಗಾರದ ಕೊರಳ ಸರ ಮತ್ತು ಉಂಗುರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 35,000/- ರೂ ಗಳ ಬೈಕ್ ಸೇರಿ ಒಟ್ಟು 1,94,000/- ಮೌಲ್ಯದ ಮಾಲನ್ನು ಆರೋಪಿತರಿಂದ  ವಶಪ ಪಡಿಸಿಕೊಳ್ಳಲಾಗಿದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *