POSTMAN NEWS

ನೈಜ ಸುದ್ದಿ ನೇರ ಬಿತ್ತರ..

RIPPONPETE |ನ.1 ರಂದು ಕಸ್ತೂರಿ ಕನ್ನಡ ಸಂಘದಿಂದ ಆದ್ದೂರಿ ಕನ್ನಡ ರಾಜ್ಯೋತ್ಸವ

ರಿಪ್ಪನ್ ಪೇಟೆಯಲ್ಲಿ ನ.01ಕ್ಕೆ ಆದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ದತೆ

ರಿಪ್ಪನ್‌ಪೇಟೆ;- ಪಟ್ಟಣದ ಕಸ್ತೂರಿ ಕನ್ನಡ ಸಂಘ ಮತ್ತು ದಿ.ಪುನೀತ್‌ರಾಜ್ ಆಭಿಮಾನಿ ಬಳಗದ 4 ನೇ ವರ್ಷದ ವಾರ್ಷೀಕೋತ್ಸವ ಮತ್ತು ನವಂಬರ್ 01 ರಂದು ಕನ್ನಡ ರಾಜ್ಯೋತ್ಸವವನ್ನು ಈ ಭಾರಿ ಆದ್ದೂರಿಯಾಗಿ ಆಚರಿಸುವ ಬಗ್ಗೆ ನಿರ್ಧರಿಸಲಾಗಿದ್ದು ಅದರನ್ವಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಇದರೊಂದಿಗೆ ದಿ.ಪುನೀತ್‌ರಾಜ್ ಪುಣ್ಯ ಸ್ಮರಣೆಯ ಕಾರ್ಯಕ್ರಮವು ಸಿದ್ದಿವಿನಾಯಕ ವೃತ್ತದಲ್ಲಿ ಏರ್ಪಡಿಸಲಾಗಿದೆ ಎಂದು ಕಸ್ತೂರಿ ಕನ್ನಡ ಸಂಘದ ಆಧ್ಯಕ್ಷರಾದ ಧನಲಕ್ಷ್ಮಿ ಗಂಗಾಧರ್ ಮತ್ತು ಆರ್.ಎ.ಚಾಬುಸಾಬ್ ಹಾಗೂ ಮೆಣಸೆ ಆನಂದ್ ಜಂಟಿ ಸುದ್ದಿಗೋಷ್ಠಿ ಯಲ್ಲಿ  ತಿಳಿಸಿದರು.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಕ್ಟೋಬರ್ 31 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗಾಗಿ ಆಟೋಟ ಸ್ಫರ್ಧೆಗಳನ್ನು ಮತ್ತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ.ಆರತಿ ತಟ್ಟೆ ಅಲಂಕಾರ ಹಾಗೂ ಸಂಗೀತಾ ಕುರ್ಚಿ ನಂತರ ಮಧ್ಯಾಹ್ನ 02 ಗಂಟೆಗೆ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾವಳಿ ಪುರುಷರಿಗಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಟಿಯ ವೀಡಿಯೋ ವೀಕ್ಷಿಸಿ

ನವಂಬರ್ 01 ರಂದು ಬುಧವಾರ ಬೆಳಗ್ಗೆ 09 ಗಂಟೆಗೆ ವಿವಿಧ ಮಹಿಳಾ ಸಂಘದವರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಶಾಲಾ ಮಕ್ಕಳ ವಿವಿಧ ವೇಷ ಭೂಷಣದೊಂದಿಗೆ ಹೆಸರಾಂತ ಕಲಾ ತಂಡಗಳ ಕಲಾ ಮೆರಗಿನೊಂದಿಗೆ `ತಾಯಿ ಭುವನೇಶ್ವರಿಯ ಅಲಂಕೃತ ಭಾವಚಿತ್ರ ಮೆರವಣಿಗೆ’ 10 ಗಂಟೆಗೆ ಕನ್ನಡ ದ್ವಜಾರೋಹಣ,11 ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಲಿದೆ.

ರಾಜ್ಯೋತ್ಸವದ ಆಂಗವಾಗಿ ಶಾಲಾ ಕಾಲೇಜ್ ವಿದ್ಯಾಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ಸಮಾರೋಪ ಸಮಾರಂಭ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ನಂತರ ರಾತ್ರಿ 07 ಗಂಟೆಗೆ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಕು.ದಿಯಾ ಹೆಗಡೆ ,ಪ್ರಖ್ಯಾತ ಗಾಯನ ಕಲಾವಿದರಾದ ಮೆಹಬೂಬ್‌ಸಾಬ್,ಎದೆ ತುಂಬಿ ಹಾಡುವೆನು ಖ್ಯಾತಿಯ ಸಾನ್ವಿ ಜಿ.ಭಟ್ ಹಾಗೂ ನಾಗರಾಜ್ ತೊಂಬ್ರಿ ಇವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಸ್ತೂರಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನಿರ್ಮಲ ಹರೀಶ್, ಮಹಮ್ಮದ್ ಹುಸೇನ್ ,ಮುಖಂಡರಾದ ಜಿ ಎಸ್ ವರದರಾಜ್ ,ಗಣಪತಿ ಗವಟೂರು, ರಮೇಶ್ ಫ್ಯಾನ್ಸಿ,ಶ್ರೀಧರ್ , ಯೋಗೇಂದ್ರಪ್ಪ ಗೌಡ, ಆರ್.ಡಿ.ಶೀಲಾ,ಶ್ವೇತಾ ನಿಶಾಂತ್ , ಸೀಮಾ ಭಾಸ್ಕರ್ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.