Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಪಂಚರ್ ಹಾಕುವ ವೇಳೆ ಬೈಕ್ ಡಿಕ್ಕಿಯಾಗಿ ಲಾರಿ ಚಾಲಕ ಸಾವು

ಪಂಚರ್ ಹಾಕುವ ವೇಳೆ ಬೈಕ್ ಡಿಕ್ಕಿಯಾಗಿ ಲಾರಿ ಚಾಲಕ ಸಾವು ಶಿಕಾರಿಪುರ : ಲಾರಿ ಪಂಚರ್ ಆಗಿದ್ದ ಕಾರಣ ಟಯರ್ ಬದಲಾವಣೆ  ಮಾಡುತ್ತಿರುವ ವೇಳೆ ಬೈಕ್ ಒಂದು ಗುದ್ದಿದ ಪರಿಣಾಮ ರಸ್ತೆಯಲ್ಲಿಲಾರಿ ಚಾಲಕ ದುರ್ಮರಣ ಹೊಂದಿದ ಘಟನೆ ಇಂದು ಸಂಜೆ ನಡೆದಿದೆ. ತೀರ್ಥಹಳ್ಳಿಯ ಯಡೇಹಳ್ಳಿಕೆರೆಯ ರಮೇಶ್ (54 ವರ್ಷ ) ಮೃತ ದುರ್ಧೈವಿ. ಶಿಕಾರಿಪುರ ಸಮೀಪದ ಕೆಂಗಟ್ಟಿ ಮತ್ತು ಸಿದ್ದನ್ಪುರ ಗ್ರಾಮದ ಮುಖ್ಯ ರಸ್ತೆಯ ಬಳಿ ಲಾರಿ ಪಂಚರ್ ಆಗಿದ್ದಕ್ಕಾಗಿ ಲಾರಿಯನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿಕೊಂಡು ಟಯರ…

Read More

HOSANAGARA | ಹೆಚ್ ಆರ್ ಪ್ರಕಾಶ್ ಇನ್ನಿಲ್ಲ..

HOSANAGARA | ಹೆಚ್ ಆರ್ ಪ್ರಕಾಶ್ ಇನ್ನಿಲ್ಲ.. ಹೊಸನಗರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಹಾಗೂ ಮಾಜಿ ಕಾರ್ಯದರ್ಶಿ  ಹೆಚ್ ಆರ್ ಪ್ರಕಾಶ್ ಇಂದು ಅವರ ಸ್ವಗೃಹ ದಲ್ಲಿ ನಿಧನರಾದರು. ಪಟ್ಟಣದ ಹಳೆ ಸಾಗರ ರಸ್ತೆಯ ದಿವಂಗತ ಸೋಡಾ ರಾಜಪ್ಪನವರ ಪುತ್ರರಾದ ಎಚ್ ಆರ್ ಪ್ರಕಾಶ್ ಅವರು ಇಂದು ಮಧ್ಯಾಹ್ನ 1:30 ಸಮಯದಲ್ಲಿ ತಮ್ಮ 63 ರ ಹರೆಯದಲ್ಲಿ ಅವರ ಸ್ವಗೃಹದಲ್ಲಿ ತೀವ್ರ ಹೃದಯಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು. ಅವಿವಾಹಿತರಾಗಿದ್ದ ಅವರು ಪಟ್ಟಣದ ಶ್ರೀ…

Read More

RIPPONPETE | ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕ್ ಒಕ್ಕಲಿಗ ಸಂಘದಿಂದ ಪ್ರತಿಭಟನೆ

RIPPONPETE | ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕ್ ಒಕ್ಕಲಿಗ ಸಂಘದಿಂದ ಪ್ರತಿಭಟನೆ ರಿಪ್ಪನ್‌ಪೇಟೆ :ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮುನಿರತ್ನನನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ವಿನಾಯುಕ ವೃತ್ತದಿಂದ ಮೆರವಣಿಗೆ ತೆರಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಶಾಸಕ ಮುನಿರತ್ನ ವಿರುದ್ಧ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಎಂ ಎಂ ಪರಮೇಶ್ ಮಾತನಾಡಿ,…

