ಧರ್ಮಸ್ಥಳಕ್ಕೆ ರಿಪ್ಪನ್ ಪೇಟೆ ಹಿಂದೂ ಮಹಾಸಭಾ ಸಮಿತಿ ಭೇಟಿ
ರಿಪ್ಪನ್ ಪೇಟೆ: ಪಟ್ಟಣದ ಹಿಂದೂ ಮಹಾಸಭಾ ಸಮಿತಿಯ ಸದಸ್ಯರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಭೇಟಿಯ ವೇಳೆ ಸಮಿತಿ ಸದಸ್ಯರು “ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರಕರಿಗೆ ಮಂಜುನಾಥನೇ ಶಿಕ್ಷಿಸಲಿ” ಹಾಗೂ “ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂಬ ಸಂದೇಶವಿರುವ ಪ್ಲೇಕಾರ್ಡ್ಗಳನ್ನು ಹಿಡಿದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಮಿತಿಯವರು “ಧರ್ಮಸ್ಥಳದ ಪಾವಿತ್ರ್ಯವನ್ನು ಹಾಳುಮಾಡುವ ಯಾವುದೇ ಅಪಪ್ರಚಾರವನ್ನು ಸಮಾಜ ಒಪ್ಪುವುದಿಲ್ಲ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಸಮಿತಿಯ ಸುಧೀಂದ್ರ ಪೂಜಾರಿ, ವಾಸು ಶೆಟ್ಟಿ, ರವೀಂದ್ರ ಕೆರೆಹಳ್ಳಿ, ರಾಘವೇಂದ್ರ ಆರ್., ರಮೇಶ್, ಈಶ್ವರ್ ಮಳಕೊಪ್ಪ, ಆಟೋ ಲಕ್ಷ್ಮಣ್, ನಾಗರಾಜ್ ಪವಾರ್, ಚೋಳರಾಜ್, ಲಕ್ಷ್ಮಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
 
                         
                         
                         
                         
                         
                         
                         
                         
                         
                        