w
Headlines
Home » Ripponpete | ಹೃದಯಾಘಾತದಿಂದ ಯುವಕ ಸಾವು

Ripponpete | ಹೃದಯಾಘಾತದಿಂದ ಯುವಕ ಸಾವು

GridArt 20240816 175617674.jpg

Ripponpete | ಹೃದಯಾಘಾತದಿಂದ ಯುವಕ ಸಾವು

ರಿಪ್ಪನ್‌ಪೇಟೆ : ಹೃದಯಾಘಾತದಿಂದ ಮೂವತ್ತು ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಪಟ್ಟಣದ ಸಮೀಪದ ಕೋಟೆತಾರಿಗ ನಿವಾಸಿ ಶ್ಯಾಮ್ ಜಾರ್ಜ್ (30) ಮೃತಪಟ್ಟ ಯುವಕನಾಗಿದ್ದಾನೆ.

ರಿಪ್ಪನ್‌ಪೇಟೆ ಪಟ್ಟಣದ ಅಂಗಡಿಗಳಿಗೆ ಪಾರ್ಸೆಲ್ ಡೆಲಿವರಿ ಮಾಡುತಿದ್ದ ಶ್ಯಾಮ್ ಜಾರ್ಜ್ ಗುರುವಾರ ರಾತ್ರಿ ಸ್ನೇಹಿತರೊಂದಿಗೆ ಇರುವಾಗ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥನಾಗಿದ್ದಾನೆ.ಕೂಡಲೇ ಆತನನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು.ಆದರೆ ಅಷ್ಟರಲ್ಲಾಗಲೇ ಯುವಕನ ಪ್ರಾಣಪಕ್ಷಿ ಹಾರಿಹೋಗಿತ್ತು.

ಮೂಲತಃ ಕೇರಳದವರಾದ ಜಾರ್ಜ್ ಎಂಬುವವರ ಪುತ್ರ ಶ್ಯಾಮ್ ಜಾರ್ಜ್ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಗೂಡ್ಸ್ ವಾಹನದಲ್ಲಿ ಅಂಗಡಿಗಳಿಗೆ ಪಾರ್ಸೆಲ್ ಡೆಲಿವರಿ ಮಾಡುವ ಮೂಲಕ ಎಲ್ಲರಿಗೂ ಚಿರಪರಿಚಿತನಾಗಿದ್ದನು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.