Read More

ಶಿವಮೊಗ್ಗದಿಂದ ಸ್ಪೈಸ್ ಜೆಟ್ ಹಾರಾಟ – ವೇಳಾಪಟ್ಟಿ ಹೀಗಿದೆ ನೋಡಿ

ಶಿವಮೊಗ್ಗದಿಂದ ಸ್ಪೈಸ್ ಜೆಟ್ ಹಾರಾಟ – ವೇಳಾಪಟ್ಟಿ ಹೀಗಿದೆ ನೋಡಿ ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ಶಿವಮೊಗ್ಗ – ಹೈದರಾಬಾದ್‌ ಮತ್ತು ಶಿವಮೊಗ್ಗ – ಚೆನ್ನೈ ವಿಮಾನಯಾನ ಸೇವೆ ಆರಂಭಗೊಳ್ಳುತ್ತಿದೆ . ಅ.10ರಿಂದ ಶಿವಮೊಗ್ಗದಿಂದ ಮೂರನೆ ವಿಮಾನಯಾನ ಸಂಸ್ಥೆ ಹಾರಾಟ ನಡೆಸಲಿದೆ. ಚೆನ್ನೈಯಿಂದ ಶಿವಮೊಗ್ಗ: ಬೆಳಗ್ಗೆ 10:40ಕ್ಕೆ ಹೊರಟು, ಮಧ್ಯಾಹ್ನ 12:10ಕ್ಕೆ ತಲುಪಲಿದೆ. ಶಿವಮೊಗ್ಗದಿಂದ ಹೈದರಾಬಾದ್: ಮಧ್ಯಾಹ್ನ 12:35ಕ್ಕೆ ಹೊರಟು, ಮಧ್ಯಾಹ್ನ 2:05ಕ್ಕೆ ತಲುಪಲಿದೆ. ಹೈದರಾಬಾದ್‌ನಿಂದ ಶಿವಮೊಗ್ಗ: ಮಧ್ಯಾಹ್ನ 2:40ಕ್ಕೆ ಹೊರಟು, ಸಂಜೆ 4:10ಕ್ಕೆ ತಲುಪಲಿದೆ. ಶಿವಮೊಗ್ಗದಿಂದ…

Read More

ಕಾಡಾನೆ ದಾಳಿಗೆ ಬೆಳೆ ನಾಶ – ರೈತರ ಆಕ್ರೋಶ

ಕಾಡಾನೆ ದಾಳಿಗೆ ಬೆಳೆ ನಾಶ – ರೈತರ ಆಕ್ರೋಶ ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಭಾನುವಾರ (ಸೆ. 22) ತಡರಾತ್ರಿ ಎರಡು ಕಾಡಾನೆಗಳು ದಾಳಿ ನಡೆಸಿ ರೈತರ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ. ಪುರದಾಳು ಗ್ರಾಮದ ರಾಜೇಶ್ ಹಾಗೂ ಬೀರಪ್ಪ, ನಾಗರಾಜ್ ಎಂಬುವರ ತೋಟ -ಹೊಲಗಳಿಗೆ ಭಾನುವಾರ (ಸೆ.22) ರಾತ್ರಿ ಎರಡು ಕಾಡಾನೆಗಳು ದಾಳಿ ಮಾಡಿ ಅಡಿಕೆ ಹಾಗೂ ತೆಂಗಿನ ಮರಗಳನ್ನು ಬುಡಮೇಲು ಮಾಡಿದ್ದು ಜೊತೆಗೆ ಜೋಳ ಹಾಗೂ…

Read More

ಕೆಲಸಕ್ಕೆಂದು ಮನೆಯಿಂದ ಹೋಗಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಚಾನಲ್ ನಲ್ಲಿ ಪತ್ತೆ

ಕೆಲಸಕ್ಕೆಂದು ಹೋಗಿದ್ದ ಯುವತಿ ನಾಪತ್ತೆ – ಚಾನಲ್ ನಲ್ಲಿ ಮೃತದೇಹ ಪತ್ತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಿವರಾಮನಗರದ ವಾಸಿಯೊಬ್ಬರ ಮಗಳು 17 ವರ್ಷದ ಯುವತಿ ಸೆ.19 ರಂದು ಪ್ಯಾಕ್ಟರಿ ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದು,ಇದೀಗ ಆಕೆಯ ಮೃತದೇಹ ಬಿದರೆ ಬಳಿಯ ಭದ್ರಾ ಚಾನಲ್‌ನಲ್ಲಿ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಿವಾಸಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗಳು ಪ್ಯಾಕ್ಟರಿ ಕೆಲಸಕ್ಕೆ ಎಂದು ಹೋದವರು ನಾಪತ್ತೆಯಾಗಿದ್ದರು. ಲಕ್ಷ್ಮೀಪುರ ರೈಲ್ವೆ ಬ್ರಿಡ್ಜ್ ಬಳಿಯಲ್ಲಿ ಆಕೆಯ ಬ್ಯಾಗ್, ಚಪ್ಪಲಿ ಮತ್ತು ಐ.ಡಿ.ಕಾರ್ಡ್ ಸಿಕ್ಕಿರುತ್ತದೆ.ಯುವತಿಯ …

