
ಸಾಲಬಾಧೆಗೆ ಬೇಸತ್ತು ವಿಷ ಸೇವಿಸಿ ರೈತ ಆತ್ಮಹತ್ಯೆ
ತೀರ್ಥಹಳ್ಳಿ : ಸಂಘ ಸಂಸ್ಥೆಯಲ್ಲಿ 2 ಲಕ್ಷ ಹಾಗೂ ಇತರೆ ಕೈ ಸಾಲ ಮಾಡಿಕೊಂಡಿದ್ದ ರೈತನೋರ್ವ ಇತ್ತ ಬೆಳೆಯಲ್ಲೂ ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಅ. 9ರ ಬುಧವಾರ ರಾತ್ರಿ ನಡೆದಿದೆ.
ತಾಲೂಕಿನ ಹೊಸಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಸುಣ್ಣದ ಮನೆಯ ನೇಮ ನಾಯ್ಕ (60) ಮೃಪಟ್ಟವರು.
ರೈತ ನೇಮ ನಾಯ್ಕ ಅವರು ಅಡಿಕೆಗೆ ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗದಿಂದ ಬೇಸತ್ತು ಜೀವನ ನಿರ್ವಹಣೆಗಾಗಿ ಸಂಘ ಸಂಸ್ಥೆಯಲ್ಲಿ ಹಾಗೂ ಕೈ ಸಾಲ ತೀರಿಸಲು ದಿಕ್ಕು ತೋಚದೇ ಅ.9ರ ಬುಧವಾರ ಸಂಜೆ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ.ನಂತರ ನೇಮ ನಾಯ್ಕ ಅವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.
ಬುಧವಾರ ರಾತ್ರಿ 10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

