ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲವೆಂದು ವಾಗ್ವಾದ – ಮಧ್ಯ ರಸ್ತೆಯಲ್ಲಿಯೇ ಬಸ್ ಬಿಟ್ಟು ಹೋದ ಚಾಲಕ
ಬಸ್ ನಿಲ್ಲಿಸುವ ವಿಚಾರದಲ್ಲಿ ವಾಗ್ವಾದ ನಡೆದು ಚಾಲಕ ಮಧ್ಯ ರಸ್ತೆಯಲ್ಲಿಯೇ ಬಸ್ ನ್ನು ಬಿಟ್ಟು ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ನಡೆದಿದೆ.
ಶಿರಾಳಕೊಪ್ಪದಲ್ಲಿ ರಾಣೇಬೆನ್ನೂರು, ಹಿರೇಕೆರೂರು ಮೂಲಕ ಶಿರಾಳಕೊಪ್ಪಕ್ಕೆ ತಲುಪಬೇಕಿದ್ದ ಎನ್ ಡಬ್ಲೂ ಕೆಎಸ್ ಆರ್ ಟಿಸಿ ಬಸ್ ಶಿರಾಳಕೊಪ್ಪದ ನಡುರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು ಕೆಲ ಪ್ರಯಾಣಿಕರು ಮತ್ತು ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ವಾಗ್ವಾದ ನಡೆದಿದೆ.
ಪ್ರಯಾಣಿಕರು ಅಡ್ಡ ಹಾಕಿದಾಗ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ವಾಗ್ವಾದ ನಡೆದಿದೆ. ಕುಪಿತಗೊಂಡ KSRTCಬಸ್ ಚಾಲಕ ಬಸ್ ನ್ನು ನಡು ರಸ್ತೆಯಲ್ಲಿ ಬಿಟ್ಟು ಠಾಣೆಗೆ ತೆರಳಿದ್ದಾರೆ.
ಕೆಎ 27 ಎಫ್ 669 ಕ್ರಮಸಂಖ್ಯೆಯ ಹಾವೇರಿ ವಿಭಾಗದ ಎನ್ ಡಬ್ಲುಕೆಆರ್ ಟಿಸಿ ಬಸ್ ಶಿರಾಳಕೊಪ್ಪದ ಹಳೇ ಪೆಟ್ರೋಲ್ ಬಂಕ್ ಬಳಿ ಸ್ಟಾಪ್ ನೀಡದ ಕಾರಣ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಈ ಗಲಾಟೆ ವಿಚಾರದಲ್ಲಿ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.