Read More

ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಸರ್ಕಾರಿ ಶಾಲೆಯ ಹಿಂಭಾಗದ ತುಂಗಾನದಿಯಲ್ಲಿ ಅಪರಿಚಿತ ಶವ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಸಮೀಪದ ಕುಟ್ರ ನಿವಾಸಿ ಕೃಷ್ಣಮೂರ್ತಿ ಎಂದು ತಿಳಿದುಬಂದಿದೆ. ಗುಡ್ಡೆಕೊಪ್ಪ ನಿವಾಸಿ 14-07-2024 ರಂದು ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದರು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಮೃತದೇಹದ ಸೊಂಟದಲ್ಲಿ ಸೇಫ಼್ಟಿ ಪಿನ್ ಆಧಾರದ ಮೇಲೆ ಕುಟುಂಬಸ್ಥರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮೃತದೇಹವು ಪ್ರಮಾಣದಲ್ಲಿ ಕೊಳೆತಿದ್ದು ಮುಖ, ದೇಹವನ್ನು…

Read More

ಆನ್ ಲೈನ್ ಗೇಮ್ ಚಾಳಿಗೆ ಬಿದ್ದು ಗ್ರಾಹಕರ ಹಣವನ್ನು ವಂಚಿಸಿದ್ದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಆನ್ ಲೈನ್ ಗೇಮ್ ಚಾಳಿಗೆ ಬಿದ್ದು ಗ್ರಾಹಕರ ಹಣವನ್ನು ವಂಚಿಸಿದ್ದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ತೀರ್ಥಹಳ್ಳಿ : ಶೋಕಿ ಜೀವನ, ದಿಢೀರ್ ಹಣ ಮಾಡುವ ದುರಾಸೆಗೆ ಒಳಗಾಗಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ ಗ್ರಾಹಕರ ಹಣವನ್ನು ವಂಚನೆ ಮಾಡಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಲೂಕಿನ ಆರಗದ ಸುನೀಲ್ (35 ವರ್ಷ) ಮೃತ ದುರ್ದೈವಿ. ಈತ ಯಡೂರಿನ ಕೆನರಾ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ 8 ಖಾತೆಗಳಿಂದ ಠೇವಣಿ ಇಟ್ಟಿದ್ದ ಸುಮಾರು 1 ಕೋಟಿ…

Read More

ಹೊಸನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ

ಹೊಸನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ ಹೊಸನಗರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದವರು ಪ್ರತಿಷ್ಠಾಪಿಸಿದ ಆರನೇ ವರ್ಷದ ಶ್ರೀ ಗಣೇಶೋತ್ಸವದ ವಿಸರ್ಜನಾ ಶೋಭ ಯಾತ್ರೆ ಶನಿವಾರ ಸಂಜೆ 6 ಗಂಟೆಗೆ ಪ್ರಾರಂಭವಾಯಿತು. ಶೋಭಾ ಯಾತ್ರೆಯೊಂದಿಗೆ ವಾದ್ಯಗೋಷ್ಠಿ ಡೊಳ್ಳು ಕುಣಿತ ಕೋಲಾಟ ಜಾನಪದ ಗೀತೆ ಬೊಂಬೆಗಳ ಕುಣಿತ ಹಲವಾರು ಪ್ರಕಾರದ ಜಾನಪದ ತಂಡಗಳು ಭಾಗವಹಿಸಿದ್ದು ಶೋಭಾ ಯಾತ್ರೆಗೆ ಮೆರಗು ನೀಡಲಾಗಿದೆ. ಶ್ರೀ ಗಣಪತಿ ವಿಸರ್ಜನಾ ಶೋಭಾಯಾತ್ರೆಯೊಂದಿಗೆ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದಾರೆ ಹೆಚ್ಚುವರಿ…

Read More

ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮಗುವಿನ ಉಸಿರು ನಿಲ್ಲಿಸಲು ಹೊರಟನೇ ಪಾನಮತ್ತ ಆಂಬ್ಯುಲೆನ್ಸ್ ಚಾಲಕ .!?

ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮಗುವಿನ ಉಸಿರು ನಿಲ್ಲಿಸಲು ಹೊರಟನೇ ಪಾನಮತ್ತ ಆಂಬ್ಯುಲೆನ್ಸ್ ಚಾಲಕ .!? ರಿಪ್ಪನ್‌ಪೇಟೆ : ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮಗುವನ್ನು ಶಿವಮೊಗ್ಗಕ್ಕೆ ರವಾನಿಸುತಿದ್ದ ಆಂಬುಲೆನ್ಸ್ ಗ್ಯಾಸ್ ಟ್ಯಾಂಕರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಹೌದು ಶುಕ್ರವಾರ ರಾತ್ರಿ ಪಟ್ಟಣದ ಸಮೀಪದ ದೂನ ಗ್ರಾಮದಲ್ಲಿ ಚಲಿಸುತಿದ್ದ ಗ್ಯಾಸ್ ಟ್ಯಾಂಕರ್ ಲಾರಿಗೆ ನಗು ಮಗು ಆಂಬುಲೆನ್ಸ್ ಡಿಕ್ಕಿಯಾಗಿ ಬಾಣಂತಿ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ. ಹೊಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಗೊಳಗಾದ ಮಗುವನ್ನು…

Read More