January 11, 2026

ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್ ಕಳ್ಳತನ ಮಾಡುತಿದ್ದ ಕಳ್ಳರ ಬಂಧನ

ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್ ಕಳ್ಳತನ ಮಾಡುತಿದ್ದ ಕಳ್ಳರ ಬಂಧನ

ಸೊರಬ: : ರೈಸ್‌ಮಿಲ್  ಆವರಣದಲ್ಲಿ ನಿಲ್ಲಿಸಿದ್ದ ೩ ಲಾರಿಗಳ ಡೀಸೆಲ್ ಟ್ಯಾಂಕ್‌ನಲ್ಲಿದ್ದ ಅಂದಾಜು ೪೫ ಸಾವಿರ ರೂ. ಮೌಲ್ಯದ ಸುಮಾರು ೪೫೦ ಲೀಟರ್ ಡಿಸೇಲ್‌ನ್ನು ಕಳ್ಳತನ ಮಾಡಿಕೊಂಡು  ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಯುವಕರಿಬ್ಬರನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ.

ಬಂಧಿತರೆಂದರೆ ಶಿವಮೊಗ್ಗದ  ಟಿಪ್ಪುನಗರ ಬಲಭಾಗ ೫ ನೇ ಕ್ರಾಸ್ ವಾಸಿ ಸೋನು (೨೬) ಮತ್ತು  ಭರ್ಮಪ್ಪನಗರದ ಸೈಯದ್ ಹುಸೇನ್ ಅಲಿಯಾಸ್  ಗಫಾರ್ (೨೫). ಇವರಿಂದ ಅಂದಾಜು ಮೌಲ್ಯ ೯ ಲಕ್ಷ ರೂ. ನ ಟಾಟಾ ಇಂಟ್ರಾ ಗೂಡ್ಸ್ ವಾಹನ, ರೂ ೧೫ ಸಾವಿರ ರೂ.  ನಗದು ಮತ್ತು ೩೦ ಲೀಟರ್‌ನ ೫ ಕ್ಯಾನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೇ ೨೦ರ ರಾತ್ರಿ   ಕಳ್ಳರು ವಿಜಯಲಕ್ಷ್ಮಿ ರೈಸ್ ಮಿಲ್ಲಿನ ಆವರಣದಲ್ಲಿದ್ದ  ಲಾರಿಯಿಂದ ಡೀಸೆಲ್ ಕಳುವು ಮಾಡಿದ್ದಾರೆಂದು ಮಾಲೀಕ ಕೋಗುಣಸಿಯ ವಿಕ್ರಮ್ ಭಟ್ ದೂರು ನೀಡಿದ್ದರು.

ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

About The Author

Leave a Reply

Your email address will not be published. Required fields are marked *