Headlines

ಸಂಕ್ರಾಂತಿಯ ನಂತರ ಸಚಿವ ಸಂಪುಟದಲ್ಲಿ ಬದಲಾವಣೆ – ಶಾಸಕ ಬೇಳೂರು ಗೋಪಾಲಕೃಷ್ಣ

ಸಂಕ್ರಾಂತಿಯ ನಂತರ ಸಚಿವ ಸಂಪುಟದಲ್ಲಿ ಬದಲಾವಣೆ – ಶಾಸಕ ಬೇಳೂರು ಗೋಪಾಲಕೃಷ್ಣ

ಸಂಕ್ರಾಂತಿಯ ನಂತರ ಸಚಿವ ಸಂಪುಟದಲ್ಲಿ ಎರಡು ಮೂರು ಸ್ಥಾನ ಬದಲಾವಣೆಗಳು ಆಗುವ ನಿರೀಕ್ಷೆಯಿದೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಹೇಳಿದರು.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಗಂದೂರು ದೇವಿ ದರ್ಶನ ಮಾಡಿಕೊಂಡು ಬಂದ ಶಾಸಕರು ಮಾಧ್ಯಮಗಳ ಜೊತೆ ಮಾತನಾಡಿ, ಸಂಕ್ರಾಂತಿ ಹಬ್ಬದ ನಂತರ ಯಾವುದೇ ಬದಲಾವಣೆಗಳು ಇಲ್ಲ. ಬದಲಿಗೆ ನಾಗೇಂದ್ರ ಅವರ ಸ್ಥಾನ ಸೇರಿದಂತೆ ಎರಡು ಮೂರು ಸಚಿವರ ಸ್ಥಾನ ಬದಲಾಗುವ ನಿರೀಕ್ಷೆ ಇದೆ ಎಂದರು.

ನಮ್ಮಲ್ಲಿ ಹೆಚ್ಚಿನ ಗೊಂದಲದ ಕಾರಣ ಇಷ್ಟೆ 140 ಸ್ಥಾನದ ಹತ್ತಿರ ಹತ್ತಿರ ಸಚಿವರು ಇರುವುದರಿಂದ ನಮಲ್ಲಿ ಗೊಂದಲ ಇರುವುದು ಕಂಡು ಬರುತ್ತದೆ. ಆದರೆ ನಮಗಿಂತ ಬಿಜೆಪಿಯಲ್ಲಿ ಹೆಚ್ಚಿನ ಗೊಂದಲವಿದೆ. ವಿಜೇಂದ್ರ ಒಂದು ಹೇಳಿದರೆ ಯತ್ನಾಳ್ ಮತ್ತೊಂದು ಹೇಳ್ತಾರೆ. ಡಿನ್ನರ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹೈಕಮಾಂಡ್ ಸುರ್ಜೇವಾಲರವರು ಬ್ರೇಕ್ ಹಾಕಿದ್ದಾರೆ ಎಂದರು.

ನಮ್ಮಲ್ಲಿ ಎಲ್ಲವೂ ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಅಸಮಾಧಾನದ ಮಾತುಗಳೆ ಇಲ್ಲ. ನಾನು ಸಹ 20 ತಿಂಗಳಿಗೊಮ್ಮೆ ಸಚಿವ ಸ್ಥಾನ ಬದಲಾಗಬೇಕು ಎಂದಿದ್ದೆ. ಅದು ನನ್ನ ವೈಯುಕ್ತಿಕ.  ಸಿಎಂ ಸಹ ತ್ಯಾಗದ ಮಾತನಾಡಿದ್ದಾರೆ. ಹೈಕಮಾಂಡ್ ಸೂಚನೆಯನ್ನ ಎಲ್ಲರೂ ಪಾಲಿಸಿ ನಡೆದುಕೊಂಡು ಹೋಗುವಾಗ ಗೊಂದಲದ ಮಾತುಗಳು ಹೇಳುವುದು ಸರಿಯಲ್ಲ ಎಂದರು.

Leave a Reply

Your email address will not be published. Required fields are marked *