ಸಾರ್ವಜನಿಕ ಹಬ್ಬಗಳ ಹಿನ್ನಲೆ ರೌಡಿಗಳ ಪರೇಡ್ | 110 ರೌಡಿಗಳಿಗೆ ಎಸ್ ಪಿ ವಾರ್ನಿಂಗ್
ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ರೌಡಿಗಳ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಮುಂಜಾಗ್ರತಾ ಕ್ರಮವಾಗಿ ದಿನಾಂಕಃ 09-08-2024 ರಂದು ಸಂಜೆ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದ ಆವರಣದಲ್ಲಿ ಒಟ್ಟು 110 ಜನ ರೌಡಿಗಳನ್ನ ಪರೆಡ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಅವರುಗಳ ವೈಯಕ್ತಿಕ ವಿವರ ಜೊತೆಗೆ ಆದಾಯದ ಮೂಲಗಳನ್ನು ಅರಿತ ಎಸ್‌ಪಿ ಮಿಥುನ್ ಕುಮಾರ್, ರವರು ಕೆಲವೊಂದು ಎಚ್ಚರಿಕೆಗಳನ್ನ ನೀಡಿದ್ದಾರೆ.
ಎಸ್ ಪಿ ಮಿಥುನ್ ಕುಮಾರ್ ಜಿ.ಕೆ ರೌಡಿ ಪರೇಡ್‌ನಲ್ಲಿ ಹಿಸ್ಟರಿ ಶೀಟರ್‌ಗಳಿಗೆ ಈ ಕೆಳಕಂಡಂತೆ ಎಚ್ಚರಿಕೆ ನೀಡಿದ್ದಾರೆ.
1) ವಾರದಲ್ಲಿ 02 ಬಾರಿ ಕಡ್ಡಾಯವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ಹಾಜರಾತಿ ನೀಡುವುದು.
2) ನಿಮ್ಮ ಚಟುವಟಿಕೆ ಮತ್ತು ಚಲನ ವಲನಗಳ ಮೇಲೆ ನಿಗಾ ಇಡಲಾಗಿದ್ದು, ಒಂದು ವೇಳೆ ಯಾವುದಾದರೂ ಕಾನೂನು ಬಾಹೀರ ಚಟುವಟಿಕೆ ಮತ್ತು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ, ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.
3) ನಿಮ್ಮ ಆದಾಯದ ಮೂಲ ಮತ್ತು ಸ್ನೇಹಿತರ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಿಗಾ ಇಡಲಾಗುವುದು, ಒಂದು ವೇಳೆ ನೀವು ಸ್ನೇಹಿತರನ್ನು ಸೇರಿಸಿಕೊಂಡು ಗುಂಪು ಕಟ್ಟಿಕೊಂಡು ಅಡ್ಡಗಳನ್ನು ಮಾಡಿಕೊಳ್ಳುವುದು, ರಾತ್ರಿ ವೇಳೆ ಮನೆಯಲ್ಲಿರದೇ ಅನಾವಶ್ಯಕವಾಗಿ ಹೊರಗಡೆ ಸುತ್ತಾಡುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು.
4) ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಂಡು, ಶಿಸ್ತಾಗಿ ಕಾಣುವಂತಹ ಉಡುಪುಗಳನ್ನು ಧರಿಸಿ ಮತ್ತು ಕಾನೂನನ್ನು ಗೌರವಿಸಿ ಹಾಗೂ ಕಾನೂನನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವಿಸಿ
ಒಳ್ಳೆಯ ರೀತಿಯಲ್ಲಿ ಬದುಕಿದರೆ ನಿಮಗೆ ಒಳ್ಳೆಯದು. ಇಲ್ಲದೇ ಹೋದಲ್ಲಿ ಪೊಲೀಸ್ ಇಲಾಖೆಯು ನಿಮ್ಮ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.