ಸ್ನೇಹಿತನೊಂದಿಗೆ ಸೇರಿಕೊಂಡು ತನ್ನದೇ ಮನೆಯ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನಗೈದ ಯುವತಿ ಅರೆಸ್ಟ್
ತನ್ನದೇ ಮನೆಯಲ್ಲಿ ಕಳ್ಳತನವೆಸಗಿ ಪೊಲೀಸರ ಬಳಿ ಸುಳ್ಳು ಕಂಪ್ಲೆಂಟ್ ನೀಡಿದ್ದ ಚಾಲಾಕಿ ಯುವತಿಯೊಬ್ಬಳು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಮೊಗ್ಗದ ಮೂಲದ ವ್ಯಕ್ತಿಯೊಬ್ಬನ ಜೊತೆಗೆ ಸೇರಿಕೊಂಡು ತನ್ನ ಮನೆಯಲ್ಲಿ ತಾನೆ ಕಳ್ಳತನ ಮಾಡಿದ ಚನ್ನಗಿರಿ ತಾಲೂಕಿನ ಯುವತಿ ಚನ್ನಗಿರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಅರೆಸ್ಟ್ ಆಗಿದ್ದಾಳೆ.
ಶಿವಮೊಗ್ಗದ ವ್ಯಕ್ತಿಯೊಬ್ಬನ ಜೊತೆ ಸಂಬಂಧ ಹೊಂದಿದ್ದ ಯುವತಿ ಮನೆಯಲ್ಲಿ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಬಗ್ಗೆ ಕಂಪ್ಲೆಂಟ್ ಕೊಟ್ಟಿದ್ದಳು. ಪೊಲೀಸರಿಗೆ ಪ್ರಕರಣದ ಬಗ್ಗೆ ಅನುಮಾನ ಬಂದು ಯುವತಿಯನ್ನೇ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ನಿಜಾಂಶ ಬೆಳಕಿಗೆ ಬಂದಿದೆ.