ಯುವ ಸಮೂಹ ಸಮಾಜಕ್ಕೆ ಮಾದರಿಯಾಗಬೇಕು ಆ ಮೂಲಕ ಶಾಶ್ವತವಾಗಿ ಹೆಸರು ಉಳಿಯುವಂತೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ರಿಪ್ಪನ್ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2023 -24 ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇವಲ ಅಂಕಗಳಿಕೆಗೆ ಮಾತ್ರ ಶಿಕ್ಷಣ ಸೀಮಿತವಾಬಾರದು, ಬದುಕಿನಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಶಾಶ್ವತವಾಗಿ ಹೆಸರು ಉಳಿಯುವಂತೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಪ್ರಸ್ತುತ ಸಂದರ್ಭಕ್ಕೆ ಮೌಲ್ಯಯುತ ಶಿಕ್ಷಣ ಅಗತ್ಯವಿದೆ. ದೇಶದ ಆರ್ಥಿಕತೆ ಜ್ಞಾನದಿಂದ ಕೂಡಿದೆ. ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಮುನ್ನಡೆಯುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ನಂತರ ಶಿವಮೊಗ್ಗದ ನಿವೃತ ಉಪನ್ಯಾಸಕ ಚಂದ್ರಪ್ಪ ಕೆ ಸಿ ಮಾತನಾಡಿ
ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ಆತ್ಮಬಲ ಮತ್ತು ಆತ್ಮಸ್ಥೈರ್ಯ ಇರಬೇಕು ವಿದ್ಯಾರ್ಥಿಗಳು ಶ್ರಮವಹಿಸಿ ಶ್ರದ್ಧೆಯಿಂದ ಕಲಿತರೆ ಯಾವುದೇ ರೀತಿಯ ಸಾಧನೆ ಮಾಡಬಹುದು ವಿದ್ಯಾರ್ಥಿಗಳಿಗೆ ಗುರಿ ಹೊಂದುವ ಮೂಲಕ ಪ್ರತಿ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಬೇಕು ಅದರೊಂದಿಗೆ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದು ಶಾಲಾ ಕಾಲೇಜುಗಳಲ್ಲಿರುವ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಅವಕಾಶಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಇದೇ ಸಂಧರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
2022-23 ನೇ ಶೈಕ್ಷಣಿಕ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಬಿಎ ಪದವಿಯಲ್ಲಿ ನಾಲ್ಕನೇ ರ್ಯಾಂಕ್ ಪಡೆದ ಸಿಂಧು ಕೆ ರವರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಸನ್ಮಾನಿಸಿ ಗೌರವಿಸಿದರು ಇದೇ ಸಂಧರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೂ ಸನ್ಮಾನಿಸಿ ಗೌರವಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಂದ್ರಶೇಖರ್ ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, ಉಪಾಧ್ಯಕ್ಷರಾದ ಸುಧೀಂದ್ರ ಪೂಜಾರಿ ,ಕಾಲೇಜು ಅಭಿವೃದ್ಧಿ ಸಮೊತಿ ಉಪಾಧ್ಯಕ್ಷರಾದ ಹಾಲಸ್ವಾಮಿ ಗೌಡ್ರು ,ಸದಸ್ಯರಾದ ರಮೇಶ್ ಫ಼್ಯಾನ್ಸಿ ,ಮಂಜುನಾಥ್ ಮಳವಳ್ಳಿ, ಶ್ರೀನಿವಾಸ್ ಆಚಾರ್ ,ಮಂಜುನಾಥ್ ಕಾಮತ್,ಪಿಯೂಸ್ ರೊಡ್ರಿಗಸ್,ನಿರುಪಮಾ ರಾಕೇಶ್, ಹರ್ಷಕುಮಾರ್ , ಕೆ ಸಿ ರಾಘವೇಂದ್ರ ,ಅನಿಷಾ ಖಾದರ್, ವಿಜೇತ್ , ಹಾಗೂ ಇನ್ನಿತರರಿದ್ದರು.