ಉದ್ಯಮ ಕ್ಷೇತ್ರದ ದಿಗ್ಗಜ ರತನ್ ಟಾಟಾ ಇನ್ನಿಲ್ಲ

ಉದ್ಯಮ ಕ್ಷೇತ್ರದ ದಿಗ್ಗಜ ರತನ್ ಟಾಟಾ ಇನ್ನಿಲ್ಲ

ಭಾರತದ ದಿಗ್ಗಜ ಉದ್ಯಮಿ ರತನ್ ಟಾಟಾ ವಿಧಿವಶರಾಗಿದ್ದಾರೆ.

ಕಳೆದ ಕೆಲದಿನಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ನೆನ್ನೆ ಬೆಳಗ್ಗೆ (ಅ.09) ಮುಂಬೈ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

86 ವರ್ಷದ ರತನ್ ಟಾಟಾ ಅವರು ಅಕ್ಟೋಬರ್ 7ರ ಸೋಮವಾರದಂದು ಕ್ಯಾಂಡಿ ಬ್ರೀಚ್ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ತಮ್ಮ ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾಗಿ ಹೇಳಿದ್ದರು.ಆದ್ರೆ ರತನ್ ಟಾಟಾಆರೋಗ್ಯ ಸ್ಥಿತಿ ಸಂಜೆ ವೇಳೆಗೆ ಚಿಂತಾಜನಕವಾಗಿತ್ತು ಎಂದು ಆಪ್ತರು ತಿಳಿಸಿದ್ದರು.

ರತನ್ ಟಾಟಾ ಕೇವಲ ಉದ್ಯಮಿಯಾಗಿ ಮಾತ್ರವಲ್ಲ, ಅವರ ಟ್ರಸ್ಟ್ ಗಳ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರು ತಮ್ಮ ಸರಳತೆ ಹಾಗೂ ಪರೋಪಕಾರಕ್ಕಾಗಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತವನ್ನು ಟಾಟಾ ಹೆಸರಿನೊಂದಿಗೆ ಗುರುತಿಸುವಂತೆ ಮಾಡಿದ್ದರು. ಲಕ್ಷ ರೂ.ಗಳ ನ್ಯಾನೋ ಕಾರು ಸಹ ವಿಶ್ವ ರಾಷ್ಟ್ರಗಳ ಗಮನ ಸೆಳೆದಿತ್ತು. ಕಾರು ಖರೀದಿಸುವ ಬಡವನ ಆಸೆಯನ್ನು ಟಾಟಾ ನನಸು ಮಾಡಿದ್ದಾರೆಂಬ ಮಾತು ಕೇಳಿಬಂದಿದ್ದವು.

ಕೆಲದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಟಾಟಾ ಸೋಮವಾರ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರ ದೈಹಿಕ ಪರಿಸ್ಥಿತಿ ಹದಗೆಟ್ಟಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಸಂಬಂಧ ರತನ್ ಟಾಟಾ ಅವರ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಲಾಗಿತ್ತು. ವಯೋಸಹಜ ಕಾರಣಗಳಿಗಾಗಿ ತಪಾಸಣೆಗೊಳಪಟ್ಟಿದ್ದಾರೆ. ಆತಂಕಗೊಳ್ಳುವಂಥದ್ದೇನು ಇಲ್ಲ ಎಂದು ಹೇಳಲಾಗಿತ್ತು. ಆದರೆ ಬುಧವಾರ ಟಾಟಾ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು.

ಪದ್ಮವಿಭೂಷಣ: ರತನ್ ಟಾಟಾ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 2008ರಲ್ಲಿ ಪದ್ಮವಿಭೂಷಣ ಪ್ರಶಸಿ ನೀಡಲಾಗಿತ್ತು.
ಯಶಸ್ವಿ ಉದ್ಯಮಿ: ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸವೀಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಟಾಟಾ ಟೆಲಿ ಸರ್ವೀಸಸ್, ಟಾಟಾ ಫೈನಾನ್ಸ್ ಸೇರಿ ರತನ್ ಟಾಟಾ ಹಲವು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದರು.

ರತನ್‌ ಟಾಟಾ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದು ಪ್ರಧಾನಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *