Headlines

ಕಾರ್ಮಿಕರ ಹಕ್ಕುಗಳು ಮತ್ತು ಸಾಧನೆಗಳನ್ನು ಗೌರವಿಸುವ ದಿನವೇ ಕಾರ್ಮಿಕ ದಿನ – ಪ್ರವೀಣ್ ಎಸ್ ಪಿ

ರಿಪ್ಪನ್ ಪೇಟೆಯಲ್ಲಿ ಕಾರ್ಮಿಕ  ದಿನಾಚರಣೆ.

ಕಾರ್ಮಿಕರ ಹಕ್ಕುಗಳು ಮತ್ತು ಸಾಧನೆಗಳನ್ನು ಗೌರವಿಸುವ ದಿನವೇ ಕಾರ್ಮಿಕ ದಿನ – ಪ್ರವೀಣ್ ಎಸ್ ಪಿ

ರಿಪ್ಪನ್ ಪೇಟೆ : ಕಾರ್ಮಿಕ ದಿನಾಚರಣೆ, ಅಥವಾ ಅಂತಾರಾಷ್ಟ್ರೀಯ ಕಾರ್ಮಿಕ ದಿನ, ಪ್ರತಿ ವರ್ಷ ಮೇ 1ರಂದು ವಿಶ್ವದಾದ್ಯಂತ ಕಾರ್ಮಿಕರ ಹಕ್ಕುಗಳು ಮತ್ತು ಸಾಧನೆಗಳನ್ನು ಗೌರವಿಸುವ ದಿನವಾಗಿದೆ. ಇದು ಕಾರ್ಮಿಕ ಚಳವಳಿಯ ಇತಿಹಾಸ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟಗಳನ್ನು ಸ್ಮರಿಸುತ್ತದೆ ಎಂದು ರಿಪ್ಪನ್ ಪೇಟೆ  ಪಿಎಸ್ಐ ಪ್ರವೀಣ್ ಎಸ್ ಪಿ ಹೇಳಿದರು.

ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  1886 ರ ಅಮೆರಿಕದ ಶಿಕಾಗೋದಲ್ಲಿ ನಡೆದ “ಹೇಮಾರ್ಕೆಟ್ ಘಟನೆ ಕಾರ್ಮಿಕ ಸಂಘಟನೆ ಹಾಗೂ ಕಾರ್ಮಿಕ ದಿನಾಚರಣೆಗೆ ಕಾರಣವಾಗಿದೆ.ಆ ಸಮಯದಲ್ಲಿ ಕಾರ್ಮಿಕರು 8 ಗಂಟೆಗಳ ಕೆಲಸದ ದಿನಕ್ಕಾಗಿ ಹೋರಾಟ ನಡೆಸಿದರು.  ಈ ಹೋರಾಟದ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ ಹಲವರು ಸಾವನ್ನಪ್ಪಿದರು.  ಈ ಘಟನೆ ಕಾರ್ಮಿಕ ಹಕ್ಕುಗಳ ಚಳವಳಿಗೆ ಪ್ರೇರಣೆಯಾಯಿತು.ಈ ಹಿನ್ನೆಲೆಯಲ್ಲಿ, ಮೇ 1 ಅನ್ನು ಅಂತಾರಾಷ್ಟ್ರೀಯ ಕಾರ್ಮಿಕ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. ಭಾರತದಲ್ಲಿ ಕಾರ್ಮಿಕ ದಿನವನ್ನು ಮೊದಲ ಬಾರಿ 1923 ರ ಮೇ 1 ರಂದು ಚೆನ್ನೈನಲ್ಲಿ ಲೇಬರ್ ಕಿಸಾನ್ ಪಕ್ಷದ ನಾಯಕ ಕಾಂರೆಡ್ ಸಿಂಗಾರವೆಲು ಚೆಟ್ಟಿಯಾರ್ ನೇತೃತ್ವದಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂಪು ಧ್ವಜವನ್ನು ಉಪಯೋಗಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮಾತಾಡಿ  ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಅದರ ಪ್ರಯೋಜನಗಳನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದುಕೊಳ್ಳುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ತಿಳಿಸಿದರು

ತಾಲೂಕ್ ಕೆಡಿಪಿ ಸದಸ್ಯರಾದ ಆಸೀಫ಼್ ಭಾಷಾ ಮಾತನಾಡಿ ಕಾರ್ಮಿಕ ದಿನಾಚರಣೆ ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟಗಳನ್ನು ಸ್ಮರಿಸುವ ದಿನವಾಗಿದೆ.  ಈ ದಿನದ ಮೂಲಕ ನಾವು ಕಾರ್ಮಿಕರ ಶ್ರಮದ ಮಹತ್ವವನ್ನು ಅರಿತು, ಅವರಿಗೆ ಗೌರವ ಸಲ್ಲಿಸೋಣ ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ  ಸೌಕತ್ ಆಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ  ದೇವರಾಜ್ ಜನಪರ  ಹೋರಾಟ ಗಾರ  ಆರ್ ಎನ್ ಮಂಜುನಾಥ್. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ , ಸದಸ್ಯರಾದ ನಿರೂಪ ಕುಮಾರ್ ,ಪ್ರಮುಖರಾದ ತಮ್ಮಯ್ಯ ಆಚಾರ್. ಬಾಬುಸಾಬ್, ಸಂಘದ ಉಪಾಧ್ಯಕ್ಷ  ಪೈಂಟರ್ ಮುನ್ನ ಸಾಬ್, ಕಾರ್ಯದರ್ಶಿ ಆರ್ ರಮೇಶ್  ಇನ್ನಿತರರಿದ್ದರು.

ಕಾರ್ಯಕ್ರಮದಲ್ಲಿ  ಪಿಎಸ್ಐ ಪ್ರವೀಣ್ ಎಸ್. ಪಿ  ಸೇರಿದಂತೆ ಹಿರಿಯ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *