ರಿಪ್ಪನ್ ಪೇಟೆಯಲ್ಲಿ ಹರತಾಳು ಹಾಲಪ್ಪರವರ ಹುಟ್ಟು ಹಬ್ಬದ ಸಂಭ್ರಮ
ರಿಪ್ಪನ್ ಪೇಟೆ : ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಮಂತ್ರಿ ಹರತಾಳು ಹಾಲಪ್ಪರವರ 63ನೇ ಹುಟ್ಟು ಹಬ್ಬವನ್ನು ಶುಕ್ರವಾರ ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ಹರತಾಳು ಹಾಲಪ್ಪರ ಅಭಿಮಾನಿಗಳು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಸರ್ವ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಹರತಾಳು ಹಾಲಪ್ಪರ ಹುಟ್ಟು ಹಬ್ಬದ ಅಂಗವಾಗಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು, ಸಂಜೆ ಹಿಂದೂ ಮಹಾಸಭಾ ವೇದಿಕೆಯಲ್ಲಿ ನಡೆದ ಹುಟ್ಟು ಹಬ್ಬದ ಸಮಾರಂಭದಲ್ಲಿ ಪೌರ ಕಾರ್ಮಿಕ ದಂಪತಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಮಂತ್ರಿ ಹರತಾಳು ಹಾಲಪ್ಪ ಮಾತನಾಡಿ ಹೊಸನಗರ ಸಾಗರ ಹಾಗೂ ಸೊರಬ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿ ಮಂತ್ರಿಯಾಗಿ ಮಾತನಾಡಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ನನ್ನ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನನಗೆ ತೃಪ್ತಿ ಹಾಗೂ ನೆಮ್ಮದಿಯನ್ನು ಉಂಟು ಮಾಡಿದೆ, ಇನ್ನು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡುವ ಅಭಿಲಾಷೆ ನನ್ನಲ್ಲಿತ್ತು, ನಾಡು ಕಂಡ ಪ್ರಭುದ್ಧ ರಾಜಕಾರಣಿಗಳಾದ ಬಂಗಾರಪ್ಪ , ಯಡಿಯೂರಪ್ಪ ಕಾಗೋಡು ತಿಮ್ಮಪ್ಪ ರಂತಹ ಅಭಿವೃದ್ಧಿಯ ಹರಿಕಾರರ ನಡುವೆ ಜಿಲ್ಲೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮತದಾರರು ನನಗೆ ಬೆಂಬಲಿಸಿದ್ದರು. ನನಗೆ ಅಧಿಕಾರಿ ಇರಲಿ ಇಲ್ಲದಿರಲಿ ನನ್ನ ಹೋರಾಟ ಜನಪರ ಹೋರಾಟವಾಗಿದ್ದು. ಜನತೆಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು ಆಗ ಮಾತ್ರ ರಾಜಕಾರಣಕ್ಕೆ ಹಾಗೂ ರಾಜಕಾರಣಿಗಳಿಗೆ ಜನಸಾಮಾನ್ಯರು ಗೌರವಿಸುತ್ತಾರೆ ಎಂದರು.
ನಿಕಟ ಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘ ರಾಜ್ ಮಾತನಾಡಿ ಮಲೆನಾಡಿನ ಅಭಿವೃದ್ಧಿಯ ಹರಿಕಾರರೆಂದು ಜನಮಾನಸದಲ್ಲಿ ನೆಲೆ ನಿಂತಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಹರ ತಾಳು ಹಾಲಪ್ಪ ರವರು ಸೊರಬ ಸಾಗರ ಹಾಗೂ ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡುವುದರ ಜೊತೆಗೆ ನೊಂದವರ ಪರವಾಗಿ ಯಾವಾಗಲೂ ಸಹಾಯ ಹಸ್ತವನ್ನು ಚಾಚುತ್ತಿದ್ದರು, ಇಂತಹ ವ್ಯಕ್ತಿಯೊಬ್ಬರು 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜಯಗಳಿಸಿ ಈ ನಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗಿಯಾಗಲಿದ್ದಾರೆ, ಎಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಕ್ಷದ ಸಂಘಟನೆ ಹಾಗೂ ಈಗ ದಿಂದಲೇ ಶ್ರಮವಹಿಸ ಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎನ್ ಸತೀಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕು ಬಿಜೆಪಿ ಅಧ್ಯಕ್ಷ ಸುಬ್ರಮಣ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ,ಬಿಜೆಪಿ ತಾಲೂಕು ಉಪಾಧ್ಯಕ್ಷ ಎಂ ಬಿ. ಮಂಜುನಾಥ್,ರಾಜ್ಯ ಜೆಡಿಎಸ್ ಕಾರ್ಯದರ್ಶಿ ಅರ್ ಎ ಚಾಬುಸಾಬ್,ಶಕ್ತಿ ಕೇಂದ್ರದ ಕಾರ್ಯದರ್ಶಿ ಕೆರೆಹಳ್ಳಿ ಸುಂದರೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್ ಮುಖಂಡರಾದ ಸುರೇಶ ಸಿಂಗ್, ಜೆಡಿಎಸ್ ತಾಲೂಕ್ ಅಧ್ಯಕ್ಷ ಎನ್. ವತೇಶ್, , ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವರದರಾಜ್, ಬಿಜೆಪಿ ಮುಖಂಡರಾದ ಪಿ ರಮೇಶ್,ಮೆಣಸೆ ಆನಂದ, ಕೆರೆ ಹಳ್ಳಿ ಮುರುಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಎ. ಟಿ ನಾಗರತ್ನ . ರಾಜೇಶ್ ಕಿಳಂಬಿ, ಹೂವಪ್ಪ ಮತ್ತು ಪಿ.ಸುಧೀರ್ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.