

ಹಳ್ಳ ದಾಟುವಾಗ ಬೈಕ್ ಸಮೇತ ನೀರುಪಾಲಾದ ವ್ಯಕ್ತಿ
ಶಿವಮೊಗ್ಗ ಜಿಲ್ಲಾದ್ಯಂತ ಮಳೆಯ ಆರ್ಭಟದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತಿದ್ದು ಮಳೆಯ ಆರ್ಭಟದ ನಡುವೆ ತುಂಬಿ ಹರಿಯುತ್ತಿದ್ದ ಹಳ್ಳವನ್ನ ದಾಟಲು ಹೋದ ವ್ಯಕ್ತಿಯೊಬ್ಬರ ಬೈಕ್ ಸಮೇತ ನೀರು ಪಾಲಾಗಿದ್ದಾರೆ.
ಶಿವಮೊಗ್ಗ ತಾಲ್ಲೂಕಿನ ಮುದುವಾಲ ಗ್ರಾಮದ ಬಳಿ ಇರುವ ಕೊಂಡಜ್ಜಿ ಹಳ್ಳದಲ್ಲಿ ಈ ಘಟನೆ ನಡೆದಿದೆ.ನೀರು ಪಾಲಾಗಿರುವ ಯುವಕನ ಹುಡುಕಾಟ ನಡೆಯುತ್ತಿದೆ.
ನಿನ್ನೆ ಸುರಿದ ಭಾರಿ ಮಳೆಗೆ ಕೊಂಡಜ್ಜಿ ಹಳ್ಳ ತುಂಬಿ ಹರಿಯುತ್ತಿತ್ತು. ಹಾಗಾಗಿ ಹಳ್ಳ ದಾಟದಂತೆ ಸ್ಥಳೀಯ ಪೊಲೀಸರು ಹಾಗೂ ಗ್ರಾಮಸ್ಥರು ಸೊಪ್ಪು ಅಡ್ಡ ಇಟ್ಟು ಎಚ್ಚರಿಸಿದ್ದರು. ಇಂದು ಬೆಳಗ್ಗೆ ನೀರಿನ ಹರಿವು ಕಡಿಮೆಯಾಗಿದೆ ಎಂದುಕೊಂಡು ಚಿನ್ನಿಕಟ್ಟೆ ಗ್ರಾಮದ ಇಕ್ಬಾಲ್ ಎಂಬಾತ ಹಳ್ಳ ದಾಟಲು ಮುಂದಾದ ಇಕ್ಬಾಲ್ ಬೈಕ್ ಸಮೇತ ನೀರುಪಾಲಾಗಿದ್ದಾನೆ.
ಸದ್ಯ ಈತನಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸ್ತಿದ್ದಾರೆ.
